ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ದೀಪ ಹಚ್ಚಿಟ್ಟ ರಾತ್ರಿಯೂ ನಿನ್ನೆಯಂತೆ …..
-ಲಡಾಯಿ ಬಸು ಸಾಲು ದೀಪ ಹಚ್ಚಿಟ್ಟ ದೀಪಾವಳಿ ರಾತ್ರಿಯೂ ಬೀದಿದೀಪದ ಕೆಳಗೆ ಮಲಗಿದ ಗಾಯಗಳು ರೈಲು ಸಿಳ್ಳಿಗೆ ಬಿಚ್ಚಿಬೀಳುವ ಸುಖದ ಮುಲಗು ಎತ್ತರದ ಗೋಡೆಗಳು ಆಳದ ಕಂದರಗಳು ಬಯಲ ತುಂಬಿದ ಮುಳ್ಳುಬೇಲಿಗೆ ಸಿಗೆಬಿದ್ದ ಹರಿದ ಸೆರಗು ಹೆಜ್ಜೆಗಳ ಮೇಲೆ ಹೆಜ್ಜೆಯೂರುವ ಸದ್ದು ಮನುಷ್ಯ ಶವಗಳ ಹುಡುಕುತ್ತ ಅಲೆವ ರಣಹದ್ದುಗಳು...
ದೀಪವು ನಿನ್ನದೆ, ಗಾಳಿಯು ನಿನ್ನದೆ…
ಸತೀಶ ಪಾಟೀಲ್, ಕೊಟ್ಟೂರು ಅದೊಂದು ಕತ್ತಲ ಸಾಮ್ರಾಜ್ಯ.... ಆ ರಾಜ್ಯದ ತುಂಬಾ ಎಲ್ಲೆಲ್ಲೂ ಕತ್ತಲು... ಅಲ್ಲಿ ಕತ್ತಲ ದೊರೆಯದೇ ದಬರ್ಾರ್.... ಅದೆಲ್ಲಿತ್ತೊ ಏನೊ.. ಒಂದು ಪುಟ್ಟ ಕಿರಣ... ಅತೀ ಚಿಕ್ಕ ಕಿರಣ ಈ ಕತ್ತಲ ಸಾಮ್ರಾಜ್ಯಕ್ಕೆ ಎಂಟ್ರಿ ಆಯ್ತು.... ಅಷ್ಟೇ..... ! ಕತ್ತಲ ಸಾಮ್ರಾಜ್ಯದ ಚಿತ್ರಣವೇ ಬದಲಾಯಿತು......
ಮತ್ಸಗಂಧಿ ಎಕ್ಸ್ ಪ್ರೆಸ್ ಬರುತ್ತಾ ಇದೆ
ಚಲ್ ..ಚೈಯಾ ಚೈ0ಯಾ ಆಶೀಶ್ ಮರಾಳಿ ................. ಇನ್ನೂ ಬೆಳಕಾಗದ ಊರಿನ ರೈಲು ನಿಲ್ದಾಣದ ಸ್ಟೇಷನ್ ಮಾಸ್ಟರ್ ರೂಮಿನಲ್ಲಿ ಸಣ್ಣಗಿನ ದನಿಯಲ್ಲಿ ಮೊಬೈಲ್ ನಿಂದ ಚಲ್ ಚೈಂಯಾ ಚಂಯಾ ಹಾಡು ...... ಹೊರಗೆ ತುಕ್ಕು ಹಿಡಿದ ಭೋಗಿಯಲ್ಲಿ ಭಿಕ್ಷುಕ ನೊಬ್ಬ ಕುಳಿತಸ್ಥಿತಿಯಲ್ಲೇ ನಿದ್ದೇ ಹೋಗಿದ್ದಾನೆ .... ಹರಿದ ಐದು ರೂಪಾಯಿಯ ನೋಟು...
ಹಣತೆ ಉರಿಸುವುದಕ್ಕೆ ನಿರಾತಂಕ ಕತ್ತಲಿರಲಿ..
ಬೆಳಕು ಅಂದರೇನು? ಅವನು ವಿಜ್ಞಾನಿಯ ಬಳಿ ವಿನಯದಿಂದ ಕೇಳಿದ. ವಿಜ್ಞಾನಿಗೆ ಎಲ್ಲವೂ ಗೊತ್ತಿತ್ತು. ಬೆಳಕೆಂದರೆ ವಿದ್ಯುದಯಸ್ಕಾಂತೀಯ ವಿಕಿರಣ. ಇಲೆಕ್ಟ್ರೋಮ್ಯಾಗ್ನೆಟಿಕ್ ರೇಡಿಯೇಷನ್. ಅದಕ್ಕೆ ಪುನರಾವರ್ತನೆ, ಧ್ರುವೀಕರಣ ಮತ್ತು ತೀವ್ರತೆ ಇರುತ್ತದೆ. ಬೆಳಕೆಂದರೆ ಪೋಟಾನ್ ಸೂಕ್ಷ್ಮಕಣಗಳು ಎಂದು ಆತ ತನ್ನ ಭಾಷೆಯಲ್ಲಿ...
ಈ ಕತ್ತಲೆಗೆ ಕೊನೆಯಿರದ ಬಾಯಾರಿಕೆ..
ನನ್ನ ಹಣತೆ ಜಿ ಎಸ್ ಶಿವರುದ್ರಪ್ಪ ಹಣತೆ ಹಚ್ಚುತ್ತೇನೆ ನಾನೂ. ಈ ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ ; ಲೆಕ್ಕವೇ ಇರದ ದೀಪಾವಳಿಯ ಹಡಗುಗಳೆ ಇದರಲ್ಲಿ ಮುಳುಗಿ ಕರಗಿರುವಾಗ ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ. ಹಣತೆ ಹಚ್ಚುತ್ತೇನೆ ನಾನೂ ; ಈ ಕತ್ತಲಿನಿಂದ ಬೆಳಕಿನ ಕಡೆಗೆ ನಡೆದೇನೆಂಬ...
ಅವತ್ತು ಇನ್ನಿಲ್ಲದಂತೆ ಕಣ್ಣೀರಿಟ್ಟ ಆ ಹುಡುಗಿಗೆ..
ಅವತ್ತು ಪುಸ್ತಕ ಬಿಡುಗಡೆ ದಿನ ಎಲ್ಲರೂ ತುಟಿ ಕಚ್ಚಿ ಅಳು ತಡೆದಿದ್ದರು. ಆದರೆ ಆ ಹುಡುಗಿ ಒಬ್ಬಳಿದ್ದಳು. ಸಭಾಂಗಣದ ಕೊನೆಯ ಸಾಲಿನಲ್ಲಿ. ಇಡೀ ಕಾರ್ಯಕ್ರಮದುದ್ದಕ್ಕೂ ಕಣ್ಣೀರು ಧಾರೆಯಾಗಿ ಹರಿಯುತ್ತಿತ್ತು. ಆ ದಿನ ಅವಧಿ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ದಿನ. ಎಲ್ಲರಂತಲ್ಲದ ಪುಸ್ತಕ ಅದು -ಹೇಳತೇವ ಕೇಳ. ಅದರ ಪ್ರತೀ ಪುಟದಲ್ಲೂ...
Breaking News: ಹಿರಿಯ ಸಾಹಿತಿ ಎಚ್ ಎಸ್ ಪಾರ್ವತಿ ಇನ್ನಿಲ್ಲ
ವೈ ಎನ್ ಗುಂಡೂರಾವ್ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೇಕೆ ಸಮಾನಸ್ಥಾನಮಾನಗಳಿರಬಾರದು, ಹೆಣ್ಣಿಗೂ ಅವಕಾಶದೊರೆತರೆ ಗಂಡಸಿನೊಡನೆ ಸ್ಪರ್ಧಿಸಬಲ್ಲಳು ಎಂಬುದನ್ನು ಚಿಕ್ಕಂದಿನಿಂದಲೇ ರೂಢಿಸಿಕೊಂಡು, ಪ್ರತಿಭಟನಾ ಸ್ವಭಾವವನ್ನು ಬೆಳೆಸಿಕೊಂಡಿದ್ದ ಪಾರ್ವತಿಯವರು ಹುಟ್ಟಿದ್ದು ೧೯೩೪ರ ಫೆಬ್ರವರಿ ೩ರಂದು ಬೆಂಗಳೂರಿನಲ್ಲಿ. ತಂದೆ...
ಹರಾಮಖೋರರ ಕರಾಮತ್ತರಿತನು ಟಿಪ್ಪು ಸುಲ್ತಾನನು ನಿಮಿಷದಲಿ..
ಜಿ ಎನ್ ನಾಗರಾಜ್ "ಹರಾಮಖೋರರ ಕರಾಮತ್ತರಿತನು ಟಿಪ್ಪು ಸುಲ್ತಾನನು ನಿಮಿಷದಲಿ ಅರೇ ಹಮಾರೇ ನಮ್ಮಖ್ಖರಾಮ ಕರೆಸೋ ಕಾಮ್ಮೆಂದ ಮನಸಿನಲಿ ಸ್ವರಾಜ್ಯ ರಕ್ಷಣೆಗೋಸ್ಕರ ಸುಲ್ತಾನ್ ರಣಾಗ್ರಕ್ಹೊರಟನು ರೋಷದಲಿ ಪರಂಗಿ ಸೋಲ್ಜರ್ ಮಧ್ಯದಿ ತುರಂಗ ಬಿಟ್ಟನು ತ್ವರಿತದಲಿ" ಇದು ಶ್ರೀರಂಗ ಪಟ್ಟಣದ ಲಾವಣಿ-ಜಾನಪದ ಕವಿಯೊಬ್ಬ ಟಿಪ್ಪು ಸುಲ್ತಾನನ ವೀರ...
ಅದೇ ಸ್ಟವ್ ನಿಂದಲೇ ನಾನು ಆಮ್ಲೆಟ್ ಹಾಕಿಕೊಂಡಿದ್ದು
ಸ್ಟವ್ ಕೊಟ್ಟ ಗೆಳೆಯನೊಬ್ಬನ ನೆನಪಿನಲ್ಲಿ... ರವಿ ಅಜ್ಜೀಪುರ ಈಗ್ಗೆ ಎಂಟುವರ್ಷದ ಹಿಂದೆ ಅನಿಸುತ್ತೆ. ನನಗಾಗ ಬೆಂಗಳೂರು ಹೊಚ್ಚ ಹೊಸದು. ಬಸ್ ಸ್ಟಾಂಡ್ ನಲ್ಲಿ ಇಳಿದವನಿಗೆ ಬೆಂಗಳೂರಿನ ಗಲ್ಲಿಗಳು, ಮೇನ್ ರೋಡ್ ಗಳು, ಕ್ರಾಸ್ ಗಳು, ಹೆಸರೇ ಇಲ್ಲದ ರಸ್ತೆಗಳು ಒಂದು ಅನೂಹ್ಯ ಜಗತ್ತಿನ ಥರ ಕಾಣಿಸಿದ್ದವು. ಅವಳೊಬ್ಬಳು ಇಲ್ಲದಿದ್ದರೆ...
ಈ ತುಟಿಗೆ ಅಂಟಿಸಿಕೊಳ್ಳುವ ನಗು ಎಲ್ಲಿರುತ್ತದೆ?
ಚೈತ್ರಿಕಾ ಶ್ರೀಧರ್ ಹೆಗಡೆ ಜೀವವಿಲ್ಲದ ಈ ಗುಮ್ಮನಗುಸಕ ಸಂಜೆಯಲಿ, ಅವನು ಬಂದರೆ..., ಸಂಜೆ ಸೊರಗದೇ ಹಾಗೇ ಇದ್ದುಬಿಡುತ್ತದೆಯೇ? ಅಥವಾ ಕಳೆದ ಇಂಥ ಎಷ್ಟೋ ಹೊತ್ತುಗಳು ಇಡಿ ಇಡೀ ದಕ್ಕಿಬಿಡುತ್ತವೆಯೇ? ನನಗೆ ಹೀಗೇ, ಏನೇನೋ ಕೆಲಸ ಮಾಡುತ್ತಲೇ ತಣ್ಣಗೆ ಪ್ರಶ್ನೆ ಕೇಳುವ ಚಟ.. ನೋಡಿ, ಅಂಗಳದಲ್ಲಿ ಹೂಗಿಡಗಳು ಒಣಗುತ್ತಿದ್ದರೂ, ಒಳಗೆ...
ಖುಷಿಯ ನೆನಪುಗಳು ಕಣ್ಣೀರಾಗೇ ಬರುತ್ತವೆ!
ಮಂಜುನಾಥ್ ಚಾಂದ್ ಹಿರಿಯ ಪತ್ರಕರ್ತರು ಮೊನ್ನೆ ಅವರ ಕದ ತೆರೆದ ಆಕಾಶ ಕೃತಿ ಬಿಡುಗಡೆಯಾಯಿತು ದಿಗ್ಗಜರೆಲ್ಲ ವೇದಿಕೆಯ ಮೇಲೂ ಸಭಾಂಗಣದಲ್ಲೂ ತುಂಬಿದ್ದರು. ವಿಷಯ ಅದಲ್ಲ. ಎಂದೂ ಕಾಣದ ಒಂದು ಪ್ರೀತಿ ಘಟನೆ ಅಲ್ಲಿ ಜರುಗಿಹೋಯಿತು. ನೋಡಿ- ಇಡೀ ಬದುಕಿನಲ್ಲಿ ಕಾಯಕವನ್ನೇ ಕಿರೀಟ ಮಾಡಿಕೊಂಡವರು ಅಪ್ಪಾ. ಬರ್ತ್ ಡೇ, ಸೆಲಬರೇಷನ್ನು ಯಾವುದೂ...
ಬಿಹಾರಲ್ಲಿ different ದೀಪಾವಳಿ
ಸತೀಶ್ ಆಚಾರ್ಯ
ಹೌದು ಸ್ವಾಮಿ.. ಇದು ಬೂತಯ್ಯನ ಮಗ ಅಯ್ಯು
simply enjoy maadi ಅವಿರತ ಮತ್ತು ಸತೀಶ್ ಏನಾದರೂ ಮಾಡುತಿರು ತಮ್ಮ ನೀ ಸುಮ್ಮನಿರಬೇಡ'.. ಎನ್ನುವ ಸಾಲಿಗೆ ಸರಿಯಾಗಿ ಫಿಟ್ ಆಗುವವರು. ಊರೂರು ತಿರುಗುತ್ತಾ, ಬೆಟ್ಟ ಗುಡ್ಡ ಹತ್ತುತ್ತಾ, ಸಿನೆಮಾ ಪ್ರದರ್ಶಿಸುತ್ತಾ, ಸಾಹಿತ್ಯ ಕಾರ್ಯಕ್ರಮಗಳಿಗೆ ಸಾಥ್ ನೀಡುತ್ತಾ, ಎಲ್ಲೋ ಮೂಲೆಯ ಹೋಟೆಲ್ ಹುಡುಕಿ ಬಾಡೂಟ ಮಾಡುತ್ತಾ.. ಹೀಗೆ ಸದಾ...
ಕಲ್ಪನಾ ಹ್ಯಾಂಡ್ ರೈಟಿಂಗ್ ಇಲ್ಲಿದೆ
ಇದು ಮಿನುಗುತಾರೆ ಕಲ್ಪನಾ, ಖ್ಯಾತ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರಿಗೆ ಬರೆದ ಅಪರೂಪ ಪತ್ರ. ಇದು ಕಾರಣಾಂತರದಿಂದ ಕೃಷ್ಣಮೂರ್ತಿ ಪುರಾಣೀಕರ ಪುತ್ರ ಆನಂದರಿಂದ ನನ್ನ ಕೈ ಸೇರಿತು. ಓದಿ ನೋಡಿದೆ. ಕಲ್ಪನಾ ಕೇವಲ ಪ್ರತಿಭಾವಂತ ನಟಿ ಮಾತ್ರವಲ್ಲ ಒಳ್ಳೆಯ ಬರಹಗಾರ್ತಿ ಎಂಬುದು ಗೊತ್ತಾಗುತ್ತದೆ. ಗುಂಡೇನಟ್ಟಿ ಮದುಕರ ಕುಲಕರ್ಣಿ...
ಕವಿತೆಗಳು ರಂಗವೇರುತ್ತಿವೆ
ನವೆಂಬರ್ 8 ಸಂಜೆ 4 ಗಂಟೆಗೆ ನಮ್ಮ ಶಾಲೆಯ ವಿದ್ಯಾರ್ಥಿಗಳಿಂದ 'ಕಾವ್ಯರಂಗ' ಕವನಗಳ ಜೊತೆ ಒಂದು ರಂಗಪ್ರಯಾಣ ಸ್ಥಳ : ರೋಟರಿ ಕಲಾಮಂದಿರ, ಕುಂದಾಪುರ...
ಎಂಥ ಪೋಲಿ ಆತ್ಮ ನನ್ನದು
ಮಾಯಾಕನ್ನಡಿಯಲ್ಲಿ ಕಂಡದ್ದು ಬಸು ಮೇಗಲ್ಕೇರಿ ಕನ್ನಡ ಸಾಹಿತ್ಯ ಲೋಕಕ್ಕೆ ಫ್ರೆಂಚ್‌ನ ನವ್ಯಕವಿ ಚಾರ್ಲ್ಸ್ ಬೋದಿಲೇರ್ ಪರಿಚಯವಾಗಿದ್ದು 1974ರಲ್ಲಿ. ಪಿ. ಲಂಕೇಶರು ಆತನ ’ಪ್ಲ್ಯೊರ್ ದ್ ಮಾಲ್’ ಕೃತಿಯನ್ನು ಕನ್ನಡಕ್ಕೆ ’ಪಾಪದ ಹೂಗಳು’ ಎಂದು ಅನುವಾದಿಸುವ ಮೂಲಕ. ಹಾಗೆ ನೋಡಿದರೆ, 70ರ ದಶಕ ಹೊಸತನಕ್ಕೆ ಗರಿಗೆದರಿದ ಕಾಲ. ನವ್ಯ...
ಗೋವು ತಿಂದು ಗೋವಿನಂತಾದವನು
ಎನ್ ಕೆ ಹನುಮಂತಯ್ಯ ಅಸ್ಪೃಶ್ಯ! ಹೌದು; ನಾನು ವಿದ್ಯುತ್ತಿನ ಹಾಗೆ ನಿಮ್ಮ ತಣ್ಣನೆಯ ಸ್ಪರ್ಶಕ್ಕೆ ಸಿಕ್ಕಲಾರೆ ಅಸ್ಪೃಶ್ಯ! ಹೌದು; ನಾನು ಕಡಲ ಆಳದ ಹಾಗೆ ನಿಮ್ಮ ಸುಡುಗಣ್ಣು ಸ್ಪರ್ಶಕ್ಕೆ ಸಿಕ್ಕಲಾರೆ ಅಸ್ಪೃಶ್ಯ! ಹೌದು; ನಾನು ಮೊಲೆ ಮೂಡಿದ ನೆಲ ಜೀವ ಪ್ರೇಮದ ತೊಗಲ ಸಂಭೋಗಿನಿ ಹುಟ್ಟುತ್ತವೆ ನನ್ನೊಳಗೆ ಕಾಡು...
ಮುನಿದಿಹನೇನೆ ನೀ ಕೇಳೆ…
ಮಂಜುಳಾ ಹುಲಿಕುಂಟೆ ಈ ನೀರವತೆಯ ಕರಾಳ ರಾತ್ರಿಗಳು ತಲೆಗೆ ತುಂಬಿದ ಗೊಂದಲಗಳಿಗೆ ಮತ್ತೆ ಗೋಜಲಾಗಿದ್ದೇನೆ. ಇಲ್ಲಿ ಕಳೆದುಕೊಂಡದ್ದು ಪಡೆದುಕೊಂಡದ್ದರ ಲೆಕ್ಕಕ್ಕೆ ಕೂತು ಪದೇ ಪದೇ ಸೊಲುತ್ತೇನೆ. ಎಲ್ಲವನ್ನು ತೊರೆದು ಖಾಲಿಯಾದೇ ಎಂದುಕೊಳ್ಳುವುವಾಗಲೇ ಹಠವಿಡಿದು ಎದೆಗಿಳಿದ ಬಂಧಗಳು, ನಿರಾಕಾರಣ ತೊರಿದ ಪ್ರೀತಿ, ಕಾಳಜಿಗಳಿಗೆ...
ವಿದ್ಯಾರ್ಥಿ ಭವನವನ್ನೇ ನಾಟಕವಾಗಿಸಿದ ಆ ಹುಡುಗಿಗೆ
ಬಿ ವಿ ಕಾರಂತರ ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಹಾಗೂ ಪ್ರೇಮಾ ಕಾರಂತರ ಸೋಲಿಸಬೇಡ ಗೆಲಿಸಯ್ಯ ಎರಡೂ ಆತ್ಮ ಕಥನಗಳನ್ನು ಓದಿದವರಿಗೆ ಒಂದು çommon element ಅಲ್ಲಿ ಸಿಗುತ್ತದೆ. ಅದೇ ಎನ್ ಮಂಗಳಾ. ಬಿ ಎಂ ಎಸ್ ಹಾಗೂ ಎನ್ ಎಂ ಕೆ ಆರ್ ವಿ ಕಾಲೇಜಿನಲ್ಲಿ ಓದುತ್ತಿದ್ದ ಹುಡುಗಿ ಸಮುದಾಯ ರಂಗ ತಂಡದ ಮೂಲಕ ಹಾದು ರಂಗಾಯಣ ತಲುಪಿಕೊಂಡಳು....
ಮಗಳ ಒಡೆದ ಹಿಮ್ಮಡಿ ನೋಡಿ ಬಿಟ್ಟಿದ್ದಾನೆ..
ಈ ರೊಟ್ಟಿಯ ಚೂರು.. ಆಶೀಷ್ ಮಾರಾಳಿ ಅನಾಥ ರಕ್ಷಕನ ಗುಡಿ ಮುಂದೆ ಚಪ್ಪಲಿ ಕಾಯುವ ಹುಡುಗನನ್ನು ಅವನ ಮಾಲಿಕ ಕಾಯುತ್ತಿದ್ದಾನೆ ................... . ಅಕ್ಕ ಕೂಡ ಅಮ್ಮನದೇ ತದ್ರೂಪು ಕೊನೆಗೆ ಊಟ ಮಾಡುತ್ತಾಳೆ ........... . ನಾನು ಗರ್ಭದಲ್ಲಿದ್ದಾಗ ಅಪ್ಪನಿಗೆ ಸಂಪಾದನೆ ಚನ್ನಾಗಿತ್ತಂತೆ ಅಮ್ಮನ ಹೊಟ್ಟೆ ಮೇಲೆ ಈಗಲೂ ಕೊಯ್ದ ಕಲೆ...
ಟಿಪ್ಪು ಒಬ್ಬ ಮುಸ್ಲಿಂ ಆದ ಮಾತ್ರಕ್ಕೆ..
Open for Debate ಟಿಪ್ಪು ಏಕೆ ವಿವಾದಾಸ್ಪದವಾಗುತ್ತಾನೆ ? ನಾ ದಿವಾಕರ್ ಸಮಕಾಲೀನ ಸಾಮಾಜಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಕೆಲವೊಮ್ಮೆ ಐತಿಹಾಸಿಕ ಸನ್ನಿವೇಶಗಳು, ವ್ಯಕ್ತಿಗಳು ಮತ್ತು ಘಟನೆಗಳು ಅತಿಯಾದ ಪ್ರಾಮುಖ್ಯತೆ ಪಡೆಯುತ್ತವೆ. ಇಂದಿನ ಸಮಸ್ಯೆಗಳನ್ನು ಗ್ರಹಿಸುವಲ್ಲಿ ಚಾರಿತ್ರಿಕ ಘಟನೆಗಳನ್ನು ಚಿಮ್ಮುಹಲಗೆಯನ್ನಾಗಿ ಬಳಸಿದಾಗ,...
