"ಲಂಕೇಶ್ ಪತ್ರಿಕೆ" ನನ್ನ ಕಣ್ಣಿಗೆ ಬಿತ್ತು..

ಇಂದಿಗೂ ನೆನಪಿದೆ

sara aboobakar

ಸಾರಾ ಅಬೂಬಕ್ಕರ್ 

4 R
ನ್ನ ಪ್ರಥಮ ಲೇಖನ “ಪತ್ರಿಕೆ”ಯಲ್ಲಿ ಪ್ರಕಟವಾದ ದಿನ ಇಂದಿಗೂ ನನಗೆ ನೆನಪಿದೆ. ಕನ್ನಡದ ಯಾವ ಪತ್ರಿಕೆಯೂ ನನಗೆ ಪ್ರೋತ್ಸಾಹ ನೀಡದೆ, ನನ್ನ ಸಾಹಿತ್ಯಾಸಕ್ತಿಯೇ ಕುಂದತೊಡಗಿದ್ದ ಆ ದಿನಗಳಲ್ಲಿ, ನನ್ನ ಮನದಾಳದ ಭಾವನೆಗಳನ್ನು, ಕಂಡು ಕೇಳಿದ ಹಲವಾರು ಘಟನೆಗಳನ್ನು ಹರಿಯಬಿಡಲು ಹಾದಿ ಕಾಣದೆ ತಳಮಳಗೊಳ್ಳುತ್ತಿದ್ದ ಆ ದಿನಗಳಲ್ಲಿ “ಲಂಕೇಶ್ ಪತ್ರಿಕೆ” ನನ್ನ ಕಣ್ಣಿಗೆ ಬಿತ್ತು. ಅಂದು ಓದಲಾರಂಭಿಸಿದ “ಪತ್ರಿಕೆ”ಯನ್ನು ಇಂದಿನವರೆಗೂ ಓದುತ್ತಲೇ ಇದ್ದೇನೆ. ಇಲ್ಲಿ ನನ್ನ ಮನದಾಳದ ಭಾವನೆಗಳನ್ನು ಹರಿಯಬಿಡಲು ನನಗೊಂದು ಹಾದಿಯೊದಗಬಹುದು ಎಂಬ ನಿರೀಕ್ಷೆಯೇನೂ ಆಗ ನನಗಿರಲಿಲ್ಲ.
“ನನ್ನ ಈ ಜನ ಒಂದಾಗಬೇಕು” ಎಂದು ಲಂಕೇಶ್ ಅವರು, ಎಲ್ಲಾ ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ದಲಿತರಿಗೆ ಕರೆ ಕೊಟ್ಟಾಗ ನನ್ನ ಮನದಲ್ಲುಣಿಸಿದ ಭಾವನೆಗಳನ್ನು ಕಾಗದದಲ್ಲಿ ಮೂಡಿಸಿ ಲಂಕೇಶ್ ಅವರಿಗೆ ಕಳುಹಿಸಿಕೊಟ್ಟೆ. ಅದು ಪತ್ರಿಕೆಯಲ್ಲಿ ಪ್ರಕಟವಾಗುವ ನಿರೀಕ್ಷೆಯೇನೂ ನನಗಿರಲಿಲ್ಲ. ಆದರೆ ಸಂಪಾದಕರು ಈ ಲೇಖನವನ್ನು ಓದಿದರೂ ನನಗೆಷ್ಟೋ ತೃಪ್ತಿಯಾಗುತ್ತದೆ ಎಂದೂ ಅವರಿಗೆ ಪತ್ರ ಬರೆದಿದ್ದೆ. ಒಂದೇ ವಾರದೊಳಗೆ ಅವರು “ಪತ್ರಿಕೆ”ಯ ಮುಖಪುಟದ ಪ್ರಥಮ ಲೇಖನವಾಗಿ ನನ್ನ ಲೇಖನವನ್ನು ಪ್ರಕಟಿಸಿ, ನನ್ನನ್ನು ಪ್ರೋತ್ಸಾಹಿಸದಿದ್ದರೆ ಇಂದು ಸಾರಾ ಅಬೂಬಕ್ಕರ್ ಎಂಬ ಲೇಖಕಿ ಇರುತ್ತಿರಲಿಲ್ಲ ಎಂಬ ಮಾತುಗಳನ್ನು ನಾನು ಅಂದಿನಿಂದ ಇಂದಿನವರೆಗೆ ಹಲವಾರು ವೇದಿಕೆಗಳಲ್ಲಿ ಹೇಳುತ್ತಲೇ ಬಂದಿದ್ದೇನೆ.
ಕೇವಲ ಇಪ್ಪತ್ತು ವರ್ಷಗಳಲ್ಲಿ ನನ್ನಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡವರು ಬಹುಶಃ ಕರ್ನಾಟಕ ಸಾಹಿತ್ಯ ಕ್ಷೇತ್ರದಲ್ಲಿ ಬೆರಳೆಣಿಕೆಯಷ್ಟು ಜನರೂ ಇರಲಾರರೆಂದು ಅಹಂಕಾರದಿಂದ ಅಥವಾ ಮೇಲರಿಮೆಯಿಂದ ಹೇಳುತ್ತಿಲ್ಲ; ಇದಕ್ಕೆ ಕಾರಣ ಲಂಕೇಶ್ ಎಂದು ವಿನೀತಳಾಗಿಯೇ ಹೇಳುತ್ತಿದ್ದೇನೆ. ಈ ಪ್ರಶಸ್ತಿಗಳನ್ನು ಪಡೆಯುತ್ತಿದ್ದ ಎಲ್ಲಾ ಸಂದರ್ಭಗಳಲ್ಲೂ ನನ್ನ ಕಣ್ಣೆದುರು ಮೊತ್ತ ಮೊದಲು ಸುಳಿಯುತ್ತಿದ್ದ ಚಿತ್ರ ಲಂಕೇಶ್ ಅವರದೇ ಆಗಿತ್ತು.
 

‍ಲೇಖಕರು admin

November 4, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಮುಗಿಯದ ಮೌನ- GKN

    ಲಂಕೇಶರ ಆಳವಾದ ಅಧ್ಯಯನ ಶೀಲತೆ ಕಣ್ಣ ಮುಂದೆ ಮತ್ತೊಮ್ಮೆ ಕಾಣುವಂತೆ ಮಾಡಿದಿರಿ ಸಾರಾ ಮ್ಯಾಮ್,,,,,,, ಸತ್ಯವನ್ನು ಯಾವುದೇ ಅಳುಕಿಲ್ಲದೆ ಎತ್ತಿ ಹಿಡಿದ ಮಹಾ ಮಾನವ

    ಪ್ರತಿಕ್ರಿಯೆ
  2. Hanumanth Ananth Patil

    ಮೇಡಂ ವಂದನೆಗಳು
    ನಿಮ್ಮ ಅನಿಸಿಕೆ ಓದಿ ಸಂತಸವಾಯಿತು ನಿಮ್ಮ ಅಬಿಪ್ರಾಯಕ್ಕೆ ನನ್ನ ಸಹಮತವಿದೆ. ಸಾರಾ ಅಬೂಬಕ್ಕರ್‌ ಮಾತ್ರವೆ ಅಲ್ಲ ಭಾನು ಮುಷ್ತಾಕ್, ವೈದೇಹಿ, ರೇಖಾರಾಣಿ ಮತ್ತು ಬಿ.ಟ.ಲಲಿತಾ ನಾಯಕ ಮುಂತಾದ ಲೇಖಕಿಯರನ್ನು ಪ್ರೋತ್ಸಾಹಿಸಿ ಬೆಳೆಸಿದ್ದು ಲಂಕೇಶ ಪತ್ರಿಕೆ ಅದರಂತೆ ಅನೇಕ ಹೊಸ ಲೇಖಕರನ್ನೂ ಕೂಡ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: