ಪ್ರಕೃತಿಯ ಮಡಿಲಲ್ಲಿ ಜ್ಞಾನ ದೇಗುಲ…

ಕಾವ್ಯಶ್ರೀ ಕಲ್ಮನೆ

ಪ್ರಸ್ತುತ ದಿನಗಳಲ್ಲಿ ವಿದ್ಯೆಯೆನ್ನುವುದು ಕಾಂಕ್ರೀಟ್ ಗೋಡೆಗಳ ನಡುವೆ ಬಂಧಿಯಾಗಿದೆ. ಜೀವವಿಲ್ಲದ ಕಟ್ಟಡಗಳಲ್ಲಿ ವಿದ್ಯಾಭ್ಯಾಸ ನಗರಗಳಲ್ಲಿ ಅನಿವಾರ್ಯ. ಹಸಿರು ಎನ್ನುವುದು ಇಂದಿನ ವಿದ್ಯಾರ್ಥಿಗಳಿಗೆ ಮರೀಚಿಕೆ ಎಂದರೆ ತಪ್ಪಾಗಲಾರದು. ಪ್ರಕೃತಿಯ ಮಡಿಲಲ್ಲಿ, ಬೆಟ್ಟ ಗುಡ್ಡಗಳಿಂದ ಆವೃತವಾದ, ಪ್ರಾಣಿ ಪಕ್ಷಿಗಳ ನಡುವೆ ಮಾಡುವ ವಿದ್ಯಾಭ್ಯಾಸದ ಅನುಭವ ನಮ್ಮ ಜೀವನವಿಡಿ ಹಚ್ಚಹಸಿರಾಗಿರುತ್ತದೆ. ಇದೆ ಹಾದಿಯಲ್ಲಿ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಶಿಕ್ಷಣ ಕ್ಷೇತ್ರದಲ್ಲಿ ಹೆಸರುಗಳಿಸಿದಂತೆ ನ್ನ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ.

ದೇಶ ವಿದೇಶಗಳಿಂದ ಅದ್ಯಯನಕ್ಕಾಗಿ ವಿದ್ಯಾರ್ಥಿಗಳು ಇಲ್ಲಿಗೆ ಬರುವ ಮುಖ್ಯ ಕಾರಣ ಕುವೆಂಪು ವಿಶ್ವವಿದ್ಯಾಲಯದ ಸುಂದರ ಪ್ರಾಕೃತಿಕ ಸೌಂದರ್ಯ ಮತ್ತು ಗುಣಮಟ್ಟದ ಶಿಕ್ಷಣವೆಂದರೆ ತಪ್ಪಾಗಲಾರದು. ಶಂಕರಘಟ್ಟದಲ್ಲಿ ಇರುವ ಕುವೆಂಪು ವಿಶ್ವವಿದ್ಯಾಲಯದಲ್ಲಿ ಭೇಟಿ ನೀಡಿ ತಕ್ಷಣ ಮೊದಲು ಎಲ್ಲರನ್ನು ಸ್ವಾಗತಿಸೋದು ಸಾಲುಗಟ್ಟಿ ನಿಂತಿರುವ ಮರಗಳು ನಾವು ಹೋಗೋ ಘಳಿಗೆಯಲ್ಲಿ ಒಂದೊಮ್ಮೆ ಗಾಳಿ ಬೀಸಿದರೆ ಸಾಕು ಮರಗಳು ಗಿಡಗಳು ನಾಚಿ ನಮ್ಮ ಕಣ್ಣನ್ನು ಅವುಗಳತ್ತ ಸೆಳೆಯುವಂತೆ ಮಾಡುತ್ತವೆ.         

ಸರತಿ ಸಾಲು ಎಂದರೆ ಅದನ್ನು ನೋಡಲು ಒಂಥರಾ ಖುಷಿ ಅಂದು ಸಾಲುಮರದ ತಿಮ್ಮಕ್ಕ ಮಾಡಿದ ಕೆಲಸಕ್ಕೆ ಇಂದು ಎಲ್ಲಾ ಮರಗಿಡಗಳು ಸರತಿ ಸಾಲಲ್ಲಿ ಬೆಳೆಯುತ್ತಿವೆ. ಈ ನನ್ನ ಬರಹದ ಮೂಲಕ ಸಾಲಾಗಿ ಗಿಡ ನೆಡಲು ಪ್ರಾರಂಭಿಸಿದವರಿಗೆ ನಮಿಸುವೆ. ಅದೇನೆ ಇರಲಿ ನಮ್ಮ ವಿವಿಯಲ್ಲಿ ಸಾಲುಗಟ್ಟಿ ನಿಂತಿರುವ ಮರಗಳತ್ತ ಮತ್ತೆ ಬರೋಣ ಮಳೆಗಾಲ ಬಂದರೆ ಸಾಕು, ಮೈ ತುಂಬಾ ಬಟ್ಟೆ ಧರಿಸಿ, ಹಸಿರಿನಿಂದ ಕಂಗೊಳಿಸುತ್ತವೆ.

ಎಲೆಗಳ ತುದಿಯಿಂದ ಮಳೆ ಹನಿಯು ಚುಮ ಚುಮ ಬಿದ್ದಾಗ ಆಗುವ ಇರಿಸುಮುರಿಸಿನ ಅನುಭವವೇ ಬೇರೆ! ನಮ್ಮಂತೆ ಕುಳ್ಳಗಿರೋ ಗಿಡ ಮರಗಳು ಹಾದು ಹೋಗೊ ದಾರಿ ಮಧ್ಯೆ ಇದ್ದರೆ ನಮ್ಮ ನೇರಕ್ಕೆ ಬಂದು ಕೆನ್ನೆ ಸವರಿ ಹೋಗುತ್ತವೆ. ಮೊದ ಮೊದಲು ಬೀಳೊ ಮಳೆ ಹನಿಯನ್ನು ಕೇವಲ ಮನುಷ್ಯ ಮಾತ್ರ ಸಂತೋಷ ಪಡದೇ ಮರಗಿಡಗಳು ಮಳೆಹನಿಯನ್ನು ಪ್ರೀತಿಯಿಂದ ಸ್ವೀಕರಿಸಿ ಖುಷಿಯಲ್ಲಿ ಸ್ನಾನ ಮಾಡಿ ನರ್ತಿಸುತ್ತವೆ.

ಗಿಡ ಮರಗಳ ನರ್ತನ ಯಾರಿಗೆ ತಾನೇ ಇಷ್ಟ ಆಗೋಲ್ಲ ನಮ್ಮ ವಿವಿಯಲ್ಲಿ ಹಸಿರಿಂದ ಮಾತ್ರ ಕಂಗೊಳಿದೇ ಕೆಂಪು, ಹಳದಿ ಬಣ್ಣದ ಎಲೆಗಳ ತಬ್ಬಿಕೊಳ್ಳುವಂತೆ ಮಾಡುತ್ತವೆ. ಒಂದು ಸಾವಿನ ಹಿಂದೆ ಒಂದು ಹುಟ್ಟು ಇದ್ದೇ ಇರುತ್ತದೆ. ಹಾಗೆ ಚಳಿಗಾಲದಲ್ಲಿ ಉದುರಿದ ಎಲೆಗಳು ವಸಂತ ಮಾಸದಲ್ಲಿ ಹೊಸ ಜನ್ಮ ಪಡೆದು ಮತ್ತೆ ತನ್ನವರತ್ತ ಸೇರುತ್ತದೆ. 

ಕುವೆಂಪು ವಿವಿ ದಟ್ಟ ಪ್ರಕೃತಿ ಮಡಿಲು ಮಧ್ಯೆದಲ್ಲಿ ಎನ್ನುವುದಕ್ಕೆ ಸುತ್ತಲು ಹಸಿರಿನಿಂದ ಕಂಗೊಳಿಸು ಮರಗಿಡಗಳೇ ಸಾಕ್ಷಿ. ಪಾತಾಳದಿಂದ ಗುಡ್ಡ ಹತ್ತಿ ಬರುವಾಗ ಎಲ್ಲರಿಗೂ ಆಯಾಸ ಆಗುವುದು ಸಹಜ ಹಾಗೆನೇ ನಮ್ಮ ವಿವಿ ಹತ್ತಿರದ ಮೈನ್ ರೋಡ್‍ನಿಂದ ತರಗತಿಗಳ ವಿಭಾಗಕ್ಕೆ ಗುಡ್ಡ ಹತ್ತುವಂತೆ ಹತ್ತಬೇಕು ಆಯಾಸದಿಂದ ಕಡಿಮೆ ಅಂದರೂ ಐದು ನಿಮಿಷ ನಡೆಯಲೇಬೆಕು ಎಷ್ಟೇ ಆಯಾಸ ಇದ್ದರೂ ಕೈಬೀಸಿ ಕರೆಯುವ ಮರಗಳನ್ನು ನೋಡುತ್ತಾ ಗಾಳಿಯನ್ನು ಆನಂದಿಸುತ್ತಾ ಹೋದರೆ ನಮ್ಮ ವಿಭಾಗ ದೂರ ಇದೆ ಎಂದು ಅನಿಸೋದೆ ಇಲ್ಲ. 

ಚಳಿಗಾಲದಲ್ಲಿ ವಿವಿಯನ್ನು ನೋಡುತ್ತಿದ್ದರೆ ಒಂದೊಮ್ಮೆ ಚಿಕ್ಕಮಗಳೂರು ನೆನಪಾಗುವುದು ಇತ್ತಿಚಿನ ದಿನಗಳಲ್ಲಿ ನೈಜ್ಯತೆಯ ನೆರಳಿಗೂ ಕೃತಕ ಪರಿಹಾರ ಹುಡಕಾಬೇಕಾಗಿದೆ. ಆದರೆ ನಮ್ಮ ವಿವಿಯಲ್ಲಿ ನೆರಳಿನ ಅನುಭವಕ್ಕೆ, ಹಿತವಾದ ಮನಸ್ಸಿಗೆ ಮುದ ನೀಡುವ ವಾತವಾರಣಕ್ಕೆ ಯಾವುದೇ ತೊಂದರೆ ಇಲ್ಲ. ಕ್ಯಾಂಪಸ್ ಎಲ್ಲಿ ಕಣ್ಣು ಹಾಯಿಸಿದರೂ ಇಂದಿಗೂ ವಾಹನಗಳಿಗೆ, ಮನುಷ್ಯನಿಗೆ ನೆರಳಾಗಿ, ಮಂಗಗಳಿಗೆ, ಚಿಲಿಪಿಲಿಗುಟ್ಟುವ ಹಕ್ಕಿಗಳಿಗೆ ಆಸರೆಯಾಗಿ, ಬಾಯಿ ಮೇಲೆ ಬೆರಳು ಇಡುವಂತೆ ಬೆಳೆದು ನಿಂತಿರುವ ಆಲದ ಮರಗಳು.     

ಮರಗಿಡ ಅಂದರೆ ಆಶ್ರಯ ನೆರಳಲ್ಲವೇ… ಅಷ್ಟೇ ಅಲ್ಲದೇ ಅಕ್ಕ ಪಕ್ಕದಲ್ಲಿರುವ ವಿವಿಧ ಮರಗಳು ಫೋಟೋಗ್ರಾಫಿಗೆ ಸಾಕ್ಷಿಯಾಗಿ ಬಣ್ಣ ಬಣ್ಣದ ಎಲೆಗಳನ್ನು ಮರಗಳು. ಸಿಟಿಯಲ್ಲೆ ಹುಟ್ಟಿ ಬೆಳೆದ ಕೆಲವರಿಗೆ ಬಣ್ಣದ ಎಲೆ ಮರಗಳ ನೋಡಿ ಅದರೊಂದಿಗೆ ಬಿಲ್ಡಪ್ ನ ಸೇಲ್ಫಿ ಬೇರೆ. ನಮ್ಮ ವಿವಿ ಗೆ ಕಳೆಯೇ ಅಲ್ಲಿರುವ ಮರಗಳ ಸಾಕ್ಷಿ.

ಒಂದು ಖುಷಿ ವಿಷಯ ಅಂದರೆ ಹಚ್ಚ ಹಸಿರಿಂದ ಕೂಡಿರುವ ಕ್ರೂರ ಮನುಷ್ಯ ಕಣ್ಣು ಬಿದ್ದಿಲ್ಲ ಎಂದು. ಅಷ್ಟೇ ಯಾಕೆ ಮಳೆಗಾಲದಲ್ಲೂ ಸಹಕಾರಿ ವಿವಿಯ ಒಳಗೆ ಹೋಗೊ ದಾರಿಯಲ್ಲಿ ಮಧ್ಯದಲ್ಲಿ ಮಳೆ ಬಂದರೆ ಸ್ವಲ್ಪ ಹೊತ್ತಿನ ಮಟ್ಟಿಗೆ ಆಶ್ರಯಕ್ಕೆ ನೆರವಾಗುವುದು. ಬೇಸಿಗೆಯಲ್ಲಿ ಬಿಸಿಲು ಎಂದು ಬೈದುಕೊಳ್ಳುವವರಿಗೆ ಅಲ್ಲೂ ಆಸರೆಯಾಗುತ್ತವೆ. ಮಿನಿ ಲೇಖರಿಗೆ, ಪ್ರೇಮಿಗಳಿಗೆ, ಸ್ನೇಹಿತರ ಕವನದ ಸಾಲುಗಳಿಗೆ ಸ್ಪೂರ್ತಿಯಾಗಿವೆ. ಹೀಗೆ ಹೇಳುತ್ತಾ ಹೋದರೆ ಒಬ್ಬೊಬ್ಬರಿಗೂ ಒಂದೊಂದು ರೀತಿಯಾಗಿ ಕ್ಯಾಂಪಸ್ ಒಳಗಿನ ಮರಗಳು ಸಾಕ್ಷಿಯಾಗಿವೆ.

‍ಲೇಖಕರು Admin

April 4, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: