ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದನ ಸಾಕುವುದೆಂದರೆ..

chaitanya hegde 

ಚಿನ್ಮಯ ಹೆಗ್ಡೆ 

ಅಜ್ಜ ಸಾಕಿದಂತೆ ನಾನು
ದನ ಸಾಕಲಿಲ್ಲ.

ಕೆಚ್ಚಲಿಗೆ ಕೈಹಚ್ಚಿ
ಸಾಲು ಕೂತ ಪಾತ್ರೆ ತುಂಬ
ಹಾಲು ಕರೆಯಲಿಲ್ಲ,
ನೊರೆಯ ರುಚಿ ಮರೆಯಲಿಲ್ಲ.

cow symbolicಕೈಯಾರೆ ಕರಡಿ ನೀರುಮಾಡಿ
ಗೋಬರ್ ಗ್ಯಾಸಿನ ಟ್ಯಾಂಕಿಗೆ
ಸಗಣಿ ಹರಿಸಲಿಲ್ಲ,
ವಾಸನೆಯ ಸಹಿಸಲಿಲ್ಲ.

ಬೆರಣಿ ತಟ್ಟಲಿಲ್ಲ
ಗೊಬ್ಬರ ಹರಡಲಿಲ್ಲ
ಹೊರೆಗಟ್ಟಲೆ ಹುಲ್ಲು ಕೊಯ್ದು
ಹೊತ್ತು ತರಲಿಲ್ಲ.

ಕರುವಿನ ಅಟ್ಟೆ ಕೆತ್ತಲಿಲ್ಲ
ಆಗಾಗ ನೇವರಿಸಿದರೂ
ಮೈ ತೊಳೆಸಲಿಲ್ಲ
ಅಷ್ಟೇನೂ ಉಣುಗು ತೆಗೆಯಲಿಲ್ಲ.

ನಾನು ದನ ಸಾಕಲಿಲ್ಲ,
ಆದರೆ
ದನ ಸಾಕುವುದೆಂದರೆ
ಪುರಾಣ ಪಠಿಸುವುದಲ್ಲ
ಭಾಷಣ ಬಿಗಿಯುವುದಲ್ಲ
ಭಕ್ತಿಯಿಂದ ಕುಣಿಯುವುದಲ್ಲ
ಹೊಂಚು ಹಾಕುವುದಲ್ಲ
ಸಗಣಿ ಬಳಿಯುವುದಲ್ಲ
ಶಿಸ್ತು ಕಾಯುವುದಲ್ಲ
ದ್ವೇಷ ಬಿತ್ತುವುದಲ್ಲ
ಧರ್ಮ ಕರ್ಮಗಳಲ್ಲ
ಅಟ್ಟಾಡಿಸಿ ರಸ್ತೆ ಮಧ್ಯೆ
ಬಡಿದು ಕೊಲ್ಲುವುದಲ್ಲ
ಕವಿತೆ ಬರೆಯುವುದೂ ಅಲ್ಲ…

ದನ ಸಾಕುವುದೆಂದರೆ
ಮನೆ ಪಕ್ಕ ಕೊಟ್ಟಿಗೆಯಲ್ಲಿ
ದನ ಸಾಕುವುದು
ಅಷ್ಟೆ.

‍ಲೇಖಕರು admin

5 November, 2015

2 Comments

  1. Ajit

    Excellent

    • Chinmay Hegde

      Thank you sir…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading