ಸಂಘಮಿತ್ರೆ ನಾಗರಘಟ್ಟ ಅವರ ಹೊಸ ಕವನ ಸಂಕಲನ ‘ಎಲ್ಲಾದರೂ ಹದವಿದ್ದರೆ’
‘ತಮಟೆ ಪುಸ್ತಕ’ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.
ಆಗಸ್ಟ್ ೨ ರಂದು ಈ ಪುಸ್ತಕ ಬಿಡುಗಡೆಯಾಗಲಿದೆ.
ಈ ಕೃತಿಯ ಲೇಖಕರ ಮಾತು ಇಲ್ಲಿದೆ.
-ಸಂಘಮಿತ್ರೆ ನಾಗರಘಟ್ಟ
ಮುಚ್ಚಿಟ್ಟ ಪುಸ್ತಕದೊಳಗಿನ ಮೌನವಂತೂ ಅಲ್ಲ
ಬರೆಯದೇ ಉಳಿದ ಮೊಗದ ಮೇಲೇ ಉಳಿದ
ನಿದ್ರೆಯಿಲ್ಲದ ರಾತ್ರಿಗಳ ಲಯವಾದ ಕವಿತೆ
ಬುದ್ಧಿಯ ಎಚ್ಚರದಲ್ಲಿ ಬರೆಯುವ ಕವಿತೆಗಳಿಗೂ ಮನಸ್ಸಿನಾಳದ ನೋವು ನಲಿವುಗಳ ಆಳ್ವಿಕೆಯಲ್ಲಿ ಮೂಡುವ ಸಾಲುಗಳಿಗೂ ಬಹಳ ವ್ಯತ್ಯಾಸ ಇದೆ ಎಂದು ನಂಬುವ ನಾನು, ನನ್ನ ಎರಡನೇ ಕೂಸು ‘ಎಲ್ಲಾದರೂ ಹದವಿದ್ದರೆ’ ಪುಸ್ತಕಕ್ಕೆ ಹೆಸರನ್ನು ಯೋಚಿಸುವಾಗ ಪ್ರಜ್ಞಾಪೂರ್ವಕವಾಗೇ ನನ್ನ ಅಪ್ಪನ ಈ ರೂಪಕಕ್ಕೆ ದಾಸಳಾಗಿರುವೆ.
ನನ್ನ ಚಿತ್ರ – ಕವಿತೆಗಳಿಗೆ ಮೊದಲ ನೋಡುಗ ಕೇಳುಗನಾದ ನನ್ನ ಅಮ್ಮ ಶೈಲಜ ನಾಗರಘಟ್ಟ ಮತ್ತು ದೂರದಲ್ಲೇ ಅದೃಶ್ಯವಾಗಿಯೇ ನನ್ನನ್ನು ಕಾಯುತ್ತಿರುವ ಅಪ್ಪ ಎನ್.ಕೆ ಹನುಮಂತಯ್ಯ, ಅವರಿಬ್ಬರಷ್ಟೇ ಪ್ರೀತಿ ನೀಡುವ ನನ್ನವ ರಾಜೇಶ್ ಹೆಬ್ಬಾರ್ ಮತ್ತು ಬೆರಗುಗಣ್ಣಿನಲ್ಲೇ ನನ್ನಲ್ಲೇ ಹೆಜ್ಜೆಗಳನ್ನು ಅನುಕರಣೆ ಮಾಡುವ ನನ್ನ ಕಂದ ರಿಯಾನ್ ರಾಜ್ ಗೆ ನನ್ನೀ.
ಗುರುಗಳಾದ ಬರಗೂರು ರಾಮಚಂದ್ರಪ್ಪ ಸರ್ ಅವರನ್ನು ಕಂಡರೆ ನನಗೆ ಅಪಾರ ಗೌರವ ಅವರು ಈ ಪುಸ್ತಕದ ಕುರಿತು ನೀಡಿದ ಮುನ್ನುಡಿ ನನಗೆ ಸದಾ ಬೆಳಕಿನ ದಾರಿಯಾಗಿರುತ್ತವೆ. ಹಾಗೆಯೇ ನನ್ನನ್ನು ನನ್ನ ಕವಿತೆಗಳನ್ನು ತೀರಾ ಆಪ್ತವಾಗಿ ಓದುವ ಹಿರಿಯ ಜೀವ ಡಾ. ಕೇಶವ ಶರ್ಮ ಸರ್ ಕೂಡ ಬಹಳ ಪ್ರೀತಿಯಿಂದ ಬೆನ್ನುಡಿಯನ್ನು ಬರೆದಿದ್ದಾರೆ, ಇಬ್ಬರಿಗೂ ನನ್ನ ಪ್ರೀತಿಯ ಶರಣು.

ಈ ಕವನ ಸಂಕಲನವನ್ನು ಪ್ರಕಟಿಸುತ್ತಿರುವ ಅಣ್ಣ ಹುಲಿಕುಂಟೆ ಮೂರ್ತಿ ನನಗೆ ಪರಿಚಯವಾದದ್ದು ಈ ಅಕ್ಷರ ಲೋಕದಲ್ಲೇ, ಹಾಗೂ ನನ್ನ ಕವಿತೆಗಳ ಓದಿ ಅದಕ್ಕನುಗುಣವಾಗಿ ಚೆಂದದ ಮುಖಪುಟ ಮಾಡಿಕೊಟ್ಟ ಕವಿ ಮಿತ್ರರಾದ ಜಬೀವುಲ್ಲ ಎಂ. ಅಸಾದ್ ಮತ್ತು ಪುಸ್ತಕಕ್ಕೆ ಜೀವರೂಪ ಕೊಟ್ಟ ಮಂಜು ಸರ್ ಅವರಿಗೂ ನಾನು ಸದಾ ಆಭಾರಿ.
ನನ್ನೊಳಗಿನ ಕವಿತೆಗಳ ಹೆಕ್ಕಿ ಹೊರ ಹಾಕಲು ಸ್ಪೂರ್ತಿಯಾದ ನನ್ನ ಪ್ರೀತಿಯ ಜೀವ ರೂಪ ಹಾಸನ ಮತ್ತು ನಾಗತಿಹಳ್ಳಿ ರಮೇಶ್ ಮಾಮ ಇವರಿಬ್ಬರ ನಿಶ್ಚಲ ಮನಸ್ಸಿಗೆ ನನ್ನ ಶರಣು.
ನನ್ನ ಏಳು ಬೀಳುಗಳಲ್ಲಿ ಜೊತೆ ನಿಂತ ಮಾಮ- ಅತ್ತೆಯಂದಿರಾದ ಗೀತಾ ನಾರಾಯಣ್, ರೂಪ ಕರಿಸ್ವಾಮಿ, ಕಮಲ ದೊಡ್ಡನಿಂಗಪ್ಪ, ವಾಣಿ ಸತೀಶ್, ಚೈತ್ರ ಜಗದೀಶ್, ಎಸ್.ಗಂಗಾಧರಯ್ಯ ಸರ್, ಜಾಹಿದಾ ಉಮೇಶ್ , ಶೈಲಾ ಮಂಜುನಾಥ್, ಫೀನಿಕ್ಸ್ ರವಿ. ಡಾ.ಪುರುಷೋತ್ತಮ ಬಿಳಿಮಲೆ ಸರ್, ನಿರಂತರ ರಂಗ ತಂಡದ ಗುರುಗಳು ಮತ್ತು ಸ್ನೇಹಿತರು. ನನ್ನ ಕವಿತೆಗಳಿಗೆ ವೇದಿಕೆ ಕಲ್ಪಿಸಿಕೊಟ್ಟ ಹಾಸನ ಮತ್ತು ಮೈಸೂರಿನ ಆಕಾಶವಾಣಿ ಅದರಲ್ಲೂ ಡಾ.ಮಂಜುನಾಥ್ ಬೇದ್ರೆ ಸರ್ ಹಾಗೂ ಅಬ್ದುಲ್ ರಶೀದ್ ಸರ್, ಪ್ರಕಾಶ್ ರಾಜ್ ಅವರ ನಿರ್ದಿಗಂತ, ಮಮತ ಸಾಗರ ಅವರ ಕಾವ್ಯ ಸಂಜೆ, ಬಳ್ಳಾರಿಯ ಸಂಗಂ, ಕನ್ನಡ ಸಾಹಿತ್ಯ ಅಕಾಡೆಮಿ, ಮತ್ತು ಮೊದಲ ಪುಸ್ತಕ ಬೆನ್ನಿಗೆಲ್ಲಿಯ ಕಣ್ಣಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಸಕಲೇಶಪುರದ ಜೈ ಕರ್ನಾಟಕ ಸಂಘ ಬೆಳ್ಳೇಕೆರೆಯ ರಾಧೆ ಅಮ್ಮ ಮತ್ತು ಪ್ರಸಾದ್ ರಕ್ಷಿದಿ ಸರ್, ಸುಬ್ಬು ಹೊಲೆಯರ್, ಮತ್ತು ಬೆಂಗಳೂರಿನ ಕನ್ನಡ ಸಂಘರ್ಷ ಸಮಿತಿಯನ್ನು ನಾನು ಸದಾ ಸ್ಮರಿಸುತ್ತೇನೆ.
ನನ್ನ ಕೂಸು ಈಗ ನಿಮ್ಮ ಮಡಿಲು ಸೇರಿಗೆ ಅದನ್ನು ಅಪ್ಪಿಕೊಳ್ಳುವುದು – ಒಪ್ಪಿಕೊಳ್ಳುವುದು ಮತ್ತು ಅದನ್ನು ಎಡವದಂತೆ ನೋಡಿಕೊಳ್ಳುವುದು ನಿಮ್ಮದೇ ಜವಾಬ್ದಾರಿ.






0 Comments