ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

’ಬಡತನ ದುಃಖ, ದಾರಿದ್ರದಿ೦ದ ನಾನು ಬರಹವನ್ನು ಸ೦ಪಾದಿಸಿದೆ..’
’ಬಡತನ ದುಃಖ, ದಾರಿದ್ರದಿ೦ದ ನಾನು ಬರಹವನ್ನು ಸ೦ಪಾದಿಸಿದೆ..’

ಓದಿ ಓದಿ ಮರುಳಾಗಿ- "ಈ ಹೊತ್ತಿಗೆ" ಸುನಿಲ್ ಹೊಸಕೋಟೆ ಕೃಪೆ : ವಾರ್ತಾ ಭಾರತಿ "ಅಯ್ಯೋ ಬಿಡ್ರಿ ಈ ಕಾಲಕ್ಕೆ ಕನ್ನಡ ಯಾರ್ ಓದ್ತಾರೆ? ಆಗಿನ ಕಾಲದ ಹಾ೦ಗಿಲ್ಲ. ನಮ್ಮ ಕಾಲದಾಗ ಅದೆಷ್ಟು ಪುಸ್ತಕ ಜನ್ಗೊಳು ಓದ್ತಿದ್ರು, ನಾನು ಅದೆಷ್ಟು ಓದ್ತಿದ್ದೆ ಅ೦ದ್ರೆ examನಾಗೆ ಬರೀ ಸಾಯಿಸುತೆ ಕಾದ೦ಬರೀನೆ ಬರೆದು ಪಾಸಾದೆ ನೋಡ್ಪಾ!" ಅ೦ತ...

read more
’ಆಕಾಶ ದಿಟ್ಟಿಸಿದರೆ ಅಖಂಡ ನೆನಪುಗಳ ಫಳಫಳ ತಾರೆ..’ – ಪ್ರಜ್ಞಾ ಮತ್ತೀಹಳ್ಳಿ
’ಆಕಾಶ ದಿಟ್ಟಿಸಿದರೆ ಅಖಂಡ ನೆನಪುಗಳ ಫಳಫಳ ತಾರೆ..’ – ಪ್ರಜ್ಞಾ ಮತ್ತೀಹಳ್ಳಿ

ನನ್ನ ನಾಳೆಗಳಲ್ಲಿ ಪ್ರಜ್ಞಾ ಮತ್ತಿಹಳ್ಳಿ 1 ಮಂಕಿ ಕ್ಯಾಪು ತುಂಬು ತೋಳಿನ ಸ್ವೆಟರ್ನಲ್ಲಿ ಹುದುಗಿದ ನೆರಿಗೆ ಕೈ ನಡುಗಿಸಿ ರುಜು ಹಾಕುವಾಗ ದೇವರೇ ನನಗೆ ನನ್ನ ಹೆಸರು ನೆನಪುಳಿಯಲಿ 2 ಅವರವರ ಅಮ್ಮಂದಿರ ಅಂಗಿಯಲ್ಲಿ ಬಾಯೊರೆಸಿಕೊಳ್ಳುವ ಮೊಮ್ಮಕ್ಕಳಿಗೆ ಅಜ್ಜಿ ಬರೆದ ಪದ್ಯಗಳ ಕುಶಾಲಿಗಾದರೂ ಓದಲಿಕ್ಕೆ ಬರುತ್ತಿರಲಿ 3 ವಾತ ಕಡಿಮೆಯಾದ...

read more
ಅಪರಾಹ್ನವೇ ಅಸ್ತಂಗತನಾದ ರವಿಯನ್ನು ಹೇಗೆ ಮರೆಯಲಿ?
ಅಪರಾಹ್ನವೇ ಅಸ್ತಂಗತನಾದ ರವಿಯನ್ನು ಹೇಗೆ ಮರೆಯಲಿ?

ಮೋಹನ್ ವಿ ಕೊಳ್ಳೇಗಾಲ 2010 ಜುಲೈ ತಿಂಗಳಿನಲ್ಲಿ ಗೆಳೆಯನೊಬ್ಬನ ಮನೆಯಲ್ಲಿ ಅವನ ಲ್ಯಾಪ್ ಟಾಪ್ ನಲ್ಲಿ ಮೊದಲ ಬಾರಿ ಫೇಸ್ಬುಕ್ಕನ್ನು ನೋಡಿದ್ದೆ. ಆವೊತ್ತಿನವರೆವಿಗೂ ಫೇಸ್ಬುಕ್ಕೆಂಬುದು ಒಂದು ಗೀಳು ಎಂಬುದಷ್ಟೇ ನನಗೆ ಗೊತ್ತಿದ್ದು. ಆದರೆ ಅಂದು ಆತ ತನ್ನ ಊರಿನ, ಕೇರಿಯ, ರಾಜ್ಯ, ದೇಶ, ವಿದೇಶ ಗೆಳೆಯರನ್ನೆಲ್ಲಾ ಫೇಸ್ಬುಕ್ ಮೂಲಕ...

read more
ರವಿ ಮೂರ್ನಾಡು ಇನ್ನಿಲ್ಲ …
ರವಿ ಮೂರ್ನಾಡು ಇನ್ನಿಲ್ಲ …

ಅವಧಿಯ ಪ್ರೀತಿಯ ಓದುಗರೂ, ಬರಹಗಾರರೂ ಆಗಿದ್ದ ರವಿ ಮೂರ್ನಾಡು ಅವರ ನಿಧನದ ಸುದ್ದಿ ಕೇಳಿ ಅವಧಿಯೂ ಆಘಾತದಲ್ಲಿದೆ .... ಅವರ ಪತ್ನಿ ಮತ್ತು ಮಗನ ನೋವಿನಲ್ಲಿ ಅವಧಿಯೂ ಭಾಗಿ... ಅವರ ಒಂದು ಬರಹ ಅವರ ನೆನಪಿನೊಂದಿಗೆ ... ಪೆಟ್ಟಿಗೆಗೆ ಎಲ್ಲಾ ತುಂಬಿಸಿದ್ದೇನೆ. ಈ ಫೋಟೋ ಇಟ್ಟಿದ್ದೇನೆ.. ಹಗಲು-ರಾತ್ರಿಯ ರೆಕ್ಕೆ -ರವಿ ಮೂರ್ನಾಡು ಮಗ...

read more
'ಚಿದಾನಂದ ಮೂರ್ತಿಗೆ ಕಲ್ಲಿನಮೇಲೆಬರೆದ ಭಾಷೆ ಅರ್ಥವಾಗುತ್ತೇ ವಿನಃ’ ….
'ಚಿದಾನಂದ ಮೂರ್ತಿಗೆ ಕಲ್ಲಿನಮೇಲೆಬರೆದ ಭಾಷೆ ಅರ್ಥವಾಗುತ್ತೇ ವಿನಃ’ ….

ಹಂದಲಗೆರೆ ಗಿರೀಶ್ ಟಿಪ್ಪು ದೇಶಧ್ರೋಹಿ, ಹಿಂದುವಿರೋಧಿ ಎಂದು ಸಾಬೀತು ಪಡಿಸಲು ಹೆಣಗುತ್ತಿರುವ , ಹಾಗು ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸುತ್ತಿರುವ ಅಲ್ಪ ಸಂಖ್ಯಾತರ ವಿ ವಿ ಗೆ ಟಿಪ್ಪು ಹೆಸರಿಡುವುದನ್ನು ವಿರೋಧಿಸುತ್ತಿರುವ 'ಚಿದಾನಂದಮೂರ್ತಿ' ಬಗ್ಗೆ ಹಿಂದೊಮ್ಮೆ ' ಯು.ಅರ್.ಅನಂತಮೂರ್ತಿ' ಯವರು ಹೇಳಿದ ಒಂದುಮಾತು ನೆನಪಿಗೆ ಬಂತು...

read more
ಕಣ್ಣತುಂಬುವ ನಿನ್ನದೇ ಕನಸನು ಹೇಗೆ ಚೆಲ್ಲಲಿ …
ಕಣ್ಣತುಂಬುವ ನಿನ್ನದೇ ಕನಸನು ಹೇಗೆ ಚೆಲ್ಲಲಿ …

ಗಜಲ್ ಪ್ರಕಾಶ ಬಿ. ನಿನಗಾಗಿ ಹುಟ್ಟಿದ ಪ್ರೀತಿಯನು ಹೇಗೆ ಬಿಡಲಿ ಸಾಕಿ ಕಣ್ಣತುಂಬುವ ನಿನ್ನದೇ ಕನಸನು ಹೇಗೆ ಚೆಲ್ಲಲಿ ಸಾಕಿ   ಒಮ್ಮೊಮ್ಮೆ ಪ್ರೀತಿಗೂ ಗ್ರಹಣ ಹಿಡಿಯ ಬಹುದೇನೊ ಗೊತ್ತಿಲ್ಲ ನಮಗಾಗಿ ಕತ್ತಲಾದ ಗಳಿಗೆಯನು ಹೇಗೆ ದೂಡಲಿ ಸಾಕಿ   ನಿನ್ನ ನೆನಪ ಬತ್ತಿ ಹೊತ್ತಿ ಒಂದೇ ಸಮನೆ ಸುಡುತಿದೆ ನೀನಿಲ್ಲದೆ ಜಗವನು ಕಣ್ಣು...

read more
ಹಲಾ ಹಲಾ ಅಂತ ಎತ್ತಿನ್ನ ಗುದ್ದಿದ್ದರೆ  ಬಿತ್ತದ ಹೊಲಾ ಹ್ಯಾಂಗ ಬೆಳದೀತು…
ಹಲಾ ಹಲಾ ಅಂತ ಎತ್ತಿನ್ನ ಗುದ್ದಿದ್ದರೆ ಬಿತ್ತದ ಹೊಲಾ ಹ್ಯಾಂಗ ಬೆಳದೀತು…

ಆಧುನಿಕ ಕನ್ನಡ ಕಾವ್ಯದಲ್ಲಿ ಮನುಷ್ಯನ ಹುಡುಕಾಟ ಡಾ. ಪ್ರಕಾಶ ಗ. ಖಾಡೆ ಕನ್ನಡ ಕಾವ್ಯ ಹರಿವಿನಲ್ಲಿ ನೆಲೆನಿಂತ ಮಾನವತ್ವದ ಪರಿಕಲ್ಪನೆಯ ಓದು ಮತ್ತು ರಸಾನುಭವ ತುಂಬಾ ಆಪ್ತವಾದ ನೆಲೆಯಲ್ಲಿ ಹರವಿಕೊಳ್ಳುತ್ತದೆ. ಮಾನವೀಯತೆಯ ಮೂಲ ಸಂಸ್ಕರಣದಲ್ಲಿ ಉದಿಸಿದ ಯಾವುದೇ ಕಾವ್ಯ ಜನಮುಖಿ ಆಶಯಗಳನ್ನು ಪ್ರಕಟಿಸುತ್ತ ತನ್ನ ಇರುವಿಕೆಯ...

