ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಧೋ ಎಂದು ಒಂದೇ ಸಮನೆ

-ಕಾರ್ತಿಕ್ ಭಟ್ ಬಳಗುಳಿ

ಧೋ ಎಂದು ಒಂದೇ ಸಮನೆ
ಮಳೆಯ ಸುರಿದಾಟ….
ಎದೆಯಲ್ಲಿ ನೆನಪಿನ ಮೆರವಣಿಗೆ
ಹೃದಯದ ಗೂಡಲ್ಲಿ ತೇಲಿ ಬಿಟ್ಟ
ಹಾಯಿದೋಣಿ…..

ಮಳೆಯ ನಿರಂತರ ಹೊಯ್ದಾಟ
ಹೃದಯದ ಗೂಡಲ್ಲಿ ಬೆಚ್ಚಗಿನ
ಅನುಭವ….
ಬೆಂಕಿಯ ಬಳಿ ಕುಳಿತು
ಮೈ ಕಾಯಿಸಿದ ಆ ಅನುಭವ …
ನೆನಪಾಗುತ್ತಿದೆ ಹಳೆಯ
ಮುಂಗಾರಿನ ಆ ವೈಭವದ ದಿನಗಳು …

ಆರಿದ್ರಾ ಮಳೆಯ ಆರ್ತನಾದ
ಸೀದಾ ಮೈ ಒಳಗೆ ಇಳಿದಂತೆ…
ನನ್ನಲೊಮೆಯಿಂದ ಮಳೆಯು
ನಾಚಿ ನೀರಾದಂತೆ …..
ಒಂದೊಂದು ಹನಿಯು ಹೇಳುತಿದೆ
ಒಂದೊಂದು ಕಥೆಯಾ….
ಅದರಲ್ಲಡಗಿದೆ‌ ಯಾರು ಅರಿಯದ
ವ್ಯಥೆಯೂ….

ಮುಂಗಾರಿನ ದಿನಗಳೇ ಎಷ್ಟು ಚೆಂದ
ಮನದೊಳಡಗಿದ ಕೊಳೆಯ ತೊಳೆದಂತೆ
ಹನಿಗಳು ಉದುರುತ್ತವೆ….
ದೇಹವೇ ಸ್ವಚ್ಚಂದವಾದಂತೆ…
ಮತ್ತೇ ಮತ್ತೇ ಸುರಿಯುತ್ತಲೇ ಇರುತ್ತದೆ….
ಎಲ್ಲ ಕಲ್ಮಷವೂ ನೀರಿನಲ್ಲಿ ಹರಿದು
ಹೋಗಿ‌ ಬಿಡುತ್ತದೆ….
ಮತ್ತೇ ಮತ್ತೇ ಪುನರಾವರ್ತನೆ
ಆಗುತ್ತಲೇ ಇರುತ್ತದೆ….

ಎಷ್ಟು ಚೆಂದ ಈ ಮುಂಗಾರಿನ ಅಂದ….
ಹೊಸ ನೀರು ಬಂದಾಗ ಹಳೆಯ ನೀರು
ಮಾಯವಾಗಿ ಬಿಡುತ್ತದೆ….
ಹಾಲ್ನೋರೆಯಂತಹ ಶುಭ್ರ ನೀರಿನ ಬಣ್ಣ
ಹರಿಯುತಿದೆ ಆವೇಶದಲ್ಲಿ…
ಮುಂಗಾರಿನ ಅಬ್ಬರಕ್ಕೆ ಜೀವಕಳೆ ತಳೆದು
ಮುನ್ನುಗ್ಗುತ್ತಿದೆ..
ಮುನ್ನುಗ್ಗುತ್ತಲೇ ಇದೆ ….
ನದಿಯ ಒಡಲು ಸೇರಲು …‌.

‍ಲೇಖಕರು Admin

12 August, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading