ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗೆ ಕೆಲವು ಹೈಕುಗಳು…

ನವೀನ್ ಮದುಗಿರಿ


ಸುಮ್ಮನೆ ಜಿಗಿಯಿತು
ಕಪ್ಪೆ
ಕೊಳದ ತುಂಬಾ
ಎಷ್ಟೊಂದು ತರಂಗ
~•~
 
ತುದಿಗಾಲ ಮೇಲೆ
ಅಲೆಗಳು
ಚಂದಿರ
ಹುಳಿ ದ್ರಾಕ್ಷಿ ಗೊಂಚಲು
~•~
ತಂಗಾಳಿಯ ಕೈ
ತೂಗುತಿದೆ
ಚಿಟ್ಟೆಗೆ
ಹೂವಿನ ತೊಟ್ಟಿಲು
~•~

ಶಿವ ಶಿವಾ
ಈ ಮರದ
ನೆತ್ತಿಯ ಮೇಲೆ
ಚಂದಿರ
~•~
ನಿಶ್ಯಬ್ದ ರಾತ್ರಿ ಸುಳ್ಳು
ಗಾಳಿಯೂ
ಮಾತು ಕಲಿತಿದೆ
ಸುಯ್ಯೋ ಸುಯ್
~•~
ಮರದ ಮುಂಗೈ
ಚುಂಬಿಸಿತು ಗಾಳಿ
ಉದುರಿ ಬಿದ್ದಿವೆ
ಹಣ್ಣೆಲೆ
~•~
ಕತ್ತಲು ಬೆಳಕಿನ
ನಡುವೆ
ರಾಜಿ ಮಾಡಿಸುತಿದೆ
ಮಿಂಚುಹುಳು
~•~

ನೇಸರ ಬಿಡಿಸಿದ
ನೆರಳ ಚಿತ್ರ
ಅಮಾವಾಸೆಯ
ಚಂದಿರ ಬಳಿದ
ಕಪ್ಪು ಬಣ್ಣ
~•~
 
ಮನೆಯೊಳಗಿನ
ಗಾಳಿಯಂತ್ರವನ್ನು
ಬೆರಗಿನಿಂದ ನೋಡಿದೆ
ಮನೆಯ ಮುಂದೊಂದು ಮರ
~•~
ನದಿ ಓಡುತಿದೆ
ಎಲ್ಲಿಗೆಂದು ಗೊತ್ತಿಲ್ಲದೆ
ದೂರದಲ್ಲೊಂದು
ಕಡಲು ಕಾಯುತ್ತಿದೆ
~•~
ಚಲಿಸುತ್ತಿದೆ ರೈಲು
ಜೊತೆಗೆ ಚಂದಿರನೂ
ಎಲ್ಲೆಡೆಯೂ ಇದೆ
ಬೆಳದಿಂಗಳು
~•~
ವಿಳಾಸ ತಪ್ಪಿ
ಅಲೆಯುವಾಗ ದುಂಬಿ
ಪರಿಮಳ ಕಳಿಸಿದೆ
ಹೂವು
ಗಾಳಿಯ ಜೊತೆಯಲಿ
~•~
 

‍ಲೇಖಕರು G

26 February, 2015

8 Comments

  1. ಅಕ್ಕಿಮಂಗಲ ಮಂಜುನಾಥ

    ವಾಹ್! ಮದುಗಿರಿ; ನಿಮ್ಮ ಹೈಕುಗಳು ಸಿಕ್ಕಾಪಟ್ಟೆ ಚೆನ್ನಾಗಿವೆ. ಅಭಿನಂದನೆಗಳು.

  2. smitha Amrithraj

    Thumba olleya haikugalu

  3. Anonymous

    Rohini Satya says:
    Ella haikugalu chennaagive. Hechhina gamana seledaddu “Kattalu belakina…… Minchu hulu”

  4. Suryakanth Bellary

    Good

  5. satish javaregowda

    Very nice.

  6. Hanumanth Ananth Patil

    ನವೀನರವರಿಗೆ ವಂದನೆಗಳು ಹಾಯ್ಕುಗಳು ಮನದಾಳಕಿಳಿದು ಯೋಚನೆಗೆ ಹಚ್ಚುತ್ತವೆ ಬಹಳ ಸುಂದರವಾದ ಅಬಿವ್ಯಕ್ತಿ.

  7. nd ramaswamy

    Nice

  8. mmshaik

    hykugaLu tumbaane chennaagive navin..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading