ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ರವೀಂದ್ರ ಕಲಾಕ್ಷೇತ್ರದಲ್ಲಿ ಕುಡ್ರ್ ವಾತಕತ..
ಸಪ್ನ ‘ಅವಧಿ’ ಟಾಪ್ ಟೆನ್
ಪುಸ್ತಕ ಅಂಕಣ – ‘ದೇವದಾಸಿಯ ಮಗಳ ಬದುಕಿನ ಸಂಗ್ರಾಮ’
ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...
ಬರಿದಾಗುವಿಕೆಯ ಬೆರಗು ಮತ್ತು ಅರಿವಿನ ಬಯಲು..
ಜಿ ಪಿ ಬಸವರಾಜು ಅವರ ‘ಮುಗಿದ ಹಾಡಿನ ಖಾಲಿ ರಾಗ' ಈ ಕೃತಿಯ ಕುರಿತ ನಾಮದೇವ ಕಾಗದಗಾರ ಅವರ ಬರಹ ಇಲ್ಲಿದೆ. -ನಾಮದೇವ ಕಾಗದಗಾರ ಜಿ.ಪಿ. ಬಸವರಾಜು ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ಮೌನ ಮತ್ತು ಚಿಂತನೆಗಳ ಮೂಲಕವೇ ಮಾತಾಡುವ ಕವಿ. ‘ಮುಗಿದ ಹಾಡಿನ ಖಾಲಿ ರಾಗ' ಕವನ ಸಂಕಲನವು ವರ್ತಮಾನದ ತಲ್ಲಣಗಳಿಗೆ ದಾರ್ಶನಿಕ ಸ್ಪರ್ಶ ನೀಡುವ...
‘ಪುಟ್ಬಾಲ್ ತೆರ್ಪಿ’
-ರಾಜೇಶ್ವರಿ ಹುಲ್ಲೇನಹಳ್ಳಿ "ಅಕ್ಕಾ ಅಕ್ಕಾ, " "ಯಾರೂ" "ನಾನು ಗಂಗಿ" "ಬಂದೆ...." ಎಂದು ಬಾಗಿಲು ತೆಗೆದ ಶುಭ "ಹೋ ಗಂಗಿ ನೀನಾ? ಈಗ ಬೆಳಗಾಯ್ತಾ ನಿನಗೆ ?." "ಅಯ್ಯೋ ನಿಮಿಗಾದಾಗ್ಲೇ ನಂಗೂ ಬೆಳಕಾತು ನನ್ಗೆನ್ ಬ್ಯಾರೆ ಸೂರಪ್ಪ ಇದಾನಾ?. ಯಾಕಿಂಗೆಳ್ತೀರಾ ಅಕ್ಕೋರೆ.," "ಅಲ್ಲಾ ಬೆಳಗ್ಗೆ ಏಳೂವರೆಗೆ ಬರ್ಬೇಕಾದವಳು ಈಗ...
ನನ್ನನ್ನೆ ನಾ ಮತ್ತೆ ಮತ್ತೆ ಹುಡುಕುತ್ತೇನೆ..
-ಸರಸ್ವತಿ ಕೆ ನಾಗರಾಜ್ ಒಮ್ಮೊಮ್ಮೆ ನಾ ಬರೆಯಲು ಕುಳಿತಾಗ,ಪೆನ್ನಿಗಿಂತ ಮೊದಲು ಮೌನವೇ ಹರಿದುಬರುತ್ತದೆ.ಹಾಳೆಯ ಮೇಲಿನ ಖಾಲಿ ಜಾಗದಲ್ಲಿ,ಮನದ ಮಾತುಗಳು ನೆರಳಾಗಿ ನಿಂತುಕೊಳ್ಳುತ್ತವೆ. ಹೇಳದೆ ಉಳಿದ ಕನಸುಗಳು,ಹಾಳೆಯ ಮೇಲೆ ಉಸಿರಾಡುತ್ತವೆ.ಕಳೆದುಹೋದ ಕ್ಷಣಗಳ ನೆರಳು,ಮತ್ತೆ ನೆನಪಾಗಿ ಕುಳಿತುಕೊಳ್ಳುತ್ತದೆ. ಒಮ್ಮೊಮ್ಮೆ ನಾ ಬರೆಯಲು...
ಬೀಗ ಜಡಿಯಬೇಕು..
-ನೂತನ ದೋಶೆಟ್ಟಿ ಕಳೆದು ಹೋಗಿಬಿಡಬೇಕು ಹೊದಿಕೆಯನು ಕೊಡವಿ ಮಡಚಿಟ್ಟಂತೆಬಾಗಿಲೆದುರ ಕಾಲೊರೆಸನ್ನು ಝಾಡಿಸಿ ಇಟ್ಟಂತೆಕೆಲವೊಮ್ಮೆ ನಮ್ಮನ್ನೇ ಒಳಗೆ ಕೂಡಿಟ್ಟುಬೀಗ ಜಡಿಯಬೇಕು. ದಿನವೂ ಸವೆಸಿದ ಅದೇ ರಸ್ತೆಯ ಮಗ್ಗುಲಲ್ಲಿಸುಡು ಮಧ್ಯಾನ್ಹ ಮೂಡುವ ಕಾಮನಬಿಲ್ಲುತುಂತುರು ಹನಿಯಾಗಿ ಮನಸ ತೋಯಿಸುವರಮ್ಯ ಕ್ಷಣ ಅದು ಅರಿತವರ ನಡುವೆ ಹೆಣಗಿದ...
ಎಚ್ ವಿ ಸಾವಿತ್ರಮ್ಮ ಪ್ರಶಸ್ತಿಗೆ ಕೃತಿಗಳ ಆಹ್ವಾನ..
ಕರ್ನಾಟಕ ಲೇಖಕಿಯರ ಸಂಘವು 2025 ನೆಯ ಸಾಲಿನ ಎಚ್. ವಿ. ಸಾವಿತ್ರಮ್ಮ ಪ್ರಶಸ್ತಿಗೆ ಲೇಖಕಿಯರಿಂದ ಅನುವಾದ ಸಾಹಿತ್ಯದ ಕೃತಿಗಳನ್ನು ಆಹ್ವಾನಿಸಿದೆ. ಯಾವುದೇ ಭಾಷೆಯಿಂದ ಕನ್ನಡಕ್ಕೆ ಅನುವಾದವಾದ ಕೃತಿಯಾಗಿರಬೇಕು. ಮೂರು ವರ್ಷದಲ್ಲಿ ಅಂದರೆ 2023, 2024 ಅಥವಾ 2025 ನೆಯ ಸಾಲಿನಲ್ಲಿ ಪ್ರಕಟಗೊಂಡ ಕೃತಿಗಳನ್ನು ಕಳುಹಿಸಬಹುದಾಗಿದೆ....
‘ಮೇ ದಿನ’ ಕೇವಲ ದಿನಾಚರಣೆಯಲ್ಲ ಹುತಾತ್ಮರ ಮಹಾನ್‌ಗಾಥೆ..
ಇಂದು ಕಾರ್ಮಿಕರ ದಿನಾಚರಣೆ ಹಿನ್ನೆಲೆ 2018ರಲ್ಲಿ ಪ್ರಕಟವಾದ ಕೆ ಮಹಾಂತೇಶ್ ಅವರ 'ಒಡಲಾಳದ ಕಥನಗಳು' ಕೃತಿಯಿಂದ ಒಂದು ಬರಹ ಇಲ್ಲಿದೆ. -ಕೆ ಮಹಾಂತೇಶ್ 1890 ರಿಂದ ಇಡೀ ಜಗತ್ತಿನಾದ್ಯಂತ ಆಚರಿಸಲ್ಪಡುವ ಕಾರ್ಮಿಕರ ದಿನಾಚರಣೆ ಅದೊಂದು ಅಂತರಾಷ್ಟ್ರೀಯ ಮಹತ್ವದ ದಿನ ಮಾತ್ರವಲ್ಲ ಚಾರಿತ್ರಿಕವಾಗಿ ಒಂದು ದೀರ್ಘ ಚರಿತ್ರೆಯನ್ನೇ...
ಜಗತ್ತೆಂದರೆ ಅಷ್ಟೇ..
-ಬಸವರಾಜ ಸಾದರ ಶಹರದ ಮನೆಗಳು ಎಲ್ಲಿ ನೋಡಿದಲ್ಲೆಲ್ಲಮುಚ್ಚಿದ ಬಾಗಿಲುಗಳೇ ಈ ಶಹರಗಳಲ್ಲಿ!ಹೇಗೆ ಬರಬೇಕು ಹೊರಗಿನ ತಿಳಿಗಾಳಿ ಒಳಗೆ,ಹೇಗೆ ಹೋಗಬೇಕು ಒಳಗಿನ ಕೊಳೆಗಾಳಿ ಹೊರಗೆ? ಭಿನ್ನವಲ್ಲ ಬಾಗಿಲಿಗಿಂತ ಕಿಟಕಿಗಳ ಮಾತೂ,ಕಾಣಿಸಬಹುದು ಆಚೀಚಿನ ದೃಶ್ಯಹಣಕದು ಹವೆ ಮಾತ್ರ, ಗಾಜಿನ ಪಡಕುಗಳ ದಾಟಿ,ಗೆರೆ ಬಿರುಕುಗಳೂ ಇರದ ಚೌಕಟ್ಟುಗಳ...
ಯಾರು ಹಿತವರು…
-ಬಸವಣ್ಣೆಪ್ಪ ಕಂಬಾರ ಖ್ಯಾತ ಬಹುಭಾಷಾ ಚಿತ್ರನಟ ದ್ವಾರಕನಾಥ ದಿನಪತ್ರಿಕೆಯಲ್ಲಿ ತನ್ನ ಮುಂದಿನ ಚಿತ್ರದ ಕುರಿತು ಫಿಲ್ಮಬೀಟ್ ಅಂಕಣದಲ್ಲಿ ಡಾ.ಸ್ವಾಮಿಯವರು ಬರೆದಿರುವ ಲೇಖನ ಓದುತ್ತಿರುವಾಗ ಸೆಕ್ರೆಟರಿ ಸೆಲ್ವಂ ಎರಡು ಸಲ ಬಾಗಿಲ ತನಕ ಬಂದು ಇಣುಕಿ ನೋಡಿ ಹಿಂತಿರುಗಿದನ್ನು ಈತ ಗಮನಿಸದ. ಪತ್ರಿಕೆ ಓದುವದನ್ನು ಕ್ಷಣ ನಿಲ್ಲಿಸಿ...
ಆರ್. ಪೂರ್ಣಿಮಾ ಪತ್ರಕರ್ತೆಯರ ಸಂಘದ ನೂತನ ಅಧ್ಯಕ್ಷೆಯಾಗಿ ಆಯ್ಕೆ..
ಕರ್ನಾಟಕ ಪತ್ರಕರ್ತೆಯರ ಸಂಘದ ನೂತನ ಅಧ್ಯಕ್ಷೆಯಾಗಿ ಹಿರಿಯ ಪತ್ರಕರ್ತೆ ಡಾ. ಆರ್. ಪೂರ್ಣಿಮಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಉಪಾಧ್ಯಕ್ಷೆಯಾಗಿ ಎನ್.ವಿ. ಸೌಮ್ಯರಾಣಿ, ಪ್ರಧಾನ ಕಾರ್ಯದರ್ಶಿಯಾಗಿ ಮಾಲತಿ ಭಟ್, ಜಂಟಿ ಕಾರ್ಯದರ್ಶಿಯಾಗಿ ಡಿ. ಯಶೋದಾ, ಖಜಾಂಚಿಯಾಗಿ ವಾಣಿಶ್ರೀ ಜೆ.ಎನ್., ಕಾರ್ಯಕಾರಿ ಸಮಿತಿ ಸದಸ್ಯರಾಗಿ...
ಮಕ್ಕಳ ಬಣ್ಣದ ಲೋಕಕ್ಕೆ ಜೀವ ತುಂಬುವ ಕಥೆಗಳು..
ಸರಸ್ವತಿ ಭೋಸಲೆ ಅವರ ಮಕ್ಕಳ ಕಥಾ ಸಂಕಲನ 'ದೇವರ ದುಡ್ಡು' ಈ ಕೃತಿಯ ಕುರಿತ ಶ್ರೀಧರ ಗಸ್ತಿ ಅವರ ಬರಹ ಇಲ್ಲಿದೆ. -ಶ್ರೀಧರ ಗಸ್ತಿ ಮಕ್ಕಳ ಮನಸ್ಸು ಎಂದರೆ ಒಂದು ಅದ್ಭುತ ಲೋಕ. ಅದು ಗಾಜಿನಂತೆ ಪಾರದರ್ಶಕ, ಮಣ್ಣಿನಂತೆ ಮೃದು. ಅಲ್ಲಿ ಏನು ಬಿತ್ತಿದರೂ ಅದು ಪ್ರೀತಿಯಿಂದ ಮೊಳಕೆಯೊಡೆಯುತ್ತದೆ. ಮುದ್ದಾದ ನಗುವಿನಿಂದ ಕಣ್ಣೀರಿನ...
ಗಡಿಯೊಳಗೇ ಸಿಕ್ಕಿ ಸೆಣಸಾಡುವುದು..
-ಜಿ ಪಿ ಬಸವರಾಜು ಕೊನೆ ಎಂಬುದು… ಗೋಡೆಗಳೊ ಕನ್ನಡಿಗಳೊ ತಿಳಿಗೊಳಗಳೊ,ಗೋಡೆಯ ಒಡೆದರೆ ಕಾಣುವುದಿಲ್ಲ ನೀನುಕನ್ನಡಿಯು ಚೂರಾದರೆ ನೂರು ಬಿಂಬ,ನಿನ್ನ ನಗುವಿನ ಹಿಂದೆ ನಗುವೇ ಇರುವುದಿಲ್ಲಎಲ್ಲವನ್ನೂ ತಳ್ಳಿಹಾಕಿದರೆ ಉಳಿದಿರುವುದುಗಾಳಿ, ನೇರಾನೇರ ಎಂದರೂ ಮಾತು ಒಡಪು ತಿಳಿಗೊಳದಲ್ಲಿ ಇರಬಹುದು ನೂರು ಜೀವಜೀವಕೊಂದು ಭಾವ, ಭಾವಕೆಷ್ಟೋ...
ಪದ್ದು ಹಾಗೂ ಜೇನುಗೂಡು..
-ವೆಂಕಟೇಶ ಚಾಗಿ ಅಂದು ಮನೆಯ ಮುಂದೆ ಆಟವಾಡುತ್ತಿರುವಾಗ ಮನೆಯ ಮುಂದಿನ ಮರದಲ್ಲಿ ಹುಳಗಳ ಸದ್ದು ಕೇಳಿಸಿತು. ಗುಂಯ್ ಎನ್ನುವ ಸತ್ತು ಮನೆಯ ಮುಂದೆ ಆಟವಾಡುತ್ತಿದ್ದ ಪದ್ದು ಹಾಗೂ ಅವನ ಸ್ನೇಹಿತರ ಮನ ಸೆಳೆಯಿತು. ಎಲ್ಲರೂ ಪದ್ದುವಿಗೆ "ಪದ್ದು ನೋಡು.. ನಿಮ್ಮ ಮರದ ಮೇಲ್ಗಡೆ ಹುಳಗಳು ಎಷ್ಟೊಂದು ಬಂದಿವೆ. ಎಲ್ಲವೂ ಗುಂಯ್...
ವರನಟನ ನೂರೊಂದು ನೆನಪು..
ಡಾ ಜಿ ಪ್ರಶಾಂತ್ ನಾಯಕ್ ಅವರ 'ಡಾ.ರಾಜಕುಮಾರ್ ಬಹುತ್ವದ ಪ್ರಜ್ಞೆ' ಕನ್ನಡ ವಿಶ್ವವಿದ್ಯಾಲಯ, ಹಂಪಿ ಪ್ರಕಟಣೆಯ ಕೃತಿ ಇದಾಗಿದೆ. ಈ ಕೃತಿಯ ಕುರಿತ ಪ್ರೊ ಜಿ ಎನ್ ಉಪಾಧ್ಯ ಅವರ ಬರಹ ಇಲ್ಲಿದೆ. -ಜಿ ಎನ್ ಉಪಾಧ್ಯ 'ರಾಜಕುಮಾರ್ ಬಹುತ್ವದ ಪ್ರಜ್ಞೆ' ಇದು ಪ್ರಶಾಂತ್ ನಾಯಕ್ ಅವರ ಇತ್ತೀಚಿನ ಕೃತಿ.ರಾಜಕುಮಾರ್ ಕರ್ನಾಟಕದ...
ಅಂಕೆಯಿಲ್ಲದ ನಿಶಬ್ದ..
-ವಿಶಾಲ್ ಮ್ಯಾಸರ್ ನಾವು ಹೇಗೆಲ್ಲಮಾತಾಡಬಹುದುಬಾಯಿಂದ, ಕೈಯಿಂದಕಣ್ಣಿಂದ, ಕಾಲಿಂದಕೊನೆಗೆ ಸುಮ್ಮನಿರುವುದರಿಂದ ಲಾರ್ಡ್ ಒಂದು, ಎರೆಡುಹೀಗೆ ಸಂಖ್ಯೆಗಳನ್ನು ಹೆಚ್ಚಿಸುತ್ತಇರುವ ವಯಸ್ಸಿಗೆ ಬಂದು ನಿಲ್ಲಿನನಗನ್ನಿಸುವ ಮಟ್ಟಿಗೆ ಏನನ್ನಾದರೂ ನಂಬರ್ನಲ್ಲಿ ಎಣಿಕೆ ಮಾಡುವುದು ಒಂದು ಒಳ್ಳೆಯ ಪಾಪ ಇರಬಹುದು ಅಂಗುಲ ಅಂಗುಲ ಆವರಿಸುತ್ತಾ...
ಮೌನ ಧ್ಯಾನಗಳ ಫಲ ‘ಬಿಸಿಲೇ ಬೆಳದಿಂಗಳು’
ಬಡಿಗೇರ ಮೌನೇಶ್ ಅವರ ಕವನ ಸಂಕಲನ 'ಬಿಸಿಲೇ ಬೆಳದಿಂಗಳು' ಈ ಕೃತಿಯ ಕುರಿತು ಸಂಗಮೇಶ ಎಸ್ ಗಣಿ ಅವರ ಅನಿಸಿಕೆ ಇಲ್ಲಿದೆ. -ಡಾ ಸಂಗಮೇಶ ಎಸ್ ಗಣಿ ಬಯಲು ಸೀಮೆಯ ಬಿಸಿಲನ್ನು ಬೆಳದಿಂಗಳಾಗಿಸುವ ಆಶಯವನ್ನು ಹೊತ್ತುಕೊಂಡಿರುವ ಕವಿ ಬಡಿಗೇರ ಮೌನೇಶ್ ಅವರ 'ಬಿಸಿಲೇ ಬೆಳದಿಂಗಳು' ಕವನ ಸಂಕಲನವು ಮಾನವ ಕುಲದ ಬೇಗುದಿಗಳನ್ನು ಬಯಲು ಮಾಡುತ್ತಲೇ...
ಕಲಾಗ್ರಾಮದಲ್ಲಿ ಚಿಗುರು ರಂಗೋತ್ಸವ..
ರಂಗೋಲಿ ಮೆಟ್ರೋ ಕಲಾ ಕೇಂದ್ರದಲ್ಲಿ..
ನೆನಪು-ಮರೆವಿನ ಜೀಕುಗಳಲ್ಲಿ ತಮ್ಮ ಬದುಕ ಕಟ್ಟಿಕೊಳ್ಳುತ್ತಾ, ನಾಲ್ಕು ಹೆಂಗಸರು ಹಂಚಿಕೊಳ್ಳುವ ನಾಲ್ಕು ಕತೆಗಳು. ರಂಗೋಲಿ ಮೆಟ್ರೋ ಕಲಾ ಕೇಂದ್ರದಲ್ಲಿ, ಮೇ 1, ಸಂಜೆ...
ಮೈಲಿಗೆ..
-ಬಶೀರ್ ಅಹ್ಮದ್ ಕಿನ್ಯ "ಅಯ್ಯೋ ಕಾಪಾಡಿ......" ನೀರಿನಿಂದ ಬಂದ ಆ ಅರಚಾಟಕ್ಕೆ ದಡದಲ್ಲಿ ನಿಂತಿದ್ದ ನೂರಾರು ಮೊಬೈಲ್‌ಗಳು ಒಮ್ಮೆಲೆ ಜೀವ ತಳೆದವು. ನಾಟಕೀಯ ದುರಂತವೊಂದು ಎಚ್‌ಡಿಯಲ್ಲಿ ಲೈವಾಗಿ ಸಿಕ್ಕಿದ ಸಂಭ್ರಮ. "ಪಾಪ, ಹೀಗಾಗಬಾರದಿತ್ತು..." ಕ್ಯಾಮೆರಾಗಳ ಕ್ಲಿಕ್ಕುಗಳ ನಡುವೆ ಗೊಣಗಾಟಗಳು ಕರಗಿ ಹೋದವು. ಎರಡು ಸಲ ಮೇಲೆದ್ದು...





















