ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕುವೆಂಪು ಕವಿತೆಗೆ ಆರ್ಯಾ ರೂಪಕದಂತಿದ್ದರು
ಎಲ್ಲಿಯೂ ನಿಲ್ಲದ, ಮನೆಯನೆಂದೂ ಕಟ್ಟದ ಆರ್ಯಾ ಕೆರೇಕೈ ರಜನಿ ಗರುಡ ಹಿರಿಯ ನಾಗರಿಕರ ಊರಾದ ಈ ಧಾರವಾಡದಲ್ಲಿ ನನಗಿಂತ ಸಾಕಷ್ಟು ಹಿರಿಯರಾದವರೇ ನನಗಿಲ್ಲಿ ಸ್ನೇಹಿತರು. ಇದರಿಂದಾಗಿ ಅವರೆಲ್ಲ ಧಾರವಾಡದಲ್ಲಿ ಪ್ರಚಲಿತವಿರುವ ಹಲವಾರು ಕಥೆಗಳನ್ನು ಪ್ರೀತಿಯಿಂದ ಹೇಳಿದ್ದಾರೆ. ಚಹಾ, ಚುಮ್ಮರಿ, ಮಿರ್ಚಿ ಜೊತೆಯಲ್ಲಿ ಅವ್ಯಾಹತವಾಗಿ ನಡೆವ...
ನವಿಲು ಹಾರಿತು ಮನದಲ್ಲೇ..
ಜಯಶ್ರೀ ಸುಕಾಲೆ ಬೆಳ್ಳನೆ ಬೆಳಗಾಗಿತ್ತು; ಮಲ್ಲಿಗೆ ರಾಶಿಯಾಗಿ ಬೆಳಕು ಹರಡಿತ್ತು ಸೇತುವೆ ಕೆಳಗೆ ತುಂಗಭದ್ರೆಯ ಥಳಕು. ಅದೆಂಥ ಮೋಹಕ ಗತ್ತು ನವಿಲೇ ಸೇತುವೆ ಮೇಲೆ ಬೆಳ್ಳಕ್ಕಿಯ ಜೊತೆ ವಾಯುವಿಹಾರದ ನಡಗೆ ಕಲೆ. ಕವಿ ಅದ ನೋಡಿದನು; ಮರುಳಾದನು ಅಡಿಗಡಿಗೆ ನವಿಲೇ ನವಿಲೇ ಬಿಸಿಯಾಯಿತು ಕವಿಯ ಗುಂಡಿಗೆ. ಬೆಳ್ಳಕ್ಕಿಗೊ ನವಿಲ ಜೊತೆಗೆ...
ಅಕ್ಟೋಬರ್ ನಲ್ಲಿ 'ರಂಗಶಂಕರ'
ಚಿಕ್ ಚಿಕ್ ಸಂಗತಿ: ಒಂದು ಹೋಮ್ ವರ್ಕ್ ನಿಂದಾಗಿ ಏನೆಲ್ಲಾ..
ಜಿ ಎನ್ ಮೋಹನ್ 'ಪಪ್ಪಾ ಹೋಮ್ ವರ್ಕ್ ಗೆ ಹೆಲ್ಪ್ ಮಾಡ್ತೀಯಾ..' ಅಂತ ಆ ಪುಟ್ಟ ಹುಡುಗಿ ಓಡಿಬಂದಾಗ ನನ್ನ ಕಣ್ಣಲ್ಲಿ ಮಿಂಚು ಹಾಗೆ ಓಡಿ ಬಂದ ಹುಡುಗಿಯನ್ನು ಮಡಿಲಿಗೆ ಸೇರಿಸಿಕೊಂಡು ಅವಳು ತಂದಿದ್ದ ಪುಸ್ತಕದ ಹಾಳೆ ತಿರುವುತ್ತಾ ಹೋದೆ ಅವಳು ಒಂದು ಬದುಕಿನ ಕಥೆ ಹೆಕ್ಕಬೇಕಿತ್ತು ಶಾಲೆಯ ಪುಸ್ತಕದಲ್ಲಿದ್ದ ಒಂದು ಪಾಠವನ್ನು ತನ್ನ...
BREAKING NEWS: ಸಾಹಿತಿ ಆರ್ಯ ಇನ್ನಿಲ್ಲ
ನಾಡಿನ ಹೆಸರಾಂತ ಸಾಹಿತಿ, ನವ್ಯ ಸಾಹಿತ್ಯ ಚಳವಳಿಗೆ ಮಹತ್ವದ ಕೃತಿಗಳನ್ನು ಕೊಟ್ಟ 'ಆರ್ಯ' ಇನ್ನಿಲ್ಲ. ಉಡುಪಿಯ ಶಿರೂರು ಮಠದ ಸನ್ಯಾಸಿಯಾಗಿದ್ದ ಇವರು ನಂತರ ಅದನ್ನು ತೊರೆದು ಧಾರವಾಡದಲ್ಲಿ ನೆಲೆಸಿದರು. ಕಥೆ, ಕವಿತೆ, ಕಾದಂಬರಿ, ನಾಟಕ, ಅನುವಾದ ಹೀಗೆ ನಾನಾ ಕ್ಷೇತ್ರದಲ್ಲಿ ಕೃತಿಗಳನ್ನು ಕೊಟ್ಟ ಆರ್ಯ ಹೆಸರಾಂತ ಕಲಾವಿದರಾಗಿದ್ದರು....
ಯುದ್ಧ ಮುಗಿದ ಮೇಲೆ..
ಶಿವಕುಮಾರ್ ಮಾವಲಿ ಯುದ್ಧದ ವಿಷಯದಲ್ಲಿ ಯಾವ ಪದಕೋಶಗಳು ಕರಾರುವಾಕ್ಕಾಗಿ ಅರ್ಥ ನೀಡಲಾರವು ಎಂಬುದೇ ಸತ್ಯ. ಅಲ್ಲಿ ಆರಂಭ ಎಂದರೆ ಅಂತ್ಯ ಮುಕ್ತಾಯ ಎಂದರೆ ನಾಂದಿ ಎಂದರ್ಥ. ಒಪ್ಪಂದಗಳು ಜರುಗಿದ ತರುವಾಯವೇ ನಿಜದ ಯುದ್ಧ ಶುರುವಿಟ್ಟುಕೊಳ್ಳುತ್ತದೆ. ಜಗತ್ತಿನ ಮೊದಲ ಯುದ್ಧಕ್ಕೆ ಏನು ಕಾರಣಗಳಿದ್ದವೋ, ಅವವೇ ಪರಿಣಾಮಗಳು ಅಸಂಖ್ಯ...
ಯುದ್ಧ ಶಪಿಸುವ ದೇಶದ್ರೋಹಿ ನಾನು..
ಮಂಜುಳಾ ಹುಲಿಕುಂಟೆ ನೀವೇನೇ ಹೇಳಿ ಯುದ್ಧ - ಶತೃತ್ವದ ಕುರಿತು ನನಗಷ್ಟು ಮೋಹವಿಲ್ಲ .. ಯುದ್ಧವನ್ನೇ ಶಪಿಸುವವಳ ದೇಶದ್ರೋಹಿ ಅನ್ನುವುದಾದರೇ ನನ್ನ ಅಭ್ಯಂತರವೂ ಇಲ್ಲ... ಅಲ್ಲಿ ಗಡಿಯಲ್ಲೊಬ್ಬ ಗೆಳೆಯನಿದ್ದಾನೆ ಕೂಡು ಕುಟುಂಬದ ಹಸಿವ ತಣಿಸಲು ಹಸಿ ಬದುಕನ್ನೆ ಬಲಿಗೊಟ್ಟು ಬೆನ್ನಿಗೆ ಬಂದೂಕು ಕಟ್ಟಿಕೊಂಡು ಮಳೆ-ಚಳಿ-ಗಾಳಿಯಲ್ಲಿ...
ಸಮಾದಿ ಮೇಲೆ ಶೋಕಗಾನ..
ಶಶಿಕಾಂತ ಯಡಹಳ್ಳಿ ಗುಂಡಿಗೆ ಗುಂಡು ರಕ್ತಕೆ ರಕ್ತ ಮನುಕುಲ ಚರಿತ್ರೆ ರಕ್ತಸಿಕ್ತ... ಬರೀ ಸೇಡಿಗೆ ಸೇಡು ಕೊಲ್ಲಲು ಸಕಾರಣ ಬೇಕಿಲ್ಲ.. ಯುದ್ದವೆಂಬುದು ಸುಡುಗಾಡು ಕದನಕೆ ದ್ವೇಷವೇ ಸಾಕಲ್ಲ... ಗಡಿಗಳ ಆಚೆ ಈಚೆ ರಣಹದ್ದುಗಳ ಹಾರಾಟ.. ಸಮರವೆಂಬುದೇನಲ್ಲ ಸಾವಿಗಾಗಿ ಕಾದಾಟ... ಆಳುವವರಿಗದು ಯುದ್ದೋನ್ಮಾದ ಭಾವ.. ಯೋಧರ ಮನೆಯಲಿ...
ಯುದ್ದ ಮಾಡಿಬಿಡಿ..
ಚಲಂ ಹಾಡ್ಲಹಳ್ಳಿ ಯುದ್ದ ಮಾಡಿಬಿಡಿ ರಾಜನ ಪೋಷಾಕು ಧರಿಸಿ ದೇಶದ ಬೀದಿ ಬೀದಿಯಲಿ ಸುತ್ತಿಬಿಡಿ.. ಗಡಿಯಲ್ಲಿ ನನ್ನ ಸಹೋದರರು ಸಾಯುತ್ತಿರಲಿ ಹುತಾತ್ಮ ಅಂತ ಬೋರ್ಡು ಬರೆಸಿಕೊಂಡು ನೇತು ಹಾಕಲು ಸರ್ಕಲ್ಲಿನಲ್ಲಿ ಕುಳಿತುಬಿಡಿ ಏನೂ ಅರಿಯದ ಕೂಸು.. ತಾಯಿಯ ರೋದನೆ.. ಮುದ್ದು ಹೆಂಡತಿಯ ನಿಟ್ಟುಸಿರು ಆಯಾ ಮನೆಯಲ್ಲಿ ಕರಗಿ ಹೋಗುತ್ತವೆ.....
ಉಡುಪಿ ಜಿಲ್ಲಾಸ್ಪತ್ರೆ ಉಳಿಸಿ
ಶಶಿಧರ್ ಹೆಮ್ಮಾಡಿ ದುಬೈ ಉದ್ಯಮಿ ಬಿ. ಆರ್. ಶೆಟ್ಟರು ಉಡುಪಿ ಜಿಲ್ಲಾಸ್ಪತ್ರೆಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಹಿತಮಿತವಾದ ದರದಲ್ಲಿ ಸುಸಜ್ಜಿತ ಆಸ್ಪತ್ರೆಯ ಸೌಕರ್ಯ ಕೊಡುತ್ತಾರಂತೆ! 'ಪಾರಿಜಾತ ಹೊಟೇಲಿ'ನಲ್ಲಿ ಚಹಾಕ್ಕೆ 20 ರೂಪಾಯಿ. ಮಸಾಲೆ ದೋಸೆಗೆ 45. ಅವರ ಜಾಹೀರಾತಿನಲ್ಲಿಯೂ 'ಹಿತ ಮಿತವಾದ' ದರದಲ್ಲಿ ತಿಂಡಿ ತಿನಿಸು...
ಬಲೂನು ಮಾರುವ ಕಣ್ಣುಗಳು..
ಬಲೂನು ಮಾರುವ ಕಣ್ಣುಗಳು & ಜಾಗತೀಕರಣ ಜಿ ಕೆ ನವೀನ್ ಕುಮಾರ್ ಬೆಲೂನಿನ ಒಳಗೆ ಉಸಿರು ತುಂಬಿ ಪಟಾರನೆ ಕೈಗೆ ಬಡಿಯುತ್ತಾ... ಮಕ್ಕಳನು ಆಕರ್ಷಿಸುತ್ತಿದ್ದ ಅವನು, ಇದೀಗ ಉಸಿರಾಡಲು ಹೆಣಗುತ್ತಿದ್ದಾನೆ.ಎಷ್ಟೋ ಮಕ್ಕಳ ಕೈಗೆ ತನ್ನ ಉಸಿರನ್ನೇ ದಾರೆ ಎರೆದ ಅವನ ಗಂಟಲು... ಸ್ತಬ್ಧವಾಗಿದೆ ಸದ್ದಿಲ್ಲದೇ.ಊರು ಊರು ಸುತ್ತುತಾ......
ನಾನು ನಾನಾಗಿ ಹಗುರಾಗುವ..
ಬದುಕ ದಾರಿಯಲ್ಲಿ.. ಎನ್ ಪಾರ್ವತಿ ಬದುಕೇ ನೀನ್ನನಪ್ಪಿದಷ್ಟು ಚಂದವಾಗಿ ನಾನಿನ್ನನಪ್ಪಿಕೊಳ್ಳುವುದ ಯಾರೂ ಕಲಿಸಲಿಲ್ಲ. ಕಲಿತದ್ದು, ಆತುಕೊಂಡಿದ್ದು ಅಂಟಿಯೂ ಅಂಟದಂತೆ ಇದ್ದು ನೆಲೆಯಾಗಿ ನಿಲ್ಲದೆ, ಜಾರಿಹೋಗುವ ತಾವರೆ ಎಲೆಯ ಮೇಲಿನ ಹನಿಯ ಕುಣಿತವನ್ನು ಮಾತ್ರ. ಮರದ ಎಲೆಯಂತೆ, ಗಿಡದ ಹೂವಿನಂತೆ ಜೀವವಾಗುವ, ಭಾವವಾಗುವ ಭಾಗವೇ ಆಗಿಹೋಗಿ...
ನೆಲೆ ಕಳೆದುಕೊಂಡವರ ನಡುವೆ..
The Hindu (April 9/ 2016) Literary review ನಲ್ಲಿ Easterine Kire ಪರಿಚಯಿಸಿದ ಒಂದು ಕೃತಿ ನಮಗೆ ಗೊತ್ತೇ ಇಲ್ಲದ ಜಗತ್ತನ್ನು ಪರಿಚಯಿಸುತ್ತದೆ. ಅಷ್ಟೇ ಅಲ್ಲ ತಳಮಳವನ್ನು ಹುಟ್ಟುಹಾಕುತ್ತದೆ. ಅವಧಿ ಓದುಗರು ಈ ಕೃತಿಯನ್ನು ಓದಲಿ ಎಂದು ಹಂಬಲಿಸಿ ಕವಯತ್ರಿ ಮಹೇಶ್ವರಿ.ಯು ಆ ಕೃತಿ ವಿಮರ್ಶೆಯನ್ನು ಕನ್ನಡೀಕರಿಸಿ...
ಎಚ್ ಎಸ್ ವಿ ಕಾಲಂ: ಹೊರಟಿದ್ದೀಗ ಎಲ್ಲಿಗೆ?
ತಾವರೆಯ ಬಾಗಿಲು-2 ಎಚ್.ಎಸ್.ವೆಂಕಟೇಶ ಮೂರ್ತಿ "ಕಾವ್ಯಾರ್ಥ" ಎಂಬ ಗ್ರಹಿಕೆ ಮೊದಲಿಂದಲೂ ನಮ್ಮಲ್ಲಿ ಚಾಲ್ತಿಯಲ್ಲಿದೆ. ಕಾವ್ಯವು ಭಾಷೆಯಲ್ಲಾದ ಒಂದು ರಚನೆ. ಭಾಷೆಯಾದರೋ ಸ್ವಯಂ ತಾನೇ ಅರ್ಥವುಳ್ಳ ಪದಗಳ ಮತ್ತೊಂದು ರಚನೆ. ಆ ಪದಗಳಿಗೆ ರೂಢಿಯಲ್ಲಿ ಅರ್ಥವೆಂಬುದು (ಕೆಲವೊಮ್ಮೆ ಅನೇಕಾರ್ಥಗಳು) ಇದೆ. ಹಳಗನ್ನಡಕಾವ್ಯ ನಮಗೆ...
ಉಣ್ಣೋ ಅನ್ನ ಪ್ರೈವೇಟ್ ಲಿಮಿಟೆಡ್!
ರಾಜಾರಾಂ ತಲ್ಲೂರು ಸ್ವಂತ ಭೂಮಿಯಲ್ಲಿ ದುಡಿದುಣ್ಣುವ ರೈತರಾಗುವ ಬದಲು ಕೃಷಿ ಕಾರ್ಪೋರೇಟ್ ಒಂದರ ನೌಕರರಾದರೆ ಬದುಕು ಸುಭದ್ರ! ಇದು ಕೃಷಿ ಭೂಮಿಯನ್ನು ತಟ್ಟೆಯಲ್ಲಿಟ್ಟು ಕಾರ್ಪೋರೇಟ್ ಕೃಷಿ ಕಂಪನಿಗಳಿಗೆ ವಹಿಸಿಕೊಡುವುದಕ್ಕೆ ಒಳ್ಳೆಯ ಸಮರ್ಥನೆ. ದೇಶದ ಭವಿಷ್ಯದ ಕೃಷಿ ನೀತಿ ಹೇಗಿರಬೇಕು ಎಂಬ ಬಗ್ಗೆ NDA ಸರಕಾರದ ‘ನೀತಿ ಆಯೋಗ’...
ನಿನ್ನೊಲುಮೆಯ ಕಥೆಗೆ ನರಳದೆ..
ಡಾ. ಪ್ರೇಮಲತ ಬಿ ನವಿಲಾಗದಿರು ಬಿರಿದು..... ಸುಮ್ಮನೆ ನಿಂದಾನವ ಕಲ್ಲ ಕಾಯದವ ಸೊಲ್ಲೆತ್ತದೆ, ತುಟಿಯ ಬಿಗಿದು ಕಿರುಗೆರೆಯ ಅಂಚ ನಗೆಕಿರಿದು! ಕಣ್ಣ ಮುಚ್ಚಿ ನಿಂದಾನವ ಧ್ಯಾನದಲಿ ಮುಳುಗಿದಂತೆ ಮೈಯೆಲ್ಲ ಕಿವಿಯಾಗಿ ಕೇಳುವಂತೆ ಮನಸಿನಲಿ ಮಂಥನ ನಡೆಸಿದಂತೆ! ದೊಡ್ಡಾಲೆಯ ಕಿವಿಯ ಇಳಿಯ ಬಿಟ್ಟು ಬಲಿಷ್ಠ ಭುಜದ ಆಯ ಕೊಟ್ಟು ನಿನ್ನ...
ಇರುಳೆಲ್ಲ ವಟಗುಟ್ಟಿದರೂ..
ಮಂಡೂಕ ಲಹರಿ.. ರನ್ನ ಕಂದ (ಸಚಿನ್ ಕುಮಾರ ಬ.ಹಿರೇಮಠ) ಇರುಳೆಲ್ಲ ವಟಗುಟ್ಟಿದರೂ ನನ್ನ ಬವಣೆ ತೀರಲಿಲ್ಲ... ಎಲ್ಲಿಯೋ ಹುದುಗಿ ಬಚ್ಚಿಟ್ಟು ಕೊಂಡರೂ ಬದುಕ ದಾರಿ ತೋರಲಿಲ್ಲ... ನಿನ್ನೊಳಗೊಂದು ಮಿಂಚು ನಿನಗೆ ಕಂಡಿತ್ತು ಜಗವ ತೊಳೆವ ಹುಚ್ಚು ಹಿಡಿದಿತ್ತು.. ಅದೆಂಥ ಧ್ಯಾನವದು ಬೋಧಿ ವೃಕ್ಷದ ಕೆಳಗೆ ನಾನೆಂತೂ ಅರಿಯೇ ಈ ಕಲ್ಲು...
ಎರಡು ಆಸ್ಪತ್ರೆ ಮತ್ತೊಂದು ಮಸಣ..
ಒಂದು ಬಾಂಬಿನ ಪರಿಧಿ ಮೂಲ :ಯೆಹುದಾ ಅಮಿಚೈ ಕನ್ನಡಕ್ಕೆ: ಅವಿನಾಶ ಕನ್ನಮ್ಮನವರ ಬಾಂಬಿನ ಪರಿಧಿ ಮೂವತ್ತು ಸೆಂಟಿಮೀಟರಗಳಷ್ಟು, ಸಿಡಿದ ತೀವ್ರತೆ ಇದ್ದೀತು ಏಳು ಮೀಟರುಗಳಷ್ಟು, ಪಡೆದ ಬಲಿ ನಾಲ್ಕು, ಹನ್ನೊಂದು ಗಾಯಳುಗಳು, ಇವರ ನೋವಿನ ಪರಿಧಿ ಇನ್ನಷ್ಟು ದೊಡ್ಡದು - ಇದರೊಳಗೆ ಎರಡು ಆಸ್ಪತ್ರೆ ಮತ್ತೊಂದು ಮಸಣ. ಛಿದ್ರಗೊಂಡ...
ಇದು ಮೂರ್ಖತನದ ಪರಮಾವದಿ..
ಸರ್ವಋತು ಜಲಪಾತ, ಆತ್ಮಘಾತುಕ ಯೋಜನೆ ಪ್ರಸನ್ನ ಕರ್ನಾಟಕ ಸರಕಾರವು ಜೋಗದಲ್ಲಿ ಆರಂಭಿಸಲು ಹೊರಟಿರುವ ಸರ್ವಋತು ಜಲಪಾತ ಯೋಜನೆಯು ಆತ್ಮಘಾತುಕವಾದದ್ದಾಗಿದೆ. ಗುಡ್ಡಕ್ಕೆ ಕಲ್ಲು ಹೊರುವವರು ಎಂದು ಮೂರ್ಖರನ್ನು ಕನ್ನಡದ ಗಾದೆ ಮಾತು ಅಣಕಿಸುತ್ತಿತ್ತು. ಅದನ್ನೇ ಕೊಂಚ ತಿದ್ದಿ ಅನುಷ್ಠಾನಗೊಳಿಸಲು ಹೊರಟಿರುವ ರಾಜ್ಯ ಸರಕಾರವು, ಜೋಗದ...
ಈ ಚಿಟ್ಟೆ ಕವಿತೆಗಳ ಸಾಕ್ಷಿ..
ಜಿ ಎನ್ ಮೋಹನ್ ವಿನಯಾ ಒಕ್ಕುಂದರಿಗೆ ಡಾ ನರಹಳ್ಳಿ ಪ್ರಶಸ್ತಿ ಬಂದ ಸಂದರ್ಭ. ಮೊನ್ನೆ ಆ ಪ್ರಶಸ್ತಿ ನೀಡುವ ಕಾರ್ಯಕ್ರಮದಲ್ಲಿ ನಾನು, ಎಚ್ ಎಸ್ ರಾಘವೇಂದ್ರರಾವ್ ಮಾತನಾಡಬೇಕಿತ್ತು. ನಾನೂ ಮತ್ತು ಅವರು ಇಬ್ಬರೂ ಹಿಂದಿನ ದಿನ ಇಡೀ ವಿನಯಾ ಅವರ ಅಷ್ಟೂ ಕವಿತೆಗಳನ್ನು ಮಾತನಾಡಿಸಿ ಬಂದಿದ್ದೆವು. ಹಾಗಾಗಿ ಎಚ್ ಎಸ್ ರಾಘವೇಂದ್ರರಾವ್ ಒಂದು...
BREAKING NEWS: ವಾಮನ ಬೇಂದ್ರೆ ಇನ್ನಿಲ್ಲ..
ಹುಬ್ಬಳ್ಳಿಯಲ್ಲಿ ಹಿರಿಯ ಸಾಹಿತಿ ವಾಮನ ಬೇಂದ್ರೆ(೮೨) ನಿಧನ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ವಾಮನ ಬೇಂದ್ರೆ. ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ. ಶರ್ಮಾ ಕುಟೀರದಲ್ಲಿ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನ. ನಂತರ ಧಾರವಾಡದ ದ.ರಾ.ಬೇಂದ್ರ ನಿವಾಸದಲ್ಲಿ ಸಾರ್ವಜನಿಕ ದರ್ಶನ. ಸಂಜೆ ಧಾರವಾಡದ ನಿವಾಸದಿಂದ ಹೊರಟು...
