ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಂಪಿನ ಹೂಗಳನಿರಿಸಿ ಕರಮುಗಿದ

-ನಾಗರಾಜ ಎಂ ಹುಡೇದ

ಬೆಳಗಿನ ಬೆರಗು.

ಕಣ್ಣನುಜ್ಜುತ ಹೊರಟನು ಪುಟ್ಟು
ಅಪ್ಪನೊಂದಿಗೆ ಹೊರ ಸಂಚರಿಸಲು
ಹಚ್ಚ ಹಸಿರ ತುಂಬಿದ ಬಯಲು
ಆಗಸದಲ್ಲಿ ತೇಲುವ ಮೋಡಗಳು
ತೋಯಿತವನ ಮನ ಚೆಲುವಿಗೆ.

ಹೆಕ್ಕಿ ಹೆಕ್ಕಿ ತಿನ್ನುವ ಬೆಳ್ಳಕ್ಕಿಗಳು
ಬಾಗುತ ಏಳುವ ಮೇಲಕ್ಕೆ ಹಾರುವ
ತಂಗಾಳಿಗೆ ಅಲೆ ಅಲೆಯಾಗುವ ಸೊಬಗ
ಸವಿಯುತ ನಡೆಯುತಲಿದ್ದ ,
ಅರರೇ …. ಹಾರೇ ಬಿಟ್ಟವು ಬಾನಿಗೆ.

ಕೀ….. ಕೀ. …. ಎನ್ನುತ ಬಂದ ಗಿಳಿಗಳು
ಮರಿಯೊಂದು ಕಾಯುತಲಿತ್ತು ಪೊಟರೆಯೊಳಗೆ
ಕುಟು ಕುಟು ಕೊಟ್ಟವು ಹೆಕ್ಕಿ ತಂದ ತುತ್ತನು
ಹೊರಗೆ ಪುರ್ರನೆ ಹಾರಿ ಸಾಲಲಿ ಕುಳಿತವು
ಪುಟ್ಟು ನೋಡುತ ಮೆಲ್ಲಗೆ ನಡೆಯುತಲಿದ್ದ.

ರವಿಯದು ಬೆಟ್ಟವನೇರಿ ಏರಿ
ಮರೆಯಲಿ ಬಾನಿಗೆ ಬಣ್ಣವ ಬಳಿಯುತ
ಕುರಿಮಂದೆ ದನ ಕರಗಳ ಕರೆಯುತಲಿದ್ದ
ಬೆಳಗಿನ ಬೆರಗಿಗೆ ಪುಟ್ಟು ಪುಳಕಿತ
ಕಂಪಿನ ಹೂಗಳನಿರಿಸಿ ಕರಮುಗಿದ.

‍ಲೇಖಕರು Admin

24 August, 2026

1 Comment

  1. ಡಾ ರಾಜೇಂದ್ರ ಎಸ್ ಗಡಾದ

    ಕವಿತೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading