ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೆಕ್ಕೆ ಪುಕ್ಕ ಬಲಿಯದ ಹಕ್ಕಿ ನಾನು..

ವೃಥಾ ನನ್ನಾಶ್ರಯದಲಿ

 ಆದಿವಾಲ ಗಂಗಮ್ಮ

ಸುಮ್ಮನೆ ಕೂಗಬೇಡ ನಲ್ಲೆ
ಕೂಗಿ ಕಾಡಬೇಡ

ನನ್ನ ಕಾಲ ಮೇಲೆ
ನಾ ನಿಂತಿಲ್ಲ
ಹೆತ್ತವರ ತಿನಿಸಿಗೆ
ಕೊಕ್ಕು ತೆರೆಯುವ
ಮನ ಬಂದತ್ತ ಹಾರಲಾಗದ
ರೆಕ್ಕೆ ಪುಕ್ಕ ಬಲಿಯದ
ಹಕ್ಕಿ ನಾನು

ವೃಥಾ ನನ್ನಾಶ್ರಯದಲಿ
ನಿನ್ನ ಮೈಯ ತೋಯಿಸಬೇಡ ನಲ್ಲೆ
ಬಿಸಿಲ ಬೇಗೆಗೆ ಬಾಡಿಸಬೇಡ

ಹುಡುಕಿಕೋ ನಲ್ಲೆ
ಹುಡುಕಿಕೋ ನಲ್ಲೆ
ರೆಕ್ಕೆ ಪುಕ್ಕ ಬಲಿತ ಗೂಡ ಕಟ್ಟ ಬಲ್ಲ
ಬೇರೊಂದು ಹಕ್ಕಿಯ.

‍ಲೇಖಕರು nalike

18 May, 2020

4 Comments

  1. ಎಲ್.ಗಿರಿಜಾರಾಜ್

    ಗೆಳತಿ ಆದಿವಾಲ ಗಂಗಮ್ಮ ಅವರ ಕವಿತೆ ಅರ್ಥಪೂರ್ಣ ವಾಗಿದೆ, ಹೃತ್ಪೂರ್ವಕ ಅಭಿನಂದನೆಗಳು

  2. Adivala Gangamma

    ಧನ್ಯವಾದಗಳು ಗಿರಿಜಾ.

  3. Adivala Gangamma

    ಧನ್ಯವಾದಗಳು ಗಿರಿಜಾ

  4. Anasuya M R

    ಕವನದ ಆಶಯ ಸಫಲವಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading