ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ತೇಜಸ್ವಿಯನ್ನು ಹುಡುಕುತ್ತಾ: ಅವರು ಮಾತನಾಡಿದರು, ಮಾತನಾಡುತ್ತಲೇ ಇದ್ದರು!!
“ಪೂರ್ವ ತಯಾರಿ” (ಮೊದಲ ಭಾಗಕ್ಕೆ ಇಲ್ಲಿ ಕ್ಲಿಕ್ಕಿಸಿ) ಹಾಗೆ ಸರಿರಾತ್ರಿಯಲ್ಲಿ ಬೀಜಾಂಕುರವಾಗಿದ್ದು ತೇಜಸ್ವಿ ಕುರಿತ ಸಾಕ್ಷ್ಯಚಿತ್ರದ ಯೋಚನೆ. ಅದಾಗಿ ಮುಂದಿನ ಒಂದು ತಿಂಗಳ ಕಾಲ ನಾನು ಜಗತ್ತಿನ ಅತ್ತ್ಯುತ್ತಮ ಸಾಕ್ಷ್ಯಚಿತ್ರಗಳನ್ನು ಬೆಂಗಳೂರಿನ ತುಂಬೆಲ್ಲಾ ಹುಡುಕಿ, ಕೆಲವನ್ನು ಸ್ನೇಹಿತರಲ್ಲಿ ಗೋಗರೆದು ಕಾಡಿ ಬೇಡಿ ತಂದು,...
ಶರಣರ ಮೇಲೆ ದಂಡೆತ್ತಿ ಬಂದವರಿಗೆ ಇಲ್ಲಿದೆ ದರ್ಗಾ ಉತ್ತರ – ಕಡೆಯ ಭಾಗ
(ಭಾಗ - ೬ ಇಲ್ಲಿದೆ) ಬಸವಣ್ಣನವರು ಐಶ್ವರ್ಯಾಂಧಕರ ಮತಕ್ಕೆ ಗತಿಗಾಣಿಸಿದ್ದನ್ನು ಅಲ್ಲಮಪ್ರಭುಗಳು ಹೊಗಳಿದ ಕ್ರಮ ಬಸವಣ್ಣನವರ ಕರ್ತೃತ್ವ ಶಕ್ತಿಗೆ ಹಿಡಿದ ಕನ್ನಡಿಯಾಗಿದೆ. ದೇವಸ್ಥಾನ ಸಂಸ್ಕೃತಿಯು ಅಸ್ಪೃಶ್ಯತೆ, ಅಸಮಾನತೆ, ಭೇದಭಾವ ಮತ್ತು ಮೂಢನಂಬಿಕೆಯ ರಕ್ಷಣಾ ಸ್ಥಾನವಾಗಿದೆ. ಬಡವರ ಶೋಷಣೆಮತ್ತುಶ್ರೀಮಂತರ ಅಭಿವೃದ್ಧಿಗೆ...
ನಾಳೆ ಉಡುಪಿಯಲ್ಲಿ ಪತ್ರಿಕಾ ದಿನಾಚರಣೆ
'ಅಪಾಯಕಾರಿ ಚೌಚೌ ಮಾತ್ರೆಗಳು' – ಡಾ ಶ್ರೀನಿವಾಸ ಕಕ್ಕಿಲಾಯ ಬರೀತಾರೆ
ಡಾ ಶ್ರೀನಿವಾಸ ಕಕ್ಕಿಲಾಯ ಅಡ್ಡ ಪರಿಣಾಮ, ಅನಗತ್ಯ ವೆಚ್ಚಗಳಿಗೆ ಕಾರಣವಾಗುವ ಕಲಸು ಮಾತ್ರೆಗಳನ್ನು ಮಾರುವುದು ಎಗ್ಗಿಲ್ಲದೆ ನಡೆದೇ ಇದೆ. ಕನ್ನಡಿಗರಿಗೆಲ್ಲ ಚೌಚೌ ಭಾತ್ ಚಿರಪರಿಚಿತ. ಒಂದೇ ತಟ್ಟೆಯಲ್ಲಿ ಎರಡು ತಿಂಡಿಗಳು, ಉಪ್ಪು-ಸಕ್ಕರೆಗಳ ಜೋಡಿ. ವೈದ್ಯಲೋಕಕ್ಕೂ ಇದು ಪ್ರೇರಣೆಯಾಗಿದೆಯೇನೋ!? ಒಂದೇ ಗುಳಿಗೆಯೊಳಗೆ ಎರಡು-ಮೂರು ಬಗೆಯ...
ವಾಡಿಯಾ ಸಭಾಂಗಣದಲ್ಲಿ ’ಮೂಕರಾಗ’
ಚಕ್ರಕೋಡಿ ನಾರಾಯಣ ಶಾಸ್ತ್ರಿಗಳ ಜನ್ಮ ಶತಮಾನೋತ್ಸವ
ನಮಸ್ಕಾರ, ನಾನು ಡಾ ಪದ್ಮಾವತಿ..
ನಮಸ್ಕಾರ, ನಿಮ್ಮೊಂದಿಗೆ ಮಾತನಾಡುವ, ಭೇಟಿಯಾಗುವ, ನಿಮ್ಮ ಮಾತುಗಳನ್ನು ಕೇಳಿಸಿಕೊಳ್ಳುವ ಒಂದು ಒಳ್ಳೆಯ ಅವಕಾಶ ನನಗೆ ಸಿಕ್ಕಿದೆ. ಇದಕ್ಕಾಗಿ ಅವಧಿಗೆ ನನ್ನ ವಂದನೆಗಳು. ಇದು ಒಂದು ಆಕಸ್ಮಿಕ, ಆದರೆ ನನಗೆ ತುಂಬಾ ಸಂತೋಷ ತಂದ ಅವಕಾಶ. ನಮಗೆ ಮನಶ್ಯಾಸ್ತ್ರಜ್ಞರು ಯಾಕೆ ಬೇಕು? ಕಾಲ ಬದಲಾಗಿದೆ. ಮೊದಲು ನಾವು ಒಂದಿಷ್ಟು...
ಶರಣರ ಮೇಲೆ ದಂಡೆತ್ತಿ ಬಂದವರಿಗೆ ಇಲ್ಲಿದೆ ದರ್ಗಾ ಉತ್ತರ – ಭಾಗ ೬
(ಭಾಗ ೫ ಕ್ಕೆ ಇಲ್ಲಿ ಕ್ಲಿಕ್ಕಿಸಿ) ಗೋತ್ರನಾಮವ ಬೆಸಗೊಂಡಡೆ ಮಾತು ನೂಕದೆ ಸುಮ್ಮನಿದ್ದಿರಿದೇನಯ್ಯಾ? ತಲೆಯ ಕುತ್ತಿ ನೆಲನ ಬರೆವುತ್ತಿದ್ದಿರಿದೇನಯ್ಯಾ? ಗೋತ್ರನಾಮ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯನೆಂಬುದೇನು ಕೂಡಲಸಂಗಯ್ಯ. -ಬಸವಣ್ಣ ಬಸವಣ್ಣನವರು ಈ ವಚನದಲ್ಲಿ ದೇವರನ್ನೂ ಅಸ್ಪೃಶ್ಯರ ಸಾಲಿನಲ್ಲಿ ತಂದು...
ಅಲ್ಲಿ ಒಂದು ಬಟ್ಟಲು ಅನ್ನಕ್ಕೆ 400 ರೂಪಾಯಿಯಂತೆ…
ಉರಿವ ಮನೆಯ ಗಳ ಹಿರಿವವರು ಡಾ ಎಸ್ ಬಿ ಜೋಗೂರ್ ಉತ್ತರಾಖಂಡ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಇತ್ತೀಚಿನ ದಶಕಗಳಲ್ಲಿ ಈ ಮಟ್ಟದ ಪ್ರವಾಹ.. ಸಾವು.. ಈ ದೇಶದ ಜನತೆ ಕಂಡಿರಲಿಲ್ಲ, ಕೇಳಿರಲಿಲ್ಲ. ಈಗಾಗಲೇ ಸಾವಿರಾರು ಸಂಖ್ಯೆಯ ಜನ ಯಾತ್ರಿಕರು ಅಸುನೀಗಿದ್ದಾರೆ. ಮತ್ತೆ ಕೆಲವರು ಬದುಕುಳಿಯಲು ಹಾತೊರೆಯುತ್ತಿದ್ದಾರೆ, ಇನ್ನೂ ಕೆಲವರು...
ಸಾವಯವ ಕೃಷಿ – ಸ್ವಾವಲಂಬಿ ಬದುಕು
ನಮ್ಮ ನಡುವಿನ ಸಮಾಜಪರ ಚಿಂತಕಿ, ಪಿ ಸಾಯಿನಾಥ್ ಪ್ರಶಸ್ತಿ ಪಡೆದ ಪತ್ರಕರ್ತೆ ವಿ ಗಾಯತ್ರಿಯವರ ಹೊಸ ಪುಸ್ತಕ ಬರುತ್ತಿದೆ. ಅದರ ಮುಖಪುಟ ಮತ್ತು ಆಶಯನುಡಿ ಇಲ್ಲಿದೆ : ಆಶಯ ನುಡಿ ಪ್ರಸ್ತುತದಲ್ಲಿ ವ್ಯವಸಾಯದ ಪ್ರಗತಿಗೆ ತೊಡಕಾಗಿರುವುದೆಂದರೆ, ಭೂಮಿ ತಾಯಿಯನ್ನು ಸಂಪೂರ್ಣ ನಿರ್ಲಕ್ಷಿಸಿರುವುದು, ವ್ಯವಸಾಯಕ್ಕೆ ಅಗತ್ಯವಾದ...
ಇಂದು ಕುವೆಂಪು ಸಮಗ್ರ ಸಾಹಿತ್ಯ ಸಂಪುಟ ಬಿಡುಗಡೆ
ಬಿಸಿ ಉಸಿರಿನ ಸಜೆ ಮಾತ್ರ ಮಡಿಲಲ್ಲಿ – ಕಾವೇರಿ ಬರೀತಾರೆ
ಸುಂದರ ಸ್ವಪ್ನದ ತಿರುಳು - ಕಾವೇರಿ ಎಸ್ ಎಸ್ ಸುಂದರ ಸ್ವಪ್ನದ ತಿರುಳು ಸಂಜೆಯ ಇರುಳ ಖದರು ಮಾತಿಗೆ ಸೋತಿದೆ ಮೆಲ್ಲಗೆ ಹಸಿದ ಹೊಟ್ಟೆಯ ಬೇಗೆಯ ಮರೆಸಲು ಸೊಟ್ಟಗಾಗಿದೆ ಸಂಭ್ರಮದ ತೊಟ್ಟಿಲು ನಿತ್ಯ ನೂತನ ರಂಗಿನ ಮೆಟ್ಟಿಲು ಕಣ್ಣೆದುರಿಗೆ ನರ್ತಿಸುತ್ತಿದೆ ನಿರಂತರ ಯಾರೂ ಅರಿಯದ ಸತ್ಯ ಬಟ್ಟೆ ಕಳಚಿದೆ ಇಂದು ಬೆತ್ತಲಾದ...
ಸುಚಿತ್ರದಲ್ಲಿ ಇಂದು ಶಂಕರ್ ನಾಗ್
ಅವಧಿ recommends..
ಸಂಧ್ಯಾ ರಾಣಿ ಕಾಲಂ : ’ಯಾಕೋ ನಾನು ಮತ್ತೆ ಬೆಚ್ಚಿ ಬಿದ್ದಿದ್ದೆ…’
‘Innocence is a virtue’, Yes. ’But is it overrated?’, ‘Defnitely Yes’. ಮುಗ್ಧತೆ ಒಂದು ಅಪರೂಪದ ಸುಂದರ ಗುಣ, ಇದರಲ್ಲಿ ಎರಡು ಮಾತಿಲ್ಲ. ಆದರೆ ಅದನ್ನು ವೈಭವೀಕರಿಸಲಾಗಿದೆಯೇ ಎಂದು ಕೇಳಿದಾಗ, ನಿಜ ಎನ್ನಲೇ ಬೇಕಾಗುತ್ತದೆ. ಮುಗ್ಧತೆ ಒಂದು ಸಹಜ ಪರಿಮಳದಂತೆ, ಅದರ ಸೊಗಸಿರುವುದೇ ಅದರ ಸಹಜತೆಯಲ್ಲಿ, ಆದರೆ ಅದನ್ನು...
ಶರಣರ ಮೇಲೆ ದಂಡೆತ್ತಿ ಬಂದವರಿಗೆ ಇಲ್ಲಿದೆ ದರ್ಗಾ ಉತ್ತರ – ಭಾಗ ೫
(ಭಾಗ ೪ ಇಲ್ಲಿದೆ) ಲಿಂಗಭಕ್ತನ ವಿವಾಹದಲ್ಲಿ ಶಿವಗಣಂಗಳಿಗೆ ವಿಭೂತಿ ವೀಳೆಯವ ಕೊಟ್ಟು ಆರೋಗಣೆಯ ಮಾಡಿಸಿ ಶಿವಗಣಂಗಳು ಸಾಕ್ಷಿಯಾಗಿ ಪ್ರಸಾದವನಿಕ್ಕುವುದೇ ಸದಾಚಾರವಲ್ಲದೆ, ವಾರ ತಿಥಿ ಸುಮುಹೂರ್ತವೆಂಬ ಲೌಕಿಕದ ಕರ್ಮವ ಮಾಡಿದಡೆ ನಿಮ್ಮ ಸದ್ಭಕ್ತರಿಗೆ ದೂರವಯ್ಯಾ ಕೂಡಲಚನ್ನಸಂಗಮದೇವಾ. -ಚನ್ನಬಸವಣ್ಣ ಎಂದು ಚನ್ನಬಸವಣ್ಣನವರು ಅನಿಶ್ಚಿತ...
ಸಂಪು ಕಾಲಂ : ದಾರಿ ಯಾವುದಯ್ಯಾ ವೈಕುಂಠಕ್ಕೆ
ಮೋಡಕವಿದ ಆಹ್ಲಾದಕರ ವಾತಾವರಣವನ್ನು ಸುಖಿಸುತ್ತಲೇ ಆಫೀಸ್ ನಿಂದ ಹೊರ ಬಂದ ತಕ್ಷಣ ನೆನಪಾದದ್ದು ಹಳ್ಳ ಗುಂಡಿ ಏನೂ ಕಾಣದೆ ಧಾರಾಕಾರ ನಮ್ಮನ್ನಾವರಿಸುವ 'ಕಪ್ಪು' ಸ್ವಿಮಿಂಗ್ ಪೂಲುಗಳು ಮತ್ತು ಅವುಗಳ ಜೊತೆ ಸೆಣಸಾಡಿ ಗೆಲ್ಲುವ ಆಶಯ ಹೊತ್ತು ಮುನ್ನುಗ್ಗುವ ದ್ವಿಚಕ್ರ ವಾಹನಗಳು! ತಮ್ಮ ಅಂಗಡಿಗಳ, ಮನೆಗಳ ಅಡಿಗೆ ನೀರು ನುಗ್ಗದೆ ಇರಲು...
ಜಿ ಪಿ ಬಸವರಾಜು ಬರೀತಾರೆ : ಸರ್ಕಾರ ಮತ್ತು ನಿಗಮ – ಮಂಡಳಿಗಳು…
ಮೌಲ್ಯ ಮತ್ತು ಸಂಸ್ಕೃತಿ ಜಿ.ಪಿ.ಬಸವರಾಜು ಸಾರ್ವಜನಿಕ ಬದುಕಿನಲ್ಲಿ ಸಂಸ್ಕೃತಿಗೆ ಮಹತ್ವ ಇರುವಂತೆ ಕಾಣಿಸುತ್ತದೆ. ರಾಜಕಾರಣದಲ್ಲಿಯೂ ಸಂಸ್ಕೃತಿಯನ್ನು ಪ್ರತ್ಯೇಕವಾಗಿಯೇ ನೋಡಲಾಗುತ್ತಿದೆ. ಸಾಂಸ್ಕೃತಿಕ ಕ್ಷೇತ್ರವನ್ನು ಪ್ರತಿನಿಧಿಸುವ ಕಲಾವಿದರು ಮತ್ತು ಸಾಹಿತಿಗಳಿಗೆ ಈ ಕಾರಣಕ್ಕಾಗಿಯೇ ವಿಶೇಷ ಗೌರವವಿರುವಂತೆಯೂ ತೋರುತ್ತದೆ. ಈ...
’ನೆಲದ ನಿಯಮಗಳು ಒರೆಸಿಹೋಗುತ್ತವೆ!’ – ರೂಪಾ
ಒರೆಸಿಹೋಗುತ್ತವೆ ರೂಪಾ ಹಾಸನ್ ಉಸಿರು ತುಂಬಿದ ಕ್ಷಣದಿಂದ ಯಾಚನೆಗೊಡ್ಡಿದ ಅನಾಥ ಬೊಗಸೆ ಬಿಕ್ಕಳಿಸುತ್ತಲೇ ಇರುವ ಆರ್ತನಾದ. ಕೊಚ್ಚಿ ಬಂದ ಮಹಾಪೂರ ತುಂಬಿಟ್ಟುಕೊಳಲಾಗದೇ ಬರಿದೇ ಮುಳುಗಿ ಮೀಯುವ ಸಂಭ್ರಮ ಉಕ್ಕುವ ನೀರಿನಲ್ಲೂ ಕರಗಿಸುವ ಆದ್ರತೆ! ಆ ಸೆಳೆತಕ್ಕೆ ಪುಟ್ಟ ಬೊಗಸೆಯೇ ಕರಗಿ ಉಕ್ಕೇರುವ ಪ್ರವಾಹದೊಡಲು ಸೇರಿ...
ರಂಗ ಶಂಕರದಲ್ಲಿ ಹೊಸ ಪುಸ್ತಕದಂಗಡಿ…
ಉಪದೇಶ ಕುರಿತು ಖಲೀಲ್ ಗಿಬ್ರಾನ್ ನ ಎರಡು ದೃಷ್ಟಾಂತಗಳು…
ವೈ.ಬಿ.ಹಾಲಬಾವಿ “ಉಪದೇಶವನ್ನು ಕೊಡುವಷ್ಟು ಧಾರಳವಾಗಿ ಜನ ಏನನ್ನೂ ಕೊಡಲಾರರು”ಎಂಬುದು ಒಂದು ಪ್ರಸಿದ್ಧ ಉಕ್ತಿ. ಖಂಡಿತವಾಗಿಯೂ ಇಂದು ನಾವು ಉಪದೇಶವನ್ನು ಕೊಡುವ, ಧಾರಳವಾಗಿ ಮಾತನಾಡುವ ಅನೇಕರನ್ನು ಕಾಣುತ್ತೇವೆ. ಇಂತಹವರು ಬರೀ ಉಪದೇಶವನ್ನು ಕೊಡಬಲ್ಲವರೇ ಹೊರತು ಏನನ್ನೂ ನೀಡಲಾರರು. ಇವರು ಬರೆ ಬಾಯಿ ಚಪಲದವರು. ಮಾತಿನ...
