-ಕೆ ಎಸ್ ಎಸ್ ಕೆ ಕೊಪ್ಪ
ಮರೆತ ಸಾಲು…..
ಜಂಜಾಟಗಳ ಮಧ್ಯೆ ಏಕೋ ಮರೆತಿದ್ದೆ,
ಮನಕೆ ಕೊಂಚ ಮುದ ನೀಡುವ
ನಾಲ್ಕು ಸಾಲುಗಳ ಗೀಚಲು….
ಗೀಚಿ ನಿರುಮ್ಮಳವಾಗಲು….
ಲೇಖನಿ ಅದೆಷ್ಟು ಚಡಪಡಿಸುತ್ತಿದೆಯೋ??
ಎಲ್ಲೋ ಅನಾಥವಾಗಿ ಬಿದ್ದಿರಬಹುದು….
ಬೇಸರದ ಕಣ್ಣೀರಿನಂತಾಗಿರಬಹುದು
ಅದರೊಳಗಿನ ನೀಲಿ ಶಾಯಿ!!
ಆ ನನ್ನ ಪುಸ್ತಕದ ಹಾಳೆಗಳು
ಉಸಿರು ಕಟ್ಟಿಕೊಂಡಂತಾಗಿ
ನನ್ನ ಮೇಲೆ ತೀವ್ರವಾಗಿ
ಕೋಪಗೊಂಡಿರಬಹುದು!!
ಈ ನಡುವೆ ನಾನೋ ಯಾವ
ಬೇಸರಕ್ಕೂ, ಯಾರ ಕೋಪಕ್ಕೂ
ಪ್ರತಿಕ್ರಿಯುಸವುದಕ್ಕೂ ಹೋಗದೇ
ಭಾವ ನಿರ್ಲಿಪ್ತನಾಗಿದ್ದೇನೆ……..






0 Comments