ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

'ಹೊಸ ಮುಖ್ಯಮಂತ್ರಿಗಳಲ್ಲಿ ಹಳೆಯ ನಿವೇದನೆಗಳು' – ಡಾ| ಶ್ರೀನಿವಾಸ ಕಕ್ಕಿಲ್ಲಾಯ

ಜನರ ಆಹಾರ, ಆರೋಗ್ಯ ಹಾಗೂ ನೆಮ್ಮದಿಗಳನ್ನು ಕಾಪಾಡುವುದಕ್ಕೆ ಆದ್ಯತೆ ನೀಡಿ ಡಾ| ಶ್ರೀನಿವಾಸ ಕಕ್ಕಿಲ್ಲಾಯ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರೇ, ಕರ್ನಾಟಕದ ಪ್ರಜ್ಞಾವಂತ ಮತದಾರರು ಹಲವು ನಿರೀಕ್ಷೆಗಳನ್ನಿಟ್ಟುಕೊಂಡು ತಮ್ಮ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದಿದ್ದಾರೆ, ತಾವು ಮುಖ್ಯಮಂತ್ರಿಗಳಾಗಿ ಅಧಿಕಾರ...

read more
ಮಕ್ಕಳ ಮೇಲಿನ ಅತ್ಯಾಚಾರಕ್ಕೆ ಈ ಮುಖವೂ ಇದೆ…

ಹೆತ್ತವರೇ ಹರಿದು ಮುಕ್ಕುವಂತಾದರೆ ಯಾರನ್ನು ದೂರುವುದು..? ಡಾ.ಎಸ್.ಬಿ.ಜೋಗುರ ಇಲ್ಲಿಯವರೆಗೆ ಹೆಣ್ಣು ಸಂತಾನ ಕೇವಲ ವರದಕ್ಷಿಣೆಯ ಹಿನ್ನೆಲೆಯಲ್ಲಿ ಹೆತ್ತವರ ಪಾಲಿಗೆ ಆತಂಕಾವೃತ ಲಿಂಗ ಎನ್ನುವಂತಿತ್ತು. ಆ ಭಯ ಮಹಿಳೆಯ ಲಿಂಗ ಪ್ರಮಾಣದಲ್ಲಿಯ ಕುಸಿತದ ಹಿನ್ನೆಲೆಯಲ್ಲಿ ವರದಕ್ಷಿಣೆಯ ಕಿರಿಕಿರಿ ಕಡಿಮೆಯಾಗಿ...

read more
’ಮನಸು ಹುಣಸೆ ಮರ…’ – ವಿದ್ಯಾ ಕುಂದರಗಿ ಬರೀತಾರೆ

ಮನಸು ಹುಣಸೆ ಮರ ವಿದ್ಯಾ ಕುಂದರಗಿ ದಡದಲಿ ಶಾಂತವಾಗಿಯೇ ಕಾಣುವ ನಮ್ರ ,ಶುಭ್ರ ಹೊರಮುಖದ ಅಲೆಗಳು, ಸದಾ ಮೂಕವಾಗಿಯೇ ಇರುವ ಸವಲತ್ತಿನ ಝರಿಗಳು, ಹಚ್ಚಗಿದ್ದಲ್ಲಿ ತಟ್ಟನೆ ಚಿಗುರುವ ಬೀಡಾಡಿ ಬೇರುಗಳು ಮಣ್ಣಿನ ಕೊನೆಕಣದಲ್ಲೂ ಚಿಗುರಿಸಿ ಚಲ್ಲವರಿಸುವ ಯೌವನ, ಬೆತ್ತಲೆದೆಯ ಮೇಲೆ ಕತ್ತಲ್ಹರಡಿದಂತೆ ಸುತ್ತಿಕೊಂಡ ರೋಮರಾಶಿ ಶಿಖರದೆತ್ತರಕೆ...

read more
ಬಸವರಾಜ ಸೂಳಿಭಾವಿ ಅವರ ಹೊಸ ಪುಸ್ತಕಗಳು

ಮೇ ೧೯ ರಂದು ಧಾರವಾದದಲ್ಲಿ ಬಿಡುಗಡೆ ಆಗಲಿರುವ ಬಸವರಾಜ ಸೂಳಿಭಾವಿ ಅವರ ಹೊಸ ಪುಸ್ತಕಗಳ ಮುಖಪುಟ ಇಲ್ಲಿವೆ : ಮುಖಪುಟ ವಿನ್ಯಾಸ : ಎಂ ಎಸ್ ಮೂರ್ತಿ ಮುಖಪುಟ ವಿನ್ಯಾಸ : ದಿನೇಶ್ ಕುಕ್ಕುಜಡ್ಕ ಮುಖಪುಟ ವಿನ್ಯಾಸ :...

read more
ಜವ್ವಾರಿ ಝಲಕ್ :ಏನು ಕಣ್ಣೀಗೆ ಮಣ್ಣು ಹುಗ್ಗತೀರಲೇ ಯಪ್ಪಾ…

ತುಪ್ಪಾ ಚೆಲ್ಲಿ ತುಪ್ಪ ಬಳಕಣಾಂತ ಡಂಬಾರಿನ ರೋಡುಗಳಾಗ್ಯಾವು - ಶಿವು ಮೊರಿಗೇರಿ ಹಿಂದೊಮ್ಮೆ ನಾನು ಲೇಖನ ಬರದ ಕೂಡ್ಲೆ ಅದನ್ನ ನಮ್ಮ ಮುತ್ತಿಗಿ ಮಲ್ಲಿ ಪೇಸ್ ಬುಕ್ಕಿನ ಟೈಂ ಲೈನಿಗ್ಯ ಶೇರ್ ಮಾಡಿದ್ಯ. ಅದನ್ನ ಅವನು ಒಂದೆಲ್ಡು ದಿನ ಬುಟ್ಟು ನೋಡಿಕಂಡು ನನಿಗ್ಯ ಪೋನ್ ಹಚ್ಚಿದ್ದ. ನಾನು ಪೋನ್ ಎತ್ತಿಗಂಡು ‘ಏನಲೇ ಲೋಪರಾ ?’ ಅಂತ...

read more
'ನಾಗರಾಜನ ತೋಟ ಬರಿ ತೋಟವಲ್ಲ…'!

ಮುರುಳಿ ಮೋಹನ್ ಕಾಟಿ ಮೊನ್ನೆ ಕಡೂರಿನಲ್ಲಿರುವ ಗೆಳೆಯ ನಾಗರಾಜನ ತೋಟಕ್ಕೆ ಹೊಗಿದ್ದೆ...ಅದು ಬರೀ ತೋಟವಾಗಿದ್ದರೇ.. ಅಲ್ಲಿ ಕೇವಲ ತೆಂಗೋ ಅಡಿಕೆಯೋ ಬೆಳೆದು ಪಸಲು ತೆಗೆಯುತ್ತಿದ್ದರೆ, ನಾ ಹೋಗಿದ್ದರಲ್ಲಿ ಆ ಕುರಿತು ಮತ್ತೆ ನೆನಪಿಸಿಕೊಳ್ಳುವುದರ ಅಗತ್ಯವಿರುತ್ತಿರಲ್ಲಿಲ್ಲ. ಆ ತೋಟವೇ ಬಂದು ಪ್ರಯೋಗ ಶಾಲೆ. ನಾಗರಾಜ ತನ್ನ ಬದುಕನ್ನು...

read more
'ಡೇಗೆ’ – ಅನುಪಮ ಪ್ರಸಾದ್ ಕಥೆ

ಅನುಪಮಾ ಪ್ರಸಾದ್ ನೀಲು ಊಟದ ತಾಟು ಮೇಜಿನ ಮೇಲಿಟ್ಟು ಸಿಂಕಿನಲ್ಲಿ ಕೈ ತೊಳೆದು ಬಾಯಿ ಒರೆಸಿಕೊಳ್ಳುತ್ತ ಕನ್ನಡಿಯಲ್ಲಿ ಮುಖ ನೋಡಿಕೊಂಡಳು. ಹೊಟ್ಟೆ ಕೆಳಗೆ ಜಗ್ಗುತ್ತಿತ್ತು. ಕಳೆಕಳೆಯಾಗಿ ಹೊಳೆಯುತ್ತಿದ್ದ ಮುಖದ ಚರ್ಮವನ್ನು ಮತ್ತೆ ಮತ್ತೆ ಮುಟ್ಟಿ ಖುಷಿ ಪಟ್ಟಳು. ಆಕೆ ಸ್ವಂತದ ಮೂರು ಮಕ್ಕಳನ್ನು ಹೆತ್ತಿದ್ದರೂ ಒಮ್ಮೆಯೂ ಮೈ-ಕೈ...

read more
’ಬಿಸಿಲ ಬಯಲ ಕಡಲು’ – ಕವನಗಳು ಮತ್ತು ಕವನ ಸಂಗ್ರಹ

ಕಾರವಾರದ  ಹರಪನಹಳ್ಳಿ ನಾಗರಾಜ ಅವರ ಕವನ ಸಂಗ್ರಹ ’ಬಿಸಿಲ ಬಯಲ ಕಡಲು’ ಸಧ್ಯದಲ್ಲೇ ಬಿಡುಗಡೆ ಆಗಲಿದೆ. ಪುಸ್ತಕದ ಮುಖಪುಟ ಇಲ್ಲಿದೆ. ಕವನ ಸಂಕಲನದ ಮೂರು ಕವಿತೆಗಳು ಅವಧಿ ಓದುಗರಿಗಾಗಿ : ಮಾಯೆ ಮನದ ಮುಂದಣ ಹೆಜ್ಜೆ ಅನಂತ ಕನಸುಗಳ ಮಾಯೆ ಮನದ ಹಿಂದಣ ಹೆಜ್ಜೆ ನನಸಾಗದ ನೆನಪುಗಳ ಮಾಯೆ   ಮನದ ಮುಂದಣ ಬದುಕು ಸಾವಿರ ಸಾವಿರದ ಕನಸ...

read more
ಮಂಡ್ಯದಲ್ಲಿ ನಾಳೆ

ನಾಗಮಂಗಲ ಕೃಷ್ಣಮೂರ್ತಿಯವರ ಕಥಾ ಸಂಕಲನ ಬಿಡುಗಡೆ ಸಂಭ್ರಮ ಮಂಡ್ಯದಲ್ಲಿ. ನರಹಳ್ಳಿ ಬಾಲಸುಬ್ರಹ್ಮಣ್ಯ, ಕುಂವೀ, ಲೋಕೇಶ್ ಅಗಸನಕಟ್ಟೆ, ಮತ್ತು ಎಚ್.ಎಲ್. ಕೇಶವಮೂರ್ತಿ  ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಭಾನುವಾರ ಅಂದ್ರೆ 19 ನೇ ಮೇ 2013 ರಂದು ಮಂಡ್ಯದ...

read more
ಜಿ ಪಿ ಬಸವರಾಜು ಕಾಲಂ : ಬರಹಗಾರರ ಹೊಣೆಗಾರಿಕೆ

ರಾಜಕೀಯ ಪಕ್ಷಗಳು ಬರುತ್ತವೆ, ಹೋಗುತ್ತವೆ. ಚುನಾವಣೆಯಲ್ಲಿ ಮತದಾರ ತನಗೆ ಇಷ್ಟವಾದ ವ್ಯಕ್ತಿಗಳನ್ನು ಮತ್ತು ಪಕ್ಷಗಳನ್ನು ಆಯ್ಕೆಮಾಡುತ್ತಾನೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಹಜವಾದ ಕ್ರಿಯೆ. ಮೊನ್ನೆ ರಾಜ್ಯದಲ್ಲಿ ನಡೆದ ಚುನಾವಣೆಯಲ್ಲಿ ಮತದಾರನ ಆಯ್ಕೆ ಕಾಂಗ್ರೆಸ್ ಪಕ್ಷ. ಇದಕ್ಕೆ ಸ್ಪಷ್ಟ ಬಹುಮತವೂ ದೊರೆತಿದೆ. ಮುಂದಿನ...

read more
ಸಂಪು ಕಾಲಂ : ನಂಬಿಕೆಗಳ ಸುಳಿಗಳಲ್ಲಿ

ಪ್ರತಿನಿತ್ಯ ನಾವು ನೆಮ್ಮದಿಯಿಂದ ಉಸಿರಾಡಲು ನಮ್ಮ ಜೀವನದ ಒಂದು ಶಕ್ತಿ ಪೇಯ ಯಾವುದು ಹೇಳಿ?! ದಿನದಿಂದ ದಿನಕ್ಕೆ ನಮ್ಮ ಉತ್ಸಾಹ ಹೆಚ್ಚಿಸುವ, ಸಂಬಂಧಗಳ ಬೆಸೆಯುವ, ಜೀವನದ ಗೊಂಚಲು ಗೊಂಚಲು ಸರಪಳಿಗಳನ್ನು ಒಂದೊಂದಾಗಿಯೇ ಬಿಡಿಸುತ್ತಾ ಮುನ್ನುಗ್ಗಲು ಸಾಧ್ಯವಾಗಿಸುವ ಈ ಮದ್ದಿನ ಹೆಸರು "ನಂಬಿಕೆ". ಮರಣ ಶಯ್ಯೆಯ ಮೇಲೆ ಮಲಗಿರುವ ರೋಗಿಗೆ...

read more
ಮಳೆಯಲ್ಲಿ ಮದುಮಗಳು!

ರೋಹಿತ್ ಎಸ್. ಹೆಚ್ ಚಿತ್ರಗಳು : ಸುರೇಶ್ ಕುಮಾರ್ ಮತ್ತು ವಿಜಯ್ ಹೆಚ್ ಎಷ್ಟೋ ನೋವು-ನಿರಾಸೆ, ದು:ಖ ದುಗುಡಗಳ ನಡುವೆ, ನಲ್ಲೆಯ ಸಣ್ಣ ಕಣ್ಣೋಟವೊಂದು ಮುದಗೊಳಿಸುವಂತೆ, ಬೇಸಿಗೆಯ ಬಿಸಿಗೆ ಬೆಂದ ಬೆಂಗಳೂರಿಗೆ ತಂಪೆರೆಯಬೇಕಿದ್ದ ಮಳೆ, ಶನಿವಾರದ ದಿನ ಸಂಜೆಯಿಂದ ವಿರಾಜಮಾನವಾಗಿ ಸುರಿಯುತ್ತಲೇ ಇತ್ತು. ನನ್ನಂಥಹ ಹಲವಾರು ಅಭಿಮಾನಿಗಳಿಗೆ...

read more
’ಹುಲಿಯು ನನ್ನದೇ ಮಲೆಯು ನನ್ನದೆ…’ – ಹರವು ಸ್ಫೂರ್ತಿಗೌಡ ಕವಿತೆ

ಹರವು ಸ್ಫೂರ್ತಿಗೌಡ ಯಾವ ಗುರುತೋ, ಯಾರ ಮತವೂ ಗೆದ್ದ ಮೇಲೆ ನಾವು ಯಾರು? ಮತವ ಪಡೆದು ಬದುಕ ಕಳೆದು ಪ್ರಶ್ನಿಸಿ ನಿಲ್ಲುವರು ನೀವು ಯಾರು? ಕಾಡ ಕಣಿವೆಯಲಿ ಗುಡಿಸಲ ಕಟ್ಟಿ ಉತ್ತಿ-ಬಿತ್ತಿ ಬದುಕ ಕಂಡ ಜೀವ ನಾವು ಹುಲಿಯೇ ಇಲ್ಲದ ಸಂರಕ್ಷಿತ ಅರಣ್ಯವೆಂದು ಕಿತ್ತು ಒದರಿದಿರೀ ಪುಟ್ಟ ಗುಡಿಸಲ ನೀವು ಕಟ್ಟಿದ ಬದುಕ ಕೆಡವಿ ಹೋದವರೆ ಕರಾವಳಿಯ...

read more
ಅಂದು ರಾತ್ರಿ ಕತ್ತಲಲ್ಲಿ, ಆ ಕಾರಿನಲ್ಲಿ …

ರಮೇಶ್ ಹಿರೇಜಂಬೂರು ಅದು ಸುಮಾರು 3 ತಿಂಗಳ ಹಿಂದಿನ ಘಟನೆ. ಅವತ್ತು ಮಾರ್ಚ್ ತಿಂಗಳ 2ನೇ ಶನಿವಾರ. ಸರ್ಕಾರಿ ರಜೆ ಜತೆಗೆ ಶನಿವಾರವಾದ್ದರಿಂದ ಬೆಂಗಳೂರಿನ ಬಹುತೇಕ ಖಾಸಗಿ ಕಂಪನಿಗಳಿಗೂ ರಜೆ. ಅವತ್ತು ರಾತ್ರಿ ಸುಮಾರು 2ಗಂಟೆ ಸಮಯ. ನಾನು ರಾತ್ರಿ ಕೆಲಸ ಮುಗಿಸಿ ಮನೆಗೆ ಹೊರಟಿದ್ದ ಹೊತ್ತು. ಬೆಂಗಳೂರಿನ ಬನಶಂಕರಿ 2ನೇಹಂತದಲ್ಲಿ ಖ್ಯಾತ...

read more
’ಸಂಚಾರಿ ಥಿಯೇಟರ್’ ಮಕ್ಕಳ ಹಬ್ಬ

ಬೇಸಿಗೆ ರಜೆಯಲ್ಲಿ ಮಕ್ಕಳಿಗಾಗಿ ಮಕ್ಕಳ ನಾಟಕೋತ್ಸವ - ರಂಗಶಂಕರದಲ್ಲಿ ‘ನರಿಗಳಿಗೇಕೆ ಕೋಡಿಲ್ಲ?’ ಮತ್ತು ‘ಪಿನೋಕಿಯೋ’ ಸಂಚಾರಿ ಥಿಯೇಟರ್ ಇದೇ ಮೇ 17, 18 ಮತ್ತು 19 ರಂದು ರಂಗಶಂಕರದಲ್ಲಿ ಮಕ್ಕಳ ನಾಟಕೋತ್ಸವವನ್ನು ಆಯೋಜಿಸಿದೆ. ಈ ಉತ್ಸವದಲ್ಲಿ ಕುವೆಂಪು ಅವರ ಸಣ್ಣ ಕಥೆಯನ್ನಾಧರಿಸಿದ “ನರಿಗಳಿಗೇಕೆ ಕೋಡಿಲ್ಲ?” ಎಂಬ ನಾಟಕವನ್ನು ಮೇ...

read more
ಚೀಮನಹಳ್ಳಿ ರಮೇಶಬಾಬು, ’ಹಸ್ತಬಲಿ’ ಮತ್ತು ಒಂದು ಕಥೆ

ಚೀಮನಹಳ್ಳಿ ರಮೇಶಬಾಬು ಹುಟ್ಟಿದ್ದು 10-7-1974, ಕೋಲಾರ ಜಿಲ್ಲೆ, ಚಿಂತಾಮಣಿ ತಾಲ್ಲೂಕು, ಚೀಮನಹಳ್ಳಿಯಲ್ಲಿ. ಹೆಬ್ಬರಿ, ಬೂರಗಮಾಕಲಹಳ್ಳಿ, ಚಿಂತಾಮಣಿ ಮತ್ತು ಬೆಂಗಳೂರುಗಳಲ್ಲಿ ವಿದ್ಯಾಭ್ಯಾಸ. 'ಪ್ರಶ್ನೆ ಮತ್ತು ದೇವರು' ಹಾಗೂ 'ಎರಡು ಲೋಟಗಳು' ಪ್ರಕಟಿತ ಕವನಸಂಕಲನಗಳು. ಪ್ರಜಾವಾಣಿ ಕಥಾಸ್ಪರ್ಧೆ ಮತ್ತು ಕವನ ಸ್ಪರ್ಧೆಗಳಲ್ಲಿ...

read more

Pin It on Pinterest

Share This