ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ರಂಗತರಬೇತಿಗೆ ಆಹ್ವಾನ
ರಂಗತರಬೇತಿಗೆ ಆಹ್ವಾನ

ಮಕ್ಕಳ ಬೇಸಿಗೆ ಶಿಬಿರ ಕನ್ನಡದಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ಉಚಿತವಾಗಿ ನೀಡುತ್ತಿರುವ ಸವಿಗನ್ನಡ ಸಂಸ್ಥೆಯು 8ರಿಂದ 16ರ ವಯೋಮಾನದ ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು ಆಯೋಜಿಸಿದೆ. ಏಪ್ರಿಲ್ 11ರಿಂದ ಮೇ 10ರವರೆಗೆ ನಡೆಯಲಿರುವ ಶಿಬಿರದಲ್ಲಿ ರಂಗತರಬೇತಿ, ಭಾವಗೀತೆ, ಕಂಪ್ಯೂಟರ್ ಡಿಸೈನಿಂಗ್, ಫ್ಯಾಬ್ರಿಕ್, ಗ್ಲಾಸ್, ಪಾಟ್ಪೇಂಟಿಂಗ್, […]

read more
ಕಣ್ಣ ಹನಿಗಳ ಕಣಜ ತೋರದಿರಲಾಗದೆ….
ಕಣ್ಣ ಹನಿಗಳ ಕಣಜ ತೋರದಿರಲಾಗದೆ….

-ವೀರಣ್ಣ ಮಡಿವಾಳರ ಆ ದಿನ ಮತ್ತು ಆ ಮಾತುಗಳನ್ನು ಮರೆಯಲಾಗುತ್ತಿಲ್ಲ ಅದೊಂದು ಅರ್ಥಪೂರ್ಣ ಕಾರ್ಯಕ್ರಮ. ಅದೀಗ ತಾನೆ ಒಂದು ಅವಘಡದಿಂದ ಪಾರಾಗಿ ಬಂದಿದ್ದ ಹಿರಿಯ ಕವಯತ್ರಿ ಸವಿತ ನಾಗಭೂಷಣ ರವರು ಮಾತನಾಡುತ್ತ ” ಈ ಕಾಲದ ಸಂದಿಗ್ಧತೆಗಳು ತುಂಬ ಆತಂಕಕಾರಿಯಾಗಿವೆ. ಬದುಕು […]

read more
ಅಡುಗೆ ಮನೆಯ ಕಿಟಕಿಯಿಂದ ಹತ್ತೇ ಅಡಿ ದೂರದಲ್ಲಿ..
ಅಡುಗೆ ಮನೆಯ ಕಿಟಕಿಯಿಂದ ಹತ್ತೇ ಅಡಿ ದೂರದಲ್ಲಿ..

ಬಿ ವಿ ಭಾರತಿ ನಾನು ದಿನಾ ಬಯ್ದುಕೊಂಡು ಅಡುಗೆ ಮಾಡುವಾಗಿನ ನನ್ನ ಮನಸ್ಥಿತಿಯನ್ನ ಸ್ವಲ್ಪ ಮಟ್ಟಿಗೆ ಕೂಲ್ ಮಾಡತ್ತೆ ನನ್ನ ಅಡುಗೆ ಮನೆಯ ಕಿಟಕಿಯಿಂದ ಹತ್ತೇ ಅಡಿ ದೂರದಲ್ಲಿ ಕಾಣೋ ಗುಲ್‌ಮೊಹರ್. ಗುಲ್‌ಮೊಹರ್ ಅಂದರೆ ನನ್ನ ಮನಸಿನಲ್ಲಿ ಅದೆಂಥ ಮೋಹ ಗೊತ್ತಾ? […]

read more
ಕೊರವಂಜಿ ಅಲ್ಲ..’ಅಪರಂಜಿ’ ಬಂದಿದ್ದಾಳೆ..
ಕೊರವಂಜಿ ಅಲ್ಲ..’ಅಪರಂಜಿ’ ಬಂದಿದ್ದಾಳೆ..

ಕೊರವಂಜಿ ಓದಬೇಕೆ ಇಲ್ಲಿ ಕ್ಲಿಕ್ಕಿಸಿ– ಕೊರವಂಜಿ ಅಪರಂಜಿ ಪರಂಪರೆ ಕೊರವಂಜಿ ಚಾರಿತ್ರಿಕ ಹಿನ್ನೆಲೆ ನಲವತ್ತರ ದಶಕದ ಆದಿಭಾಗದಲ್ಲಿ ಕನ್ನಡದ ನೆಲದಲ್ಲಿ ಮೂಡಿಬಂದ “ಕೊರವಂಜಿ” ಎಂಬ ನಗೆ ಮಾಸಪತ್ರಿಕೆಯನ್ನು ಒಂದು ವಿಧದಲ್ಲಿ “ಆಧುನಿಕ ನಗೆಪ್ರಜ್ಞೆಯ ಹರಿಕಾರಿಣಿ” ಎಂದು ಕರೆದರೆ ತಪ್ಪಾಗಲಾರದು. ರಾ.ಶಿ. ಎಂಬ […]

read more
ಅರವಿಂದ ನಾವಡ ಕಂಡ ಕುನ್ನಕುಡಿ..
ಅರವಿಂದ ನಾವಡ ಕಂಡ ಕುನ್ನಕುಡಿ..

ಒಂದು ಮುಂಜಾನೆ, ಒಂದು ಕುನ್ನಕುಡಿ, ಒಂದು ಗಂಟೆಯ ಆಟ ಹಾಗೂ…. ಅರವಿಂದ ನಾವಡ ಚೆಂಡೆಮದ್ದಳೆ ಆರು ತಿಂಗಳಿಂದ ನನಗೆ ಭಾನುವಾರದ ಬೆಳಗ್ಗೆಯಾಗುವುದು ಸಂಪಾಜೆ ದಾಟಿದ ಮೇಲೋ, ಸಕಲೇಶಪುರ ದಾಟಿ ಚಾರ್ಮಾಡಿ ಮುಟ್ಟಿದಾಗಲೋ. ಸಾಮಾನ್ಯವಾಗಿ ಪ್ರತಿ ಶನಿವಾರ ರಾತ್ರಿ ಊರಿಗೆ ಹೊರಡುತ್ತೇನೆ. ಅಲ್ಲಿ […]

read more
ಜೋಗಿ ಬರೆಯುತ್ತಾರೆ: ಚಲಂ ಎಂಬ ನಿಗಿನಿಗಿ ಕೆಂಡ
ಜೋಗಿ ಬರೆಯುತ್ತಾರೆ: ಚಲಂ ಎಂಬ ನಿಗಿನಿಗಿ ಕೆಂಡ

ಒಂದು ಸುದೀರ್ಘ ನಿಟ್ಟುಸಿರು! ಸುಡುಬಿಸಿಲೋ ಬೆಳದಿಂಗಳೋ ಗೊತ್ತಾಗದ ಸ್ಥಿತಿ. ನಿನ್ನೆ ನಾಳೆಗಳು ಒಂದಾಗಿ ನಿಂತ ವರ್ತಮಾನವೆಂಬ ನಿಶ್ಚಲ ಬಿಂದು. ಬದುಕೆಂದರೆ ಗೊತ್ತಿಲ್ಲದ ಗುರಿಯಿಲ್ಲದ ಹಾದಿಯಲ್ಲಿ ನಮಗೆ ಬೇಕಾದ್ದನ್ನು ಹುಡುಕುತ್ತಾ ಹೋಗುವ ನಿರಂತರ ಪಯಣವಾ? ಹಾಗೆ ಸಾಗುತ್ತಾ ಸಾಗುತ್ತಾ ಸಿಕ್ಕಿದ್ದನ್ನೆ ನಮಗೆ ಬೇಕಾದದ್ದು […]

read more
ಅಕ್ಷತಾ ಬರೆದ ಕವಿತೆ: ಸಮಕ್ಷಮ
ಅಕ್ಷತಾ ಬರೆದ ಕವಿತೆ: ಸಮಕ್ಷಮ

  ಹೇಳಿಹೋದರೆ ಕಾರಣ-ಸಕಾರಣ, ವಿನಾಕಾರಣ ಮಿಟಿಯುತ್ತಿತ್ತು ಅಪಶ್ರುತಿಯ ತಂತಿ ಪುಟಿಯುತಿತ್ತು ಅನುಮಾನದ ರೆಕ್ಕೆ ಜ್ವಲಿಸುತ್ತಿತ್ತು ಅಸಹನೆಯ ಕಿಡಿ ಗಂಡುತನದ ವಿಶ್ವಾಸದ ಲೋಕಕ್ಕೆ ಬೀಳುವುದು ಬಕ್ಕಬಾರಲು ಬರೆ ಅದರಿಂದೇಳುವ ಸಾಮೂಹಿಕ ಬೊಬ್ಬೆ ಕೀವು, ಹುಣ್ಣು, ರಸಿಕೆ, ನೋವು ಹೇಳಿಹೋಗಲಿಲ್ಲ ಎಂದ ಮಾತ್ರಕ್ಕೆ ಕದ್ದು […]

read more
ಎಚ್ಚೆಸ್ವಿ ಅನಾತ್ಮ ಕಥನ: ಬೇಟೆಗಾರ ಬಂ ಬಂ…
ಎಚ್ಚೆಸ್ವಿ ಅನಾತ್ಮ ಕಥನ: ಬೇಟೆಗಾರ ಬಂ ಬಂ…

ಅನಾತ್ಮಕಥನ-ಒಂಭತ್ತು ಅರವತ್ತು ವರ್ಷಗಳ ಹಿಂದೆ ನಮ್ಮ ಹಿತ್ತಲು ಒಂದು ಸಣ್ಣ ಕಾಡಿನ ಹಾಗೇ ಇತ್ತು. ಅಗಳ್ತಿಗೆ ಅಂಚುಕಟ್ಟಿ ದಟ್ಟವಾದ ಉಪ್ಪೆ ಮೆಳೆಗಳು. ಈ ಕಡೆ ನಾಡಿಗರ ಹಿತ್ತಲಲ್ಲಿ ಸಣ್ಣ ಬೆಟ್ಟದ ಹಾಗಿದ್ದ ಬುರುಜು. ಅದರ ತುಂಬ ನಾನಾ ರೀತಿಯ ಪೊದೆಗಳು ಬೆಳೆದು […]

read more
‘ಜಾನಪದ: ವರ್ತಮಾನದ ಮುಖಾಮುಖಿ’ ಸಂಕಿರಣ
‘ಜಾನಪದ: ವರ್ತಮಾನದ ಮುಖಾಮುಖಿ’ ಸಂಕಿರಣ

ದಿನಾಂಕ: ೨೯.೦೩.೨೦೧೧, ಸ್ಥಳ: ಕಾಲೇಜು ಸಭಾಂಗಣ, ದಾವಣಗೆರೆ ಏರುಹೊತ್ತು: ೧೦.೩೦ ಉದ್ಘಾಟನೆ: ಶ್ರೀ ಗೊ.ರು.ಚನ್ನಬಸಪ್ಪ ಅಧ್ಯಕ್ಷರು, ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು ಅತಿಥಿಗಳು: ಡಾ.ಅಂಬಳಿಕೆ ಹಿರಿಯಣ್ಣ ವಿಶೇಷಾಧಿಕಾರಿಗಳು, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಬೆಂಗಳೂರು ಉಪಸ್ಥಿತಿ: ಡಾ. ಮೈಲಳ್ಳಿ ರೇವಣ್ಣ ಸದಸ್ಯರು, ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು […]

read more
ಬರ್ತಾ ಇದೆ ಸಿ ಎಸ್ ದ್ವಾರಕಾನಾಥ್ ಪ್ರವಾಸ ಕಥನ
ಬರ್ತಾ ಇದೆ ಸಿ ಎಸ್ ದ್ವಾರಕಾನಾಥ್ ಪ್ರವಾಸ ಕಥನ

-ಎನ್.ಎಸ್. ಶಂಕರ್ ಆಫ್ರಿಕಾ ಮತ್ತು ಅಮೆರಿಕಾ- ವಿಶ್ವ ನಾಗರಿಕ ಜಗತ್ತಿನ ಎರಡು ಧ್ರುವಗಳು. ಮೊದಲು ಆಫ್ರಿಕಾಗೆ ಹೋಗಿ ಬಂದು ತಾವು ಅಲ್ಲಿ ಪಾಲ್ಗೊಂಡಿದ್ದ ಸಮ್ಮೇಳನ ಹಾಗೂ ಆಫ್ರಿಕಾದ ಹೆಂಗಸರ ಬಗ್ಗೆ ಸಮಾನ ಆಸಕ್ತಿಯಿಂದ ಬರೆದಿದ್ದ ಗೆಳೆಯ ಡಾ. ಸಿ.ಎಸ್. ದ್ವಾರಕಾನಾಥ್, ಈಗ […]

read more
ರಾಧಿಕಾ ಗಂಗಣ್ಣ ಓದಿದ ಪುಸ್ತಕ: ಮಾತುಗಾರ ರಾಮಣ್ಣ
ರಾಧಿಕಾ ಗಂಗಣ್ಣ ಓದಿದ ಪುಸ್ತಕ: ಮಾತುಗಾರ ರಾಮಣ್ಣ

ರಾಧಿಕಾ ಗಂಗಣ್ಣ ಬೆಂದಕಾಳೂರು ಬೆಂಗಳೂರಿನ ಬಿಸಿಲಿನ ಝಳವನ್ನು ತಗ್ಗಿಸಿದ ತುಂತುರು ಮಳೆಯ ತಣ್ಣನೆಯ ಹವೆಯಲ್ಲಿ ಕೈಗೆ ಸಿಕ್ಕಿದ್ದು ಮಾಸ್ತಿ ವೆಂಕಟೇಶ ಅಯ್ಯಂಗಾರ್ ವಿರಚಿತ ಪುಸ್ತಕ ’ಮಾತುಗಾರ ರಾಮಣ್ಣ’. ಐವತ್ತರ ದಶಕದ ಹಿಂದಿನ ಮೈಸೂರಿನ ಆಳ್ವಿಕೆಯ ದಿನಗಳನ್ನು ಶಾನುಭೋಗ ರಾಮಣ್ಣನವರ ನಿರೂಪಣೆಯಲ್ಲಿ ನಮ್ಮ […]

read more
ಛಾಯಾ ಭಗವತಿ ಕವಿತೆ: ಒಂಟಿ ಚಪ್ಪಲಿಯ ವಿರಹಗೀತೆ
ಛಾಯಾ ಭಗವತಿ ಕವಿತೆ: ಒಂಟಿ ಚಪ್ಪಲಿಯ ವಿರಹಗೀತೆ

-ಛಾಯಾ ಭಗವತಿ ಅದೆಷ್ಟು ಕಾಲದಿಂದ ನಾನಿಲ್ಲಿ ಒಬ್ಬನೇ ಸಿಕ್ಕಿಬಿದ್ದು ಒದ್ದಾಡುತ್ತಿದ್ದೇನೆ!       ಕೊಂಡವನೇನೋ, ಕೊಂಡಹಾಗೆಯೇ ನಮ್ಮನ್ನು ಮನದಣಿಯೆ ರುಬ್ಬಿ, ಮೂರು ತಿಂಗಳಿಗೆ ಮಬ್ಬಾಗಿಸಿಬಿಟ್ಟ! ಪುಣ್ಯಾತ್ಮರಾರೋ ನಮ್ಮ ಮದುವೆ ಮಾಡಿಸಿ, ಮಜವಾಗಿರಿ ಅಂತ ಪುಟ್ಟದಾದರೂ ನೆಮ್ಮದಿ ತುಂಬಿದ್ದ ಡಬ್ಬಿಯ ಮನೆಯೊಳಗೆ, […]

read more
‘ಅಲೆಮಾರಿ’ ಮೆಚ್ಚಿದ್ದು..
‘ಅಲೆಮಾರಿ’ ಮೆಚ್ಚಿದ್ದು..

‘ಅಲೆಮಾರಿ’ ಎಂದೇ ತಮ್ಮನ್ನು ಕರೆದುಕೊಳ್ಳುವ ಪತ್ರಕರ್ತ ಕುಮಾರ್  ಮೆಚ್ಚಿದ ಸಾಲುಗಳು ಇಲ್ಲಿವೆ- ತೆತ್ತುಕೊಳ್ಳುವ ಪ್ರೇಮವೇ ಸಾಲದು ಬಾಳಿನ ಸಂತಸಕೆ ಕುದ್ದುಕೊಳ್ಳುವ ಬೆಳಕು ಬೇಕು ಪ್ರೀತಿಯ ಪೂರ್ಣತೆಗೆ.. ಶಿವಮೊಗ್ಗ ಸುಬ್ಬಣ್ಣ ಹಾಡಿದ್ದು.. ಸೂಪರ್ ಗೀತೆ.. Photo Courtesy: Udaan Photo School

read more
ಯುಎಇ ಚುಟುಕು ಸಾಹಿತ್ಯ ಸಮ್ಮೇಳನ
ಯುಎಇ ಚುಟುಕು ಸಾಹಿತ್ಯ ಸಮ್ಮೇಳನ

ಧ್ವನಿ ಪ್ರತಿಷ್ಠಾನದ ಬೆಳ್ಳಿ ಹಬ್ಬದ ಅಂಗವಾಗಿ ಆಯೋಜಿಸಲಾಗಿರುವ ಪ್ರಪ್ರಥಮ ಅರಬ್ ಸಂಯುಕ್ತ ಸಂಸ್ಥಾನದ ಕನ್ನಡ ಚುಟುಕು ಸಾಹಿತ್ಯ ಸಮ್ಮೇಳನಕ್ಕೆ ಚುಟುಕು ಚಕ್ರವರ್ತಿ ಹೆಚ್.ಡುಂಡಿರಾಜ್ ಅವರು ಅಧ್ಯಕ್ಷರಾಗಿ ಅಯ್ಕೆ ಗೊಂಡಿರುವರು. ಸಮ್ಮೇಳನವನ್ನು 29ನೇ ಎಪ್ರಿಲ್ 2011 ಶುಕ್ರವಾರ ಅಪರಾಹ್ನ 3 ಕ್ಕೆ ದುಬಾಯಿಯ […]

read more

Pin It on Pinterest

Share This