ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಮೇಷ್ಟ್ರು ಇನ್ನು ಬರಿಯ ನೆನಪಷ್ಟೇ…
ರಾಘವನ ಚಕ್ರವತಿ೯ ಅರವತ್ತರ ಆಸುಪಾಸಿನ ಚಿರಯುವಕ, ಆತ್ಮೀಯ ಮೇಷ್ಟ್ರು, ಎಚ್.ವಿ.ವಿ. (ವೇಣುಗೋಪಾಲ್) ಇನ್ನಿಲ್ಲ ಎಂಬ ಸುದ್ದಿ ನನ್ನನ್ನು ಗಾಢಮೌನಕ್ಕೆ ತಳ್ಳಿದೆ. ನನ್ನ ಬರಹಗಳಲ್ಲಿನ ಓರೆ-ಕೋರೆಗಳನ್ನು ಗಮನಿಸಿ ಪ್ರೀತಿಯಿಂದ ತಿದ್ದಿ-ತೀಡುತ್ತಿದ್ದ ಮೇಷ್ಟ್ರು, ಸಿನಿಮಾ ನೊಡುವ ಬಗೆಯನ್ನೂ ಹೇಳಿಕೊಟ್ಟರು. ೮೨ರಲ್ಲಿ ಬಿಡುಗಡೆಯಾಗಿದ್ದ...
ಪಿ ಪಿ ಉಪಾಧ್ಯ ಸರಣಿ ಕಥೆ 52 – ಆದಿಯನ್ನು ನೋಡಲು ಓಡೋಡಿ ಬಂದ…
ಪಿ ಪಿ ಉಪಾಧ್ಯ ಯಾವ ಊರಲ್ಲಿದ್ದರೂ ರಜೆಯೆಂದು ಗಿಳಿಯಾರಿಗೆ ಬಂದಾಗ ಶಂಕ್ರ ಆದಿಯನ್ನು ಭೇಟಿ ಮಾಡದೆ ಹೋಗುತ್ತಿರಲಿಲ್ಲ. ಒಂದು ದಿನದ ಮಟ್ಟಿಗೆ ಊರಿಗೆ ಬಂದರೂ ತಿರುಗಿ ಬಸ್ಸು ಹತ್ತುವ ಮೊದಲಾದರೂ ಆದಿಯನ್ನು ನೋಡಿ ಮಾತನಾಡಿ ಹೋಗುತ್ತಿದ್ದ. ಅಮೆರಿಕಕ್ಕೆ ಹೋದ ಮೇಲೂ ಅದೇ ಮುಂದುವರಿದಿತ್ತು. ಅಮೆರಿಕಕ್ಕೆ ಹೋದ ಸುರುವಿನ ವರ್ಷಗಳಲ್ಲಿ...
ಪ್ರಮೋದ ಜೋಶಿ ಹೊಸ ಕವಿತೆ – ದಂತಕಥೆಯಾದ ಬೆಂದ ತಾಯಿ…
ಪ್ರಮೋದ ಜೋಶಿ ಚಿಂದಿ ಎಂದರೂ ಚಿಂದಿಯಾಗದೆಚಿಂದಿಯಾದ ಜೀವಿಗಳಿಗೆಕೌದಿಯಾದರು ಸಿಂಧು ತಾಯಿ ಹಿದಿದವನು ಬಿಟ್ಟರೂಹಿಡಿದವರನು ಹಿಡಿದರುಹಿದಿದವರ ಜೊತೆಗೆ ಹಿಡಿದವನಿಗೂದಾತೆಯಾದರು ಸಿಂಧು ತಾಯಿ ಮರಾಠಾ ರಾಜ್ಯದಮೇಗೆ ಗ್ರಾಮದಿ ಹುಟ್ಟಿಹೆತ್ತವರಿಗೂ ಬೇಡವಾದಮಗುವಾದರು ಹೆಣ್ಣಾದ ತಪ್ಪಿಗೆ ಹಣ್ಣಾಗಿ ಹೋಯಿತುಬಡತನದ ಮನೆಯಲ್ಲಿ ಹುಟ್ಟಿಇಟ್ಟ...
ಅನುಸೂಯ ಯತೀಶ್ ಓದಿದ ‘ಪನ್ನೇರಳೆ’
ಪನ್ನೇರಳೆ ಬನದಲ್ಲೊಮ್ಮೆ ಸುತ್ತಿಬಂದ ರೋಚಕ ಅನುಭವ ಅನುಸೂಯ ಯತೀಶ್ ಪ್ರಬಂಧ ಎಂದೊಡನೆ ವೈಚಾರಿಕ ಪ್ರಬಂಧಗಳು, ವೈಜ್ಞಾನಿಕ ಪ್ರಬಂಧಗಳು ಮತ್ತು ವೈಯಕ್ತಿಕವಾದ ಅನುಭವ ಜನ್ಯ ಪ್ರಬಂಧಗಳು ಎಲ್ಲರ ಮೆದುಳೊಳಗೆ ನುಸುಳುವುದು ಸರ್ವೇಸಾಮಾನ್ಯ. ಇವೆಲ್ಲವನ್ನು ಮೀರಿ ತನುಮನಗಳನ್ನು ರಂಜಿಸುವ ಮತ್ತೊಂದು ಪ್ರಬಂಧ ಪ್ರಕಾರವೇ ಲಲಿತ...
ಮುಖದ ಮೇಲೆ ಯಾವಾಗಲೂ ಅಣಕಿಸುವಂತ ತುಂಟ ನಗು…
ವೆಂಕಟೇಶ್ ಪ್ರಸಾದ್ ಹೆಚ್.ವಿ.ವಿ. ಸರ್ ಇನ್ನಿಲ್ಲ. ಮನಸ್ಸು ಭಾರವಾಗಿದೆ. ಕಳೆದ ಕೆಲವು ವರ್ಷಗಳಿಂದ ಅವರ ಜೊತೆ ಹೆಚ್ಚು ಒಡನಾಟವಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಸಿಕ್ಕು ಮಾತಾಡುತ್ತಿದ್ದುದು ಮಾತ್ರ. ಆದರೆ ಅದಕ್ಕೆ ಮುಂಚೆ ಸುಮಾರು 10-12 ವರ್ಷಗಳ ಕಾಲ ನಾನು ಸಮುದಾಯದಲ್ಲಿ ನಟನಾಗಿ, ಸಂಘಟಕನಾಗಿ ಕೆಲಸ ಮಾಡುವಾಗ ಅವರ ಹತ್ತಿರದ...
ಜಿ ಎನ್ ನಾಗರಾಜ್ ಅಂಕಣ- ಜೆನೆಟಿಕ್ ವಿಜ್ಞಾನಿಗಳಾದ ‘ಅಮ್ಮ’ ಗಳು ಮಾಡಿದ ಸಾಮಾಜಿಕ ಇಂಜನಿಯರಿಂಗ್…
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
Pic through I Love Sufism
ಅವರು ದೊಡ್ಡ ಶಕ್ತಿಯಾಗಿದ್ದರು…
ಸಿ ಕೆ ಗುಂಡಣ್ಣ ಮತ್ತೊಂದು ಆಘಾತಕಾರಿ ಸುದ್ದಿ ಸಿಡಿಲಿನಂತೆ ಬಂದೆರಗಿದೆ…..ತೀವ್ರ ಹೃದಯಾಘಾತದಿಂದ ನಮ್ಮೆಲ್ಲರ ಆತ್ಮೀಯ ಗೆಳೆಯ ಹೆಚ್.ವಿ.ವೇಣುಗೋಪಾಲ್ ನಿಧನರಾಗಿದ್ದಾರೆ. ವೇಣು ಅವರು ಗೌರಿಬಿದನೂರು AES ನ್ಯಾಷನಲ್ ಕಾಲೇಜಿನಲ್ಲಿ ಸಂಸ್ಜೃತ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು. ಮತ್ತೊಂದು ಆಘಾತಕಾರಿ ಸುದ್ದಿ ಸಿಡಿಲಿನಂತೆ...
ಸಾವಿಲ್ಲದ ವರ!
ಸೌಮ್ಯ ದಯಾನಂದ ನೆನಪುಗಳೇ ಹಾಗೆ!ವರವೋ.!? ಶಾಪವೋ.!?ನಾವು ಮರೆತರೂಅವಕ್ಕೆ ಮರೆವಿಲ್ಲ!ಕಹಿಗೆ ಶಾಪಸಿಹಿಯಾದರೆ ವರ!ಒಂದು ಬಲೂನಿನ ಸೂಜಿಮತ್ತೊಂದು ಪಕ್ಕೆಯ ರೆಕ್ಕೆ! ಸಾವಿಲ್ಲದ ವರವನ್ನುಅವುಗಳಿಗೆ ನೀಡಿದವರಾರೋ!ಕೂರಬೇಕೆಂದಿರುವೆತಪಸ್ಸಿಗೆ ನಾನೂಇಲ್ಲ..ಇಲ್ಲ..ಒಂಟಿಗಾಲಲಿಕೈ ಮುಗಿದು ನಿಂತುಕಠಿಣವಾದಷ್ಟೂ ಫಲ ಬೇಗ! ಹಾರುವುದು...
ಆಕ್ರಮಿಸಿದ ನಿರಂಬಳ ನೀರು…
ಮಾಲಾ ಮ ಅಕ್ಕಿಶೆಟ್ಟಿ ಅದೆಂಥ ಪ್ರಯಾಣ ನಾ ಕಾಣೆಜೊತೆಗೂಡಿ ಹೆಜ್ಜೆಗಳಅಕ್ಕ ಮತ್ತು ತಮ್ಮನ ಸಂಸಾರಮಕ್ಕಳು,ಅವ್ವ ನಾನು ಮತ್ತೆ ಅಪ್ಪ ವಿಶಾಲ ಸೇತುವೆ ದಾಟಲುಕೆಳಗೆ ನಿತ್ಯಹರಿದ್ವರ್ಣದ ಕಾಡಿನಂತೆಹಾಲಿನ ನದಿ ಭೋರ್ಗರೆಯುತ್ತಿರಲುಈ ಕಡೆಯಿಂದ ಆ ಕಡೆ ನಮ್ಮ ನಡೆ ಪ್ರಶಾಂತವಾಗಿ ಕಂಡ ನದಿ ಮತ್ತು ಸೇತುವೆಅತ್ಯಾನಂದದಿಂದ ಹೆಜ್ಜೆ ಹಾಕಿಸೇತುವೆಯ...
ಬಿಸಿಯೂಟ ಎಂಬುದು..
ನಿತ್ಯಾನಂದ ಬಿ ಶೆಟ್ಟಿ ಘಟನೆ-1: ಎಸ್.ಎಂ.ಕೃಷ್ಣ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆಯನ್ನು ದೇಶದಲ್ಲೇ ಮೊದಲಿಗೆ ಜಾರಿಗೆ ತಂದಿತ್ತು. ಆಗಲೂ ಅದರ ಪರ– ವಿರೋಧ ಚರ್ಚೆ ಬಿರುಸಾಗಿ ನಡೆಯಿತು. ನಮ್ಮನ್ನು ಸುತ್ತುವರಿದಿರುವ ಶೈಕ್ಷಣಿಕ, ಸಾಮಾಜಿಕ ಸಂಗತಿಗಳೆಲ್ಲವೂ...
ಪಿ ಪಿ ಉಪಾಧ್ಯ ಸರಣಿ ಕಥೆ 51 – ಅನಂತ ದೊಡ್ಡ ಹೆಸರು ಮಾಡುತ್ತಿದ್ದಾನೆ ಅಮೆರಿಕದಲ್ಲಿ…
ಪಿ ಪಿ ಉಪಾಧ್ಯ ಅನಂತ ಅಮೆರಿಕ್ಕೆ ಹೋಗಿ ಆಗಲೇ ಆರೇಳು ವರ್ಷಗಳೇ ಕಳೆದಿವೆ. ಇಲ್ಲಿಯವರೆಗೆ ಅವನಿಂದ ಯಾವುದೇ ಸುದ್ದಿಯೂ ಇಲ್ಲ. ಕಲಿಯುವುದೆಲ್ಲವೂ ಮುಗಿದಿರಬೇಕು. ಅವರೆಲ್ಲ ಕೇಳಿ ತಿಳಿದ ಪ್ರಕಾರ ಹೆಚ್ಚೆಂದರೆ ಎರಡು ವರ್ಷದಲ್ಲಿ ಮುಗಿಯುವ ಕೋರ್ಸ್ ಅವನು ತೆಗೆದುಕೊಂಡಿದ್ದು. ಅಮ್ಮಮ್ಮ ಎಂದರೆ ಇನ್ನೊಂದು ವರ್ಷ. ಅಂದರೆ ಮೂರು ವರ್ಷ....
ಗುರುಲಿಂಗ ಕಾಪಸೆ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ
ಕೇಂದ್ರ ಸಾಹಿತ್ಯ ಅಕಾಡೆಮಿಯು ನೀಡುವ ಅನುವಾದ ಪುಸ್ತಕ ಪ್ರಶಸ್ತಿಗೆ ಹಿರಿಯ ಲೇಖಕರಾದ ಡಾ ಗುರುಲಿಂಗ ಕಾಪಸೆ ಅವರು ಭಾಜನರಾಗಿದ್ದಾರೆ. ಡಾ ಕಾಪಸೆ ಅವರು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ ವಿ ಸ ಖಾಂಡೇಕರ್ ಅವರ 'ಒಂದು ಪುಟದ ಕಥೆ' ಯು ಈ ಸಲದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿಗೆ ಆಯ್ಕೆಯಾಗಿದೆ. 'ಒಂದು ಪುಟದ ಕಥೆ'...
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಮದುವೆ, ಮೈತ್ರೇಯಿ ಮತ್ತು ಮಾಧುರ್ಯ…
ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...
Pic by Ahmet Gurol
ಪಿ ಪಿ ಉಪಾಧ್ಯ ಸರಣಿ ಕಥೆ 50 – ನಮ್ಮ ಕಲೆ ಮುಂದುವರಿಯುವುದರ ಬಗ್ಗೆ ಹೆದರಬೇಕಿಲ್ಲ…
ಪಿ ಪಿ ಉಪಾಧ್ಯ ಮಾರನೆಯ ದಿನವೂ ಅವರ ಚರ್ಚೆ ಮುಂದುವರಿಯಿತು. ಪ್ರೊಫೆಸರರಿಗೆ ಅಂತ್ಯನೊoದಿಗೆ ಮಾತನಾಡಿದಷ್ಟೂ ಸಾಲದು ಅನ್ನಿಸಹತ್ತಿತು. ‘ಜಾನಪದ ಕಲೆ ಮುಂದೆಯೂ ಉಳಿಯಬೇಕಾದರೆ, ಈಗಿನ ಸಾಮಾನ್ಯ ಜನರೂ ಅದನ್ನು ಮೆಚ್ಚಿ ಓಲೈಸುವಂತಾಗಬೇಕಾದರೆ ಸಣ್ಣ ಪುಟ್ಟ ಬದಲಾವಣೆಯ ಅಗತ್ಯವಿದೆ. ಆದರೆ ಆ ಬದಲಾವಣೆ ಕಲೆಯ ಮೂಲ ರೂಪಕ್ಕೆ ಧಕ್ಕೆ...
ಜಯರಾಮಾಚಾರಿ ಹೊಸ ಕವಿತೆ- ರಾತ್ರಿ ಪಾಳಿ…
ಜಯರಾಮಾಚಾರಿ ಸಮೀಕ್ಷೆಗಳ ಪ್ರಕಾರ ರಾತ್ರಿ ಪಾಳಿಗಳುಆರೋಗ್ಯವನ್ನು ಮುಕ್ಕಿಆಯಸ್ಸನ್ನು ಕುಕ್ಕಿಖಿನ್ನತೆಯನ್ನು ರಾಚುತ್ತದೆಯಂತೆನನ್ನದು ಹತ್ತು ವರುಷಗಳಿಂದಲೂರಾತ್ರಿ ಪಾಳಿ ಮುಕ್ಕಿ ಹೋದ ನನ್ನ ಆರೋಗ್ಯವೆಷ್ಟುಕುಕ್ಕಿಸಿಕೊಂಡ ನನ್ನ ಆಯಸ್ಸು ಎಷ್ಟುರಾಚಿ ಬಂದ ಖಿನ್ನತೆಯ ಕನವರಿಕೆಗಳಲೆಕ್ಕ ಹಾಕಲು ಕೂತರೆದೊಡ್ಡದೊಂದು ಕೊನೆಯಾಗದ ಆಕಳಿಕೆ...
ನಿನ್ನ ನೆನಪ ಅಳಿಸಲಾಗಲಿಲ್ಲ…
ದೇವರಾಜ್ ಹುಣಸಿಕಟ್ಟಿ ಕಂಗಳು ತುಂಬಿ ಸುರಿಸಿದ ಕಂಬನಿ ನಿನ್ನ ನೆನಪ ಅಳಿಸಲಾಗಲಿಲ್ಲಗಂಟಲ ಪಸೆಯಾರಿ ಬಿಕ್ಕಿದ ಬಿಕ್ಕಳಿಕೆ ನಿನ್ನ ನೆನಪ ಅಳಿಸಲಾಗಲಿಲ್ಲ ಅದೆಷ್ಟು ಲೋಕ ಸುತ್ತಿ ಹೃದಯದ ಗಾಯಕ್ಕೆ ಮುಲಾಮು ಹುಡುಕಿದೆ ಗೊತ್ತೇಅದ್ಯಾವ ಮಠ ಮಂದಿರದ ದೇವರಿಂದಲೂ ನಿನ್ನ ನೆನಪ ಅಳಿಸಲಾಗಲಿಲ್ಲ ರಚ್ಚೆ ಹಿಡಿದ ಮಗುವಂತೆ ಹೃದಯದ ಹಾಳೆಯಲಿ ಚಿತ್ರ...
ಬೀಸಣಿಕೆ ಗಾಳಿ ಸುಳಿದಾವ…
ಡಾ ಶ್ರೀಪಾದ ಭಟ್ ದಿಮ್ಸಾಲ್ ಮಕ್ಕಳ ಶಿಬಿರದ ನಾಟಕ ನೋಡಿದ ಅನುಭವದ ಕುರಿತೊಂದು ಟಿಪ್ಪಣಿ ಭೂಮಿ ಬಾನು ಎರಡೂ ಧುಮುಗುಡುತ್ತಿದ್ದ ಹೊತ್ತು ಅದು. ಕರಾವಳಿಯ ಉಡುಪಿಯ ಸುತ್ತಣ ಬೇಸಿಗೆಯನ್ನು ವರ್ಣಿಸುವದೇ ಬೇಡ. ಬಿಸಿಲೆಂದರೆ ಬಿಸಿಲೇ ಅದು. ಅಂತ ಸಮಯದ ಆ ದಿನ ಬ್ರಹ್ಮಾವರ ಸಮೀಪದ ಹಾರಾಡಿ ಶಾಲಾ ಆವರಣಕ್ಕೆ ಬಂದ ಕೂಡಲೇ ವಾತಾವರಣದ ತುಂಬೆಲ್ಲ...
ಕಡಲೆ ಮಾರುವವನ ಕೈ ಲೆಕ್ಕ !
ಆಶಿಕ್ ಮುಲ್ಕಿ ಗಿಜಿಗುಡುವ ಗಾಂಧಿನಗರದ ಬೀದಿ ಬದಿಯೊಂದರಲ್ಲಿ ಓರ್ವ ತಾತ ಕಡಲೆ ಬೀಜ ಮಾರುತ್ತಿದ್ದರು. ಅದೇನೋ ಸಂಕಟ, ಖುಷಿಗಳ ಹೊತ್ತು ಓಡಾಡುವ ಜನರ ನಡುವೆ ಬಿಸಿ ಬಿಸಿ ಕಡಲೆ ಬೀಜ ಇರುವ ತಟ್ಟೆಗೆ ಅಗಾಗ್ಗೆ ಟಣ್ ಟಣ್ ಎಂದು ಭಾರಿಸುತ್ತಿದ್ದರು. ಮಧ್ಯೆ ಮಧ್ಯೆ ಒಬ್ಬೊಬ್ಬರು ಹತ್ತು ರೂಪಾಯಿ ಕೊಟ್ಟು ಕಡಲೆ ಪೊಟ್ಟಣ ಕೊಂಡು...
ಬಸವರಾಜ ಕೋಡಗುಂಟಿ ಅಂಕಣ – ಬೀದರ ಜಿಲ್ಲೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರುಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...




















