ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈಗೋ ಕೇಳು ಕೊಂಚ ಇರ್ತದಲ್ಲ

-ಸರೋಜಿನಿ ಪಡಸಲಗಿ

ಮುನಿಸೆ ಈಗ ಬದುಕಿಗೆ!!

ಈಗೋ ಕೇಳು ಕೊಂಚ ಇರ್ತದಲ್ಲ
ಸಮಾಚಾರ ಜರೂರಿನದ್ದೊ ಏನೊ
ಒಟ್ಟಲ್ಲಿದೆ ಕೊಂಚ ಗಡಚು ಪ್ರಶ್ನೆಯೆ
ಮೊಗದಿರುವಿದ ಬುದ್ಧಿಯ ಎಳೆದು
ಕೂರಿಸಿ ನೆಟ್ಟಗೆ ಕೇಳೇ ಬಿಟ್ತು ಮನಸು

ಹೊಸದೇನಲ್ಲ ನಿನ್ನ ಹೇಳಿ ಕೇಳೊದು
ಝಟ್ ಪಟ್ ಎಲ್ಲ ವ್ಯಸ್ತ ನಾ ನಿನ್ನಂತಲ್ಲ
ಸೊಟ್ಟೊ ಸಪ್ಪಗೊ ಒಂಥರಾ ಮನದ
ಚೆಹರೆ ತೇವಾರಿದ ತುಟಿ ಮೇಲೆ ನಾಲಿಗೆ
ಒಣ ಧ್ವನಿಯ ಸತ್ತ ಪ್ರಶ್ನೆ ಬಂತೊಮ್ಮೆ

ನೆನಪುಂಟಾ ಕೇಳಿದ್ದೆ ನಿನ್ನೊಂದು ಬಾರಿ
ಅದೇ ಕನಸುಗಳಿಗೆ ಮುನಿಸೆ ಅಂತ
ನೋಡದೀಗ ಮತ್ತೆ ಎದ್ದೆದ್ದು ಕುಣೀತಿದೆ
ಇಕಾ ಕನಸಿಂದಲ್ಲ ಈಗ ವಿಷಯ ಇನ್ನೆನೊ
ನೂರೆಂಟು ಪಾರ್ಶ್ವಗಳುಂಟಲ್ವಾ ಬದುಕಿಗೆ

ಬೇಕಿಲ್ಲ ಉದ್ದ ಪ್ರಸ್ತಾವನೆ ಅರ್ಥವಿಲ್ಲದ್ದು
ನೇರಾನೇರ ಮಾತಷ್ಟೇ ಇಲ್ಲೆನಗೆ ಬಿಡುವು
ಎನಬೇಕೆ ಬುದ್ಧಿ! ನೀನಲ್ಲ ನಾ ತಿಳೀತಿಲ್ಲೆನಗೆ
ಮುನಿಸೆ ಈಗ ಅಡ್ಡ ತಿರುಗಿ ಏನೊ ತೋರಿ
ಎಳೆವ ಬದುಕಿಗೆ ಕೇಳ್ತು ಮನ ಮಗುವಂತೆ

ಬುದ್ಧಿಯ ತುಟಿ ಚಣ ಅರಳಿ ತಟ್ಟಿ ಮನವ
ದಾಟುವುದ್ಯಾವಾಗೀ ಮೊದ್ದುತನದ ಸೀಮೆ
ಹೇಳಿದ್ಯಲ್ಲ ಅಗಣಿತ ಪಾರ್ಶ್ವಗಳಂತ ಬದುಕಿಗೆ
ಮತ್ತೆ ಇರೋದೇ ಅಲ್ವಾ ಹಾಗೆ ಹೀಗೆ ಅಂಕು
ಡೊಂಕಾಗಿ! ನೇರಾಗಿ ಎಲ್ಲ ಒಂದೇ ಇರಲುಂಟಾ

ಇಗೊ ಆಗು ಕೊಂಚ ಜಾಣ ಸ್ಪಷ್ಟ ದಿಟ್ಟಿಲಿ
ಅತ್ತಿತ್ತ ನೋಡು ತುಸು ಒಂದರಂತೊಂದಿಲ್ಲ ಚಿಗುರು ಬಲಿತು ಎಲೆ ನಿನ್ನೆಯಂತೆ ಇಂದಿಲ್ಲ
ಕೇಳು ಹೇಳ್ತಿದೆ ತಿಳಿಯಾಗಿ ಬದುಕು ಏನೆಂದು ಹೌದಲ್ಲ ಇಷ್ಟೆನಾ! ಮತ್ತೇನು ನಕ್ಕವವು ಕಣ್ಣಲ್ಲೇ !!

‍ಲೇಖಕರು Admin

12 August, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading