ಅಶ್ವಿನಿ ಶ್ರೀಪಾದ್
ಯಾರಿಗೆ ಹೇಳಲಿ
ಒಳಕ್ಕೊಳಗೆ ಕುದಿಯುತ್ತಿದೆ ಲಾವರಸ
ಹೊರ ಹಾಕಲು ಆಗುತ್ತಿಲ್ಲ,
ಎಲ್ಲರ ದುಃಖ ಬೆಟ್ಟದಷ್ಟಿದೆ
ಕಿರುಚಬೇಕೆಂಬ ತುಡಿತ
ಧ್ವನಿ ಬರುತ್ತಿಲ್ಲ
ಅಲ್ಲೆಲ್ಲೋ ಯಾರೋ ಬಿಕ್ಕಿದರೆ,
ಈಗೀಗ ಬೆಚ್ಚಿಬೀಳುತ್ತೇನೆ
ನಾ ಕಂಡ ನಾನು
ಈಗೀಗ ನಾನಾಗಿಲ್ಲ,
ಕಳೆದು ಹೋಗಿಲ್ಲ
ಹುದುಗಿ ಹೋಗಿದ್ದೇನೆ
ಮರುಕ್ಷಣ,
ಬಳಲಿಲ್ಲ, ಬಗ್ಗುವುದಿಲ್ಲ
ಹಾಗಂತ ಸಮಾಧಾನ ಮಾಡಿಕೊಂಡೆ !
ಎದ್ದು ನಿಲ್ಲಲು ಆಗುತ್ತಿಲ್ಲ
ಮತ್ತೊಂದು ಪ್ರಯತ್ನ ಮಾಡುತ್ತೇನೆ!!
ಯುದ್ಧ ನನ್ನೊಬ್ಬಳದೆ ಅಲ್ಲ
ನಾನು ಕುದಿಯುತ್ತೇನೆ
ಕುದಿವ ಲಾವರಸ ತಣ್ಣಗಾಗಲಿ
ನಾನು ಸೋಲುವುದಿಲ್ಲ
ನಾವು ಸೋಲುವುದಿಲ್ಲ
ತುಂಬಾ ಚೆನ್ನಾಗಿದೆ