ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಕನ್ನಡ ಕನ್ನಡತನ ಕನ್ನಡಿಗರು..
ಕನ್ನಡ ಕನ್ನಡತನ ಕನ್ನಡಿಗರು..

-ನಾ ದಿವಾಕರ ಮತ್ತೊಂದು ರಾಜ್ಯೋತ್ಸವ ಬರುತ್ತಿದೆ. ಮತ್ತದೇ ಮೆರವಣಿಗೆ, ವಿಜೃಂಭಣೆ. ಮತ್ತದೇ ವಾದ ವಿವಾದಗಳು. ಮತ್ತದೇ ಕೂಗು. ಕನ್ನಡ ಭಾಷೆ ನಶಿಸುತ್ತಿದೆ, ಕನ್ನಡಿಗರಿಗೆ ಸ್ವಾಭಿಮಾನ ಇಲ್ಲ ಇತ್ಯಾದಿ. ಹಲವು ದಶಕಗಳಿಂದಲೂ ಈ ಕೂಗು ಕೇಳಿಸುತ್ತಲೇ ಇದೆ. ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮ […]

read more
ಭಯೋತ್ಪಾದಕರು!
ಭಯೋತ್ಪಾದಕರು!

-ಎಸ್.ಜಿ.ಶಿವಶಂಕರ್ ಆಟೋದಲ್ಲಿ ಆಕೆಯನ್ನು ಬಸ್ನಿಲ್ದಾಣಕ್ಕೆ ಕರೆದುಕೊಂಡು ಹೋಗಿ, ಬಸ್ಸು ಹತ್ತಿಸಿ ವಾಪಸ್ಸು ಮನೆಗೆ ಬರಲು ಸಿಟಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದೆ! ಯಾರು ಆಕೆ ಎಂಬ ಕೆಟ್ಟ ಕುತೂಹಲ ನಿಮ್ಮನ್ನಾಗಲೇ ಕೊರೆಯಲು ಪ್ರಾರಂಭಿಸಿದೆ ಎಂದು ಬಲ್ಲೆ! ಆಕೆ ಬೇರೆ ಯಾರೂ ಅಲ್ಲ ನನ್ನ […]

read more
‘ಎಂಗೆಯುಂ..ಎಂಪ್ಪೋದಮ್..’ ಕುಮಾರ ರೈತ ಅವರ ವಿಮರ್ಶೆ
‘ಎಂಗೆಯುಂ..ಎಂಪ್ಪೋದಮ್..’ ಕುಮಾರ ರೈತ ಅವರ ವಿಮರ್ಶೆ

-ಕುಮಾರ ರೈತ ವರದಿಗಾರ ಈ ಚಿತ್ರ ಆರಂಭಗೊಳ್ಳುವುದೇ ಅಂತ್ಯದಿಂದ. ನಂತರ ಪಾತ್ರಗಳ ವಿವರದ  ಸುರುಳಿ  ಬಿಚ್ಚಿಕೊಳ್ಳುತ್ತಾ  ಭೂತ-ವರ್ತಮಾನಗಳ ನಡುವೆ  ಚಲಿಸುತ್ತದೆ. ಈ ಪ್ರಕ್ರಿಯೆಗಳನ್ನೆಲ್ಲ  ಪ್ರತ್ಯಕ್ಷದರ್ಶಿಯಾಗಿ ನೋಡಿದ ಗಾಢ ಅನುಭವ ಆಗುತ್ತದೆ. ಇದು ಮನವನ್ನು ಕಲಕಿ….ವಿಷಾದದ ಭಾವ ಉಳಿಸುತ್ತದೆ. ಹೊಸತನದ ನಿರೂಪಣೆಯ ಈ ಸಿನಿಮಾ ತಮಿಳಿನ ‘ಎಂಗೆಯುಂ..ಎಂಪ್ಪೋದಮ್..ಅಂದರೆ ಎಲ್ಲಿಯೂ..ಯಾವಾಗಲೂ… ತಾನು ಪ್ರೀತಿಸಿದವನ ಪಡೆಯಲು ತಿರುಚ್ಚಿಯಿಂದ ಚೆನ್ನೈಗೆ ಬಸ್ಸಿನಲಿ ಸಾಗುವ ಯುವತಿ ಅಮುದ, ಇದೇ ಭಾವದಿಂದ ಚೆನ್ನೈಯಿಂದ ತಿರುಚ್ಚಿಗೆ ಸಾಗುವ ಯುವಕ ಗೌತಮ್.  ಈತ ಕುಳಿತ ಬಸ್ಸನ್ನೇ ಮತ್ತೊಂದು ಜೋಡಿ ಏರುತ್ತದೆ. ತಾನು ತೀವ್ರವಾಗಿ ಪ್ರೀತಿಸಿದ ಮಣಿ ಮೇಘಮಾಲೆಯನ್ನು ತನ್ನ ಕುಟುಂಬದವರಿಗೆ ಪರಿಚಯಿಸುವುದಕ್ಕಾಗಿ ಕರೆದುಕೊಂಡು ಹೋಗುತ್ತಿರುವ ಕದಿರೇಶ.  ದುಬೈನಲ್ಲಿದ್ದು ಐದು ವರ್ಷದಿಂದ ನೋಡಿರದ ಪುಟ್ಟ ಮಗಳನ್ನು ಕಾಣುವ ತವಕದಿಂದ ಊರಿಗೆ ಮರಳುತ್ತಿರುವ ವ್ಯಕ್ತಿ.  ತವರಿಗೆ ತೆರಳುತ್ತಿರುವ ಪತ್ನಿಯನ್ನು ಅಗಲಿರಲಾರದೇ ತಾನೂ ಒಂದಷ್ಟು ದೂರ ಜೊತೆಗೆ ಬರುತ್ತೇನೆಂದು ಸಾಗುವ ಪತಿ. ಬಸ್ಸಿನಲಿ ಪಯಣಿಸುತ್ತಿರುವಾಗಲೇ ಪರಸ್ಪರ ಪ್ರೇಮದ ಸೆಳೆತಕ್ಕೆ ಸಿಲುಕುವ ಜೋಡಿ. ಹೀಗೆ ವಿವಿಧ ಪಾತ್ರಗಳ ವಿವರಗಳನ್ನು ಹೊತ್ತ ಬಸ್ಸುಗಳು ಗಮ್ಯದೆಡೆಗೆ ವೇಗದಿಂದ ಚಲಿಸುತ್ತವೆ. ಉದ್ಯೋಗದ ಸಂದರ್ಶನ ಮತ್ತು ಅಕ್ಕನ ಮನೆಗೆ ತೆರಳುವ ಉದ್ದೇಶದಿಂದ ಅಪರಿಚಿತ ಚೆನ್ನೈಗೆ ಬಂದಿಳಿಯುವ ಅಮುದ  ಇದಕ್ಕಾಗಿ ಎಂದೂ ನೋಡಿರದ ಯುವಕನ ನೆರವು ಕೇಳಬೇಕಾಗುತ್ತದೆ. ಇದರಿಂದ ಇಬ್ಬರು ಮುಂಜಾನೆಯಿಂದ ಸಂಜೆವರೆಗೂ ಒಟ್ಟಿಗೆ ಸಾಗಬೇಕಾಗುತ್ತದೆ.  ಈ ಅವಧಿಯಲ್ಲಿ ಇಬ್ಬರಿಗೂ ಪರಸ್ಪರರ ವ್ಯಕ್ತಿತ್ವಗಳು ಅನಾವರಣಗೊಳ್ಳುತ್ತಾ  ಸಾಗುತ್ತದೆ.  ಅಕ್ಕನ ಮನೆ ತಲುಪುವುದರೊಳಗೆ ಅಮುದಾಳಿಗೆ ಗೌತಮ್ಮೇಲೆ ಪ್ರೇಮ ಅಂಕುರವಾಗುತ್ತದೆ.  ಆದರೆ ಇದ್ಯಾವುದರ ಸೂಚನೆಯೂ ಇಲ್ಲದ ಗೌತಮ್ ನಿರ್ಭಾವುಕವಾಗಿ ತೆರಳುತ್ತಾನೆ. ಆದರೆ ಅಮುದ ದಿನದಿಂದ ದಿನಕ್ಕೆ ಭಾವುಕಳಾಗತೊಡಗುತ್ತಾಳೆ. ಬಂದ ಸಂಬಂಧಗಳ್ಯಾವುದು […]

read more
ಎಚ್ಚೆಸ್ವಿ ಬರೆಯುತ್ತಾರೆ:ಹೊರಟ ಕಂಪಿಲರಾಯ
ಎಚ್ಚೆಸ್ವಿ ಬರೆಯುತ್ತಾರೆ:ಹೊರಟ ಕಂಪಿಲರಾಯ

-ಎಚ್.ಎಸ್.ವೆಂಕಟೇಶಮೂರ್ತಿ ನಾವು ಹುಡುಗರಿದ್ದಾಗ ಸಂಜೆ ಶಾಲೆ ಮುಗಿದು ಹೋ ಅಂತ ರಸ್ತೆಗೆ ನುಗ್ಗುವಾಗ ಒಂದು ಹಾಡನ್ನು ಕೋರಸ್ಸಾಗಿ ಹಾಡುತಾ ಇದ್ದೆವು. ಹೊರಟ ಕಂಪಿಲರಾಯ  ಸಡಗರದಿಂ ಕೆರೆ ಕಡೆಗೆಸಡಗರದಿಂಕೆರೆ ಕಡೆಗೆಸಡಗರದಿಂಕೆರೆ ಕಡೆಗೆ! ಈ ಕಂಪಿಲರಾಯ ಯಾರು? ಅವನು ಸಡಗರದಿಂದ ಕೆರೆ ಕಡೆ ಯಾಕೆ […]

read more
ಕೂಡ್ಲಿಗಿ ತಾಲೂಕಿನ ವಿಶಿಷ್ಟ ಗ್ರಾಮ ವಲಸೆ 	..
ಕೂಡ್ಲಿಗಿ ತಾಲೂಕಿನ ವಿಶಿಷ್ಟ ಗ್ರಾಮ ವಲಸೆ ..

-ಡಾ.ಅರುಣ್ ಜೋಳದ ಕೂಡ್ಲಿಗಿ ಕನ್ನಡ ಜಾನಪದ ದಿಂದ (ಕೂಡ್ಲಿಗಿ ತಾಲೂಕಿನ ಅಲಕ್ಷಿತ ವಿಶೇಷ ಐತಿಹಾಸಿಕ ಗ್ರಾಮ ವಲಸೆಯ ಆರಾಧ್ಯ ದೈವ ಯರಗಟ್ಟೆನಾಯಕನ ದೇಗುಲ) -ಸಿದ್ಧರಾಮ ಹಿರೇಮಠ. ಕೂಡ್ಲಿಗಿ ಕೂಡ್ಲಿಗಿ ತಾಲೂಕು ೧೬ನೇ ಶತಮಾನದ ವಿಜಯನಗರ ಅರಸರ ಕಾಲದಿಂದಲೂ ವಿವಿಧ ಪಾಳೆಗಾರರ ಆಳ್ವಿಕೆಯಲ್ಲಿ […]

read more
ಜರ್ಮನಿಯಲ್ಲಿ ನಮ್ಮ ದೀಪಾವಳಿ..
ಜರ್ಮನಿಯಲ್ಲಿ ನಮ್ಮ ದೀಪಾವಳಿ..

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- ಜ್ಞಾನದ ಬೆಳಕಿನ ಮನೆಯಲ್ಲಿ ಬೆಸೆಯುವ ಬೆಳಕಿನ ಹಬ್ಬ ಜರ್ಮನಿಯ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾನಿಲಯದ ನಮ್ಮ ಇಂಡಾಲಜಿ ವಿಭಾಗದಲ್ಲಿ ಮೊನ್ನೆ ಅಕ್ಟೋಬರ ೨೭ ಗುರುವಾರ ರಾತ್ರಿ ದೀಪಾವಳಿ ಹಬ್ಬದ ಸಡಗರ. ಕಳೆದ ಎರಡು ವರ್ಷಗಳಲ್ಲಿ ವಿಭಾಗದ […]

read more
ವಿಳಾಸಗಳ ಸುಳಿವಿಲ್ಲದೆ..
ವಿಳಾಸಗಳ ಸುಳಿವಿಲ್ಲದೆ..

–ಪ್ರತಾಪ್ ಬ್ರಹ್ಮಾವರ ಅಳಿಸಿ ಹೋದ ಹೆಜ್ಜೆ-ಗುರುತುಗಳ ಹಿಂಬಾಲಿಸಿ , ವಿಳಾಸಗಳ ಸುಳಿವಿಲ್ಲದೆ ಭ್ರಮ-ನಿರಸರಾದವರು ನಾವು…, ಕತ್ತಲ ರಾತ್ರಿಯಲಿ ಕಳೆದುಹೋದವರನು’ , ಕತ್ತಿಗೆ ಮುಸುಕು ಹಾಕಿ ಕತ್ತಲಲ್ಲೇ ಹುಡುಕ ಹೊರಟವರು ನಾವು , ನಾವು ವಿಳಾಸವಿಲ್ಲದವರು, ದಯವಿಟ್ಟು ಹುಡುಕ ಬೇಡಿ , ನಮ್ಮ […]

read more
‘ಹಳದಿ ಚಿಟ್ಟೆ’ ಬಗ್ಗೆ ಸುಬ್ರಾಯ ಚೊಕ್ಕಾಡಿ..
‘ಹಳದಿ ಚಿಟ್ಟೆ’ ಬಗ್ಗೆ ಸುಬ್ರಾಯ ಚೊಕ್ಕಾಡಿ..

ಇದು ಹಿರಿಯ ಗಮನಾರ್ಹ ಕವಿ ಆರ್ ವಿಜಯರಾಘವನ್ ಅವರ ಹೊಸ ಕವಿತಾ ಸಂಕಲನ ‘ಹಳದಿ ಚಿಟ್ಟೆ’ಬಗ್ಗೆ ಸುಬ್ರಾಯ ಚೊಕ್ಕಾಡಿ ಅವರು ಬರೆದ ಟಿಪ್ಪಣಿ. -ಸುಬ್ರಾಯ ಚೊಕ್ಕಾಡಿ ’ಹಳದಿ ಚಿಟ್ಟೆ’ ಹಾಗೂ ’ಪೀನೀ ಹೂ’ ಕೃತಿಗಳಲ್ಲಿನ ಕವಿತೆಗಳನ್ನು ಓದಿ ಈ ಪತ್ರ ಬರೆಯುತ್ತಿದ್ದೇನೆ. ನಿಮ್ಮ ಕವಿತೆಗಳ […]

read more
ತೊಮಸ್ ತ್ರಾನ್ಸ್ತ್ರೋಮರ್ರವರ ಇನ್ನಷ್ಟು ಪದ್ಯಗಳು..
ತೊಮಸ್ ತ್ರಾನ್ಸ್ತ್ರೋಮರ್ರವರ ಇನ್ನಷ್ಟು ಪದ್ಯಗಳು..

-ಡಾ.ಜೆ.ಬಾಲಕೃಷ್ಣ ಅಂತರಗಂಗೆ ಯಿಂದ ಅನುವಾದದಿಂದ ದೊರಕುವುದೇ ಕಾವ್ಯ ಎಂದು ಒಬ್ಬ ಕಾವ್ಯ ವಿಮರ್ಶಕ ತೊಮಸ್ ತ್ರಾನ್ಸ್ತ್ರೋಮರ್‌ರವರ ಕಾವ್ಯದ ಬಗ್ಗೆ ಹೇಳುತ್ತಾ ಬರೆದಿದ್ದಾನೆ. ಇಲ್ಲಿ ಅನುವಾದವೆಂದರೆ,  ಕವಿ ನಿಶ್ಶಬ್ದದಿಂದ ತನ್ನ  ಸಂವೇದನೆಗಳಿಗೆ ಸೂಕ್ತ`ಶಬ್ದ’ವನ್ನರಸಿ ಅವ್ಯಕ್ತದಿಂದ ವ್ಯಕ್ತಕ್ಕೆ ಅದನ್ನು ಅನುವಾದಿಸುವುದು ಎಂದರ್ಥ.ತೊಮಸ್ ಸ್ವೀಡನ್ನಿನ ಅತ್ಯಂತ ಜನಪ್ರಿಯ ಕವಿ. 2011ರ ಸಾಹಿತ್ಯ ನೋಬೆಲ್ಪಾರಿತೋಷಕ  ಆ ಕವಿಗೆ ದೊರಕಿದೆ. ಸ್ವೀಡನ್ನಿಗೆ 36 ವರ್ಷಗಳ ನಂತರನೋಬೆಲ್ ಪಾರಿತೋಷಕ ದೊರೆತಿದೆ. ಆದರೆ ಹಲವಾರು ವಿಮರ್ಶಕರ ಪ್ರಕಾರಈ ಬಹುಮಾನ ತೊಮಸ್‌ಗೆ ಈ ಮೊದಲೇ ದೊರಕಬೇಕಿತ್ತು. ಪ್ರತಿ ವರ್ಷಸಾಹಿತ್ಯದ ನೋಬೆಲ್ ಬಹುಮಾನ ಪ್ರಕಟಿಸುವ ಸಮಯಕ್ಕೆ ಅದು ತೊಮಸ್‌ಗೇದೊರಕುತ್ತದೆ ಎಂದು ಪತ್ರಕರ್ತರು ತೊಮಸ್ ಮನೆಯ ಎದುರುಕಾದಿರುತ್ತಿದ್ದರಂತೆ. ಚಿಲಿಯಲ್ಲಿ ಪ್ಯಾಬ್ಲೊ ನೆರುಡಾ ಮನೆಮಾತಾಗಿದ್ದಂತೆ ತೊಮಸ್ ಸ್ವೀಡನ್ನಿನಲ್ಲಿಮನೆಮಾತಾಗಿದ್ದಾನೆ. ನೆರುಡಾ ಸಾಮಾಜಿಕ ಮತ್ತು ಧಾರ್ಮಿಕ ಚೌಕಟ್ಟುಗಳನ್ನುಧಿಕ್ಕರಿಸಿದರೆ, ತೊಮಸ್ ಆಧ್ಯಾತ್ಮ ಮತ್ತು ಪ್ರಕೃತಿಯಲ್ಲಿ ಆಸರೆ ಪಡೆದಾತ.ಭಾಷೆಯನ್ನೇ ಒಂದು ಮೆಟಫರ್ ಆಗಿ ಬಳಸುವ ಕವಿ ತೊಮಸ್. ಆತನಿಶ್ಶಬ್ದದಲ್ಲಿ ಶಬ್ದಗಳನ್ನು ಹೆಕ್ಕಿ ತೆಗೆಯುವ ಕವಿ. `ಭಾಷೆ ವಧಿಸುವವರೊಂದಿಗೆಹೆಜ್ಜೆ ಹಾಕಿ ನಡೆಯುತ್ತಿರುತ್ತದೆ. ಹಾಗಾಗಿ ನಾವು ಹೊಸ ಭಾಷೆಕಂಡುಕೊಳ್ಳಬೇಕು’ ಎನ್ನುತ್ತಾನೆ ತೊಮಸ್. ಪದಗಳ ಹೊರೆ ಹೊತ್ತವರು ಹೇಸಿಗೆ ತರಿಸುತ್ತಾರೆ, ಬರೇ ಪದಗಳು – ಭಾಷೆಯೇ ಇಲ್ಲ. ಹಿಮಾಚ್ಛಾದಿತ ದ್ವೀಪದೆಡೆಗೆ ನನ್ನ ಪಯಣ ಮುಂದುವರಿಸುತ್ತೇನೆ. ದಟ್ಟಾರಣ್ಯಕ್ಕೆ ಪದಗಳೇ ಇಲ್ಲ. ಖಾಲಿ ಖಾಲಿ ಪುಟಗಳು ಎಲ್ಲ ದಿಕ್ಕಿಗೂ ಹರಡಿವೆ. ಹಿಮದಲ್ಲಿ ಜಿಂಕೆಯ ಹೆಜ್ಜೆಯ ಗುರುತು: ಅದೊಂದು ಭಾಷೆ, ಪದಗಳೇ ಇಲ್ಲದ ಭಾಷೆ. (ಫ್ರಂ ಮಾರ್ಚ್ 1979 ಪದ್ಯದಿಂದ) ತೊಮಸ್ ‌ರವರ ಬಹುಕಾಲದ ಗೆಳೆಯ ಮತ್ತು ಆತನ ಪದ್ಯಗಳನ್ನು ಇಂಗ್ಲಿಷಿಗೆಅನುವಾದಿಸಿರುವ ರಾಬಿನ್ ಫುಲ್ಟನ್ ತೋಮಸ್ ಮತ್ತು ಆತನ ಕಾವ್ಯದ ಬಗ್ಗೆಈ ರೀತಿ ಹೇಳಿದ್ದಾನೆ: `ಕೆಲವೊಂದು ಕವಿಗಳು ಭಾಷೆಯನ್ನು ಅದೆಷ್ಟು ದಟ್ಟವಾಗಿಬಳಸುತ್ತಾರೆಂದರೆ, ಅವುಗಳನ್ನು ಅನುವಾದಿಸಲು ಆಸ್ಪದವೇ ಇರುವುದಿಲ್ಲ.ತ್ರಾನ್ಸ್ತ್ರೋಮರ್ ಸಹ ಅದೇ ರೀತಿಯ ಕವಿ. ಆತ ಹಲವಾರು ರೀತಿಗಳಲ್ಲಿಸಾಪೇಕ್ಷವಾಗಿ ಸಾಹಸಿಕೆಯಿಲ್ಲದ ಮತ್ತು ಸರಳವಾಗಿರುವ ಭಾಷೆ ಬಳಸುತ್ತಾನೆಹಾಗೂ ಓದುಗರಿಗೆ ವಿಶಿಷ್ಟ ಪ್ರತಿಮೆಗಳನ್ನು ನೀಡುತ್ತಾನೆ. ಆ ಪ್ರತಿಮೆಗಳುಓದುಗರಿಗೆ ಅಚ್ಚರಿ ಮೂಡಿಸುವುದರ ಜೊತೆಗೆ ಶಾಕ್ ಸಹ ನೀಡುತ್ತವೆ. ಕವಿಮಾಡಬೇಕಾದುದು ಅದನ್ನೇ.’ ತೊಮಸ್ ತನ್ನ ಪದ್ಯಗಳನ್ನು `ಭೇಟಿಯತಾಣಗಳು’ ಎಂದು ಕರೆದಿದ್ದಾನೆ. ಆತನ ಪ್ರಕಾರ ಅಲ್ಲಿ ಕತ್ತಲು ಮತ್ತು ಬೆಳಕು,ಅಂತರಂಗ ಮತ್ತು ಬಹಿರಂಗ ಪರಸ್ಪರ ಘರ್ಷಿಸಿ ಜಗತ್ತಿನೊಂದಿಗೆ,ಚರಿತ್ರೆಯೊಂದಿಗೆ ಅಥವಾ ನಮ್ಮೊಂದಿಗೇ ಒಂದು ಆ ಕ್ಷಣವೇ ರೂಪುಗೊಳ್ಳುವಹೊಸ ಸಂಪರ್ಕವೊಂದನ್ನು ಉಂಟುಮಾಡುತ್ತದೆ. ಎಂಭತ್ತು ವರ್ಷದ ತೊಮಸ್ ‌ರವರ ಹದಿನೈದು ಕವನ ಕೃತಿಗಳು ಅರವತ್ತಕ್ಕೂಹೆಚ್ಚು ಭಾಷೆಗಳಿಗೆ ಅನುವಾದಗೊಂಡಿವೆ. ಅವುಗಳನ್ನು ಮಲಯಾಳಂಗೆಕೆ.ಸಚ್ಚಿದಾನಂದನ್ ಅನುವಾದಿಸಿದ್ದಾರೆ. 1984ರಲ್ಲಿ ಭೋಪಾಲ್ ಗ್ಯಾಸ್ದುರಂತದ ನಂತರ ಭೋಪಾಲ್ ಗೆ ತೊಮಸ್ ಭೇಟಿ ನೀಡಿದ್ದರು ಹಾಗೂಸಚ್ಚಿದಾನಂದನ್ ‌ರವರ ಜೊತೆಯಲ್ಲಿ ಯೂನಿಯನ್ ಕಾರ್ಬೈಡ್ ಕಾರ್ಖಾನೆಎದುರು ದುರಂತದಲ್ಲಿ ಮಡಿದವರ ಸಾಂತ್ವನಕ್ಕಾಗಿ ಕಾವ್ಯ ವಾಚನಮಾಡಿದ್ದರೆಂದು ಸಚ್ಚಿದಾನಂದನ್ ‌ರವರೇ ಹೇಳಿದ್ದಾರೆ. ತೊಮಸ್ ಗಾಸ್ಟ ತ್ರಾನ್ಸ್ತ್ರೋಮರ್ ಹುಟ್ಟಿದ್ದು 1931ರ ಏಪ್ರಿಲ್ 15ರಂದು. ತನ್ನತಂದೆ ವಿಚ್ಛೇದನದಿಂದ ದೂರವಾದ ನಂತರ ಶಾಲಾ ಅಧ್ಯಾಪಕಿತಾಯಿಯೊಂದಿಗೆ ಬೆಳೆದ. ಸ್ಟಾಕ್ಹೋಮ್ ‌ನಲ್ಲಿನ ತನ್ನ ಶಾಲಾ ದಿನಗಳಲ್ಲಿಯೇ ಆತಪದ್ಯ ಬರೆಯಲು ಆರಂಭಿಸಿದ. ತನ್ನ ಇಪ್ಪತ್ತಮೂರನೇ ವಯಸ್ಸಿನಲ್ಲಿಯೇ ತನ್ನಮೊಟ್ಟ ಮೊದಲ ಕವನ ಸಂಕಲನ `ಹದಿನೇಳು ಪದ್ಯಗಳು’ ಪ್ರಕಟಿಸಿದ. 1956ರಲ್ಲಿಸ್ಟಾಕ್ಹೋಮ್ ವಿಶ್ವವಿದ್ಯಾನಿಲಯದಲ್ಲಿ ಮನಶಾಸ್ತ್ರದಲ್ಲಿ ಪದವಿಯನ್ನು ಪಡೆದುಕೆಲವರ್ಷಗಳು ಬಾಲಾಪರಾಧಿಗಳ ಕೇಂದ್ರದಲ್ಲಿ ಆ ಮಕ್ಕಳು ಸಮಾಜದಲ್ಲಿಉತ್ತಮ ಪ್ರಜೆಗಳಾಗಲು ಮನಶಾಸ್ತ್ರಜ್ಞನಾಗಿ ಕಾರ್ಯನಿರ್ವಹಿಸಿದ. ಆತಮನಶಾಸ್ತ್ರಜ್ಞನಾಗಿದ್ದುದು ಮನುಕುಲದ ಮನಸ್ಸಿನ ಜಾಲಾಟವನ್ನು ತನ್ನಕಾವ್ಯದಲ್ಲಿ ವ್ಯಕ್ತಗೊಳಿಸಲು ಸಾಧ್ಯವಾಗಿರಬಹುದು. 1990ರಲ್ಲಿ ಪಾರ್ಶ್ವವಾಯುವಿಗೆಬಲಿಯಾದ ಆತ ಹೆಚ್ಚು ಓಡಾಡದಾದ ಹಾಗೂ ಮಾತು ಸಹ ನಿಂತುಹೋಯಿತು.ಆದರೆ ಆತ ತನ್ನ ಕಾವ್ಯರಚನೆಯನ್ನು ಮುಂದುವರಿಸಿದ. ಆತನ ಇತ್ತೀಚಿನಕೃತಿಯೆಂದರೆ 2004ರಲ್ಲಿ ಪ್ರಕಟವಾದ `ದ ಗ್ರೇಟ್ ಎನಿಗ್ಮಾ’. ಕಾವ್ಯದ ರಚನೆಯಜೊತೆಗೆ ಆತ ಪಿಯಾನೊ ವಾದಕ ಸಹ. ಪಾಶ್ರ್ವವಾಯುವಿಗೆ ಬಲಿಯಾಗಿದ್ದರೂಒಂದೇ ಕೈಯಲ್ಲಿ ಈಗಲೂ ಪಿಯಾನೊ ನುಡಿಸುತ್ತಾನೆ. ನೋಬೆಲ್ ಬಹುಮಾನಸೇರಿದಂತೆ 1966ರಿಂದ ತೊಮಸ್ಗೆ ಒಂಭತ್ತು ರಾಷ್ಟ್ರೀಯ ಮತ್ತುಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳು ಸಂದಿವೆ. […]

read more
ನಾಟಕ ಬೆಂಗಳೂರು-ನಾಟಕೋತ್ಸವಕ್ಕೆ ಬನ್ನಿ..
ನಾಟಕ ಬೆಂಗಳೂರು-ನಾಟಕೋತ್ಸವಕ್ಕೆ ಬನ್ನಿ..

ಈ ವರ್ಷದ ’ನಾಟಕ ಬೆಂಗ್ಳೂರು’ ನಾಟಕೋತ್ಸವವು 2 ನವೆಂಬರ್ 2011 ರಿಂದ 11 ನವೆಂಬರ್ 2011 ರವರೆಗೆ ನಡೆಸಲಾಗುತ್ತಿದೆ. ಬೆಂಗಳೂರಿನ ನಾಟಕಾಸಕ್ತರು ಹತ್ತು ಹೊಸಬಗೆಯ ನಾಟಕ ಪ್ರದರ್ಶನಗಳನ್ನು ನೋಡಲು ದಯಮಾಡಿ ಬನ್ನಿ.

read more
ನರೇಶ್ ಮಯ್ಯ ಕವಿತೆ: ಸೆಲೆಸುಟ್ಟ ಸಂಗಾತ
ನರೇಶ್ ಮಯ್ಯ ಕವಿತೆ: ಸೆಲೆಸುಟ್ಟ ಸಂಗಾತ

-ನರೇಶ್ ಮಯ್ಯ ಸೆಲೆಸುಟ್ಟರೂ ಬಿಡಲಿಲ್ಲ ಭ್ರಾಂತ ಭೂಯಿಷ್ಟ ಬ್ರಹ್ಮಾಂಡ, ನೆಲೆಬಿಟ್ಟರೂ ನೆಡಲಿಲ್ಲ ನೀಗಿಕೊಂಡ ನೆನಪ. ಅಜ್ಙಾತದವಸ್ಥೆಯ ನಟ್ಟ ನಡುವಲ್ಲೇ ನಿಲುಕಬೇಕು ನೀಲಾಂಜನನ ಕಾಲಾಂತರ ಥಿಯರಿ. ಬುಡ ಮಟ್ಟಸಮೇಲು ಮಾಡಿ ಬಿದ್ದಿತ್ತುತಾತ ಬಿತ್ತಿದ್ದ ಹುಣಸೆ. ಕಾದು ಕಾವಲಿಗಿರುತ್ತಿತ್ತು ಅಮ್ಮ ಹಚ್ಚಿಟ್ಟ ಹಣತೆ ಅಪ್ಪನ […]

read more
ನಾಳೆ ಬಸವನಗುಡಿಯಲ್ಲಿ ‘ಪುಸ್ತಕ ಪರಿಷೆ’
ನಾಳೆ ಬಸವನಗುಡಿಯಲ್ಲಿ ‘ಪುಸ್ತಕ ಪರಿಷೆ’

Sunday, October 30 · 10:00am – 5:00pm ವಾಲಿಬಾಲ್ ಗ್ರೌ೦ಡ್, ಬಸವನಗುಡಿ, ನೆಟ್ಟಕಲ್ಲಪ್ಪ ವೃತ್ತ, ಬೆ೦ಗಳೂರು ಓದು ಪರ೦ಪರೆ ನಶಿಸಿಹೋಗುತ್ತಿದೆ ಎನ್ನುತ್ತಿರುವ ಈ ಕಾಲದಲ್ಲೂ ಪುಸ್ತಕ ಪ್ರಕಾಶನ ನಿ೦ತಿಲ್ಲ. ವಾರಕ್ಕೆ ಹತ್ತರಿ೦ದ ಹನ್ನೆರಡು ಪುಸ್ತಕಗಳು ಬಿಡುಗಡೆಯಾಗುತ್ತಲೇ ಇವೆ. ಓದುಗ ಎ೦ದಿಗೂ ಕಡಿಮೆಯಾಗಲಾರ. ಹೀಗೆ ಬಿಡುಗಡೆಯಾಗುವ ಪುಸ್ತಕಗಳೆಲ್ಲವನ್ನು […]

read more
ಬರುತ್ತಿದೆ… ‘ತಿನ್ನಲಾಗದ ಬಿಸ್ಕತ್ತು, ನುಂಗಲಾಗದ ಟ್ಯಾಬ್ಲೆಟ್ಟು’
ಬರುತ್ತಿದೆ… ‘ತಿನ್ನಲಾಗದ ಬಿಸ್ಕತ್ತು, ನುಂಗಲಾಗದ ಟ್ಯಾಬ್ಲೆಟ್ಟು’

ಶ್ರೀನಿಧಿಯವರ ಹೊಸ ಪುಸ್ತಕ ‘ತಿನ್ನಲಾಗದ ಬಿಸ್ಕತ್ತು, ನುಂಗಲಾಗದ ಟ್ಯಾಬ್ಲೆಟ್ಟು’  ನವೆಂಬರ್ ೬ರಂದು ಭಾನುವಾರ ಸಂಜೆ ಲೋಕಾರ್ಪಣೆಯಾಗಲಿದೆ.

read more

Pin It on Pinterest

Share This