ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಧರಿಸಿದ್ದು ವೇಷವಲ್ಲ …' – ವಾಸುದೇವ ನಾಡಿಗ್

ಕಳಚಿಡುವುದಕ್ಕೆ ವೇಷವಲ್ಲ

ವಾಸುದೇವ ನಾಡಿಗ್

ಹಾಗೇ ಸುಮ್ಮನೆ
ಪ್ರತಿ ಅಂಕಕ್ಕೊಮ್ಮೆ
ನೇಪಥ್ಯಕೆ ತೆರಳಿ
ಮುಖ ಬದಲಾಯಿಸಿ
ಗೆರೆಗಳನ್ನು ಅಳಿಸಿ
ಸರಿಪಡಿಸಿ ನೆರಿಗೆಗಳನ್ನು
ಮತ್ತೆ ಮರಳಿ
ಉರುಹೊಡೆದ ಮಾತುಗಳನೆಲ್ಲಾ
ಬುಳಕ್ಕನೆ ವಾಂತಿಮಾಡಿಕೊಂಡಂತಲ್ಲ
ಬದುಕು.

ಯಾರೋ ಬರೆದಿಟ್ಟ ಕತೆಗೆ
ಕಡೆದಿಟ್ಟ ಪಾತ್ರಕ್ಕೆ
ತುಂಬಿ ಮಾತುಗಳ
ಇರುಕಿ ಭಾವಗಳ
ತಾನೇ ಆನಾಗುವ
ಆನೇ ತಾನಾಗುವ
ತಂತಿಯ ಮೀಟುವ ಪರಿ
ಕೊಡುವ ದೃಶ್ಯಕೆ
ಸತತ ತಾಲೀಮು
ಗಾಯಗಳಿಲ್ಲದಿದ್ದರೂ ಸವರಿ
ಮುಲಾಮ
ಗಾಯಗಳಿದ್ದರೂ ನಗುವ
ಕಾಯ ಕಾಯಕ
ಅಳಲಿನ ಸಾಗರವ ಮೆಟ್ಟಿ
ನಕ್ಕು
ನಗೆಯ ಕಡಲ ಅದುಮಿಟ್ಟು
ಅತ್ತು
ನಮ್ಮದಲ್ಲದ ಪಾತ್ರಕೆ
ಪಾತ್ರವಾಗಿ
 
ವೇಷವಕಳಚಿಡಲು
ಹೊರಟೆ
ಕಿತ್ತುಬಂದ ಚರ್ಮ
ರಕ್ತದ ತೊರೆ
ಅರಿವಿಗೆ ಬಂದದ್ದು
ಧರಿಸಿದ್ದು ವೇಷವಲ್ಲ ಅದೇ ಬದುಕು
 

‍ಲೇಖಕರು G

22 July, 2015

10 Comments

  1. Bidaloti Ranganath

    ಬದುಕು ಸಾಗುವ ಹಾದಿಯಲಿ ಅಪರಿಮಿತ ಮಜಲುಗಳು ,ಸಿಕ್ಕುಗಳು ಎದುರು ತಾಕುತ್ತವೆ.ಜೀವನದ ಅಂದರೆ ಸುಮ್ಮನಲ್ಲ ಎಂಬುದನ್ನು ನಾಡಿಗ್ ಸರ್ ಅರ್ಥಪೂರ್ಣ
    ವಾಗಿ ಕವಿತೆಯ ಮುಖೇನ ಅನಾವರಣಗೊಳಿಸಿದ್ದಾರೆ
    .ಕವಿತೆ ಚನ್ನಾಗಿದೆ

  2. noorullathyamagondlu

    ಚೆನ್ನಾಗಿದೆ.

  3. Jayaram

    ಒಳ್ಳೆಯ ಕವಿತೆ..

  4. srinivas

    ತುಂಬಾ ಚೆನ್ನಾಗಿದೆ

  5. mmshaik

    very nice poem…

  6. harish katapadi

    ಸರಳ. ಆದರೂ ಸುಂದರ

  7. ಅಕ್ಕಿಮಂಗಲ ಮಂಜುನಾಥ

    ಪದ್ಯ ಚೆನ್ನಾಗಿದೆ.

  8. vasudeva nadig

    thanks frnds, thanks ranganath

  9. Shanthi k Appanna

    My god!!! Last lines!! ಸರ್,ಕವಿತೆಯ ಶಕ್ತತೆಯೆದುರು ಸೋತೆ! ಎಂಥಾ ಮಾರ್ಮಿಕ ಕವಿತೆ!

  10. ನಾರಾಯಣಪ್ಪ

    ಇಷ್ಟವಾಯಿತು ಸರ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading