ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತಲ್ಲಿ ಉರಿಯುತಾಳೆ ಕೆಂಡದಂತೆ..!

ಅವಳು

ಲಕ್ಷ್ಮಿ ವಾರಣಾಶಿ ಅಡ್ಕತಿಮಾರ್

she oon

ಅವಳು ನಿಲ್ಲಲಿಲ್ಲ
ದಾರಿ ಉದ್ದಕೂ ಸಾಗಿ
ಸಾಲು ದೀಪಗಳ ಸೇರಿ
ಸೋಲುಗಳ ಸರಮಾಲೆಗೆ
ಬೀಗ ಜಡಿದು
ಗಾಳಿಯಲಿ ಲೀನವಾದಳು.

ಅವಳ ಮಾತು ಯಾರನೂ ಮುಟ್ಟಲಿಲ್ಲ!
ಮೌನದ ಮರವೇರಿ
ಶಬ್ದ ಸಾಗರ ದಾಟಿ
ಅಲೆಗಳೊಡನೆ ಸೇರಿ
ಅಳಿಸಿ ಹೋದಳು.

ಅವಳು ಅವನಲ್ಲ
ಅವನಾಗ ಬಯಸಿದಳೆ ?!!
ಬಯಕೆ ಬಾಯಾರಿಕೆಗಳು
ಬತ್ತಿ ಹೋದನಂತರವೂ
ಮತ್ತಲ್ಲಿ ಉರಿಯುತಾಳೆ
ಕೆಂಡದಂತೆ… !

‍ಲೇಖಕರು admin

26 May, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading