ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಪರೂಪನಾಗು!!

ಅಪ-ರೂಪ

ಮನೋಹರ ನಾಯಕ್

ಕೇರಿಯ ಹಾದಿಯಂಗಳದಲ್ಲಿ
ಹರಿದಾಡಿತು ಇಂದು ರಂಗವಲ್ಲಿ
ರಥವಿಳಿದು ಪಥಹಿಡಿದ ನೇಸರ
ಪವಡಿಸಿದ ನೋಡು ನೆರಳ ಚಿತ್ತಾರ

ಪವನ-ಅರುಣರ ಪಯಣಕೆ
ಇಂದಿವತ್ತು ಹಸಿರು ಪತಾಕೆ
ಇಬ್ಬನಿಯ ಇನಿದನಿಗೆ
ಹೊಸಬಿಂಬದ ಹಾಸೆ

ಅಳಿಲಿಗಿಂದು ರಾಮರಾಜ್ಯ
ಹಕ್ಕಿಗಳಿಗೆ ಸಲೀಂ-ಅಲಿ ಭಾಗ್ಯ
ಮತ್ಸಕನ್ಯೆ, ಚೆಲುವಾಂತರಿಗೆ
ಬೆಸ್ತ ಅಂಬಿಗನೂ ಚೆನ್ನಿಗ

ಮರ ತರುಗಳ ತವರಲಿ
ಹೂದುಂಬಿಗಳ ಕಲರವ
ಪಚ್ಚೆಯಾದೀತು ಪಾಚಿ
ದಿವಿಯಾದೀತು ಭುವಿ

ಅರಿತುಕೋ ಮನುಜ,
ಇಲ್ಲಾ.. ಅವಿತುಕೋ.
ಇದ್ದು ಇರಗೊಡು,
ಇಲ್ಲಾ.. ಅಪರೂಪನಾಗು!!

‍ಲೇಖಕರು avadhi

2 April, 2020

1 Comment

  1. Smitha

    Manohara…… Endinate..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading