ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಂ ವಿ ಶಶಿಭೂಷಣ ರಾಜು ಕವಿತೆ- ಮಾಡಲೇ ಬೇಕಾದ ಪಯಣ…

ಎಂ ವಿ ಶಶಿಭೂಷಣ ರಾಜು

ನಟ್ಟಿರಿಳು, ಅಂಧಕಾರ
ಮೋಡ ನೀರಾಗುತ್ತಿರುವ ಸಮಯ
ಗಾಳಿಯನ್ನೆಲ್ಲಾ ಆಪೋಶನೆ ತೆಗೆದುಕೊಂಡು
ಬಿರುಗಾಳಿ ಮಾಡಿ ಒಂದು ನೋವ ಚೀತ್ಕಾರ
ಒಂದು ಚಮತ್ಕಾರ
ಒಂದು ಜನನ

ಒಂದು ಸಣ್ಣ ಹೆಜ್ಜೆ,ಒಂದು ಲಂಘನ
ಜೀವಜಗದ ಕಂಪನ
ಕಣ್ಣಗಲಿಸಿ, ಕುತೂಹಲದ ಸಪ್ಪಳ
ಸೆಳೆಯಲು ಗಮನ
ಸೊಂಪಾದ ನಿದಿರೆ, ಮಡಿಲಿನಾಸರೆ
ಶುರುವಾದ ಜೀವನ

ಕಣ್ಣುಕುಕ್ಕುವ ಸುಂದರ ಆಕೃತಿಯ
ನೋಡುವ ಕ್ಷಣ
ಕಲ್ಲು ಕುಟ್ಟಿ ನೀರ ತೆಗೆಯುವ
ಗಟ್ಟಿ ಜವ್ವನ
ನೆಲಕಾಣದ, ದೇಶಕಾಣದ
ಮುಂದುವರೆದ ಯಾನ

ಮನಕಡರಿದ, ಮನದಜೊತೆಗೆ
ಹೊಸದಾರಿ
ಅರಿವಿಲ್ಲದೆ, ಮೊಗ್ಗು ಹೂವಾಗಿ, ಕಾಯಾಗಿ
ಅಂಗೈಯಲ್ಲಿ ಹಣ್ಣು
ತನ್ನ ಇರುವಿಕೆ ಶೂನ್ಯಗೊಳಿಸಿ
ನೆಟ್ಟಿದ ಕಣ್ಣು

ಉರುಳುತ್ತವೆ ವರುಷ, ಹರುಷ ವಿರಸದಲಿ
ಪ್ರಜ್ಞಾಹೀನ ಪಥದಲಿ
ಹಿಂತಿರುಗಿದರೆ ನೋಡಿದರೆ ಇರದ ಹೆಜ್ಜೆ ಗುರುತು
ಅಚ್ಚರಿ,ಪುಟ್ಟಪಾದಗಳು ವಾಮನಾವತಾರ ತಾಳಿದ ಪರಿಗೆ
ಶೂನ್ಯಸಾದನೆಯ ವೇದನೆ
ಮುಗಿಯಲು ಬಂದ ಕಥೆ

ಮತ್ತೆ ಮಗುವಾಗುವ ಸಮಯ
ತನ್ನ ಅವತಾರ ತನ್ನೆದಿರು ಅವತರಿಸಿದಂತೆ
ಕ್ಷೀಣಿಸಿದ ನೋಟಕ್ಕೆ ಒಂದು ಬೆಳಕು
ತನಗೇ ಕೊಟ್ಟುಕೊಂಡ ಇನಾಮು
ಕತ್ತಲು ಬೆಳಿಕಿನಾಟದ ದಿನಗಳು
ಎಚ್ಚರ ತೂಕಡಿಕೆಯ ಕ್ಷಣಗಳು

ಬರುತ್ತದೆ ಒಂದು ದಿನ, ಕೂಗಿಗೆ
ಕಾಯುತ್ತಿರುವಾಗ
ತನಗಾಗಿ ಸೃಷ್ಟಿಸಿದ ನವಹಾದಿಗೆ
ಹೊರಳಲು
ಸುಮ್ಮನೆ ಎಣಿಸುತ್ತಿರುವುದು ದಿನಗಳ
ಮುಗಿಯುತ್ತದೆ ಕಾಲ
ಪ್ರಾರಂಭವಾಗುತ್ತದೆ ಒಂಟಿಯಾನ
ಮಾಡಲೇ ಬೇಕಾದ ಪಯಣ  

‍ಲೇಖಕರು avadhi

24 March, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading