ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎರಡು ದಡಗಳ ನಡುವೆ ಚಾಚಿದೆ

-ರುಕ್ಮಿಣಿ ನಾಗಣ್ಣವರ

‘ಕಾಯುವಿಕೆ’

ವರ್ಷಗಳ ಹಿಂದೆ ಕೈ ಜಾರಿದ ಆ ಕ್ಷಣದಿಂದ
ಕಾಲ ತನ್ನ ಉದ್ದನೆಯ ನೆರಳನ್ನು
ಎರಡು ದಡಗಳ ನಡುವೆ ಚಾಚಿದೆ

ನೆರಳಿನ ಆಚೆ ಋತುಗಳು ಜಾರಿದವು
ಕಣ್ಣೀರಿನ ಉಪ್ಪಿಗೆ ರಾತ್ರಿಗಳು ಕರಗಿದವು
ಸಾಕ್ಷಿಯಿಲ್ಲದ ಮೌನವೊಂದು
ಒಳಗೊಳಗೆ ಕಲ್ಲಾಗಿ ಕುಳಿತಿದೆ

ಕಿವುಡ ಗೋಡೆಗಳ ನಡುವೆ
ಮಾತು ಧೂಳಾಗಿ ಕರಗಿರಬಹುದು
ಕಾದು ಕಾದು ನಿಟ್ಟುಸಿರುಗಳು
ಅರ್ಧದಾರಿಯಲ್ಲೇ ಅಡಗಿರಬಹುದು

ಹಳೆಯ ಹಾದಿ ಧೂಳು ಎಬ್ಬಿಸುತ್ತಿದೆ
ಹಿಂದಿರುಗುವ ಹೆಜ್ಜೆಗಳ ಶಬ್ದ
ಆದರೂ ಬಾಗಿಲು ಮುಚ್ಚಿಯೇ ಇದೆ
ಅದಕ್ಕೇ ಮೆಟ್ಟಿಲಂಚಿನ ನೆಲೆಯಾಗಿ
ಕಾಯುವಿಕೆ ಬೀಡು ಬಿಟ್ಟಿದೆ

ಆರಿದ ಚಹಾದ ಕಪ್‌ಗಳ ಮೇಲೆ
ತೆರೆಯದ ಪುಸ್ತಕಗಳೆದೆ ಪುಟಗಳಲ್ಲಿ
ಅರೆಬರೆ ಬರೆದ ಸಾಲುಗಳ ತುದಿಯಲ್ಲಿ
ಎಲ್ಲದರೊಳಗಿನ ಆ ಪರಿಚಿತ ನೆರಳು
ಮಾತಿಲ್ಲದೆ ಅಲೆದಾಡುತ್ತಿದೆ

ದೂರದಿಂದ ಕೇಳುವ ಹಾಡಿನ ತುಣುಕು
ಒಣಗಿದ ಕೊಂಬೆಯ ತುದಿಯಲ್ಲಿ
ಹಠಾತ್ತನೆ ಮೂಡುವ ಹಸಿರು
ಬರುವುದು–ಬಾರದಿರುವುದು
ಇನ್ನು ಈ ಹಾದಿಯ ನಿರ್ಣಯವಲ್ಲ

ಅದೇ ಕಾಯುವಿಕೆಯನ್ನು
ಉಸಿರಿನ ಚೀಲದಲ್ಲಿ ತುಂಬಿಕೊಂಡು
ಪ್ರತಿ ಮುಂಜಾನೆಯ ಮೆಟ್ಟಿಲೇರುತ್ತಿದ್ದೇನೆ
ಸ್ಪರ್ಶಕ್ಕೆ ಸಿಗದ ಬಂಧವೊಂದು
ನಿಶ್ಯಬ್ದವಾಗಿಯೇ
ನಡೆಸುತ್ತಿದೆ ನನ್ನ, ಅದೇ ಸಾಕು.

‍ಲೇಖಕರು Admin

19 August, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading