ಇದು ಕ್ಯಾಲೆಂಡರ್ ಕಥೆ

ಕ್ಯಾಲೆಂಡರ್ ಕಂಪ್ನಿಗೀಗ ನೂರು ವರ್ಷ

DSC_2054

– ಎನ್ ಎಸ್ ಶ್ರೀಧರ ಮೂರ್ತಿ 

ಹೊಸ ವರ್ಷ ಎಂದ ಕೂಡಲೇ ಎಲ್ಲರಿಗೂ ನೆನಪಾಗೋದು ಕ್ಯಾಲೆಂಡರ್ಗಳು. ಅದರಲ್ಲೂ ಬೆಂಗಳೂರು ಮುದ್ರಣಾಲಯದ ಕ್ಯಾಲೆಂಡರ್ಗಳು. ಬೇರೆ ಯಾವ ಕ್ಯಾಲೆಂಡರ್ ಇದ್ದರೂ ಬೆಂಗಳೂರು ಪ್ರೆಸ್ದು ಇದೆಯಾ ಅಂತ ವಿಚಾರಿಸೋವಷ್ಟು ಕನ್ನಡಿಗರಿಗೆ ಇದರ ಮೇಲೆ ನಂಬಿಕೆ.. ಅದು ಏನಿಲ್ಲ ಅಂದ್ರು ಮೂರು ಜನರೇಷನ್ಗಳಿಂದ್ಲೂ ನಡೆದುಕೊಂಡು ಬಂದಿದೆ. ಈ ರೀತಿ ರಾಜ್ಯದ ಕಾಲ ಮಾಪಕ ಅನ್ನಿಸಿಕೊಂಡಿರೊ ಬೆಂಗಳೂರು ಮುದ್ರಣಾಲಯ ಕ್ಕೆ ಈಗ ನೂರು ವರ್ಷ.
ಈ ಕ್ಯಾಲೆಂಡರ್ ಹುಟ್ಟಿದ ಕಥೆ ಕೂಡ ಇಂಟರೆಸ್ಟಿಂಗ್ ಆಗಿದೆ. ಮಾದರಿ ಅರಸರು ಎನ್ನಿಸಿಕೊಂಡ ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮದುವೆ 1900ರ ಜೂನ್ ಆರರಂದು ನಡೆಯಿತು. ಆಗ ಪ್ರಿಂಟ್ ಮಾಡಿದ ಲಗ್ನಪತ್ರಿಕೆಗೆ ಎಂಟು ವರಹ ಕೊಡ ಬೇಕಾಯ್ತಂತೆ. ಆ ಕಾಲಕ್ಕೆ ಅದು ದೊಡ್ಡ ಮೊತ್ತವೇ ಬಡಿ, ಇದನ್ನು ಕೇಳಿ ಮಹಾರಾಜರಿಗೆ ನಾವೇ ಏಕೆ ಪ್ರಿಟಿಂಗ್ ಪ್ರೆಸ್ ಮಾಡ್ಬಾರದು ಅನ್ನಿಸ್ತು. ಆದರೆ ಅಷ್ಟು ಸುಲಭಕ್ಕೆ ಅದು ಕಾರ್ಯರೂಪಕ್ಕೆ ಬರಲಿಲ್ಲ. ಸರ್ ಎಂ.ವಿಶ್ವೇಶ್ವರಯ್ಯನವರು ದಿವಾನರಾದ ನಂತರ ಪ್ರಿಟಿಂಗ್ ಪ್ರೆಸ್ ಕನಸಿಗೆ ಚಾಲನೆ ಸಿಕ್ತು.

323ಸರ್.ಎಂ.ವಿಯವರಿಗೆ ಪ್ರಿಟಿಂಗ್ ಪ್ರೆಸ್ಗಿಂತ ಕ್ಯಾಲೆಂಡರ್ ಬೇಕಿತ್ತು. ಆಗ ಭಾರತದ ಸಿಂಧ್ ಪ್ರಾಂತ್ಯದಲ್ಲಿ ಕ್ಯಾಲೆಂಡ್ ಶುರುವಾಗಿತ್ತು. ಲಂಡನ್ಗೆ 1914ರಲ್ಲಿ ಹೋದಾದ ಸರ್.ಎಂ.ವಿಯವರು ರಾಯಲ್ ಪ್ರೆಸ್ ಜೊತೆ ಮಾತಾಡಿ ಪ್ರಿಟಿಂಗ್ ಮಿಷನ್ ಭಾರತಕ್ಕೆ ತರಿಸಿಯೇ ಬಿಟ್ಟರು. ಆದರೆ ಪ್ರಿಟಿಂಗ್ ಪ್ರೆಸ್ ನಡೆಸೋವಷ್ಟು ಆಗ ಮೈಸೂರು ಸಂಸ್ಥಾನ ಶ್ರೀಮಂತವಾಗಿರಲಿಲ್ಲ. ಸರ್.ಎಂ.ವಿ ಬೆಂಗಳೂರಿನಲ್ಲಿ ತಮಗೆ ಪರಿಚಯ ಇದ್ದ ಗಣ್ಯರನ್ನು ಸೇರಿಸಿದರು. ಅವರಿಗೆ ಮುದ್ರಣಾಲಯ ನಡೆಸೋ ಜವಬ್ದಾರಿ ಕೊಟ್ಟರು. ಸರ್.ಕೆ.ಪಿ.ಪುಟ್ಟಣ್ಣ ಚೆಟ್ಟಿ, ರಾವ ಬಹದ್ದೂರ್ ಹಯವದನ ರಾವ್ ಮೊದಲಾದವರು ಸೇರಿಕೊಂಡು 1915ರ ಸೆಪ್ಟಂಬರ್ 5ನೇ ತಾರೀಖು ಆಗಿನ ಶಂಕರಪುರಂನಲ್ಲಿದ್ದ ಕಾರಣಿಕೆ ಕೃಷ್ಣಮೂತರ್ಿಗಳ ಮನೆಯಲ್ಲಿ ಬೆಂಗಳೂರು ಮುದ್ರಣಾಲಯವನ್ನು ಆರಂಭಿಸಿದರು. 1916ರ ಆಗಸ್ಟ್ 5ರಂದು ಅದು ಅಧಿಕೃತವಾಗಿ ನೊಂದಣಿ ಆಯಿತು

ವಿಶ್ವೇಶ್ವರಯ್ಯನವರಿಗೆ ಮುಖ್ಯವಾಗಿ ಬೇಕಾಗಿದ್ದು ಕ್ಯಾಲೆಂಡರ್. ಅದಕ್ಕಾಗಿ ಅವರು ತಮ್ಮ ಸ್ನೇಹಿತ ಬೆಂಗಳೂರು ಪುಟ್ಟಯ್ಯನವರನ್ನು ಕ್ಯಾಲೆಂಡರ್ ಮಾಡೋ ವಿಧಾನ ಕಲಿತು ಕೊಂಡು ಬರೋ ಹಾಗೆ ಲಂಡನ್ಗೆ ಕಳುಹಿಸಿದರು. ಆಗ ಇದ್ದ ಪಂಚಾಂಗಕ್ಕಿಂತ ಬೇರೆ ರೀತಿಯಲ್ಲಿ ಎಲ್ಲಾ ಧರ್ಮದ ಅಲ್ಲಾ ಪ್ರದೇಶದ ಆಚರಣೆ ಮಾಡೋ ಕ್ಯಾಲೆಂಡರ್ ಒಳಗಿನ ಮಾಹಿತಿ ಜೋಡಿಸೋ ಕ್ರಮ ಮತ್ತು ಮುದ್ರಣ ಎರಡನ್ನೂ ಪುಟ್ಟಯ್ಯನವರು ಕಲಿತುಕೊಂಡು ಬಂದರು. ಇದರ ಜೊತೆಗೆ ಮದ್ರಾಸಿನಲ್ಲಿ ಕ್ಯಾಲೆಂಡರ್ ಮಾಡ್ತಿದ್ದ ಬ್ರಿಟಿಷ್ ಅಧಿಕಾರಿ ಜಾಜರ್್ ಅವರನ್ನೂ ಕೂಡ ತಮ್ಮ ಸಂಸ್ಥೆಗೆ ಸೇರಿಸಿಕೊಂಡರು. ಸರ್.ಎಂ.ವಿಯವರೇ ಕುಳಿತು ಕ್ಯಾಲೆಂಡರ್ ಸ್ವರೂಪವನ್ನು ರೂಪಿಸಿದರು. ಹೀಗೆ ಆರು ವರ್ಷದ ಶ್ರಮದ ನಂತರ 1921ರಲ್ಲಿ ಮೊದಲ ಕ್ಯಾಲೆಂಡರ್ ಪ್ರಕಟ ಆಯಿತು. ಇದು ಉಳಿಯಲ್ಲ ಎಂದು ಬಹಳ ಜನ ಅಂದು ಕೊಂಡಿದ್ದರು. ಆದರೆ ಬಹಳ ಬೇಗ ಅದು ಪಾಪ್ಯೂಲರ್ ಆಯಿತು. ಆರಂಭಿಕ ಕ್ಯಾಲೆಂಡರ್ಗಳಲ್ಲಿ ಮೈಸೂರು ಸಂಸ್ಥಾನದ ಆಡಳಿತಕ್ಕೆ ತಕ್ಕಂತೆ ಒಂಭತ್ತು ಪೂರ್ಣ ರಜೆಗಳಿದ್ದವು. ಅವು ಎಲ್ಲಾ ಧರ್ಮ ಆಚರಣೆಗಳನ್ನು ಪ್ರತಿನಿಧಿಸುವಂತಿರುವುದು ಗಮನಾರ್ಹ ಸಂಗತಿ. ಆರಂಭಿಕ ಕ್ಯಾಲೆಂಡರ್ಗಳು ಇಂಗ್ಲೀಷ್ನಲ್ಲಿ ಮಾತ್ರ ಇವೆ. ಕನ್ನಡದಲ್ಲಿಯೂ ಕ್ಯಾಲೆಂಡರ್ ಬೇಕು ಎನ್ನುವ ಬೇಡಿಕೆ ಇಟ್ಟು ಅದನ್ನು ವಿನ್ಯಾಸಗೊಳಿಸಿದವರು ಹಿರಿಯ ಬರಹಗಾರ ಮಾಸ್ತಿ ವೆಂಕಟೇಶ್ ಅಯ್ಯಂಗಾರರು. ಅವರು 1936ರಲ್ಲಿ ಪ್ರಕಟವಾದ ಮೊದಲ ಕನ್ನಡ ಕ್ಯಾಲೆಂಡರ್ನ ಅಡಕಗಳನ್ನು ಬರೆದು ಕೊಟ್ಟಿದ್ದರು.

ಸ್ವಾತಂತ್ರ್ಯದವರೆಗೂ ಬೆಂಗಳೂರು ಮುದ್ರಣಾಲಯವು ರಾಜ ಮನೆತನದ ಅಧಿಕೃತ ಪ್ರಕಟಾಲಯವಾಗಿತ್ತು. ಹೀಗಾಗಿ ಮೊದಲ ಮೂರು ದಶಕದ ಕ್ಯಾಲೆಂಡರ್ಗಳ ನಾಲ್ಕೂ ಮೂಲೆಯಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್, ಚಾಮರಾಜ ಒಡೆಯರ್, ಕಂಠೀರವ ನರಸಿಂಹ ರಾಜ ಒಡೆಯರ್ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಚಿತ್ರಗಳನ್ನು ಪ್ರಕಟಿಸಲಾಗುತ್ತಿತ್ತು. ಸ್ವಾತಂತ್ರ್ಯಾ ನಂತರ ಮಹಾತ್ಮ ಗಾಂಧಿ, ಪಂಡಿತ್ ಜವಹರ ಲಾಲ್ ನೆಹರೂ, ವಲ್ಲಭಭಾಯಿ ಪಟೇಲರಂತಹ ರಾಷ್ಟ್ರ ನಾಯಕರ ಚಿತ್ರಗಳು ಈ ಜಾಗದಲ್ಲಿ ಬಂದವು. 1960ರಲ್ಲಿ ಪ್ರಮುಖ ಕ್ರಾಂತಿಕಾರಕ ಬೆಳವಣಿಗೆ ಸಂಭವಿಸಿ ಈ ಚಿತ್ರಗಳ ಬದಲು ಕಲಾತ್ಮಕ ವಿನ್ಯಾಸ ರೂಪುಗೊಂಡು ಉಪಯುಕ್ತ ಮಾಹಿತಿಗಳು ಕಾಣಿಸಿಕೊಂಡವು. 1988ರಲ್ಲಿ ಚಿಕ್ಕದಾದ ಟೇಬಲ್ ಕ್ಯಾಲೆಂಡರ್ ರೂಪುಗೊಂಡರೆ. ಡಿಜಿಟಲ್ ಯುಗ ಕಾಲಿಟ್ಟ ನಂತರ ಕಂಪ್ಯೂಟರ್ ಪರದೆಯ ಮೇಲೆ ಕುಳಿತು ಕೊಳ್ಳ ಬಲ್ಲ ಇ-ಕ್ಯಾಲೆಂಡರ್ ವಿನ್ಯಾಸಗೊಂಡಿತು. ಈಗ ಮೊಬೈಲ್ ಮೂಲಕವೂ ಡೌನ್ ಲೋಡ್ ಮಾಡಬಲ್ಲ ಕ್ಯಾಲೆಂಡರ್ ರೂಪುಗೊಂಡಿದೆ. ಕಾಲದ ಬೆಳವಣಿಗೆಯ ಜೊತೆ ಸಾಗುತ್ತಾ ಬಂದಿರುವ ಬೆಂಗಳೂರು ಮುದ್ರಣಾಲಯದ ಕ್ಯಾಲೆಂಡರ್ಗಳು ಮಾಹಿತಿ ಸಂಗ್ರಹಣ ಮತ್ತು ವಿನ್ಯಾಸದಲ್ಲಿ ಅತ್ಯಂತ ವೈಜ್ಞಾನಿಕ ಮಾರ್ಗವನ್ನು ಅನುಸಿರಿಸಿ ಹೂರಣದ ದೃಷ್ಟಿಯಿಂದಲೂ ಅಧಿಕೃತ ಎನ್ನಿಸಿಕೊಂಡಿವೆ.

1

ಕ್ಯಾಲೆಂಡರ್ ಅನ್ನೋ ಕಲ್ಪನೆಯನ್ನು ಕನ್ನಡಿಗರಿಗೆ ನೀಡಿದ್ದು ಮಾತ್ರ ಅಲ್ಲ ನೂರು ವರ್ಷಗಳ ಕಾಲ ಉಳಿದುಕೊಂಡು ಬೆಳೆಯುತ್ತಿರೋ ಕಾರಣಕ್ಕೆ ಬೆಂಗಳೂರು ಮುದ್ರಣಾಲಯದ ಶತಮಾನೋತ್ಸವ ಒಂದು ರೀತಿಯಲ್ಲಿ ಸಾಂಸ್ಕೃತಿಕ ಆಚರಣೆ ಕೂಡ ಆಗಿದೆ.

 

‍ಲೇಖಕರು Admin

January 1, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: