ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆತ್ಮನಿರ್ಭರ ಹೆಣ್ಣಾಗೋಣ !

-ಪದ್ಮಲತಾ ಮೋಹನ್

ಆತ್ಮನಿರ್ಭರ

ಹೌದು!
ಈಗ ಆಕಾಶ ಮುಟ್ಟಬಹುದು
ನಂಬಿಕೆಯ ರೆಕ್ಕೆಗಳು ಹುಟ್ಟಿವೆ.
ಕಡಲಾದರು ದಾಟಬಹುದು
ಆತ್ಮವಿಶ್ವಾಸದ ಗರಿಗಳು ಮೂಡಿವೆ.
ಪರ್ವತವನ್ನು ಎದುರಿಸಿ ನಿಲ್ಲಬಹುದು
ಧೈರ್ಯದ ಕಸುವು ತುಂಬಿದೆ.
ಆದರೆ,
ಗಾಳಿಯಲಿ ತೇಲದೆ ನೆಲ ಹಿಡಿಯಬೇಕು
ನೀರಿನಲಿ ಮುಳುಗದೆ ಮೇಲೇಳಬೇಕು
ನೆಲದೊಳಗೆ ಹುದುಗದೆ ಬದುಕಬೇಕು
ನಮ್ಮ ಬದುಕಿನ ಓಟಕ್ಕೆ
ನಾವೇ ವೇಗವರ್ಧಕವಾಗಬೇಕು
ಕತ್ತಲ ದಾರಿಯಲಿ ನಾವೇ ಬೆಳಕಾಗಬೇಕು
ನೋವಿನ ಗಾಯಕ್ಕೆ
ನಾವೇ ಮುಲಾಮಾಗಬೇಕು.
ಇನ್ನಾದರೂ ಬಿಟ್ಟುಬಿಡೋಣ
ಯಾರೋ
ಹಾರಿಸುವ ಗಾಳಿಪಟವಾಗುವುದನ್ನು
ಗಾಳಕ್ಕೆ ಸಿಕ್ಕ ಮೀನಾಗುವುದನ್ನು
ಪರರ ಧ್ವನಿಯ ಹಾಡಾಗುವುದನ್ನು

ಬದಲಿಗೆ
ಹೆಜ್ಜೆ ನಮ್ಮದೇ, ದಾರಿ ರೂಪಿಸೋಣ
ಯಶಸ್ಸು ನಮ್ಮದೇ, ಗುರಿ ಮುಟ್ಟೋಣ
ಭವಿಷ್ಯದ ಭರವಸೆಯ
ಆತ್ಮನಿರ್ಭರ ಹೆಣ್ಣಾಗೋಣ !

‍ಲೇಖಕರು Admin

25 September, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading