ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅತ್ತವರರಾರಿಲ್ಲಿ? ತಿಳಿಯುತ್ತಿಲ್ಲ..

ಅಸ್ಸಾಮಿ ಕವಿ ನಿಲಿಂ ಕುಮಾರ್ ಹೊಟ್ಟೆಯಲ್ಲಿ ಬೆಂಕಿ ಇಟ್ಟುಕೊಂಡವನು. ಬರೆದರೆ ಸಾಕು ಅನುಗಾಲವೂ ಅವನದ್ದೇ ಚಿಂತೆ ಎನ್ನುವಷ್ಟು ಆವರಿಸಿಕೊಳ್ಳುತ್ತಾನೆ

ಎಚ್ ಎನ್ ಆರತಿ ಈಗಾಗಲೇ ನಿಲಿಂ ಕವಿತೆಗಳನ್ನು ಕನ್ನಡದ ಓದುಗರಿಗೆ ಮೊಗೆದು ಕೊಟ್ಟಿದ್ದಾರೆ.

ಆತನ ಭಾವವನ್ನು ಕನ್ನಡದ ಚೌಕಟ್ಟಿಗೆ ಸರಿಯಾಗಿ ಕೂರಿಸುವ ಆರತಿ ಸಧ್ಯದಲ್ಲೇ ಈತನ ಕವಿತಾ ಸಂಕಲನದೊಂದಿಗೆ ನಮ್ಮೆದುರು ನಿಲ್ಲಲಿದ್ದಾರೆ

ಇಲ್ಲಿದೆ ಮತ್ತೊಂದು ನಿಲಿಂ ಪದ್ಯ…

ಭಾವಾನುವಾದ : ಆರತಿ.ಎಚ್.ಎನ್.

ತಿನ್ನಲಾಗದೇ, ನಾನಿಂದು
ಊಟ ಬಿಟ್ಟೆ!
ಅಪಾರ ಸಂಕಟದಿಂದ
ಹೊಟ್ಟೆ ತುಂಬಿದೆ.
ಖುಷಿಯಿಂದ ನಗುವ ವೇಷ ಧರಿಸಿ,
ಒಳಗೆ ದುಃಖ ಉಮ್ಮಳಿಸಿ
ಅತ್ತವರರಾರಿಲ್ಲಿ? ತಿಳಿಯುತ್ತಿಲ್ಲ.

ಅಳು, ನಗು ಬಾರದ
ಯಾರಾದರೂ
ಪರಿಚಿತರಿದ್ದಾರೆಯೇ?
ಇದ್ದರೆ, ಅಂತವರು
ನನ್ನ ಕೈಲಿ ಆತ್ಮಹತ್ಯೆಯ
ಚೀಟಿ ತುರುಕಲು ಅರ್ಹರು!

ಆ ರಕ್ತಸಿಕ್ತ ಕೈಗಳನ್ನುಜ್ಜಿ,
ಬೆರಳು ತಿಕ್ಕಿ ತೊಳೆದು,
ಅಡುಗೆ ಯಾರೇ ಮಾಡಿರಲಿ,
ಅದು ಲೋಕದ ಅತ್ಯಂತ ಹೊಲಸು ಹಸಿವಿಗೋಸ್ಕರ!

ಅಣಕವೇನೆಂದರೆ,
ಕಾಡುವ ಹಸಿವು
ಯಾರದೋ ಹೊಟ್ಟೆಯಲ್ಲಿದೆ,
ಕಬಳಿಸಲು ಊಟ ಇನ್ಯಾರದ್ದೋ ತಟ್ಟೆಯಲ್ಲಿ!

ಇವತ್ತು ನನಗೆ
ಊಟ ಸೇರಲಿಲ್ಲ,
ನಡು ಮಧ್ಯಾಹ್ನವೊಂದು
ವಕ್ರವಾಗಿ ನಗುತ್ತಾ
ನನ್ನನ್ನು ದಾಟಿ ಹೀಗೇ
ಮುಂದೆ ಹೋಯಿತು…

 

‍ಲೇಖಕರು avadhi

16 December, 2017

3 Comments

  1. H S Eswara

    ಅಣಕವೇನೆಂದರೆ,
    ಕಾಡುವ ಹಸಿವು
    ಯಾರದೋ ಹೊಟ್ಟೆಯಲ್ಲಿದೆ,
    ಕಬಳಿಸಲು ಊಟ ಇನ್ಯಾರದ್ದೋ ತಟ್ಟೆಯಲ್ಲಿ! How true? Why so? These questions have bothered me over the years and I am yet to find an answer. HS Eswara

  2. Ameen

    Nadu madhyan vakravaagi… Super

  3. ಮಮತ

    ಅಪಾರ ಸಂಕಟದಿಂದ ಹೊಟ್ಟೆ ತುಂಬಿದೆ.
    ಅತ್ತವರಾರೆಂದು ತಿಳಿಯುತ್ತಿಲ್ಲ …

    ತೀವ್ರ ಅನುಭೂತಿ ಮೂಡಿಸುವ ಪದ್ಯ..
    ಆರತಿ ಮೇಡಂರ ಸಶಕ್ತ ಅನುವಾದ …

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading