ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಲಸೆ ರೈಲು

‌‌ ಡಾ ಡಿ ಸಿ ರಾಜಪ್ಪ 

ಅಪ್ಪ ಹತ್ತಿ ಬಿಡು ರೈಲು
ಅದು ಭರ್ತಿ ಯಾಗುವ ಮುನ್ನ
ಮಹಾಮಾರಿ ಕೊರೋನಾ ಬಂದು
ಬೀದಿ ಹೆಣವಾಗುವ ಮುನ್ನ
ಸೇರಿಬಿಡು ನೀನುಟ್ಟಿದ ನೆಲವನ್ನ

ಅಣ್ಣಾ ಹತ್ತಿಬಿಡು ರೈಲು
ಅದು ಭರ್ತಿಯಾಗುವ ಮುನ್ನ
ಮರಳಿ ಮಣ್ಣಿಗೆ ಸೇರು
ಆದರ ವಾಸನೆ ಆರುವ ಮುನ್ನ

ರೀ, ಹತ್ತಿಬಿಡಿ ರೈಲು ಬೇಗ
ಕಾಣದೂರಿನಲಿ, ನಿಮ್ಮ ಬದುಕು
ಅಂತ್ಯವಾಗುವ ಮುನ್ನ
ಮಡದಿ ಮಕ್ಕಳ ಸೇರಿ ಬಿಡಿ
ನಾವೆಲ್ಲ ಸೇರಿ ಕೂಡಿ ಬಾಳೋಣ

ಅಣ್ಣಾ ನೀನು ನಮ್ಮನ್ನೆಲ್ಲಾ ಬಿಟ್ಟು
ದೂರದೂರಿಗೆ ಹೋದೆ,ನಾವಿಲ್ಲಿ
ಒಂಟಿ,ಕೊರೋನಾ ಬಂದು
ನೀ ಸತ್ತರಲ್ಲಿ,ನಿನ್ನ ಹೆಣವನ್ನೂ
ಕೊಡುವುದಿಲ್ಲವಂತೆ ನಿಜವಣ್ಣಾ

ನೀ ಬೀದಿ ಹೆಣವಾಗುವ ಮುನ್ನ
ಮರಳಿ ಮಣ್ಣಿಗೆ ಬಾ ಅಣ್ಣಾ
ನಾವೆಲ್ಲಾ ಸೇರಿ ಕೂಡಿ ಬಾಳೋಣ

‍ಲೇಖಕರು nalike

24 May, 2020

1 Comment

  1. ಚಂದ್ರಪ್ರಭ ಕಠಾರಿ

    ಕವನ ಚೆನ್ನಾಗಿದೆ. ವಲಸಿಗರು ಕೊರೊನಾ ಕಾಲದಲ್ಲಿ ಯಾರೂ ಗಮನ ಹರಿಸದ, ತಮ್ಮದಲ್ಲದ ತಪ್ಪಿಗೆ ಆಳುವ ಪ್ರಭುತ್ವದ ಲಾಠಿ ಏಟಿನಲಿ ಬದುಕು ಮೂರಾಬಟ್ಟೆಯಾಗಿಸಿಕೊಂಡವರು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading