ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಗೀತಾ ಜಿ ಹೆಗಡೆ ಕಲ್ಮನೆ ಕವಿತೆ – ಕಾಲ…
ಗೀತಾ ಜಿ ಹೆಗಡೆ ಕಲ್ಮನೆ ಕವಿತೆ – ಕಾಲ…

ಗೀತಾ ಜಿ ಹೆಗಡೆ ಕಲ್ಮನೆ ಬಿಚ್ಚಿ ಬಿಸಾಕಲೆ ತೊಟ್ಟುಡುಗೆಈ ಸೆಖೆಗೆ ಕಂಕುಳು ಬೆವರಿ ಗಬ್ಬುನಾತನಿತ್ಯ ತಲೆ ಮಿಂದರೂ ಬಿಡದು ತುರಿಕೆಮೈ ಮನವೆಲ್ಲ ಸುಸ್ತೋ ಸುಸ್ತುಬೇಡಾ ಬೇಡಾ ಈ ಸೆಖೆಗಾಲ. ಈ ಮಳೆಗಾಲ ಎಲ್ಲಿ ನೋಡಿದರೂ ಗಿಜಿ ಗಿಜಿಹೊರಗೆ ಸುತ್ತಾಡಲು ಹೋಗುವಂತಿಲ್ಲಮನೆಯಲ್ಲಿ ಆಗಾಗ ಕರೆಂಟು ಖೋತಾಇನ್ನು ಮಾಡುವುದೇನು ನೆಟ್ಟಿಲ್ಲದೇಬೇಡಾ...

read more
ಎಸ್ ವಿ ಪ್ರಭಾವತಿ ಓದಿದ ‘ತಾನು ಕವಿತೆಯಾಗಿ ನನ್ನನ್ನು ಕವಿಯಾಗಿಸಿದಳು’
ಎಸ್ ವಿ ಪ್ರಭಾವತಿ ಓದಿದ ‘ತಾನು ಕವಿತೆಯಾಗಿ ನನ್ನನ್ನು ಕವಿಯಾಗಿಸಿದಳು’

ಎಸ್ ವಿ ಪ್ರಭಾವತಿ ಮೊದಲನೇ ಪಿಯುಸಿ ಯಿಂದಲೇ ನಾನು ಗಮನಿಸಿದಂತೆ ಕನ್ನಡ ಪಠ್ಯದ ಕವಿತೆ ಗಳ ಭಾಗದಲ್ಲಿ ಪಂಪ ಅಥವಾ ಕವಿರಾಜಮಾರ್ಗ, ರನ್ನ ಅಥವಾ ನಾಗ ಚಂದ್ರ, ವಚನಗಳು, ಹರಿಹರ ಅಥವಾ ರಾಘವಾಂಕ, ಕುಮಾರವ್ಯಾಸ ಅಥವಾ ಲಕ್ಷ್ಮೀಶ, ಮುದ್ದಣ, ನವೋದಯ, ನವ್ಯ, ದಲಿತ, ಸ್ತ್ರೀ ಸಂವೇದನೆ …… ಈ ಪ್ಯಾಟ್ರನ್ ಇರುವಂತೆ ತೋರುತ್ತಿತ್ತು. ಸ ಉಷಾ,...

read more
ಆರ್ ತಾರಿಣಿ ಶುಭದಾಯಿನಿ ಓದಿದ – ಎಸ್ ಜಿ ಸಿದ್ಧರಾಮಯ್ಯ ಅವರ ಆತ್ಮಕಥನ ‘ಯರೆಬೇವು’
ಆರ್ ತಾರಿಣಿ ಶುಭದಾಯಿನಿ ಓದಿದ – ಎಸ್ ಜಿ ಸಿದ್ಧರಾಮಯ್ಯ ಅವರ ಆತ್ಮಕಥನ ‘ಯರೆಬೇವು’

ಯರೆಬೇವು ‘ಬೋಧಿವೃಕ್ಷ’ವಾಗಿ ಬೆಳೆದ ಕಥೆ ಆರ್ ತಾರಿಣಿ ಶುಭದಾಯಿನಿ ‘ಯರೆಬೇವು’ ಎನ್ನುವುದು ಎಸ್.ಜಿ.ಸಿದ್ಧರಾಮಯ್ಯನವರ ಆತ್ಮಕಥನ. ಅಪ್ಪಟ ದೇಸಿ ಸಮಾಜದಿಂದ ಬಂದ ಎಸ್‌ಜಿಎಸ್‌ ಅವರು ತಮ್ಮ ಆತ್ಮಕಥನಕ್ಕೆ ನೆಲಮೂಲ ರೂಢಿಪದವನ್ನೇ ಆಯ್ದುಕೊಂಡಿದ್ದಾರೆ. ಯರೆಬೇವು ಎನ್ನುವುದು ಹೆಬ್ಬೇವು; ಅದರ ಗಾತ್ರ ಸಾದಾ ಬೇವಿನದಕ್ಕಿಂತ ಹಿರಿದಾಗಿದ್ದು...

read more
ಮುರಿದು ಬಿದ್ದ ವೀಣೆ…
ಮುರಿದು ಬಿದ್ದ ವೀಣೆ…

ಎನ್ ಶೈಲಜಾಹಾಸನ ಚಿಕ್ಕಂದಿನಿಂದಲೂ ನನಗೆ   ಸಂಗೀತ ಕಲಿತು, ಚೆನ್ನಾಗಿ ಹಾಡಿ ಎಸ್.ಜಾನಕಿನೊ, ಎಂ.ಎಸ್.ಸುಬ್ಬುಲಕ್ಷ್ಮಿನೊ ಆಗಬೇಕು ಅನ್ನೊ ಆಸೆ ಬೆಟ್ಟದಷ್ಟಿತ್ತು. ಆದರೆ  ನನ್ನಾಸೆನಾ  ಸಸಿಯಲ್ಲಿಯೇ ಚಿವುಟಿ ಹಾಕಿ, ಓದುವುದಷ್ಟೇ ಮುಖ್ಯ ಅನ್ನೊ ಹೆತ್ತವರ ಬಯಕೆ ನನ್ನನ್ನು ಕೇವಲ, ಕೇವಲ ಬಾತ್ ರೂಮ್ ಸಿಂಗರ್ ನನ್ನಾಗಿ ಮಾಡಿಬಿಟ್ಟಿತು....

read more
ಪದ್ಮಿನಿ ನಾಗರಾಜು ಹೊಸ ಕವಿತೆ – ದೇವಕನ್ಯೆ…
ಪದ್ಮಿನಿ ನಾಗರಾಜು ಹೊಸ ಕವಿತೆ – ದೇವಕನ್ಯೆ…

ಡಾ ಪದ್ಮಿನಿ ನಾಗರಾಜು ಮೋಹಕ ಮುಗಳುನಗೆದೇವಕನ್ಯೆಯಂತೆಕ್ಷಣದಲ್ಲಿ ಅಳುಮುಖಯಾವ ನೋವೋಮತ್ತೆಕೋ ಸಿಂಡರಿಕೆಅದೇನು ಕಂಡೋಕಣ್ಣು ಬಿಡಲೋಬೇಡವೋ ಎಂಬಭಾವ ಕ್ಷಣಕ್ಷಣಕೂಭಾವನಾಡಿಯಲಿನಿನ್ನೊಡನೆ ನಾತೇಲುತಿಹೆ ಹೊರ ಒಳಗಿನಮುಖವಾಡವಿಲ್ಲಕಾಣದ್ದು ಬೇಕಿಲ್ಲಈ ಕ್ಷಣಕ್ಕೆ ಬದುಕುವಮಗುವಂತೆ ನಾವಾಗುವನಿತ್ಯ ಸತ್ಯವಕೈಗೂಸು ಕಲಿಸುತಿದೆನಿನ್ನ ಮೌನದಭಾಷೆ...

read more
ದಸ್ತಗೀರ್ ದಿನ್ನಿ ಕವಿತೆ – ಪ್ರೀತಿಯ ಅರುಹುತಿದೆ…
ದಸ್ತಗೀರ್ ದಿನ್ನಿ ಕವಿತೆ – ಪ್ರೀತಿಯ ಅರುಹುತಿದೆ…

ದಸ್ತಗೀರ್ ದಿನ್ನಿ ಉದುರಿ ಬಿದ್ದ ಹೂವಿಗೆ ಬಾಧೆ ಕಾಡುತಿದೆತಡರಾತ್ರಿಯಲಿ ಜೀರುಂಡೆ ಜ್ವರದಿ ಬಳಲುತಿದೆ. ರಾಚುವ ಬಿಸಿಲಲೂ ಇರುವೆ ನಗೆ ಬೀರುತಿದೆದನಗಾಹಿಯ ಪಿಳ್ಳಂಗೋವಿ ಹಾಡಿಗೆ ಹಕ್ಕಿ ತಲೆದೂಗುತಿದೆ. ಮುಖದ ಸುಕ್ಕು ನೆನಪಿನ ಚಿತ್ರ ಬಿಡಿಸುತಿದೆಮರವನಪ್ಪಿದ ಬಳ್ಳಿ ಜೀವ ಪ್ರೀತಿಯ ಅರುಹುತಿದೆ. ಇಬ್ಬನಿಯ ಹಾದಿಯ ಬೆಳಗು ಬೆರಗಿನ ಹೂ...

read more
ಪ್ರದರ್ಶನವಾಗಿ ಗೆದ್ದು, ಕಲೆಯಾಗಿ ಸೋತಿರುವ ‘ಅಯೋಧ್ಯಾ ಕಾಂಡ’
ಪ್ರದರ್ಶನವಾಗಿ ಗೆದ್ದು, ಕಲೆಯಾಗಿ ಸೋತಿರುವ ‘ಅಯೋಧ್ಯಾ ಕಾಂಡ’

ಹೆಚ್ ಎಸ್ ರೇಣುಕಾರಾಧ್ಯ ಅಧಿಕಾರ ದಾಹದ ಏಕೈಕ ಕಾರಣಕ್ಕಾಗಿ ಅರಮನೆಗಳಲ್ಲಿ ಬಂಧು- ಬಾಂದವರ ಮಧ್ಯೆಯೇ ನಡೆಯುವ ಜಗಳ, ಮತ್ಸರ, ಕುದಿಯುವ ಅಸಹನೆ ಎಲ್ಲ ಕಾಲಕ್ಕೂ, ಎಲ್ಲ ದೇಶಕ್ಕೂ ಸಾರ್ವಕಾಲಿಕವಾದವು. ಇಂತಹ ಸಾರ್ವಕಾಲಿಕ ಸತ್ಯಗಳನ್ನು ಕಣ್ಣ ಮುಂದೆ ಕಟ್ಟಿಕೊಡುವ ಕಾವ್ಯ ವಾಲ್ಮೀಕಿ ರಾಮಾಯಣ. ಆ ವಾಲ್ಮೀಕಿ ರಾಮಾಯಣದ "ಆಯೋಧ್ಯ ಕಾಂಡ"...

read more
ದೋಸೆಯ ಆತ್ಮಕಥೆ…
ದೋಸೆಯ ಆತ್ಮಕಥೆ…

ಎ ಎನ್ ಪ್ರಹ್ಲಾದ್ ರಾವ್ ಪ್ರಪಂಚದ ಹಲವಾರು ಮಂದಿ ತಮ್ಮ ಆತ್ಮಚರಿತ್ರೆಯನ್ನು ಬರೆದಿರುವುದನ್ನು ನೊಡಿದ್ದೇವೆ. ಆದರೆ, ದೋಸೆಯೊಂದು ತನ್ನ ಆತ್ಮಕಥೆಯನ್ನು ನಿವೇದಿಸಿಕೊಂಡಿರುವುದನ್ನು ಯಾರೂ ಕೇಳಿರಲಾರರು. ದೋಸೆ ಯಾವ ಕಥೆ ಹೇಳೀತು ಎನ್ನಬೇಡಿ. ಏಕೆಂದರೆ ಈ ದೋಸೆಗೆ 80 ವರ್ಷ ವಯಸ್ಸು. ಲಕ್ಷಾಂತರ ಬಾರಿ ಕಾವಲಿಯ ಮೇಲೆ ಬೆಂದು ಬೆಂದು...

read more
ಪಿ ಪಿ ಉಪಾಧ್ಯ ಸರಣಿ ಕಥೆ 9 – ಶಾಮಣ್ಣನವರ ಸ್ಪೆಶಲ್ ಖುರ್ಚಿ…
ಪಿ ಪಿ ಉಪಾಧ್ಯ ಸರಣಿ ಕಥೆ 9 – ಶಾಮಣ್ಣನವರ ಸ್ಪೆಶಲ್ ಖುರ್ಚಿ…

ಪಿ ಪಿ ಉಪಾಧ್ಯ 9 ಶಾಮಣ್ಣನವರ ಸ್ಪೆಶಲ್ ಖುರ್ಚಿ ಶಾಮಣ್ಣನವರು ಸ್ವಂತಕ್ಕೆ ಮಾಡುವ ಖರ್ಚಿನ ವಿವರವೂ ಹಾಗೆಯೇ. ವರ್ಷಕ್ಕೆರಡು ಅಂಗಿ, ಪಂಚೆ. ಮನೆಯಲ್ಲಿ ಕೆಲಸದವರು ಒಗೆದು ಮಡಿ ಮಾಡುವ ವೈಖರಿಗೆ ತಿಂಗಳೊಳಗೇ ಅದರ ಹೊಸ ಹೊಳಪು ಹೋದರೂ ಅವರಿಗೆ ಅದರ ಚಿಂತೆಯಿಲ್ಲ. ಮುಂದಿನ ವರ್ಷ ಇನ್ನೆರಡು ಜೊತೆ ಹೊಸತು ತೆಗೆದುಕೊಳ್ಳುವವರೆಗೆ ಅದೇ. ಹಳೇ...

read more
ಸ್ಮಾರಕ ಆಗದ ಅ.ನ.ಕೃ ಮನೆಯ ದುರಂತ ಕತೆ…
ಸ್ಮಾರಕ ಆಗದ ಅ.ನ.ಕೃ ಮನೆಯ ದುರಂತ ಕತೆ…

ಆರ್ ಜಿ ಹಳ್ಳಿ ನಾಗರಾಜ್ ಕಾದಂಬರಿ ಸಾರ್ವಭೌಮ ಅ.ನ.ಕೃ ಅವರ ಹುಟ್ಟುಹಬ್ಬ ಇವತ್ತು. ಅವರು ವಾಸವಿದ್ದ ವಿಶ್ವೇಶ್ವರಪುರಂ ಮನೆ, ಬಾಟಾ ಚಪ್ಪಲಿ ಸಂಗ್ರಹದ ಮನೆ ಆಗಿತ್ತು! (೨೦೦೫). VRL ಸಂಸ್ಥೆಯ "ಉಷಾಕಿರಣ" ದೈನಿಕದಲ್ಲಿ ವರದಿಗಾರನಾಗಿದ್ದಾಗ ಈ ಬಗ್ಗೆ ತನಿಖಾ ವರದಿ ಮಾಡಿದೆ. ಎರಡೇ ದಿನದಲ್ಲಿ ಬೋರ್ಡ್ ನಾಪತ್ತೆ ಆಗಿ, ಪೇಪರ್ ಏಜನ್ಸಿ...

read more
ವಿಠಲ್ ಜೊತೆ ಸಹಯಾನ…
ವಿಠಲ್ ಜೊತೆ ಸಹಯಾನ…

ಉದಯ ಗಾಂವಕರ್ ಈ ಬಾರಿಯ ಸಹಯಾನ ಸಾಹಿತ್ಯೋತ್ಸವ ನಿರೀಕ್ಷೆಯಂತೆ ಭಿನ್ನವಾಗಿತ್ತು. ಭಿನ್ನವಾಗಿರಲು ಸಾಹಿತ್ಯ ಚರ್ಚೆಗಳು ಕಾರಣವಾಗಿರಲಿಲ್ಲ. ತುಂಬ ತುರ್ತಿನಲ್ಲಿರುವವನಂತೆ ನಾಡೆಲ್ಲ ಓಡಾಡಿಕೊಂಡಿದ್ದ ವಿಠಲ ಭಂಡಾರಿ ಈಗ ಶಾಂತವಾಗಿ ಮಲಗಿರುವ ಕೆರೆಕೋಣ ತೇವಗೊಂಡಿತ್ತು. ನನ್ನಂತೆ ಅಲ್ಲಿರುವ ಎಲ್ಲರಿಗೂ ಸಾಹಿತ್ಯ ಚರ್ಚೆಗಳಿಗಿಂತ ಆತನ...

read more
ಪಿ ಪಿ ಉಪಾಧ್ಯ ಸರಣಿ ಕಥೆ 8 – ಶಾಮಣ್ಣನವರು ಮೈ ಕೈ ಪರಚಿಕೊಳ್ಳುವುದೊಂದೇ ಬಾಕಿ…
ಪಿ ಪಿ ಉಪಾಧ್ಯ ಸರಣಿ ಕಥೆ 8 – ಶಾಮಣ್ಣನವರು ಮೈ ಕೈ ಪರಚಿಕೊಳ್ಳುವುದೊಂದೇ ಬಾಕಿ…

ಪಿ ಪಿ ಉಪಾಧ್ಯ 8 ಶಾಮಣ್ಣನವರು ಮೈ ಕೈ ಪರಚಿಕೊಳ್ಳುವುದೊಂದೇ ಬಾಕಿ ಎಂಟು ದಿನ ಕಳೆದುವು. ಹತ್ತು ದಿನಗಳೂ. ಯಾರೂ ಗಿರಾಕಿಗಳೇ ಬರಲಿಲ್ಲ. ಶಾಮಣ್ಣನವರ ಮನೆಯ ಹುಲ್ಲು ಕುತ್ತರಿ ಖಾಲಿಯಾದದ್ದೇ ಬಂತು. ಮನೆ ಕೆಲಸದವರು ಗದ್ದೆಯಂಚಿನ ಹುಲ್ಲು ಕೊಯ್ದು ಹೊರೆ ಹೊರೆ ಹೊತ್ತುಕೊಂಡು ಬಂದದ್ದೇ ಬಂತು. ಎಮ್ಮೆಗಳು ತಿಂದವು ಸೆಗಣಿ ಹಾಕಿದುವು. ಆ...

read more
ನೂತನ ದೋಶೆಟ್ಟಿ ಹೊಸ ಕವಿತೆ – ಅಮ್ಮ ಅರ್ಥ ಆಗಲು…
ನೂತನ ದೋಶೆಟ್ಟಿ ಹೊಸ ಕವಿತೆ – ಅಮ್ಮ ಅರ್ಥ ಆಗಲು…

ನೂತನ ದೋಶೆಟ್ಟಿ ಶಾಲೆಗೆ ಟೈಮಾಯ್ತು ಏಳುಅಮ್ಮ ಎಬ್ಬಿಸುತ್ತಿದ್ದಾಗಅವಳ ಮೇಲೆ ನಿದ್ದೆ ಕೆಡಿಸಿದ ಕೋಪ.ಸ್ಕೂಟಿಯಲ್ಲಿ ಗಡಬಡಿಸಿಮಗನ ಶಾಲೆ ತಲುಪಿದಾಗಮನೆಯ ಬಾಗಿಲಲ್ಲೇನೇತಾಡುತ್ತಿದ್ದ ಕೀಲಿಕೈಯಲ್ಲಿತರಕಾರಿ ಅರ್ಧ ಹೆಚ್ಚಿ ಗಡಬಡಿಸಿ ಬಂದುಏಳು ಮುಕ್ಕಾಲು ಆಯ್ತುಅಮ್ಮ ಕೊಟ್ಟ ಕೊನೇವಾರ್ನಿಂಗ್ ಸಿಲುಕಿ ಅಣಕಿಸಿತ್ತು ಅಮ್ಮನ ಧಸಭಸ...

read more
ಬದುಕಿನ್ನೂ ಬಾಕಿಯಿದೆ…
ಬದುಕಿನ್ನೂ ಬಾಕಿಯಿದೆ…

ಮುತ್ತು ಬಳ್ಳಾ ಕಮತಪುರ ಹರಿಯುವ ನದಿಯ ಸುಳಿಯಲಿ ಒಂಟಿತನ ಬದುಕಿನ್ನೂ ಬಾಕಿಯಿದೆ |ಮುಡಿಯುವ ಮಲ್ಲಿಗೆ ಘಮದಲಿ ಮೌನತನ ಬದುಕಿನ್ನೂ ಬಾಕಿಯಿದೆ || ಕರಗುವ ಕಣ್ಣೀರ ಹನಿಯಲಿ ನಿನ್ನತನ ಇನ್ನೂ ಜೀವಂತ ಉಳಿದುಕೊಂಡಿದೆ |ಮಾತಿಗೆ ನಡೆ ನುಡಿಗಳಿಂದ ಕಿವಿಯಾಗುವ ಗಟ್ಟಿತನ ಬದುಕಿನ್ನೂ ಬಾಕಿಯಿದೆ || ಸಹಿಸುವ ದಹಿಸುವ ನನ್ನನ್ನೊಳಗಿನ ಚಡಪಡಿಕೆ...

read more
ರಂಗಶಂಕರದಲ್ಲಿ ‘ಕೋವಿಗೊಂದು ಕನ್ನಡಕ’
ರಂಗಶಂಕರದಲ್ಲಿ ‘ಕೋವಿಗೊಂದು ಕನ್ನಡಕ’

ಕೋವಿ ಹಿಡಿದು ತನ್ನ ಶತೃವನ್ನು ಮುಗಿಸಲು ಹೊರಟ ಮುದುಕನೊಬ್ಬನಿಗೆ ಕಣ್ಣಿನ ದೃಷ್ಟಿಯೇ ಸರಿಯಿಲ್ಲ. ಶತೃವನ್ನು ಮುಗಿಸಲು ದೃಷ್ಟಿ ಸರಿಯಾಗಬೇಕು, ಹಾಗಾಗಿ ಆತನಿಗೊಂದು ಕನ್ನಡಕ ಬೇಕು. ಮೊಮ್ಮಗನೊಂದಿಗೆ ಕಣ್ಣಿನ ವೈದ್ಯನ ಬಳಿ ಬರುವ ಮುದುಕ ತನ್ನ ದೃಷ್ಟಿ ಸರಿಪಡಿಸಿಕೊಂಡನೇ? ನಿಜಕ್ಕೂ ಆತನ ಸಮಸ್ಯೆ ಕನ್ನಡಕದ್ದೇ? ಕನ್ನಡಕ ಆತನಿಗೆ...

read more
ಬೆಂಗಳೂರು ಕಿರುನಾಟಕೋತ್ಸವ-2022 ರ ಫಿನಾಲೆ…
ಬೆಂಗಳೂರು ಕಿರುನಾಟಕೋತ್ಸವ-2022 ರ ಫಿನಾಲೆ…

ಪ್ರವರ ಥಿಯೇಟರ್ ಮತ್ತು ಅಶ್ವಘೋಷ ಥಿಯೇಟರ್ ಟ್ರಸ್ಟ್ ಜಂಟಿ ಸಹಯೋಗದೊಂದಿಗೆ ಬೆಂಗಳೂರು ಕಿರುನಾಟಕೋತ್ಸವ-2022 ಆಯೋಜಿಸಿದ್ದು, ರಂಗಕರ್ಮಿಗಳನ್ನು ಒಂದೆಡೆ ಸೇರಿಸಿ ಕಿರುನಾಟಕಗಳನ್ನು ಪ್ರದರ್ಶಿಸಲು ಒಂದು ವೇದಿಕೆಯಾಗಿದೆ, ಜೊತೆಗೆ ಕೋವಿಡ್‌ನಿಂದ ಬಳಲಿದ್ದಂತಹ ರಂಗಭೂಮಿ ಚಟುವಟಿಕೆಗಳಿಗೆ ಹೊಸಚೈತನ್ಯ ತುಂಬಿ ಪ್ರೇಕ್ಷಕರನ್ನು ಮತ್ತೆ...

read more
ಕಿರಣ ವಲ್ಲೇಪುರೆ ಓದಿದ ‘ಹೊಸ ದಿಗಂತದ ಹಾಯಿಕುಗಳು’
ಕಿರಣ ವಲ್ಲೇಪುರೆ ಓದಿದ ‘ಹೊಸ ದಿಗಂತದ ಹಾಯಿಕುಗಳು’

ಕಿರಣ ವಲ್ಲೇಪುರೆ ಕನ್ನಡದ ಹಿರಿಯ ಲೇಖಕರು ಹಾಗೂ ಕಲಾವಿದರು ಆದ ಶ್ರೀ ಶಂಭುಲಿ೦ಗ ವಾಲ್ದೊಡ್ಡಿ ಸರ್ ಅವರು ಬರೆದ ‘ಹೊಸ ದಿಗಂತದ ಹಾಯಿಕುಗಳು’ ಎಂಬ ಕೃತಿಯು ಸಹೃದಯರಲ್ಲಿ ಸಾಮರಸ್ಯದ ಭಾವನೆಯನ್ನು ಮೂಡಿಸುತ್ತದೆ. ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಜಪಾನಿ ಮೂಲಕ ಕನ್ನಡಕ್ಕೆ ಪರಿಚಯವಾದ ‘ಹಾಯಿಕು’ ಕನ್ನಡದ ಪ್ರಮುಖ ಕಾವ್ಯ...

read more
ತಮ್ಮಣ್ಣ ಬೀಗಾರ ಓದಿದ ‘ಅಪ್ಪನು ಕೊಡಿಸಿದ ಮೊದಲ ಪುಸ್ತಕ’
ತಮ್ಮಣ್ಣ ಬೀಗಾರ ಓದಿದ ‘ಅಪ್ಪನು ಕೊಡಿಸಿದ ಮೊದಲ ಪುಸ್ತಕ’

ಖುಷಿ ಹಾಗೂ ಅರಿವಿನ ಪರಿಧಿ ಹೆಚ್ಚಿಸುವ ಪುಸ್ತಕ ತಮ್ಮಣ್ಣ ಬೀಗಾರ ಪಟ ಪಟ ಮಳೆ ಹನಿಗಳು ಉದುರುತ್ತವೆ. ಒಣಗಿದ ಮಣ್ಣು ಹಸಿಯಾಗುತ್ತ ಘಮಘಮಿಸ ತೊಡಗುತ್ತದೆ. ನಾವು ಮಕ್ಕಳಾಗಿದ್ದಾಗ ಮೊದಲ ಮಳೆಯ ಸಂಭ್ರಮದಲ್ಲಿ ಒಂದಾಗುತ್ತಿದ್ದೆವು. ಮಿಂಚು ಗುಡುಗುಗಳ ಆರ್ಭಟಕ್ಕೂ ಹೆರುತ್ತಿರಲಿಲ್ಲ. ಕತ್ತಲು ಕವಿದು ಗಾಳಿ ಬೀಸಿ ಚಕ್ ಚಕ್ ಎಂದು...

read more
ರೇವಣಸಿದ್ದಪ್ಪ ಜಿ ಆರ್ ಕವಿತೆ – ಅಪರಿಚಿತರು…
ರೇವಣಸಿದ್ದಪ್ಪ ಜಿ ಆರ್ ಕವಿತೆ – ಅಪರಿಚಿತರು…

ರೇವಣಸಿದ್ದಪ್ಪ ಜಿ ಆರ್ 1. ಇವ ಬಾರಿನಲ್ಲಿ ಕುಳಿತುಬೀರು ಹೀರುತ್ತಿದ್ದ.ಎದುರು ಕುಳಿತಿದ್ದಅಪರಿಚಿತ ಕುಡುಕನೊಬ್ಬಪರಿಚಿತ ನಗೆ ನಕ್ಕುಒಂದು ಸಿಗರೇಟಿಗೆಬೇಡಿಕೆ ಇಟ್ಟ.ಬೇಡಿದವನುಭಿಕಾರಿಯಾಗಿರಲಿಲ್ಲ.ಬಾಲ್ಯದ ಸ್ನೇಹಿತನಿಗೆಕೊಡುವಂತೆಇವ ಅವಗೆಸಿಗರೇಟೊಂದ ಕೊಟ್ಟುಪುಳಕಿತನಾದ! ಸುರುಳಿಯಾಗಿ ತೇಲುತ್ತಿದ್ದಹೊಗೆಯಂತೆ ಹರಿಯತೊಡಗಿತ್ತುಮಾತಿನ...

read more

Pin It on Pinterest

Share This