ಸೃಜನ್ ಮತ್ತು ವೀರಪ್ಪನ್

srujanಅವಧಿಯ ಆಪ್ತ ಮಿತ್ರ ಸೃಜನ್ ಕನ್ನಡದ ಪುಸ್ತಕ ಲೋಕಕ್ಕೆ ತಮ್ಮದೇ ಆದ ಸ್ಪರ್ಶ ನೀಡಿದವರು. ಸೃಜನ್ ನಿಜಕ್ಕೂ ಸೃಜನಶೀಲರು. ಒಂದಲ್ಲ, ಹಲವು ರಂಗಗಳಲ್ಲಿ. ಅವರಿಗಿರುವ ಸಿನೆಮಾ ಆಸಕ್ತಿಯ ಬಗ್ಗೆ ಎಲ್ಲರಿಗೂ ಗೊತ್ತು.

ಹೊಸಪೇಟೆಯಲ್ಲಿದ್ದುಕೊಂಡು ರೂಪತಾರ” ಈನಾಡು” ಸೇರಿದಂತೆ ಹಲವು ಪ್ರಮುಖ ಪತ್ರಿಕೆಗಳಿಗೆ ಸಿನೆಮಾ ವರದಿ ಮಾಡಿದವರು. ಕುಂ ವೀ ಕುರಿತಂತೆ ಕಿರುಚಿತ್ರ ನಿರ್ಮಿಸಿದವರು. ತಾವೇ ದುಡ್ಡು ಇನ್ನಿಲ್ಲದಂತೆ ಖರ್ಚು ಮಾಡಿ ಚಾನಲ್ ಗಳಿಗೆ ಸಿನೆಮಾ ಕುರಿತ ಕಾರ್ಯಕ್ರಮ ಎಡಿಟ್ ಮಾಡಿಸಿ ಕೊಟ್ಟವರು. ರಾಮ್ ಗೋಪಾಲ್ ವರ್ಮಾನನ್ನು ಕನ್ನಡದ ಓದುಗರು ಇನ್ನಿಲ್ಲದಂತೆ ಮೋಹಿಸಲು ಕಾರಣವಾದ ಎರಡು ಕೃತಿ ಕೊಟ್ಟವರು.

ಅಪಾರವಾಗಿ ಕನ್ನಡ, ತೆಲುಗು, ಇಂಗ್ಲಿಶ್ ಸಾಹಿತ್ಯ ಓದಿಕೊಂಡವರು. ಕವಿತೆಯನ್ನು ಪ್ರೀತಿಸಿ, ಅನುವಾದವನ್ನು ಮದುವೆಯಾದವರು. ಈಗ ಈ ಎಲ್ಲಾ ಆಸಕ್ತಿಯ ಫಲವೋ ಎಂಬಂತೆ ರಾಮ್ ಗೋಪಾಲ್ ವರ್ಮ ಅವರ ಬಹುನಿರೀಕ್ಷಿತ ಕಿಲ್ಲಿಂಗ್ ಆಫ್ ವೀರಪ್ಪನ್” ಚಿತ್ರಕ್ಕೆ ಹಾಡು ಬರೆದಿದ್ದಾರೆ.

ಅವರೊಳಗೊಬ್ಬ ಕವಿಯನ್ನು ಕಂಡವರಿಗೆ, ಅವರೊಳಗೊಬ್ಬ ಅಸಾಧ್ಯ ಸಿನೆಮಾ ಪ್ರೇಮಿಯನ್ನು ಕಂಡ ಎಲ್ಲರಿಗೂ ಇದು ಸಂತಸದ ಸಂಗತಿ. ಅಂದ ಹಾಗೆ ಇಲ್ಲಿ ವೀರಪ್ಪನ್ ಸಿನೆಮಾದ ಟ್ರೇಲರ್ ಕೂಡಾ ಇದೆ. ನೋಡಿ..

ಸೃಜನ್ ಗೆ ಶಹಬಾಶ್ ಹೇಳಬೇಕೆಂದರೆ : 9481663379

 

srujan veerappan1

srujan veerappan2

‍ಲೇಖಕರು admin

November 5, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಮಂಜುನಾಥ್. ಪಿ

    ಸೃಜನ್ ಸರ್… ಅಭಿನಂದನೆಗಳು… ಒಂದಲ್ಲಾ ಸಾವಿರಾರು ಹಾಡುಗಳಿಂದ ನಮ್ಮ ಮನಸ್ಸುಗಳಲ್ಲಿ ಉಳಿಯಿರಿ… ತಮ್ಮ ಬಹುಮುಖಿ ಪ್ರತಿಭೆಗೆ ಶರಣು…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: