ಅವಧಿ Archive ನಿಂದ: ಅಮೀರ್ ಖಾನ್ ಗೆ ಕೆ ವಿ ತಿರುಮಲೇಶ್ ಪತ್ರ

K.V.Tirumalesh

Amir Khan has every right (protected by our constitution) to say what he wants to say so long as it doesn’t hurt anyone else. And I don’t think he has said anything hurtful. One is free to migrate anywhere (I am not saying anything against his remark here) provided other countries accept you.

My personal view is that the whole world is ours and nationalities are just myths, perhaps necessary myths at this stage of human history. Nationalities, religions, ideologiis, professions, languages and such other contingencies both unite and disrupt human societies. We all know this–I mean most people. A little bit of rationality will help us.

We should also do our best to settle conflicts rather than aggravate them and it should begin from us.
Unfortunately, today there is no place on earth that is socially safe, free and totally conducive to human progress. Where will Amir Khan go and make a name?

It is not just the minorities who are facing discrimination in our country. I myself have faced many a humiliating situation and dreamed for a place of peace, safety, equality and freedom. But then I also know that everyone, including me, has a role to play in the creation of such a society. For such a society is human-made and not pre-given. There is no glory in going to a ready-made ideal place, but there is some happiness in bringing about some improvement, albeit a miniscule, in one’s own immediate reality.

If you are an educationist, teach better and teach others to teach better, if you are a physician, do your job better and be a role-model for others, and so on. (Let us not forget that Amir Khan has done superb in his own chosen field of acting.) Make your environment, your neighbourhood a better place to live. Better people than me have said all this and more. I am only thinking along.

All said and done, let me reiterate: I support Amir Khan on what he has said here–in doing so, I am only standing by what I think is right and truthful.

We should leave this behind and start doing something creative.

‍ಲೇಖಕರು admin

January 30, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. Samdeep Kamath

    ಪ್ರೀತಿಯ ತಿರುಮಲೇಶ್ ಸರ್,

    ನಿಮ್ಮ ಮೊದಲನೇ ಸಾಲಿನಲ್ಲೇ ಪ್ರಶ್ನೆ ಉತ್ತರ ಎರಡೂ ಅಡಗಿದೆ.

    ಆಮೀರ್ ಖಾನ್ ಗೆ ಅವನ ಅನಿಸಿಕೆ ಹೇಳಲು ಹಕ್ಕಿದೆ ಅಂದಿರಿ. ಅವನಿಗೆ ಇದ್ದ ಹಕ್ಕು ಅವನ ಹೇಳಿಕೆ ಖಂಡಿಸಲು ನನಗ್ಯಾಕಿಲ್ಲ??

    ಇನ್ನು ಉಳಿದವರ ಮನಸ್ಸು ನೋಯಿಸದೇ ಇರುವ ಹೇಳಿಕೆ ನೀಡಿದರೆ ಓಕೆ ಅಂದಿರಿ. ಮತ್ತೆ ಅವನಿಗೆ ಸರ್ಟಿಫಿಕೇಟ್ ಕೂಡಾ ನೀಡಿದಿರಿ. ನನ್ನಂತ ಹಲವರ ಮನಸ್ಸು ನೋಯಿಸಿದ್ದು ನಿಮಗೆ ಕಾಣಲಿಲ್ಲ. ನೀವು ಬರೀ ನಿಮಗೆ ನೋವಾಗಲಿಲ್ಲ ಅನ್ನೋದರ ಆಧಾರದ ಮೇಲೇ ಈ ಮಾತನ್ನು ಹೇಳ್ತಾ ಇದ್ದೀರ.

    ರಾಷ್ಟ್ರೀಯತೆ ಅನ್ನೋದೇ ಸುಳ್ಳಾದರೆ ಅವನ ಲಗಾನ್, ರಂಗ್ ದೇ ಬಸಂತಿ, ಸರ್ಫರೋಷ್ ಕೂಡಾ ಬರೀ ಸಿನೆಮಾ ಅಷ್ಟೆ. ಇನ್ನು ಸತ್ಯಮೇವ ಜಯತೇ ಕೂಡಾ just another serial!

    ಆದರೆ ನಾವ್ಯಾವತ್ತೂ ಹಾಗಂದುಕೊಂಡಿಲ್ಲವಲ್ಲ?

    ದೇಶಪ್ರೇಮ ಅನ್ನೋದು ಸುಳ್ಳಾದ್ರೆ ಎಲ್ಲಾ ಥರದ ಪ್ರೇಮವೂ ಸುಳ್ಳೇ.

    ಪ್ರತಿಕ್ರಿಯೆ
    • raghu

      well said,these people forgetting that everyone has a opinion,they think their opinion only matters.

      ಪ್ರತಿಕ್ರಿಯೆ
  2. vijayaraghavan R

    I understand what Thirumalesh means. I also understand the spirit behind Aamir Khan’s words. All this Desha, Jaathi, Raajya and even the Bhashe need some re-tweaking to keep the nuances of freedom going correct way. There are thousand ways for a wayward argumentator but what was ahead of the Budha was one, well chosen.

    ಪ್ರತಿಕ್ರಿಯೆ
  3. Gn Nagaraj

    ಒಳ್ಳೆಯ ಬರಹ. ದೇಶ,ಭಾಷೆ ಗಳ ಬಗ್ಗೆ ಪ್ರೇಮ ಇರಬೇಕು ಆದರೆ’ ಮಾನವ ಜಾತಿ ತಾನೊಂದೆ ವಲಂ’, ‘ವಸುಧೈವ ಕುಟುಂಬಕಂ’ ಎಂಬ ಎಲ್ಲಕ್ಕಿಂತ ಮಹತ್ತರ ಮಾನವ ಪ್ರೇಮದ ಭಾಗವಾಗಿ. ದೇಶಪ್ರೇಮವೆಂದರೆ ಏನು? ‘ದೇಶಮಂಟೆ ಮಟ್ಟಿ ಕಾದೋ ದೇಶಮಂಟೆ ಮನುಷಲು’ ಆದ್ದರಿಂದ ದೇಶಪ್ರೇಮವೆಂದರೆ ಕೂಡ ಮನುಷ್ಯ ಪ್ರೇಮವೇ. ನಾನು ಎರಡು ದಿನಗಳ ಹಿಂದೆ ಬರೆದಂತೆ ಅಮೀರ್ ಖಾನ್ ಗೆ ದೇಶವೆಂದರೆ ಏನು ಎಂಬುದರ ಬಗ್ಗೆ ಒಂದು ಕಾಣ್ಕೆ ಅಥವಾ ದರ್ಶನವಿದೆ. ಅದನ್ನು ಅವನು ತನ್ನೆಲ್ಲಾ ಪ್ರತಿಭೆ ಮತ್ತು ಹಣವನ್ನೂ ಹೂಡಿ ಲಗಾನ್ ಮೂಲಕ ತೋರಿಸಿದ್ದಾನೆ. ಎಲ್ಲರನ್ನೂ ಒಳಗೊಳ್ಳುವ ದೇಶದ ಕಲ್ಪನೆ ಅದು. ಆದರೆ ಅವನು ಯಾವುದರ ವಿರುದ್ಧ ದನಿಯೆತ್ತಿದನೋ, ಯಾರು ಅವನನ್ನು ಅಸಹ್ಯವಾಗಿ ನಿಂದಿಸಿದರೋ ಅವರೆಲ್ಲರ ದೇಶದ ಕಲ್ಪನೆ ಹೊರದೂಡುವ,ಹೊಡೆದೋಡಿಸುವ ದೇಶದ ಕಲ್ಪನೆ. ಹೀಗೆ ಲಗಾನ್ ನ ದೇಶದ ಕಲ್ಪನೆ Vs ಪಾಕೀಸ್ಥಾನಕ್ಕೆ ಹೋಗಿ ಎಂದು ಸಂವಿಧಾನದ ಅಧಿಕಾರಿಗಳಾದ ಮುಖ್ಯ ಮಂತ್ರಿಗಳು, ರಾಜ್ಯಪಾಲರು, ಕೇಂದ್ರ ಮಂತ್ರಿಗಳು ದಿನ ದಿನವೂ ಹೇಳುತ್ತಿರುವ ಹೊರದೂಡುವ ಕಲ್ಪನೆಯ ನಡುವಣ ವೈಚಾರಿಕ ಸಂಘರ್ಷ ಇದು. ಮತ್ತು ಅಮೀರ್ ಖಾನ್ ಆಡದ ಮಾತುಗಳನ್ನು ಅವನು ಹೇಳಿದನೆಂದು ಹೇಳಿದವರು ಇಂತಹ ದ್ವೇಷದ ಮಾತುಗಳನ್ನಾಡುತ್ತಿರುವವರನ್ನು ರಕ್ಷಿಸಲು ಬಯಸುತ್ತಿದ್ದಾರೆ. ಅದು ರಾಜಕೀಯ ಪಕ್ಷಗಳೇ ಆಗಲಿ ಅಥವಾ ಮಾಧ್ಯಮಗಳ ಬೊಬ್ಬೆಯೇ ಆಗಲಿ. ಈ ಜೋಡು ಬೊಬ್ಬೆಯ ಅಪಾಯಕಾರೀ ಪರಿಣಾಮಗಳ ಬಗ್ಗೆ ಎಲ್ಲರೂ ಚಿಂತಿಸಬೇಕಾಗಿದೆ.

    ಪ್ರತಿಕ್ರಿಯೆ
  4. M A Sriranga

    ಅಮೀರ್ ಖಾನ್ ಅವರಷ್ಟು ಶ್ರೀಮಂತರು, ಭದ್ರತೆ ಇಲ್ಲದವರು, ತಮ್ಮ ಮಕ್ಕಳನ್ನು ಮುಂಬೈನಲ್ಲಿನ ಉತ್ತಮ ದರ್ಜೆಯ international schoolನ ಗೇಟ್ ಸಹ ತೋರಿಸಲು ಶಕ್ಯವಿಲ್ಲದ ಅವರದೇ ಜಾತಿ,ಮತ,ಧರ್ಮದವರು ಮುಂಬೈ ಸೇರಿದಂತೆ ಭಾರತಾದ್ಯಂತ ಇದ್ದಾರೆ. ಅವರಿಗೆ, ಅವರ ಪತ್ನಿ,ಮಕ್ಕಳಿಗೆ ಕಾಡದ ಅಸಹಿಷ್ಣುತೆಯ ಭಾವ ಅಮೀರ್ ಖಾನ್ ಗೆ ಮಾತ್ರ ಕಾಡಿತೆ? ಕಂಡಿತೆ? ಇನ್ನೊಬ್ಬರಿಗಿಂತ ತಾವೇನೋ ಭಿನ್ನರು ಎಂಬ ಮನೋಭಾವ (ಆತ ತನ್ನ ಕ್ಷೇತ್ರದಲ್ಲಿ ಎಷ್ಟೇ ಪ್ರಸಿದ್ಧನಾಗಿರಲಿ) ಬಂದಾಗ ಇಂತಹ ಅತಿಬುದ್ಧಿವಂತಿಕೆಯ ದುರಹಂಕಾರದ ಮಾತುಗಳು ಬರುತ್ತವೆ.

    ಪ್ರತಿಕ್ರಿಯೆ
  5. girisha

    ಕವಿ ಕೆವಿ ತಿರುಮಲೇಶ್ ಅವರಿಗೆ ಅಭಿನಂದನೆಗಳು.
    ಅಸಹಿಷ್ಣುತೆ ಬಗ್ಗೆ ವಾದ ವಿವಾದಗಳ ಶಬ್ದಮಾಲಿನ್ಯದ ಎಡೆಯಲ್ಲಿ ಈ ವರೆಗೆ ಮಾತಾಡದೆ ಇದ್ದ ತಿರುಮಲೇಶ್ ಅವರಿಗೆ ಈಗ ಪ್ರಶಸ್ತಿ ಬಂದಾಗ ಮಾತಾಡಬೇಕೆಂದು ಅನಿಸಿದ್ದು ಅಚ್ಚರಿಯಲ್ಲ.
    ಈ ಮುಂದಿನದು ತಿರುಮಲೇಶ್ ಬಗ್ಗೆ ಅಲ್ಲ.- ನಮ್ಮ ದೊಡ್ಡ ದೊಡ್ಡ ಸಂಸ್ಕೃತಿ ಚಿಂತಕರು, ಚಿತ್ರನಟರು, ಬಹುಸಂಸ್ಕೃತಿವಾದಿಗಳು, ಕನ್ನಡವೂ ಸೆರಿದಂತೆ ಹಲವು ಲೇಖಕರ ಪ್ರಾಮಾಣಿಕತೆ ಬಗ್ಗೆ ನನಗೆ ಸಂದೇಹ ಇದೆ. ಅಸಹಿಷ್ಣುತೆ ಬಗ್ಗೆ ಎಲ್ಲರೂ ಮಾತಾಡುವ ಈಚಿನ ದಿನಗಳಲ್ಲಿ ಆ ಬಗ್ಗೆ ವಿಶ್ಲೇಷಣೆ ಮಾಡಿ ನಾನು ಒಂದು ಇಂಗ್ಲಿಷ್ ಲೇಖನವನ್ನು ಬರೆದು ಇಂಥ ನೂರಿನ್ನೂರು ಮಂದಿಗೆ ಮೇಲ್ ಮಾಡಿದ್ದೆ. ಎಲ್ಲದಕ್ಕೂ ಎಲ್ಲರೂ ಪ್ರತಿಕ್ರಿಯಿಸಬೇಕಿಲ್ಲ ನಿಜ.ನನ್ನದೊಂದು ಪ್ರತಿಕ್ರಿಯಿಸಲೇಬೇಕಾದ ಲೇಖನ ಅಂತಲೂ ಅಲ್ಲ. ಆದರೂ ತನ್ನ ವಿಚಾರಗಳ , ತಾನು ದಿನನಿತ್ಯ ಆಡುವ , ಬರೆಯುವ ವಿಚಾರಗಳ ಬಗ್ಗೆ ಬಂದ ವಿಮರ್ಶೆಗೆ ಪ್ರತಿಯಾಗಿ ಒಬ್ಬನೇ ಒಬ್ಬ ಘೋಷಿತ “ಬಹು”ವಾದಿಯೂ ಕೊನೇಪಕ್ಷ ಮೇಲ್ ಬಂದಿದೆ ಎಂಬ ಸ್ವೀಕೃತಿ ಕೂಡ ಕಳಿಸಿಲ್ಲ ಎಂಬುದನ್ನು ನೋಡಿದಾಗ ಇವರ ಬಹುಮುಖೀ ಸಂವಾದವೆಂಬ ಹೆಸರಿನ ಏಕಮುಖೀ ನಿಲುವು ಮತ್ತು ಇಂಗ್ಲಿಷ್ ಮಾಧ್ಯಮಗಳ ಮೇಲಿನ ಹಿಡಿತದ ಮೂಲಕ ಕಳೆದ ೪೦-೫೦ ವರ್ಷಗಳಲ್ಲಿ ಮಾಡಿದ ಅನಾಹುತವನ್ನು ಊಹಿಸುವುದು ಕಷ್ಟವಲ್ಲ.ಹೊಡೆದು ಓಡುವ ವಿದ್ವಾಂಸರು ಮಾಡಿದಷ್ಟು ಅನಾಹುತಗಳನ್ನು ಖಂಡಿತವಾಗಿಯೂ ಚುನಾವಣೆ ಮೇಲೆ ಕಣ್ಣಿಟ್ಟ, ಚುನಾವಣೆಯನ್ನೇ ಅವಲಂಬಿಸಬೇಕಾದ ರಾಜಕಾರಣಿಗಳು ಮಾಡಿಲ್ಲ.- ಅಜಕ್ಕಳ ಗಿರೀಶ

    ಪ್ರತಿಕ್ರಿಯೆ
  6. girisha

    ನಾನು ಕನ್ನಡಪ್ರಭ ವರದಿ ಬಗ್ಗೆ ರೆಫೆರ್ ಮಾಡಿದ್ದು, ಅಥವಾ ಕನ್ನಡಪ್ರಭ ತಿರುಮಲೇಶ್ ಬಾಯಲ್ಲಿ “ಅಸಹಿಷ್ಣುತೆ”ಯನ್ನು ಹೊರಡಿಸುವುದರಲ್ಲಿ ಯಶಸ್ವಿಯಾಯಿತೋ ಏನೋ. ಯಾಕೆಂದರೆ ಇತರ ಕನ್ನಡ ಪತ್ರಿಕೆಗಳಲ್ಲಿ ಆ ಬಗ್ಗೆ ಅಷ್ಟು ಒತ್ತು ಸಿಕ್ಕಿದಂತಿಲ್ಲ. ಹಿಂದು ಪತ್ರಿಕೆ ಕೂಡ ಬರೀ ಎಂಬರಸಿಂಗ್ ಬಗ್ಗೆ ಮಾತ್ರ ಹೇಳಿದೆ ಅನಿಸುತ್ತೆ.- ಅಜಕ್ಕಳ ಗಿರೀಶ

    ಪ್ರತಿಕ್ರಿಯೆ
  7. M A Sriranga

    ಈ ಸಲದ ಸಂಸತ್ತಿನ ಎರಡೂ ಅವಧಿಯ ಅಧಿವೇಶನಗಳು ನೀರಿನಲ್ಲಿ ಹೋಮ ಮಾಡಿದಂತೆ ಆಯಿತು. ಉಳಿದ ಇನ್ನು ಮೂರ್ನಾಲಕ್ಕು ದಿನಗಳ ಚಳಿಗಾಲದ ಅಧಿವೇಶನದಲ್ಲಿ ಬಾಕಿಯಿರುವ ಮಸೂದೆಗಳಿಗೆ ಒಪ್ಪಿಗೆ ಸಿಗುವುದು ಅನುಮಾನವೇ. ಕಳೆದ ಎರಡು ಮೂರು ದಿನ ನ್ಯಾಷನಲ್ ಹೆರಾಲ್ಡ್ ಬಗ್ಗೆ ನ್ಯಾಯಾಲದ ಆದೇಶವನ್ನು ವಿರೋಧಿಸಿ ನ್ಯಾಯಾಂಗಕ್ಕಿಂತ ಪಕ್ಷದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಒಂದು ‘ಕೈ’ ಮೇಲು ಎಂದು ಗಲಾಟೆ ಎಬ್ಬಿಸಲಾಯಿತು. ನ್ಯಾಯಾಲಯದಲ್ಲಿ ಇಂದು ಜಾಮೀನು ಸಿಕ್ಕಿರುವುದರಿಂದ ಸೋಮವಾರದಿಂದ ಸಂಸತ್ತಿನಲ್ಲಿ ‘ವಿಜಯೋತ್ಸವ’. ಈದಿನ ದಿಲ್ಲಿಯಲ್ಲಿ ನ್ಯಾಯಾಲಕ್ಕೆ ಹೋಗುವಾಗ ‘ಅಗಾಧ ಶಕ್ತಿ ಪ್ರದರ್ಶನ’ದ . ಜತೆಗೆ ಕರ್ನಾಟಕವೂ ಸೇರಿದಂತೆ ಉಳಿದ ರಾಜ್ಯಗಳಲ್ಲಿ ಕಾಂಗೈನವರಿಂದಲೂ ‘ಮಿನಿ ಶಕ್ತಿ ಪ್ರದರ್ಶನ’.ನಡೆಯಿತು. ಬೆಂಗಳೂರಿನಲ್ಲಿ ಕೆ ಪಿ ಸಿ ಸಿ ಅಧ್ಯಕ್ಷರು ಮತ್ತು ನಮ್ಮ ಗೃಹಮಂತ್ರಿಯವರಿಂದ ‘ಕಾಂಗ್ರೆಸ್ಸಿಗರನ್ನು ಕೆಣಕಿದರೆ ಸುಮ್ಮನೆ ಕೂರುವುದಿಲ್ಲ ಹುಷಾರ್ ‘ ಎಂದು ಪ್ರಧಾನಮಂತ್ರಿಗಳಿಗೆ ಎಚ್ಚರಿಕೆ ರವಾನೆಯಾಗಿದೆ. ಇವೆಲ್ಲಾ ಅಸಹಿಷ್ಣುತೆಯ ವ್ಯಾಖ್ಯಾನಕ್ಕೆ ಬರುವುದಿಲ್ಲವೇ? ನ್ಯಾಯಾಂಗಕ್ಕೆ ಅಗೌರವ ಸೂಚಿಸುವುದು, ಭಾರತದ ಪ್ರಜೆಗಳ ತೆರಿಗೆ ಹಣದಿಂದ ನಡೆಯುವ ಸಂಸತ್ತಿನ ಅತ್ಯಮೂಲ ಅಧಿವೇಶನವನ್ನು ಭಂಗ ಪಡಿಸುವುದು ಅಸಹಿಷ್ಣುತೆ ಅಲ್ಲವೇ? ಹಿಂದೆ ಬಿ ಜೆ ಪಿ ಅವರು ನಾವು ಅಧಿಕಾರದಲ್ಲಿ ಇದ್ದಾಗ ಸಂಸತ್ತಿನಲ್ಲಿ ಗಲಾಟೆ ಮಾಡಿರಲಿಲ್ಲವೇ ಎಂದು ಕಾಂಗೈ ಗಳು ಕೇಳಬಹುದು. ಹೌದು ಮಾಡಿದ್ದರು. ಈಗ ತಾವು ಅವರಿಗಿಂತ ಭಿನ್ನರು, ನಮಗೆ ದೇಶ ಮುಖ್ಯ,ಎಂದು ಸಂಸತ್ತು ಸುಗಮವಾಗಿ ನಡೆಯಲು ಅನುವು ಮಾಡಿಕೊಡಬೇಕು. ಗಲಾಟೆ ಮಾಡಿ ಅಲ್ಲ; ಚರ್ಚೆ ಮಾಡಿ . ಆಗ ಜನಗಳಿಗೇ ಮನವರಿಕೆಯಾಗುತ್ತದೆ. ಸಹಿಷ್ಣುತೆ ಎಂದರೆ ಕಾಂಗ್ರೆಸ್ಸ್ ಪಕ್ಷ; ಇತರರಲ್ಲ ಎಂದು. ಇಂತಹ ಬುದ್ಧಿವಾದವನ್ನು intolerance ಬಗ್ಗೆ ಮಾತಾಡುವ ನಮ್ಮ ಬುದ್ಧಿಜೀವಿಗಳು,ಪ್ರಶಸ್ತಿ ವಾಪಸಾತಿ ಸಾಹಿತಿಗಳು, ಜನಪ್ರಿಯ ನಟರು ಏಕೆ ಕಾಂಗ್ರೆಸ್ಸ್ ಗೆ ಹೇಳುವುದಿಲ್ಲ? ಶಾರುಖ್ ಖಾನ್ ಎರಡು ದಿನಗಳ ಹಿಂದೆ ಭಾರತೀಯರು ಸಹಿಷ್ಣುಗಳು,ನನ್ನ ಮಾತನ್ನು ಅಪಾರ್ಥಮಾಡಲಾಗಿದೆ, ನಾನು ಧೂಮಪಾನ ಮಾಡುವಾಗ ಮಾತ್ರ ಜನಗಳು ಅಸಹಿಷ್ಣುತೆ ತೋರಿದ್ದಾರೆ ಎಂದು ಹೊಸ ರೀಲ್ ಬಿಟ್ಟಿದ್ದಾರೆ. ಕಾರಣ ಕೋಟ್ಯಾಂತರ ವೆಚ್ಚದ ಅವರ ಅಭಿನಯದ ‘ದಿಲ್ವಾಲೇ’ ಸಿನಿಮಾ ಬಿಡುಗಡೆಯಾಗಿದೆ. ನಾಳೆ ಅಮೀರ್ ಖಾನ್ ಸಹ ಅವರ ಹೊಸ ಸಿನಿಮಾ ಬಂದಾಗ ಹೀಗೆ ಹೇಳುತ್ತಾರೆ. ಇಂಥವರ ಮಾತುಗಳಿಗೆ ಜಾಸ್ತಿ ಮೈಲೇಜ್ ಕೊಟ್ಟಷ್ಟೂ ಅದು ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇಂದು ಕುಂ. ವಿ ಅವರು ಮೈಸೂರಿನ ಸಭೆಯೊಂದರಲ್ಲಿ ಮಾತಾಡುತ್ತಾ ‘ಸಾಹಿತಿಗಳು ರಾಜಕೀಯದ ಜತೆ ಸಂಬಂಧ ಇಟ್ಟುಕೊಳ್ಳಬೇಕು. ಆಗ ಮಾತ್ರ ಅಸಹಿಷ್ಣುತೆ /ಸಹಿಷ್ಣುತೆ ಬಗ್ಗೆ ಮಾತಾಡಬಹುದು. ಸಾಹಿತಿಗಳು ತ್ರಿಕಾಲಜ್ಞಾನಿಗಳಿದ್ದಂತೆ. ಅವರನ್ನು ನಿರ್ಲಕ್ಷಿಸಬಾರದು ಎಂದಿದ್ದಾರೆ’. ಇನ್ನು ಮುಂದಾದರೂ ಸಾಹಿತಿಗಳು ತಮ್ಮ ತ್ರಿಕಾಲ ಜ್ಞಾನದಿಂದ ಯಾವುದೇ ಪಕ್ಷವಿರಲಿ ತಪ್ಪು ಮಾಡಿದಾಗ ಕಿವಿ ಹಿಂಡುವ ಕೆಲಸಮಾಡಲಿ ಎಂದು ಅವರ ಅಭಿಮಾನಿಗಳ ಆಸೆ,ನಿರೀಕ್ಷೆ. ಅವರ ‘ರಾಜಕೀಯದ ಜತೆ ಸಂಬಂಧ’ ಕೇವಲ ಒಂದು ಪಕ್ಷಕ್ಕೆ ಮಾತ್ರ ನಿಷ್ಠೆ ತೋರಿಸುವಂತಹ ಸೀಮಿತ ರಾಜಕಾರಣವಾಗದೆ ಇರಲಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: