ಅವಧಿ, ಸುಚಿತ್ರ ಮತ್ತು ವಿಕಿಪೀಡಿಯ ವತಿಯಿಂದ…

ಯು ಬಿ ಪವನಜ

ಅಂತರಜಾಲದ ವಿಶ್ವದಲ್ಲಿ ಕನ್ನಡಿಗರ ಪಾತ್ರ ಅತ್ಯಂತ ಶ್ಲಾಘನೀಯ. ಬೆಂಗಳೂರು ಹಾಗೂ ಇತರ ಕರ್ನಾಟಕದ ನಗರಗಳಲ್ಲಿರುವ ಅನೇಕ ಕಂಪನಿಗಳಲ್ಲಿ ವಿಶ್ವದಲ್ಲೆಲ್ಲೂ ಹಿಂದೆ ಕೇಳಿರದ-ನೋಡಿರದ ತಂತ್ರಾಂಶಗಳು ತಯಾರಾಗಿವೆ, ಆಗುತ್ತಲಿವೆ. ನಮ್ಮ ಕನ್ನಡಿಗರು ಈ ಮಾಹಿತಿ ಯುಗದಲ್ಲಿ ಪ್ರಪಂಚದ ಎಲ್ಲ ಜನರಿಗೂ ಯಾವುದೇ ಮಾಹಿತಿಯನ್ನು ಅತಿ ಸುಲಭದಲ್ಲಿ ಕೈಗೆಟಕುವಂತೆ ಮಾಡುವಲ್ಲಿ ಮುಂದಾಳುಗಳಾಗಿ ಕಾರ್ಯವನ್ನು ನಿರ್ವಹಿಸಿದ್ದಾರೆ.

ಆದರೆ, ಶೋಚನೀಯ ಪರಿಸ್ಥಿತಿಯೆಂದರೆ ಯಾವುದೇ ಕ್ಷೇತ್ರವನ್ನು ತೆಗೆದುಕೊಂಡು, ಆ ಕ್ಷೇತ್ರದಲ್ಲಿ ನಮ್ಮ ಕನ್ನಡಿಗರ ಕೊಡುಗೆ ಹಾಗು ಸಾಧನೆಯ ಬಗ್ಗೆ ನಾವು ಮಾಹಿತಿಯನ್ನು ಹುಡುಕಲು ಹೊರಟರೆ, ಅಂತರಜಾಲದಲ್ಲಿ ನಮಗೆ ಸಿಗುವ ಮಾಹಿತಿ ಅತ್ಯಂತ ಕಡಿಮೆ.

ಉದಾಹರಣೆಗೆ, ವಿಕಿಪೀಡಿಯಾದ ಒಂದು ಆಂತರಿಕ ಸಮೀಕ್ಷೆಯನ್ನು ನೋಡೋಣ.

ವಿಕಿಪೀಡಿಯ ಒಂದು ಮುಕ್ತ ವಿಶ್ವಕೋಶ. ಇದು ಜನರಿಂದ ಜನರಿಗಾಗಿ ಜನರೇ ನಡೆಸುವ ಒಂದು ಸ್ವತಂತ್ರಮತ್ತು ಮುಕ್ತ ವಿಶ್ವಕೋಶ. ಇದು ಯಾವುದೇ ಒಂದು ಕಂಪೆನಿಯ ಅಥವಾ ಸರಕಾರದ ಸ್ವತ್ತು ಅಲ್ಲ. ಇದರಲ್ಲಿರುವ ಮಾಹಿತಿಯನ್ನು ಜನರೇ ಸ್ವಯಂಸ್ಫೂರ್ತಿಯಿಂದ ಸೇರಿಸಿರುವುದು. ವಿಕಿಪಿಡಿಯ ಜನವರಿ ೨೦೦೧ರಲ್ಲಿ ಪ್ರಾರಂಭವಾಯಿತು. ವಿಕಿಪೀಡಿಯದಲ್ಲಿ ಎಲ್ಲ ವಿಷಯಗಳ ಬಗ್ಗೆ ಲೇಖನಗಳಿವೆ. ವಿದ್ಯಾರ್ಥಿಗಳು, ಅಧ್ಯಾಪಕರು, ಜನಸಾಮಾನ್ಯರು ಯಾವುದೇ ವಿಷಯದ ಬಗ್ಗೆ ತಿಳಿಯಬೇಕಾದರೆ ನೇರವಾಗಿ ತೆರೆಯುವುದು ವಿಕಿಪೀಡಯವನ್ನೆ. ಗೂಗಲ್ ಮೂಲಕ ಮಾಹಿತಿ ಹುಡುಕಿದರೂ ಮೊದಲು ದೊರೆಯುವದು ವಿಕಿಪೀಡಿಯವೇ. ವಿಕಿಪೀಡಿಯದಲ್ಲಿ ಒಟ್ಟಿಗೆ ಸುಮಾರು ೩ ಕೋಟಿ ಲೇಖನಗಳಿವೆ. ಅದರಲ್ಲಿ ಸುಮಾರು ೪೬ ಲಕ್ಷ ಲೇಖನಗಳು ಇಂಗ್ಲಿಶ್ ಭಾಷೆಯಲ್ಲಿವೆ. ೨೮೬ ಭಾಷೆಗಳಲ್ಲಿ ವಿಕಿಪೀಡಿಯ ಲಭ್ಯವಿದೆ. ಕನ್ನಡವೂ ಸೇರಿದಂತೆ ೨೨ಕ್ಕಿಂತ ಹೆಚ್ಚು ಭಾರತೀಯ ಭಾಷೆಗಳಲ್ಲಿ ವಿಕಿಪೀಡಿಯ ಲಭ್ಯವಿದೆ. ಪ್ರಪಂಚಾದ್ಯಂತ ಚೆದುರಿಹೋಗಿರುವ ಸುಮಾರು ೧೬ ಲಕ್ಷ ಸಂಪಾದಕರು ವಿಕಿಪಿಡಿಯವನ್ನು ಸಂಪಾದಿಸುತ್ತಾರೆ. ಭಾರತಕ್ಕೆ ಬಂದಾಗ ಕೇವಲ ೫೫೦೦ ಸಂಪಾದಕರು ವಿಕಿಪೀಡಿಯವನ್ನು ಸಂಪದಿಸುತ್ತಿದ್ದಾರೆ. ಅದರಲ್ಲಿ ಸುಮಾರು ೨೦೦೦ ಸಂಪಾದಕರು ಭಾರತೀಯ ಭಾಷೆಗಳ ವಿಕಿಪೀಡಿಯವನ್ನು ಸಂಪಾದಿಸುತ್ತಿದ್ದಾರೆ. ಭಾರತದಿಂದ ಕೆಲಸ ಮಾಡುವ ವಿಕಿಪೀಡಿಯ ಸಂಪಾದಕರ ಸಂಖ್ಯೆ ಇಷ್ಟು ಕಡಿಮೆ ಇದ್ದರೂ ವಿಕಿಪೀಡಿಯವನ್ನು ವೀಕ್ಷಿಸುವ ಭಾರತೀಯರ ಸಂಖ್ಯೆ ಸುಮಾರು ೨ ಕೋಟಿಯಷ್ಟಿದೆ. ಅಂದರೆ ಭಾರತೀಯರು ವಿಕಿಪೀಡಿಯದಿಂದ ಮಾಹಿತಿ ಪಡೆಯುತ್ತಿದ್ದಾರೆ ಆದರೆ ಅದಕ್ಕೆ ಅದೇ ಮಟ್ಟದಲ್ಲಿ ಮಾಹಿತಿ ಸೇರಿಸುತ್ತಿಲ್ಲ ಎಂದು ಅರ್ಥೈಸಿಕೊಳ್ಳಬಹುದು. ಇದು ಬದಲಾಗಬೇಕಾಗಿದೆ.

ಕನ್ನಡ ವಿಕಿಪೀಡಿಯ

ಇತ್ತೀಚೆಗೆ ನಡೆಸಿದ ಸಮೀಕ್ಷೆಯೊಂದರ ಪ್ರಕಾರ ಭಾರತದಲ್ಲಿ ಮತ್ತು ಕರ್ನಾಟಕದಲ್ಲಿ ಅಂತರಜಾಲ ಬಳಕೆದಾರರಲ್ಲಿ ಹೆಚ್ಚು ಮಂದಿ ಅಂತರಜಾಲವನ್ನು ಮಾಹಿತಿಯ ಹುಡುಕುವಿಕೆಗಾಗಿ ಬಳಸುತ್ತಾರೆ. ಸಹಜವಾಗಿಯೇ ಕನ್ನಡಿಗರಿಗೆ ಅಂತರಜಾಲದಲ್ಲಿ ಕನ್ನಡ ಭಾಷೆಯಲ್ಲಿ ಎಲ್ಲ ವಿಷಯಗಳ ಮಾಹಿತಿ ಬೇಕಾಗಿದೆ. ಅಂತರಜಾಲದಲ್ಲಿ ಮಾಹಿತಿಯ ಪ್ರಮುಖ ಜಾಲತಾಣ ವಿಕಿಪೀಡಿಯ. ಇದು ಕನ್ನಡದಲ್ಲೂ ಇದೆ.

ಕನ್ನಡ ವಿಕಿಪೀಡಿಯ ಜೂನ್ ೨೦೦೩ರಲ್ಲಿ ಪ್ರಾರಂಭವಾಯಿತು. ಇದರಲ್ಲಿ ಸದ್ಯ ಸುಮಾರು ೧೪,೫೦೦ ಲೇಖನಗಳಿವೆ. ಇತರೆ ಭಾರತೀಯ ಭಾಷೆಗಳಿಗೆ ಹೋಲಿಸಿದರೆ (ತೆಲುಗು – ೫೨,೦೦೦, ತಮಿಳು – ೫೨,೦೦೦, ಮಲಯಾಳಂ – ೩೦,೦೦೦, ಬೆಂಗಾಳಿ – ೨೫,೦೦೦, ಹಿಂದಿ – ೯೭,೦೦೦) ಕನ್ನಡ ಭಾಷೆ ತುಂಬ ಹಿಂದಿದೆ. ಕನ್ನಡ ಭಾಷಯೆಲ್ಲಿ ಸದ್ಯ ೩೫೦ ಜನ ಸಂಪಾದಕರಿದ್ದಾರೆ. ಈ ಪರಿಸ್ಥಿತಿ ಬದಲಾಗಬೇಕಾಗಿದೆ.ಕನ್ನಡ ವಿಕಿಪೀಡಿಯಕ್ಕೆ ಭಾಷೆ ಮತ್ತು ಸಾಂಸ್ಕೃತಿಕವಾಗಿ ತುಂಬ ಶ್ರೀಮಂತವಾಗಿರುವ ಕನ್ನಡ ಮತ್ತು ಕರ್ನಾಟಕದ ಬಗ್ಗೆ ಸಂಪೂರ್ಣ ಮಾಹಿತಿ ಸೇರಿಸಬೇಕಾಗಿದೆ. ಈಗಾಗಲೆ ಇರುವ ಹಲವು ಅರೆಬರೆ ಲೇಖನಗಳನ್ನು ಸರಿಪಡಿಸಿ ಪೂರ್ತಿ ಮತ್ತು ನಿಖರವಾದ ಮಾಹಿತಿ ಸೇರಿಸಬೇಕಾಗಿದೆ.

ಹಲವು ಮಂದಿ ಕನ್ನಡಿಗರಿಗೆ ವಿಕಿಪೀಡಿಯ ಬಗ್ಗೆ ಅಲ್ಪಸ್ವಲ್ಪ ಗೊತ್ತಿದೆ. ಕನ್ನಡ ವಿಕಿಪೀಡಿಯಕ್ಕೆ ಮಾಹಿತಿ ಸೇರಿಸುವುದು ನಮ್ಮ ಹೊಣೆ ಎಂಬುದರ ಅರಿವೂ ಇದೆ. ಆದರೆ ವಿಕಿಪೀಡಿಯವನ್ನು ಹೇಗೆ ಸಂಪಾದಿಸುವುದು, ಎಲ್ಲಿಂದ ಪ್ರಾರಂಭಿಸುವುದು, ಯಾವ ಯಾವ ವಿಷಯಗಳನ್ನು ಸೇರಿಸಬೇಕಾಗಿದೆ, ಇತ್ಯಾದಿ ಮಾಹಿತಿ ಅಷ್ಟಿಲ್ಲ.

ಈ ಹಿನ್ನೆಲೆಯಲ್ಲಿ ಕನ್ನಡ ವಿಕಿಪೀಡಿಯ ತರಬೇತಿ ಕಾರ್ಯಾಗಾರವನ್ನು “ಅವಧಿ” ಮತ್ತು “ಸುಚಿತ್ರ” ಜೊತೆ ಸೇರಿ ಹಮ್ಮಿಕೊಳ್ಳಲಾಗಿದೆ.

 

ದಿನಾಂಕ: ಜೂನ್ ೨೩, ೨೦೧೩

ಸಮಯ: ಬೆಳಿಗ್ಗೆ ೧೦:೦೦ ರಿಂದ ಸಾಯಂಕಾಲ ೫:೦೦

ಸ್ಥಳ: ಸುಚಿತ್ರ ತಳಮನೆ (ಕಾನ್ಫೆರೆನ್ಸ್ ಕೊಠಡಿ), ಬನಶಂಕರಿ, ಬೆಂಗಳೂರು

ಬರುವವರು ತಮ್ಮ ಲ್ಯಾಪ್‌ಟಾಪ್/ನೆಟ್‌ಬುಕ್/ಟ್ಯಾಬ್ಲೆಟ್ ಮತ್ತು ಅಂತರಜಾಲ ಸಂಪರ್ಕ ಡಾಂಗಲ್ ತರತಕ್ಕದ್ದು

ಫೇಸ್‌ಬುಕ್ ನೋಂದಾವಣೇ ಕೊಂಡಿ – https://www.facebook.com/events/567619359956921/?ref=3

ಕಾರ್ಯಾಗಾರದಲ್ಲಿ ೨೫ ಜನರಿಗೆ ಮಾತ್ರ ಸ್ಥಳವಿದೆ. ೨೫ರ ನಂತರ ನೋಂದಾಯಿಸಿಕೊಂಡವರನ್ನು ಮುಂದಿನ ಕಾರ್ಯಾಗಾರಕ್ಕೆ ಸೇರಿಸಿಕೊಳ್ಳಲಾಗುವುದು.

ಸಿಗೋಣ,

ಪವನಜ

+೯೧.೯೯೦೨೬೩೩೧೧೩

 

‍ಲೇಖಕರು avadhi

June 21, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: