ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೈತರಿಗೆ ಸಂದ ಜಯದ ಸಂದರ್ಭದಲ್ಲಿ…

ಸವಿತಾ ನಾಗಭೂಷಣ ಹೊಸ ಕವಿತೆ- ಊಟದ ತಾಟಿನಲ್ಲಿ

ಸವಿತಾ ನಾಗಭೂಷಣ

ಚಿತ್ರ: ಹಜರತ್ ಅಲೀ

ಮಿಡಿ ಉಪ್ಪಿನ ಕಾಯಿ, ಹೆಸರುಬೇಳೆ, ಸೌತೆಕಾಯಿ ಲಿಂಬೆ,
ತೆಂಗು, ಸಾಸಿವೆ, ಕರಿಬೇವು ಹಸಿ ಮೆಣಸು ಹಾಕಿದ ಘಮ್ಮನೆ ಪರಿಮಳ ಸೂಸುವ ಕೋಸಂಬರಿ.

ಹುರುಳಿ ಕಾಯಿಯ ಪಲ್ಯ,
ಬೆಂಡೆಕಾಯಿ ಗೊಜ್ಜು.
ಬದನೆ ನೀರುಳ್ಳಿ ಆಲೂ ಹಾಕಿದ ಸಾಂಬಾರು- ಅದರಲ್ಲಿ ಉದ್ದು, ಕಡಲೆ, ಕೊತ್ತಂಬರಿ ಬೀಜ, ಮೆಣಸು, ಮೆಂತೆ, ಒಣಮೆಣಸು, ಕೊಬ್ಬರಿ ಹುರಿದು ಹಾಕಿದ ಪುಡಿಯ ಘಮ!
ಬೆಳ್ಳುಳಿ ಒಗ್ಗರಣೆ ಹಾಕಿರುವ ಹುಣಿಸೆ ಸಾರು

ಬೆಲ್ಲ, ತೆಂಗು, ದ್ರಾಕ್ಷಿ, ಏಲಕ್ಕಿ,
ತುಪ್ಪದ ಗೋಧಿಯ ಹುಗ್ಗಿ
ಹಾಲಿನ ಕೀರು

ಕೊತ್ತಂಬರಿ ಸೊಪ್ಪು-
ಹಸಿ ಶುಂಠಿ ಬೆರೆಸಿದ ಮಜ್ಜಿಗೆ

ಮಲ್ಲಿಗೆ ಹೂವಿನಂತಹ ಅನ್ನ
ಜೋಳದ ರೊಟ್ಟಿ-ತುಂಡು ಹಸಿ ನೀರುಳ್ಳಿಯಲ್ಲೂ
ರಾಗಿಯ ಮುದ್ದೆ- ಉಪ್ಪೆಸರಿನಲ್ಲೂ…
ಗೋಧಿಯ ರೊಟ್ಟಿ- ದಾಲ್ ನಲ್ಲೂ…

ಬಾಡೂಟ, ಬಿರಿಯಾನಿ…
ಭೂರಿ ಭೋಜನದಲ್ಲೂ…
ಉಪ್ಪು-ಗಂಜಿ-ಉಪ್ಪಿನಕಾಯಲ್ಲೂ
ಒಂದೊಂದು ಅಗುಳಿನಲ್ಲೂ ನೀನೇ ಇರುವೆ

ಊಟದ ತಾಟಿನ ತುಂಬಾ
ನೀನೇ ಕಾಣುವೆ !
ಓ ರೈತನೇ ಮೊದಲ ತುತ್ತು ನಿನಗೇ ಅರ್ಪಣೆ

‍ಲೇಖಕರು Admin

19 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading