–ಡಾ. ಪ್ರಹ್ಲಾದ ಡಿ.ಎಂ
೧ ಅಲ್ಲಮನ ಹುಡುಕಾಟ!
ಮೆಕ್ಕಾ ಮದಿರೆಯ ನಡುವೆ ಅಲ್ಲಮನ ಹುಡುಕಾಟ
ಬಯಸದೆ ಬಂದ ಕಫನ್, ಮಹೆಂದಿಯ ರಂಗು.
ಮಸೀದಿಯ ಮೇಲೊಂದು ಜುಲ್ಮಾಗೆ ತೆತ್ತಪಣ.
ಪರೀದ ಪರದೇಯ ಹಿಂದೆ ತನ್ನವರ ಹುಡುಕಾಟ||
ಸಂತೆ ಪೇಟೆ ಮಹಲ್‌ಗಳಲ್ಲಿ ಸೌಂದರ್ಯ ಪ್ರದರ್ಶನ
ಅಲ್ಲಾಮನ ಕೂಸಿಗೆ ಧರ್ಮದ ಸಂಕೋಲೆಯ ಸ್ಫರ್ಧೆ
ಮಮ್ತಾಜ್ ಬೇಡುವಳು ಧರ್ಮದ ದಂಧೆಗೆ ಕೊನೆ ಎಂದೂ.
ತಲಾಖ್, ಹಿಜಾಬ್, ರುಕ್ಕಾ, ಆಲಾಲ್ ಕಟ್ ತಂತ್ರದ ಬಿಡುಗಡೆಗಾಗಿ||
ಅಲ್ಲಮನ ನಿಜ ಪ್ರೇಮ ಅರಿಯದ ನಾವು
ಧರ್ಮದ ಧಂದೆಗೆ ಕೂಸಿನ ಪ್ರಾಣ ಹಿಂಡುತ್ತಿದ್ದೇವೆ.
ಹೇ…ಉಜುರ್ ಮೋಹದ ಅಮಲಿನ ತಲಾಖ್ ಹಿಜಾಬ್ ಕೊನೆಗೊಳಿಸಿ,
ಮೆಕ್ಕಾ ಮದಿರೆಯಲ್ಲಿ ಹಸುರಿನ ಪ್ರೀತಿ ಹಂಚೋ ನೀ…
ಎಂಬೆನೋ ಅಲ್ಲಮ.
೨ ಅಜ್ಜನ ನೇಗಿಲು
ಹೊಟ್ಟೆ ಬಟ್ಟೆಗಾಗಿ ಚೋಮನ ಕನಸ್ಸು
ಗೇಣು ಭೂಮಿಯಲ್ಲಿ ತನ್ನ ಬದುಕಿನ ನೇಗಿಲು ಕಟ್ಟುವುದು.
ನನ್ನಜ್ಜ ರಟ್ಟೆಯ ಶಕ್ತಿಯಿಂದ ನೇಗಿಲ ಎಳೆಯುತ.್ತ
ಹಗಳಿರುಳು ಎನ್ನದೇ ಗೇಣು ಭೂಮಿಯನ್ನೇ ಉಳುವನು
ಸಂಸಾರ ಲೇಕ್ಕಾಚಾರದೊಳಗೆ,
ಒಡೆಯನ ಸಾಲದ ಚಿಂತಿಯೊಳಗೆ.
ಅವರೀವರ ಮನೆಯ ಜೀತದಾಳಾದ ನನ್ನಜ್ಜ,
ರಾತ್ರೋರಾತ್ರಿ ತಿರುಕನ ಕನಸ್ಸಿನಂತೆ
ಗೇಣು ಭೂಮಿಗೆ ಒಡೆಯನಾದನೆಂಬ ಸುದ್ಧಿ.
ಅಂದು ರಕ್ತ ಹೆಪ್ಪುಗಟ್ಟಿದ ನನ್ನಜ್ಜನ ಮನೆಯ ನೇಗಿಲು
ನೊಗಕ್ಕೆ ಜೀವ ಕಳೆ ತುಂಬಿತಂದು.
ನೇಗಿಲ ನೊಗಕ್ಕೆ ನನ್ನಜ್ಜನೆ ಹೆಗಲ ಕೊಟ್ಟು
ಫಸಲು ಬೆಳೆದು ಮಕ್ಕಳಿಗೆ ತುತ್ತಿನ ಋಣ ತೀರಿಸಿದನು.
ನನ್ನಜ್ಜನ ಕಾಲದ ಅಂದಿನ ದೇಶದ ರಾಜ
ಉಳುವವನೇ ಭೂಮಿಯ ಒಡೆಯ ಎಂದರು.
ಆದರೆ ಇಂದಿನ ರಾಜ ಕಾಸಿದ್ದವನೇ
ಭೂಮಿಯ ಒಡೆಯ ಎನ್ನುತ್ತಾನೆ.
ಅಂದು ಚೋಮನಂತ ಸಾವಿರಾರು
ಜನರ ಕನಸ್ಸು.…
ಭೂಮಿಯಲ್ಲಿ ಉಳುಮೆ ಮಾಡುವುದೇ
ಅಂತಿಮ ಆಸೆಯಾಗಿತ್ತು.
ಇಂದಿನ ರಾಜನ ಮನಸ್ಸು ಭೂಮಿಯನ್ನೇ ಕಸಿದು
ಕೊಳ್ಳ ಬೇಕೆಂಬಾ ಮಹದಾಸೆಯಾಗಿದೆ.
ನನ್ನಜ್ಜನ ತುಡಿತ ಮತ್ತೇಲ್ಲಿ ನನ್ನ ನೇಗಿಲನ್ನು
ಮೂಲೆಗೆಸೆದು ಮತ್ತೇಲ್ಲಿ ಜೀತಕ್ಕೆ ತಳ್ಳುತ್ತಾರೋ
ಎನ್ನುವ ಆಂತಕ.
ತನ್ನ ಸಿಟ್ಟನ್ನೆ ಗಟ್ಟಿ ಮಾಡಿಕೊಂಡು,
ನೀ ತಿನ್ನುವ ಅನ್ನ ನಾ ಸುರಿಸಿದ
ಬೆವರ ಹನಿಯ ಫಲ.
ತಾ ನಂಬಿರುವ ಭೂಮಿಯ ಕೆಸರನ್ನೆ
ಮೈ ಕೈಗೇ ಮೆತ್ತಿಕೊಂಡು ಹೇಳಿದನು ಅಂದು,
ಕೂಸೆ ನನ್ನ ಹೆಗಲಿಗೆ ನೊಗ ಹೊರಿಸಿದರೂ
ಚಿಂತೆಯಿಲ್ಲಾ,
ತಾ ನಂಬಿರುವ ಗೇಣು ಭೂಮಿಯನ್ನು
ಮಾಲೀಕನಿಗೆ ಕೊಡಲಾರೆನೆಂದು.
ದೇಶವೇ ಅನ್ನದಾತನ ಋಣದಲ್ಲಿ
ಮಣಿಯಾಗಿರುವಾಗ.
ಆ ಅನ್ನದಾತನ ಕೂಗು ಇಂದು ದೆಹಲಿಯ
ಗಲ್ಲಿ ಗಲ್ಲಿಗಳಲ್ಲಿ ನರಾಳಡುತ್ತಿದೆ.
ನೇಗಿಲು ನೊಗ ಹೊತ್ತವರು ದೆಹಲಿಯ ಹೆದ್ದಾರಿಯಲ್ಲಿ
ಜೋಪಾಡಿಯೊಳಗೆ ನಕ್ಷತ್ರ ಎಣಿಸುತ್ತಿದ್ದಾರೆ.
ಕೊರೆವ ಚಳಿಗೆ, ಸುರಿವ ಮಳೆಗೆ ಮೈಯೊಡ್ಡಿ
ಸಾರಿ ಸಾರಿ ಕೂಗಿ ಹೇಳುತ್ತಾರೆ ನನ್ನ ಫಸಲಿಗೆ
ನಾನೇ ಒಡೆಯನೆಂದು.
ಓ ರಾಜ ನೀನು ನನ್ನ ರೊಟ್ಟಿಯ ಉಂಡದಕ್ಕೆ,
ಇಂದು ನನ್ನ ವಿರುದ್ಧ ನಿಲ್ಲಲು ಶಕ್ತಿ ಇರುವುದು.
ನನ್ನ ಅನ್ನದ ಋಣ ತೀರಿಸು, ಇಲ್ಲಾವೇ ನಿನ್ನ
ಸಿಂಹಾಸನವನ್ನು ತ್ಯಜಿಸು.
ಯಾರು ಬಲ್ಲರು ಈ ರೈತರ ಕೋಪದ
ಬಿಸಿ ಉಸಿರು.
ನೊಂದ ಜೀವ ಎಷ್ಟೆಂದೂ ಸಹನೆಯಿಂದಿರಲು
ಸಾಧ್ಯ ನೀನೆ ಹೇಳು…?






ಅಧ್ಬುತ ಓದು..