read more
ಅಪ್ಪ ಕಾಣೆಯಾಗಿದ್ದಾನೆ…
ಅಪ್ಪ ಕಾಣೆಯಾಗಿದ್ದಾನೆ…

ಬೇಲೂರು ರಘುನಂದನ್ ಆಯತಾರ ಸಂತೇಲಿ ಹತ್ತುಸೇರು ಪುರೀನ ಮುನ್ನಾ ಸಾಬ್ರಹತ್ರ ರುಪಾಯಿಗೊಂದು ಲೀಟರಂಗೆ ತಂದಿದ್ದು ಎಲ್ಲಾ ಖಾಲಿ. ಪುರಿಯ ಸಿಲ್ವಾರದ ಡಬ್ಬ ತಳಸೇರಿ ಗಷ್ಟ, ಕರಿಮಣ್ಣು, ಹೆಂಟೆ ತುಂಬ್ಕಂಡಿದೆ. ದರಿದ್ರ ಸೂಡ್ರು ಕಾಲ ಬೇರೆ ಶುರುವಾಗಿ ಮೈಯಲ್ಲಾ ಹೊಟ್ಟೆ. ಎಷ್ಟು ತಿಂದ್ರು ತಿಂದ ಅರ್ಧಗಂಟೆಗೆ ಹೊಟ್ಟೆ ಚುರುಕ್ ಅನ್ನುತ್ತೆ....

read more
ಸಾವಿಗೆ ಸರಿಯಾದ ಉತ್ತರ ಕೊಟ್ಟವರು ವಿಜಯಾ ದಬ್ಬೆ
ಸಾವಿಗೆ ಸರಿಯಾದ ಉತ್ತರ ಕೊಟ್ಟವರು ವಿಜಯಾ ದಬ್ಬೆ

ಒಡಲ ಬೆಂಕಿಯ ಚಿಗುರು ವಿಜಯಾದಬ್ಬೆ ಪ್ರಸನ್ನ ಚಲಂ ಇನ್ನು ಒಂದು ವರ್ಷದಲ್ಲಿ ಒಂದು ಸಂಕಲನ ತಯಾರಾಗುತ್ತದೆ. ಮಾತಿನಲ್ಲಿ ಸಂಪೂರ್ಣ ಭರವಸೆಯಿತ್ತು. ಅವರ ನಗು ನಮ್ಮ ಎದೆಯ ಮೇಲೆಲ್ಲಾ ಚೆಲ್ಲಿತು. ಅವರ ಕವನಗಳನ್ನು ಓದಿರಲಿಲ್ಲ ಅವರ ನಗುವಿಗಿಂತ ಸುಂದರ ಕವನ ಮತ್ತೊಂದಿರಲು ಸಾಧ್ಯವೆ ಇಲ್ಲ ಎನ್ನುವ ನಿಲುವಿಗೆ ನಾನೇ ಅಲ್ಲದೇ ಯಾರಾದರೂ...

read more
ಜವ್ವಾರಿ ಝಲಕ್- ಹಾಳಾಗಿ ಹೋತೋ ಹಗೇದಗಡ್ಡೆಲ್ಲಾ…
ಜವ್ವಾರಿ ಝಲಕ್- ಹಾಳಾಗಿ ಹೋತೋ ಹಗೇದಗಡ್ಡೆಲ್ಲಾ…

ಹಗೇದಾಗ ಜ್ವಾಳ ಅದಾವಂದ್ರ ಅಂಥಾ ಕುಟುಂಬಕ್ಕ ಏಪಿಎಲ್ ಕಾರ್ಡೂ ಬ್ಯಾಡ, ಬಿಪಿಎಲ್ ಕಾರ್ಡೂ ಬ್ಯಾಡೋಗು... ಮನ್ಯ ನಾನು ಬರದಿದ್ದ ಕತಿ ಓದಿ ಗೋಪಾಲ ವಾಜಪೇಯಿ ಸಾರಿದ್ದು, ಜ್ವಾಳದ ಅಂಬ್ಲಿನ ನೆಪ್ಪು ಮಾಡಿಕಂಡಿದ್ರು. ಅದಕ್ಕ ನಾನು ‘ಅವಸ್ರಕ್ಕ ಬಿದ್ದು ಹಗೇದಾಗಳ ಮುಗ್ಗಾ ಕೊಟ್ಟೀನೇನಾ ಅನ್ನಾ ಅಳುಕಿತ್ರಿ ಸರಾ’ ಅಂತ ರಿಪ್ಲೈ ಮಾಡಿದ್ಯ....

read more
ಕಾಡು ಹೂವಿನ ಸೊಲ್ಲು : ಹೊಳೆಸಾಲ ನೆಂಪು…….
ಕಾಡು ಹೂವಿನ ಸೊಲ್ಲು : ಹೊಳೆಸಾಲ ನೆಂಪು…….

ರೇಣುಕಾ ನಿಡಗುಂದಿ ಗೋಪಿ ಹಸುವಿನ ಸೆಗಣಿ ಹಾಕಿ ತೀಡಿ ತೀಡಿ ನೆಲ್ಲಕ್ಕಿ ಸಾರಿಸಿದ ಅಂಗಳದಲ್ಲಿ ತಿಂಗಳ ಬೆಳಕು ಚೆಲ್ಲಿದ ರಾತ್ರಿಯಲ್ಲಿ ಹೊಳೆಯೂರಿನ ಮನೆಯ ಜಗುಲಿಯ ಮೇಲೆ ಒರಗಿಕೊಂಡು ನೀಲಿ ಆಕಾಶವನ್ನೂ ಮಿಣುಕುವ ನಕ್ಷತ್ರಗಳನ್ನೂ ಎಣಿಸುವ ಆಟದಲ್ಲಿ ಸುಮ್ಮನೆ ಕನಸು ಹೆಣೆಯುತ್ತ ಮಲಗುವುದೆಂದರೆ ಅವಳಿಗೆ ಮೊದಲಿನಿಂದಲೂ ಹುಚ್ಚು ಪ್ರೀತಿ....

read more
ಬೆಳಿಗ್ಗೆ ಆತ ನನ್ನೆದುರು ಕಾಫಿ ಹಿಡಿದು ನಿಂತಿದ್ದ…
ಬೆಳಿಗ್ಗೆ ಆತ ನನ್ನೆದುರು ಕಾಫಿ ಹಿಡಿದು ನಿಂತಿದ್ದ…

ಓಲೆ ಪ್ರೀತಿ ಚಿತ್ರಾ ಸಂತೋಷ್ ವಿಜಯ ಕರ್ನಾಟಕದಲ್ಲಿ ಪ್ರಕಟಿತ ಕೆ.ಆರ್. ಮಾರ್ಕೆಟ್ ನಿಂದ ಬಸ್ ಹತ್ತಿದೆ. ಹುಡುಗಿಯೊಬ್ಬಳು ಪಕ್ಕದಲ್ಲೇ ಬಂದು ಕುಳಿತಳು. ಒಂದೇ ಸಮನೆ ನನ್ನ ಕಿವಿಗಳನ್ನು ನೋಡುತ್ತಾ ಕುಳಿತಿದ್ದಳು. ಅವಳು ಇಳಿಯುವ ಮೊದಲು "ಮೇಡಂ ನಿಮ್ಮ ಕಿವಿಯೋಲೆ ತುಂಬಾ ಚೆಂದ ಇದೆ'' ಅಂದಳು. "ಥ್ಯಾಂಕ್ಸ್'' ಅಂದೆ. "ಏನು...

read more
ಶಾಂತಿ ಅಪ್ಪಣ್ಣ ಕವಿತೆ: ಬಿರಿಯುವಾಗಿನ ಸುಖ
ಶಾಂತಿ ಅಪ್ಪಣ್ಣ ಕವಿತೆ: ಬಿರಿಯುವಾಗಿನ ಸುಖ

ಹೂವು ಶಾಂತಿ ಕೆ ಎ. ಹೊಸ ಮನೆಯ ಕಾಪೊಂಡಿನಲ್ಲೊಂದು ಬೋಳು ಗಿಡ .. ಉಳಿದಿತ್ತು ಒಂದೆರೆಡೆಲೆ ನಸು ಹಳದಿ ತಿಳಿಹಸಿರು   ಕಿತ್ತೆಸೆಯಬಹುದಿತ್ತು .. ಹೆಚ್ಚೆಂದರೆ ಅದೊಂದು ಬೇಡದ ಕಳೆ .. ಆದರೂ ಉಳಿಸಿಕೊಂಡೆ .. ಚಿಗುರಬಹುದೆಂದು ಮುಂದೆ ಕೊಡಬಹುದು ಇಲ್ಲಿಗೊಂದು ಕಳೆ   ಒಂದಿಷ್ಟು ಪ್ರೀತಿ ,ಅಕ್ಕರೆಯ ಆರೈಕೆ ಮೆಲ್ಲನೊಂದು...

read more
ಪ್ರವರ ಬರೆದದ್ದು: ಕೊಡ ರೊಕ್ಕ ಕೊಡಲಿಕ್ಕ ಈಟು ಮಾಡ್ತಿರಲ್ಲಾ… ಬ್ಯಾಡ ಬುಡ್ರಿ
ಪ್ರವರ ಬರೆದದ್ದು: ಕೊಡ ರೊಕ್ಕ ಕೊಡಲಿಕ್ಕ ಈಟು ಮಾಡ್ತಿರಲ್ಲಾ… ಬ್ಯಾಡ ಬುಡ್ರಿ

ಊರ ಗೌಡನ ಉಂಗುರ ಪ್ರವರ ಕೊಟ್ಟೂರ್ "ಎಲೋ ಬಾಡ್ಯ, ನಿನ ಬಾಯಾಗ್ ಮಣ್ ಹೊಯ್ಲಿ, ಸಾಸಿವಿ ಡಬ್ಬ್ಯಾಗ್ ಇಟ್ ರೊಕಾನೋಟು ಕದ್ದು ಕುಡ್ಕಂಡ್ ಬಂದೀಯಲ್ಲೋ..." ಎಂದು ತನ್ನೆಲ್ಲ ಕಸುವನ್ನು ಬಳಸಿ ಗಂಡನನ್ನು ಕೆಳಗೆ ಹಾಕಿಕೊಂಡು ಹರಿದ ಕೆರದಲ್ಲಿ ಬಡಿಯುತಿದ್ದ ದ್ಯಾಮವ್ವಳೂ, "ನಿನ್ ಎಮ್ಮಿ ಸಗಣಿ ವಾಸಿನಿ ಮನಿ ತುಂಬ ಹಳ್ಡ್ಯಾತಿ ನೋಡು, ಮಾಡಿದ್...

read more
ಸಂಪು ಕಾಲಂ : ಪೆಹಲಾ ನಶಾ ಮತ್ತು ಸಿಂಗಾಪುರ!
ಸಂಪು ಕಾಲಂ : ಪೆಹಲಾ ನಶಾ ಮತ್ತು ಸಿಂಗಾಪುರ!

ಮೊದಲ ಮಳೆ, ಮೊದಲ ಪ್ರೇಮ, ಮಗುವಿನ ಮೊದಲ ತಪ್ಪು ಹೆಜ್ಜೆ; ಈ ರೀತಿ ಎಲ್ಲಾ ಮೊದಲ ಅನುಭವಗಳೂ ರೋಮಾಂಚನ ಮತ್ತು ಸುಮಧುರ. ಈ ರೀತಿ ಅನುಭವ ಮತ್ತು ಅದರ ಅನುಭೂತಿ ಖಂಡಿತ ನಮ್ಮ ಜೀವನದಲ್ಲಿ ಒಂದು ವಿಶೇಷ. ಇದು 'ವಿಶೇಷ' ಎನಿಸಿಕೊಳ್ಳುವುದು ಬಹುಷಃ ಮನುಷ್ಯನ 'ಹೊಸದನ್ನು ಕಲಿಯುವ ತಿಣುಕಾಟ', 'ಆ ಕೌತುಕದಲ್ಲಿ ಯಾವುದನ್ನೋ ಅರಿಯುವ...

read more

Pin It on Pinterest

Share This