ಎಲ್ಲಾ ಬಿಚ್ಚಿ.. ಹೇಳಲಾಗುವುದಿಲ್ಲ!!

ಸಂದೀಪ್ ಈಶಾನ್ಯ ಅವರ ಕವಿತೆ ‘ಎರಡು ದೇಹಗಳ ನಿರಂತರ ಹೊರಳಾಟದಿಂದ ಅವಧಿಯಲ್ಲಿ ಪ್ರಕಟವಾಗಿತ್ತು .

ಆ ಕವಿತೆ ಇನ್ನೊಬ್ಬಕವಿಯಲ್ಲೂ ಕಿಚ್ಚು ಹಚ್ಚಿತು. ‘ಮಹೀ’ ಅನ್ನುವ ಹೆಸರಿನಲ್ಲಿ ಬರೆಯುವ ಪಶುವೈದ್ಯ ಡಾ ಮಹೇಂದ್ರ ‘ನುಣುಪಾದ ಕಾಲಿನ ಮೇಲೆ ಜಾರೋ ಬಂಡಿಯಾಟ..’ ಬರೆದರು.

ಇದನ್ನು ಓದಿದ ಗೀತಾ ಹೆಗ್ಡೆ ಕಲ್ಮನೆಯವರು ಅದಕ್ಕೆ ಹೌದು ನನಗೂ ಕೋಪ ಬರುತ್ತಿದೆ.. ಎಂದು ಪ್ರತಿಕ್ರಿಯಿಸಿದರು.  

ಮೈಸೂರಿನಿಂದ ನಾಗೇಶ ಮೈಸೂರು ಬರೆದರು – ಪಿಸುಗುಟ್ಟಿದ ಕತ್ತಲ ಮಾತು..

ಈ ಎಲ್ಲಾ ಕವನಗಳಿಗೆ ಕಿಚ್ಚು ಹಚ್ಚುವಂತೆ ಉತ್ತರ ಬಂದಿದ್ದು ಶಮ ನಂದಿಬೆಟ್ಟ ಅವರಿಂದ  

ನಿನ್ನ ಬೆನ್ನ ತಿರುವಿನ ಕಂದು ಮಚ್ಚೆಗೆ.. ಕವಿತೆ ಬರೆದರು

ಕಿರಣ್ ಕಂಗೊಕರ್ ಕಿತ್ತೆಸೆದ ಬಟ್ಟೆಗಳು ಮೈಯಡಿಯಲ್ಲಿ ಸಿಲುಕಿ.. ಬರೆದರು 

ವಿನಿ ನಾಯಕ್ ಬೆಳಕಲ್ಲಿ ಕೆನ್ನೆಯ ರಂಗಾಗಿ.. ಬರೆದರು.

ಈಗ ಆನಂದ ಋಗ್ವೇದಿ ಅದಕ್ಕೆ ತಮ್ಮ ದನಿ ಸೇರಿಸಿದ್ದಾರೆ 

ಓದಿ 

lips1

ಅಷ್ಟೇ ಅಲ್ಲ, ಈ ಕವಿತೆಗಳು ನಿಮ್ಮೊಳಗೆ ಕಿಚ್ಚು ಹಚ್ಚಿದ್ದಲ್ಲಿ

ನೀವೂ ಕವಿತೆ ಮುಂದುವರೆಸಿ  

ಎಲ್ಲಾ ಬಿಚ್ಚಿ. . . 

Anand Rugvedi

ಆನಂದ ಋಗ್ವೇದಿ 

ಶ್ರಾವಣದ ಆ ಸಂಜೆ
ನಂದಿಬೆಟ್ಟದ ನೆತ್ತಿಯ ಮೇಲೆ ನಡೆದಿದ್ದ
ಮಧುರ ಮಧುಚಂದ್ರದ ಆಲಾಪನೆ
ರಾಗಾನುರಾಗದ ಪ್ರಸ್ತುತಿಗೆ ಪದಗಳಿಲ್ಲ!

pair handsಕೂತವರ ಬೆನ್ನಿಗೆ ಸುಳಿದ ಗಾಳಿ ನನ್ನ
ಅವಳ ಬಿರುಸಾಗಿ ತಬ್ಬಿ ಸುರುಳಿ ಸುರುಳಿ
ಸುರುಟಿದ್ದ ಮುಂಗುರುಳ ನೇವರಿಸಿದ್ದು – ಕಸಿವಿಸಿ!!

ಜನರೇ ಇಲ್ಲದ ಆ ನೀರವ ನಿರ್ಜರ
ಮುಸ್ಸಂಜೆ ಮನದನ್ನೆಯ ಕೈ ಹಿಡಿದು
ಒಳ ಹೊಕ್ಕ ಆ ಪುರಾತನ ಕಾಟೇಜಿನ ಮಂಚ
ಕರಿಮರದ ಕೋಟಿನ ಕಂಬ – ಸಾಕ್ಷಿ!!

ಸರಸದ ಮೊದಲ ಹೆಜ್ಜೆ ಬಿಚ್ಚಿಟ್ಟ ಗೆಜ್ಜೆ
ಕೊರಳ ಕರಿ ಮಣಿ ಹೊರತು ಎಲ್ಲಾ ನಿರಾಭರಣ
ನಿರವಯವ ಆ ಹೊತ್ತು – ಎಲ್ಲಾ ಅವಯವ!

ನವಿರಾಗಿ ನೇವರಿಸಿ ಮುಂದಲೆ ಮೆಲ್ಲಗೆ ಮೆಲ್ಲಗೆ
ಮುತ್ತಿಕ್ಕಿ ಮೊಗದಿಂದ ನಡು
ನೇರ ನಿಡಿದಾಗಿ ಚಾಚಿದ ನಖದ ವರೆಗೆ ನಡು
ನಡುವೆ ಹಿತದ ಹಿಡಿತ ಮಂದ್ರ ಮಿಡಿತ

ತಬ್ಬೆಲರು ಬಾಚಿ ತಬ್ಬಿ ಭೋರೆಂದು ಸುಯ್ದು
ಸುಳಿದಾಡಿದ ಎಲ್ಲಾ ತಿರುವು ತಿಮಿರುಗಳಲ್ಲಿ
ನವಿರು ನಿಮಿರು – ಚಪಲ ಚಪ್ಪರಿಸಿ ಉಪ್ಪು ಒಗರು!

ವಿಧಿ ಧಾರೆಯೆರೆದ ವಧು – ಅವಳ ಸೊಬಗು
ಸಗ್ಗ ಹೊಕ್ಕ ಸಲಗ ಮದ ಮದ್ದೇರಿ
ಘೀಳಿಡುವ ಹೊತ್ತಿಗೆ ಮತ್ತೆ ಕಿಟಕಿಯಲ್ಲಿ ಶಿಳ್ಳೆಂದು ಪ್ರತ್ಯಕ್ಷ – ಸುಳಿಗಾಳಿ!!

ಕೊನರೇ ಚಿಗುರಾಗಿ ಚೈತ್ರದ ಆ ಲತೆ
ಮೈತುಂಬಿ ಹಬ್ಬಿ ಮುಟ್ಟಿದಲ್ಲೆಲ್ಲಾ ಮಿಂಚು
ರಸಭರಿತ ರಸಗವಳ ಆ ಕಾವಳ – ಇಲ್ಲ ಕಳವಳ!

ಇರುಳಾವುದೋ? ಹೊಸ ಹಗಲು ಹುಟ್ಟಿ ಹೆಗಲೇರಿ
ಮಟ ಮಧ್ಯಾಹ್ನವೂ ಮಂಪರು – ಕಣ್ಣೆವೆಗಳು ಎಳೆಎಳೆವ ಮತ್ತೆ ಸೆಳೆಸೆಳೆವ ಆ
ಜಂತರ ಮಂತರದಲ್ಲಿ – ತಲ್ಲೀನ!

ಪ್ರತೀ ಬಾರಿ ಬಿಚ್ಚುವುದಕ್ಕೆ ಅಗತ್ಯವೇ ಇಲ್ಲದ ಸುಕ್ಕಿಲ್ಲದ
ಆ ಸಿಗ್ಗ ಕಳೆದು ಸಿಗುರಿಲ್ಲದ ಕಬ್ಬ ಜಗಿದು
ಜಗಿದು ಇದೇ ಕೊನೆ – ಈ ಜನ್ಮದಂತ್ಯವೆಂಬಂತೆ – ಲೀನ!!

ಮನ್ಮಥ ಪ್ರಿಯ ವಾತ್ಸಾಯನನಿಗೆ –
ಎಲ್ಲಾ ಬಿಚ್ಚಿ.  . . . . .

ಹೇಳಲಾಗುವುದಿಲ್ಲ!!

‍ಲೇಖಕರು Admin

May 26, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

10 ಪ್ರತಿಕ್ರಿಯೆಗಳು

  1. Beeru Devaramani

    ಆನಂದ ಋಗ್ವೇದಿ ಸರ್ ,
    ಕವಿತೆ ತುಂಬಾ ಹಿಡಿಸಿತು.. ಒಂದೊಳ್ಳೆ ಕವನ ಓಧಿ ತುಂಬಾ ಖುಶಿ ಆಯಿತು.

    ಪ್ರತಿಕ್ರಿಯೆ
    • anand rugvedi

      ಧನ್ಯವಾದಗಳು ಶಮಾ ಮೇಡಂ. ನಿಮ್ಮ ಕವನ ಮತ್ತು ಹೆಸರಿನಲ್ಲಿರುವ ನಂದಿಬೆಟ್ಟ ಈ ಕವಿತೆಯನ್ನು ಸಾಧ್ಯವಾಗಿಸಿತು

      ಪ್ರತಿಕ್ರಿಯೆ
  2. S.p.vijaya Lakshmi

    S.P.Vijayalakshmi……..Mohaka padagalu, manamohaka bhaava, bahala ishtavaayithu mallige hoovu surida balli kandanthe…….

    ಪ್ರತಿಕ್ರಿಯೆ
  3. ಆದಿವಾಲ ಗಂಗಮ್ಮ

    ಮನ್ಮಥ ಪ್ರಿಯ ವಾತ್ಸಾಯನೂ ಮೆಚ್ಚುವಂತೆ ಬರೆದಿದ್ದೀರಿ ಆನಂದ ಋಗ್ವೇದಿಯವರೆ.

    ಪ್ರತಿಕ್ರಿಯೆ
    • ಸ್ಪೂರ್ತಿ ಗಿರೀಶ್

      ಮಧುರ, ಶೃಂಗಾರದ ರಸಪಾಕವನ್ನೇ ಹೆಣೆದಿದ್ದೀರಿ ಸರ್. ಚೆನ್ನಾಗಿದೆ ಕವಿತೆ.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: