ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಲಕ್ಷ್ಮೀಶ ತೋಳ್ಪಾಡಿ ಉಪನ್ಯಾಸ: ಬನ್ನಿ..
ಪಳೆಯುಳಿಕೆಗಳು
-ನಾ.ಬಾಲಕೃಷ್ಣ 1 ದ್ವಾಪರದಿ ವಿದುರ ನೆಟ್ಟ ಅಶ್ವತ್ಥ ಒಣ ಒಣಗಿ ಲೊಡ್ಡಾಗಿ ನೊಣ ಮುತ್ತ ನಾಗಬನ ಜಡ್ಡಾಗಿ ಗೋಳಿಟ್ಟ ಗಾಳಿ; ಮನದಿಚ್ಛೆ ಪೂರೈಸದೆಯೆ ಬಯಬಯಸಿ ಹರಕೆ ಹೊತ್ತರು ಗಬ್ಬ ಕಟ್ಟದು ಬಂಜೆ ಬದುಕಿಗೆ; ನಾಯಿ ನರಿ ಊಳಿಟ್ಟ ಮೇಳ ಕುಟು ಕುಟುಕು ಮರಕುಟುಕದ ತಾಳ. ಅತ್ತತ್ತ ಏಳು ಗಿರಿ ಉಪ್ಪರಿಗೆ ವಾಸಿಗೂ ಕೊಪ್ಪರಿಗೆ ತುಂಬಿಸುವ...
ಅವಧಿ recommends..
ಲೆಟ್ ಪಾಲಿ ಥ್ರೈವ್ ಯಾನೆ ಯಾರೇ ಕೂಗಾಡಲಿ ರಚನೆ : ಕೋಟಗಾನಹಳ್ಳಿ ರಾಮಯ್ಯ ನಿರ್ದೇಶನ ಮತ್ತು ಪ್ರಸ್ತುತಿ : ಆದಿಮ ರಂಗ ತಂಡ ಸಮಯ : ಮಾರ್ಚ 28 ಸಂಜೆ 7.30 ಸ್ಥಳ : ರಂಗಶಂಕರ ,ಬೆಂಗಳೂರು. ಟಿಕೆಟ್ ದರ : 100 ರೂ. ಟಿಕೆಟ್ ದೊರೆಯುವ ಸ್ಥಳ : ರಂಗಶಂಕರ, http://www.indianstage.in/EventDetails.do?eventId=4363 9591728050...
ನೀರು ವ್ಯಾಪಾರದ ಸರಕಾಗಬಾರದು…
ಆರಿದ ಬಾಯಿಗಳಿಗೆ ಎಲ್ಲಿದೆ ಸಾಂತ್ವನ? ಡಾ| ಶ್ರೀನಿವಾಸ ಕಕ್ಕಿಲ್ಲಾಯ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ ಎಲ್ಲಾ ಜೀವಿಗಳ ಕಣಕಣದಲ್ಲೂ ಇರುವ ನೀರು ವ್ಯಾಪಾರದ ಸರಕಾಗಬಾರದು ಅನಂತಾನಂತವಾದ ಈ ತಾರಾಮಂಡಲದಲ್ಲಿ ಭೂಮಿಯಂತಹ ಕೆಲ ಗ್ರಹಗಳಲ್ಲಷ್ಟೇ ನೀರಿರುವುದು, ಅಲ್ಲಷ್ಟೇ ಜೀವರಾಶಿಯಿರುವುದು. ನಮ್ಮ ದೇಹದೊಳಗೆ ನೀರಿನಂಶ ನೂರಕ್ಕೆ...
ಅಚಿಬೆಯ ನೆನೆದು ಜೋಗಿ
ತನ್ನ ಹರಗಣಗಳ ಕಂತೆಯಿಂದ ಅವಳು ತುಂಡು ಬಾಚಣಿಕೆ ಎತ್ತಿಕೊಂಡು ಅವನ ನೆತ್ತಿಯಲ್ಲಿ ಅಳಿದುಳಿದ ಕೆಂಚುಕೂದಲನ್ನು ಬಾಚತೊಡಗಿದಳು. ಕಣ್ಣಲ್ಲೇ ಗುನುಗುತ್ತಾ ಬೈತಲೆ ತೆಗೆದಳು. ಪೂರ್ವಾಶ್ರಮದ ಬದುಕಲ್ಲಿ ಇದೊಂದು ಅರ್ಥಹೀನ ನಿತ್ಯಕರ್ಮ. ಹುಡುಗ ತಿಂಡಿ ತಿಂದು ಸ್ಕೂಲಿಗೆ ಹೊರಡುವ ಮೊದಲಿನ ಮಾಮೂಲು ಕೆಲಸ. ಈಗ ಅವನ ಪುಟ್ಟ ಗೋರಿಯ ಮೇಲೆ...
ಲಂಕೇಶರ ನೆನೆದು ನೀಲು ಶೈಲಿಯ ಪದ್ಯಗಳು
ಜೋಗಿ ಲಂಕೇಶ್ -1 ನಾನು ಅರಿಯಲು ಯತ್ನಿಸಿದಷ್ಟೂ ಕಗ್ಗಂಟಾಗುವ ಅವಳ ವರ್ತನೆಯ ನೆನೆಯುತ್ತಿದ್ದೆ. ಅವಳು ನಿನ್ನ ಒಳದನಿ ಅಂದು ಚಕಿತಗೊಳಿಸಿದಿರಿ. ಈಗ ನನ್ನನ್ನು ನಾನು ಹೇಗೆ ತಿಳಿಯಲಿ ಗುರುವೆ? ಲಂಕೇಶ್ -2 ಮುಸ್ಸಂಜೆಯ ಕಥಾ ಪ್ರಸಂಗದಲ್ಲಿ ಉಮಾಪತಿಯಾಗಿ ಸೇರಿಕೊಳ್ಳಲೇ ಎಂದು ಕೇಳಿದ್ದಕ್ಕೆ ವಾಮನನಾಗು ಎಂದು ಶಪಿಸಿದ್ದೇಕೆ?...
ನವೀನ ಸೂರಿಂಜೆ: ಜೈಲು ಎಂದರೆ..
ವಿಚಾರಣಾಧೀನ ಕೈದಿಗಳ ಮತದಾನದ ಹಕ್ಕು ನವೀನ್ ಸೂರಿಂಜೆ ಕೃಪೆ: ವಿಜಯ ಕರ್ನಾಟಕ ಕೇರಳದ ಮೀನುಗಾರರನ್ನು ಕೊಂದ ಆರೋಪ ಎದುರಿಸುತ್ತಿರುವ ಇಟಲಿಯ ನೌಕಾ ಪಡೆಯ ಬಂಧಿತ ಕೈದಿಗಳನ್ನು ಇಟಲಿಯಲ್ಲಿ ನಡೆಯುತ್ತಿರುವ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಭಾರತದ ಸುಪ್ರಿಂ ಕೋರ್ಟು ಕೆಲವು ವಾರಗಳ ಹಿಂದೆ ಅನುಮತಿ ನೀಡಿತ್ತು. ಈ ಮೂಲಕ ಭಾರತದಲ್ಲಿ...
ಏನಾದರೂ ಸುಳಿವು ಇದ್ದರೆ ದಯಮಾಡಿ ಕೊಡಿ..
ಮಿತ್ರರೇ, ಶತಮಾನದ ಹಿಂದೆ ಬದುಕಿದ್ದ ಬೈರವಿ ಕೆಂಪೇಗೌಡ ಎಂಬ ಮಹಾನ್ ಗಾಯಕನ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇನೆ.ಹೆಚ್. ಎಲ್. ನಾಗೇಗವಡರು ಈ ಗಾಯಕನ ಕುರಿತು ಕಾದಂಬರಿ ಬರೆದಿದ್ದಾರೆ. ಡಿ.ವಿ.ಜಿ. ಕೆಂಪೇಗೌಡ ತಮ್ಮ ಮನೆಗೆ ಬಂದು ಹೋಗುತ್ತಿದ್ದುದನ್ನು ದಾಖಲಿಸಿದ್ದಾರೆ. ಕರ್ನಾಟಕದ ಜೊತೆಗೆ ತಮಿಳುನಾಡಿನಲ್ಲಿ ಕೆಂಪೇಗೌಡ...
ಮೆಗಾ ಸೀರಿಯಲ್ಲುಗಳು ಮುಗಿಯುವುದಿಲ್ಲ..
ಅಪಾರ ಸದಾ ಕತ್ತಿ ಮಸೆಯುತ್ತಾ, ಫೋನಿನಲ್ಲಿ ಇನ್ನೊಬ್ಬರನ್ನು ಸರ್ವನಾಶ ಮಾಡುತ್ತೇವೆಂದು ಸವಾಲು ಹಾಕುತ್ತಲೇ ಇರುವ ರೌಡಿ ಹೆಣ್ಣುಗಳು, ಕಣ್ಣು, ಕಿವಿ, ಮನಸ್ಸುಗಳನ್ನು ಏಕಕಾಲಕ್ಕೆ ತುಕುಡ ಮಾಡುವ ಸಂಕಲನಕಾರ ಮತ್ತು ಸಂಗೀತ ನಿರ್ದೇಶಕರು, ಪುಗಸಟ್ಟೆ ಸಿಕ್ಕರೆ ಏನನ್ನೂ ನೋಡುತ್ತೇವೆಂದು ಪಟ್ಟಾಗಿ ಟಿವಿ ಮುಂದೆ ಕೂತಿರುವ ನಾವು-ಇವಿಷ್ಟೂ...
ಅವನು ನೀಲ್….
ಪ್ರಿಯಾ ಕೆರ್ವಾಶೆ ತುಂಬ ದಿನಗಳ ಬಳಿಕ ಸಮುದ್ರ ತೀರಕ್ಕೆ ಬಂದಿದ್ದೆ., ನಡು ಮಧ್ಯಾಹ್ನ ತಲೆಮೇಲೆ ಬಿರುಬಿಸಿಲು ಉಪ್ಪುನೀರಿನೊಂದಿಗೆ ಬೀಸುವ ಹಸಿಗಾಳಿ ಅವನು ಎದುರಿಗೇ ಬಂದು ವಿಶ್ ಮಾಡಿದಾಗ ತಡವರಿಸುವ ಹಾಗಾಯ್ತು ನನ್ನ ನೀಲಿ ಸ್ಕರ್ಟನ್ನು, ಕೆಳಗಿನ ಪಾದವನ್ನು ಅಚಾನಕ್ ಅನ್ನುವ ಹಾಗೆ ನೋಡಿ ನಾನೇನೋ ಹೇಳಲು ಹೊರಟಾಗ ಎಚ್ಚರಾದವನ...
ಕಟ್ಟುವೆವು ನಾವು…
ಹುಟ್ಟುಹಬ್ಬದ ಪುಸ್ತಕ
ರಾಮಚಂದ್ರ ದೇವ ಇದು ನನ್ನ ಹೊಸ ಪುಸ್ತಕ. ಇದರ ಪ್ರಕಾಶಕರು ಮಿತ್ರ ಶಿವಾನಂದ ಗಾಳಿ. ಇವತ್ತಿನ ನನ್ನ ಹುಟ್ಟು ಹಬ್ಬದ ಪ್ರಯುಕ್ತ ಇದನ್ನು ಉಡುಗೊರೆ ಎಂದು ಪ್ರಕಟಿಸಿ ಪ್ರತಿ ಕಳಿಸಿದ್ದಾರೆ. ನನ್ನ ಮೇಲಿನ ಅವರ ಪ್ರೀತಿಗೆ ಮನಸ್ಸು ತುಂಬಿಬಂದಿದೆ. ಅವರಿಗೆ, ಅವರ ಬಳಗಕ್ಕೆ ಕೃತಜ್ಞ ಎಂದಷ್ಟೇ ಹೇಳಬಲ್ಲೆ. ಪೀಟರ್ ಬ್ರೂಗೆಲ್ ನ ಇಕಾರಸ್...
ಇಂದು ’Earth Hour'
ಬ್ರೆಕಿಂಗ್ ನ್ಯೂಸ್: ಚಿನುವಾ ಅಚಿಬೆ ಇನ್ನಿಲ್ಲ
Nigeria’s literary icon and publisher of several novels, Chinua Achebe, is dead. Report by Premium Times Online Mr. Achebe, 82, died in the United States where he was said to have suffered from an undisclosed ailment. PREMIUM TIMES learnt he died last night in a...
ಲಂಕೇಶ್, ನೀಲು, ಯೋಗರಾಜ ಭಟ್
ಜೈಲಿನೊಳಗಿಂದ ನವೀನ್ ಸೂರಿಂಜೆ
‘ಮಗ್‌ಶಾಟ್’ ಆಚೆಗಿನ ಮುಖ... ನವೀನ್ ಸೂರಿಂಜೆ ಕೃಪೆ: ವಿಜಯ ಕರ್ನಾಟಕ ಆತನ ಮೇಲೆ ಆರು ಪ್ರಕರಣ ದಾಖಲಾಗಿತ್ತು. ಪೊಲೀಸರ ಪ್ರಕಾರ ಆತನೊಬ್ಬ ಪಳಗಿದ ಸರಗಳ್ಳ. ಬೀದಿಯ ಬದಿಯಲ್ಲಿ ಅವಿತುಕೊಂಡಂತೆ ನಿಂತಿರುತ್ತಿದ್ದ ಆತ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರ ಕುತ್ತಿಗೆಗೆ ಕೈ ಹಾಕಿ ಸರ ಎಳೆದು ಪರಾರಿಯಾಗುತ್ತಿದ್ದ. ಮಹಿಳೆ ಬೊಬ್ಬೆ...
ಪ್ರೊ ಸಿ ಎನ್ ಆರ್: ನೆರಳುಗಳ ಬೆನ್ನು ಹತ್ತಿ..
ನಾಡು ಕಂಡ ಉತ್ತಮ ವಿಮರ್ಶಕ ಪ್ರೊ ಸಿ ಎನ್ ರಾಮಚಂದ್ರನ್ ಅವರ ಆತ್ಮಚರಿತ್ರೆ 'ನೆರಳುಗಳ ಬೆನ್ನು ಹತ್ತಿ' ಹಾಗೂ ಅವರ ಬದುಕು ಬರಹಗಳನ್ನು ಶೋಧಿಸುವ ಕೃತಿ 'ರೂಪಾಂತರ ' ಭಾನುವಾರ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಅಂಕಿತ ಪ್ರಕಾಶನ ಈ ಎರಡೂ ಕೃತಿಗಳನ್ನು ಪ್ರಕಟಿಸಿದೆ ಸಿ ಎನ್ ಆರ್ ಅವರ ಆತ್ಮಚರಿತ್ರೆ ಹೇಗಿರಬಹುದು ಎಂಬ...
ಸಂಧ್ಯಾರಾಣಿ ಕಾಲಂ: ನನ್ನ ಆಕಾಶವನ್ನು ತುಂಡು ಮಾಡಿದವರು ಯಾರು?
ಅವಧಿಯಲ್ಲಿ ಅಂಕಣ ಬರೆಯಲು ಹೇಳಿದಾಗ ಮೊದಲ ಭಾವ ಸಂತಸ ಮತ್ತು ಹೆದರಿಕೆ! ನಾನು ಕಣ್ಣರಳಿಸಿ ನೋಡುತ್ತಿದ್ದ, ಮನಸ್ಸಿಟ್ಟು ಓದುತ್ತಿದ್ದ, ಮತ್ತೆ ಮತ್ತೆ ಓದುತ್ತಿದ್ದ ಅವಧಿಯಲ್ಲಿ ನಾನೂ ನಿಯಮಿತವಾಗಿ, ವಾರದಿಂದ ವಾರಕ್ಕೆ ಬರೆಯುವುದು ಸಂತಸ ಮತ್ತು ಹೆದರಿಕೆ ಎರಡಕ್ಕೂ ಕಾರಣ.. ಹೇಗೋ ಸಂಭಾಳಿಸಿಕೊಂಡು ಬರೆಯಲು ಕುಳಿತೆ. ಆದರೆ ನಾನು...
ಸಂಪು ಕಾಲಂ : ವೈದ್ಯೋ ನಾರಾಯಣೋ ಹರಿಃ?!
ನಮ್ಮ ಸಮಾಜದಲ್ಲಿ ವೈದ್ಯರಿಗೆ ಅತ್ಯಂತ ಗೌರವ ಸ್ಥಾನವಿದೆ. ಕಣ್ಣಿಗೆ ಕಾಣುವ ದೇವರಂತೆ ವೈದ್ಯರನ್ನು ನಾವು ಭಾವಿಸುತ್ತೇವೆ. ನಮ್ಮ ದೇಹದಲ್ಲಿ ಜರುಗುತ್ತಿರುವ ಅನೇಕ ಅನಾನುಕೂಲಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಅದಕ್ಕೆ ತಕ್ಕ ಔಷಧಿ ಕೊಟ್ಟು, ಆ ಅನಾರೋಗ್ಯವನ್ನು ಓಡಿಸುವುದು, ಪುನಃ ನಮ್ಮಲ್ಲಿ ಚೈತನ್ಯ ತುಂಬುವುದು ಎಂದರೆ ಸಾಮಾನ್ಯ...
ಇಲ್ಲಿದೆ ತಿಪಟೂರು ಸಾಹಿತ್ಯ ಸಮ್ಮೇಳನದ ಝಲಕ್
ಬಹುಷಃ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಮಾದರಿಯಾಗುವಂತಹ ಸಮ್ಮೇಳನಕ್ಕೆ ತಿಪಟೂರು ಸಾಕ್ಷಿಯಾಯಿತು. ಬಿಜಾಪುರದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನವು ಸಮ್ಮೇಳನ ಹೇಗಿರಬಾರದು ಎನ್ನುವುದಕ್ಕೆ ಸಾಕ್ಷಿಯಾದರೆ ತಿಪಟೂರಿನಲ್ಲಿ ಜರುಗಿದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕ ನಡೆಸಿದ ಸಮ್ಮೇಳನವು ಮಾದರಿಯಾಗಿ ನಿಂತಿತು. ರಂಗಕರ್ಮಿ...
ಜನಸಾಹಿತ್ಯ ಸಮಾವೇಶ ಯಾಕೆ?
'ಕರ್ನಾಟಕ ಜನಸಾಹಿತ್ಯ ಸಮಾವೇಶ' ಸಂಭ್ರಮದ ಪರ್ಯಾಯವಲ್ಲ. ಡಾ.ಎಸ್.ಬಿ.ಜೋಗುರ ಸಮಕಾಲಿನ ಸಾಮಾಜಿಕ, ಸಾಂಸ್ಕೃತಿಕ ಸಂದರ್ಭಗಳಲ್ಲಿ ಸಹಜವಾಗಿ ನಡೆಯಬಹುದಾದ ಉತ್ಸವಗಳು, ಸಂಭ್ರಮಗಳು ಬಹುತೇಕವಾಗಿ ವಾದಗ್ರಸ್ಥ ವಿಷಯಗಳಾಗಿ ಪರಿಣಮಿಸುವ ಜೊತೆಗೆ ಬೆಳಕಾಗದೇ, ಬಯಲಾಗದೇ ಬರೀ ಕಿಡಿ ಇಲ್ಲವೆ ಹೊಗೆ ಎಬ್ಬಿಸುವ ಸನ್ನಿವೇಶಕ್ಕೆ ನಾಂದಿಯಾಗಿ ಬಿಡುವ...





















