ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಂತ ಕಾಯ್ಕಿಣಿ ಮತ್ತು ಪಾಟಿಚೀಲ

ಈ ದಿನ ಜಯಂತ ಕಾಯ್ಕಿಣಿ ಅವರ ಎರಡು ಕೃತಿಗಳು ಬಿಡುಗಡೆಯಾಗುತ್ತಿವೆ

ಈ ಸಂದರ್ಭದಲ್ಲಿ ಒಂದು ಕವಿತೆ

ಶರತ್ ಪಿ ಕೆ

ಜಯಂತರು ಎಲ್ಲಿ ಹೋದರು ತನ್ನೊಡನೆ ಒಂದು ಪಾಟಿಚೀಲವೊಂದನ್ನು ಕೊಂಡೊಯ್ಯುತ್ತಾರೆ.
ಅದರೊಳಗೆ ಏನಿರಬಹುದು?
ಕಲ್ಲು ಸಕ್ಕರೆಯೋ ಅಥವಾ ಒಂದು ಜಿಲೇಬಿಯೋ ಎಂದು
ನನಗೆ ಯಾವಾಗಲೂ ಕುತೂಹಲ ಕಾಡುತ್ತದೆ.

ತೊದಲು ಮಾತಿನ ಪುಟ್ಟ ಮಗು,
ತನ್ನ ಸುತ್ತಮುತ್ತಲಿನ ಎಲ್ಲಾ ಚರಚಾರಗಳೊಂದಿಗೆ ಸಹಜವಾಗಿ
ಸಂಭಾಷಣೆಗೆ ತೊಡಗುವಂತೆ,
ಬದುಕಿಗೆ ತನ್ನ ಭಾಕೋಶವನ್ನು ತೆರೆದು ಕುಳಿತಿರುವಂತೆ ಚಿತ್ರ ಮೂಡುತ್ತದೆ.

ಜಗತ್ತನ್ನೆ ತನ್ನ ಜೋಳಿಗೆಯಲ್ಲಿಟ್ಟುಕೊಂಡು ತಿರುಗುವ ಸಂತನಂತೆ, ಎದುರಿಗಿರುವವರ
ಎದೆ ಬಡಿತದ ಏರಿಳಿತದ ಸದ್ದಿಗೆ
ಕಿವಿಯಾಗಿ ಸಂವೇದನೆಯನ್ನು ಅಳೆಯುತ್ತಾ ಅಲೆಯುತ್ತಿರುವಂತೆ ಭಾಸವಾಗುತ್ತದೆ.

ಕುತೂಹಲದ ಕಣ್ಣಿನ ಶಾಲಾ ಬಾಲಕನಂತೆ
ಆಗಾಗ ಪಾಟಿ ಚೀಲದಲ್ಲಿನ
ಸ್ಲೇಟನ್ನು ಹೊರ ತೆಗೆದು ಗೀಜಿ, ಬರೆದು, ಅಳಿಸಿ, ತಿದ್ದಿ ತೀಡಿ, ಬೇಕಾದಂತೆ ಬದುಕಿಗೆ
ಬಣ್ಣ ತುಂಬಿದಂತೆ ರಂಜಿಸಿದಂತೆ ಸ್ವಪ್ನ ಬೀಳುತ್ತದೆ.

‍ಲೇಖಕರು Avadhi

28 March, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading