ದೇವನೂರರು ಬದಲಾದರು..

ದೇವನೂರು ಫೋಟೋ ಕಥೆಗೆ ಪೂರ್ಣ ವಿರಾಮ

ಶಂಕರ ಹಲಗತ್ತಿ

ಪ್ರಿಯರೆ,
ದೇವನೂರವರ ಫೋಟೊ ಕಥೆಯ ಎಳೆಗಳೆಲ್ಲವನ್ನು ‘ಅವಧಿ’ಯಲ್ಲಿ ಬಂದಿದ್ದನ್ನು ಓದಿದೆ. ತಡವಾಗಿ ಓದಿ ಪ್ರತಿಕ್ರಿಯಿಸುವುದಕ್ಕೆ ಕ್ಷಮೆ ಇರಲಿ. ‘ಅವಧಿ’ಯಲ್ಲಿ ಈ ಕಥೆಗೆ ಪ್ರತಿಕ್ರಿಯಿಸಿದವರಿಗೆಲ್ಲ ಈ ನನ್ನ ಭಾವನೆಗಳನ್ನು ತಲುಪಿಸುವಂತೆ ಮಾಡಿ. ಯಾಕೆಂದರೆ ನೆಟ್ದಲ್ಲಿ ನುಡಿ ತೆರೆದುಕೊಳ್ಳುತ್ತಿಲ್ಲ. ಅದಕ್ಕಾಗಿ ಫೈಲ್ ಮಾಡಿ ಕಳಿಸುತ್ತಿದ್ದೇನೆ.
ಮೊದಲಿಗೆ ಇಂಥದೊಂದು ವಿಚಾರಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಅವಧಿಯೊಳಗೆ ಸುದ್ದಿ ಮಾಡಿದ ಹಿರಿಯ ಮಿತ್ರ ಜಿ ಎನ್ ಮೋಹನ್ ಗೆ ಅಭಿನಂದಿಸುವೆ. ಕೆಲವರು ಸಂಘದ ಬಗ್ಗೆ ಹಗುರವಾಗಿ ಅಗೌರವ ಪದಗಳನ್ನು ಬಳಸಿ ಪ್ರತಿಕ್ರಿಯಿಸಿದ್ದು ಖೇದಕರ.

ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಈಗ 124ರ ಸಂಭ್ರಮ. ತುಂಬಾ ಸುದೀರ್ಘವಾದ ನಡಿಗೆ. ಅದರ ನಡಿಗೆಯಲ್ಲಿ ಹಲವಾರು ತಪ್ಪೆಜ್ಜೆಗಳು ಆಗಿರಲಿಕ್ಕೆ ಸಾಕು. ಅದರಲ್ಲಿ ದೇವನೂರ ಮಹದೇವರ ಫೋಟೊವೂ ಒಂದು ಎಂದು ಭಾವಿಸಿರಿ. ಈ ಫೋಟೊದ ಬಗ್ಗೆ ತುಂಬಾ ಚರ್ಚೆಗಳು ನಮ್ಮ ಮಧ್ಯೆಯೂ ಆಗಿವೆ. ಹಲವಾರು ಈ ಫೋಟೊವನ್ನು ನೋಡಿದವರು ರಾಮಲು ಫೋಟೊ ಇಲ್ಲಿ ಏಕೆ ಹಾಕಿದಿರಿ ಎಂದವರೇ ಹೆಚ್ಚು. ನನಗೆ ಮೊದಲಿನಿಂದಲೂ ಕಾಡುತ್ತಿತ್ತು. ಈ ಕುರಿತಂತೆ ದೇವನೂರರನ್ನು ಬಲ್ಲ ನಾಗಮ್ಮನವರ ಜೊತೆಯೂ ಚರ್ಚಿಸಿದ್ದೆ. ಇದು ದೇವನೂರರ ಫೋಟಾನಾ! ಎಂದು. ಹೌದು ಎಂದಿದ್ದರು. ದೇವನೂರರವರ ವಿಚಾರ ಸಂಕಿರಣ ಕಾಲಕ್ಕೆ ಬಹಳಷ್ಟು ಸಾಹಿತಿಗಳು ಈ ಫೋಟೊವನ್ನು ನೋಡಿದವರಿದ್ದಾರೆ. ಹರೆಯದ ದೇವನೂರರ ಫೋಟೊ ಇರಬೇಕು. ಅಪರೂಪದ ಫೋಟೊ ಇದು ಎಂದು ಭಾವಿಸಿದವರೇ ಹೆಚ್ಚು.
ರೂಪಕ್ಕ ಫೋನ್ ಮಾಡಿ ‘ಅವಧಿ’ಯೊಳಗೆ ಜಿ ಎನ್ ಮೋಹನ್ ದೇವನೂರರದೆಂದು ಹಾಕಲಾದ ಸಂಘದಲ್ಲಿಯ ಫೋಟೊ ತೆಗೆದು ಹಾಕಿ ಯಾರು ಹೇಳಿ ಎಂದು ಕ್ವಿಜ್ ಏರ್ಪಡಿಸಿ ಸುದ್ದಿಮಾಡಿದ್ದು ತಿಳಿಸಿ, ಅದರ ಬಗ್ಗೆ ದೇವನೂರರನ್ನು ಕೇಳಿದ್ದು, ಅವರು ನಿರಾಕರಿಸಿದ್ದು, ನಂತರ ಹಲಗತ್ತಿಯವರಿಗೆ ಅದನ್ನು ತಕ್ಷಣ ತೆಗೆಸಲು ಹೇಳಿದ್ದು, ಮತ್ತೆ ಮತ್ತೆ ಫೋಟೊ ತೆರವು ಗೊಳಿಸಿದ ಬಗ್ಗೆ ಕೇಳಿ, ಅದು ಫೋಟೊ ಎಲ್ಲಿಂದ ಬಂದಿತು ಎಂಬುದರ ಬಗ್ಗೆ ಪತ್ತೆ ಮಾಡಿ ಹೇಳಿ ಎಂದು ರೂಪಕ್ಕ ನನಗೆ ಪತ್ತೇದಾರಿ ಕೆಲಸ ಹಚ್ಚಿದಳು. ನಾನು ಹೂಂ ಅಂದೆನೇ ವಿನಹ ಪತ್ತೆ ಕಾರ್ಯಕ್ಕೆ ಕೈ ಹಾಕಿರಲಿಲ್ಲ. ಏಕೆಂದರೆ ಆಗಲೇ ಅದು ದೇವನೂರರ ಫೋಟೊ ಅಲ್ಲ ಎಂದು ಗೊತ್ತಾದ ಕೂಡಲೇ ತೆಗೆದು ಇಡಲಾಗಿತ್ತು. ಅಲ್ಲದೇ ವಿಚಾರ ಸಂಕಿರಣದಲ್ಲಿ ದೇವನೂರರ ಫೋಟೊವೊಂದನ್ನು ಆಯ್ಕೆ ಮಾಡಿ ಸಿದ್ದಗೊಳಿಸಲು ಸೂಚಿಸಲಾಗಿತ್ತು. ಆದರೆ ಇಂದು ರೂಪಕ್ಕ ಕಳಿಸಿದ ಮೇಲ್ ತೆರೆದು ನೋಡಿದಾಗ ಒಂದಿಷ್ಟು ಗಾಬರಿ ಆಯಿತು. ಅಯ್ಯೊ! ಇಷ್ಟೊಂದು ಚರ್ಚೆ ಆಗಿದೆಯೆ ಎನಿಸಿ ಇದಕ್ಕೆ ಪ್ರತಿಕ್ರಿಯಿಸಲೇ ಬೇಕು, ಮತ್ತು ದೇವನೂರರ ಫೋಟೊ ಕಥೆಗೆ ಪೂರ್ಣವಿರಾಮ ನೀಡಬೇಕು ಎನಿಸಿ ಈ ಮಾಹಿತಿ ಮತ್ತು ಪ್ರತಿಕ್ರಿಯೆ ನೀಡುತ್ತಿದ್ದೇನೆ.

ಸಂಘದಲ್ಲಿ ಯಾವುದೇ ಫೋಟೊ ಹಾಕಬೇಕಾದರೆ ಒಂದು ಕ್ರಮವನ್ನು ಅನುಸರಿಸುತ್ತಾ ಬಂದಿದೆ. ಸಂಘದಲ್ಲಿ ಫೋಟೊ ಹಾಕುವ ಕುರಿತು ಯಾರಾದರು ತಿಳಿಸಿದ್ದರೆ ಅಥವಾ ಆಡಳಿತ ಮಂಡಳಿಯ ಯಾರಾದರು ಪ್ರಸ್ತಾಪಿಸಿದರೆ ಅದು ಮೊದಲು ಸಂಘದ ಕಾರ್ಯಕಾರಿ ಸಮಿತಿಯಲ್ಲಿ ಪ್ರಸ್ತಾಪಕ್ಕೆ ಬರುತ್ತದೆ. ಅವರ ಕುರಿತು ಚರ್ಚೆ ಆಗುತ್ತದೆ. ಫೋಟೊ ಹಾಕಲು ಯೋಗ್ಯ ಎಂದು ಸಭೆ ನಿರ್ಧರಿಸಿದ ನಂತರ ಅವರ ಫೋಟೊ ಪಡೆದುಕೊಳ್ಳುವ ಕಾರ್ಯ ನಡೆಯುತ್ತದೆ. ಬಹಳಷ್ಟು ಸಂದರ್ಭದಲ್ಲಿ ಸಾಲಿ ಫೋಟೊ ಸ್ಟುಡಿಯೋ ಇಲ್ಲವೆ ಮನೋಹರ ಗ್ರಂಥಮಾಲಾದಿಂದ(ಇವರು ಕರ್ನಾಟಕದ ಬಹುತೇಕ ಎಲ್ಲ ಸಾಹಿತಿಗಳ ಫೋಟೊಗಳ ಸಂಗ್ರಹ ಮಾಡಿದ್ದು ಎಲ್ಲರಿಗೂ ತಿಳಿದ ಸಂಗತಿ) ಸಾಹಿತಿಗಳ ಫೋಟೊಗಳನ್ನು ಪಡೆದದ್ದು ಹೆಚ್ಚು. ಸ್ಥಳಿಯರಾಗಿದ್ದು ಅವರು ಜೀವಂತವಿದ್ದಲ್ಲಿ ಅವರಿಂದ ಫೋಟೊ ಪ್ರತಿಯನ್ನು ಪಡೆದು ಹಾಕುತ್ತಾ ಬಂದಿದೆ.

ದೇವನೂರ ಮಹದೇವರ ಫೋಟೊ ಹಾಕಲು ನಿರ್ಧಾರ ತೆಗೆದುಕೊಂಡಿದ್ದು 27-5-2010ರಂದು ನಡೆದ ಕಾರ್ಯಕಾರಿ ಸಮಿತಿ ಸಭೆಯಲಿ. ಅಧ್ಯಕ್ಷ ಪಾಟೀಲ ಪುಟ್ಟಪ್ಪನವರು ಸೂಚಿಸಿದ ಹತ್ತು ಹೆಸರುಗಳಲ್ಲಿ ಇವರದು ಒಂದಾಗಿತ್ತು. ದೇವನೂರರ ಜೊತೆ ದ.ಬ. ಕುಲಕರ್ಣಿ, ಕೃಷ್ಣಕುಮಾರ ಕಲ್ಲೂರ, ವ್ಯಾಸರಾಯ ಬಲ್ಲಾಳ, ಕೊಡಗಿನ ಗೌರಮ್ಮ, ಎಂ.ಕೆ. ಇಂದಿರಾ, ತ್ರಿವೇಣಿ, ಆರ್ಯಾಂಬ ಬಟ್ಟಾಭಿ, ಪ್ರೇಮಾ ಭಟ್,  ಸೆಗೋ ಕುಲಕರ್ಣಿ ಯಶವಂತ ಚಿತ್ತಾಲ, ಮಾಲತಿ ಪಟ್ಟಣಶೆಟ್ಟಿಯವರ ಹೆಸರುಗಳನ್ನು ಅಧ್ಯಕ್ಷರು ಸೂಚಿಸಿದ್ದರು. ಅದನ್ನು ಕಾರ್ಯಕಾರಿ ಸಮಿತಿ ಒಪ್ಪಿ ಫೋಟೊ ಹಾಕಲು ನಿರ್ಧರಿಸಿ, ಇವರೆಲ್ಲರ ಫೋಟೊಗಳ ಪ್ರತಿಗಳನ್ನು ಮನೋಹರ ಗ್ರಂಥಮಾಲೆಯಿಂದ ಪಡೆದುಕೊಂಡು ಸಾಲಿಯವರಲ್ಲಿ ದೊಡ್ಡದು ಮಾಡಿಸಿ ಫೋಟೊ ಸಿದ್ದಗೊಳಿಸಿ ಹಾಕಲಾಯಿತು. ಈಗ ಸಂಘದಲ್ಲಿ ಹಾಕಲಾಗಿರುವ ಎಲ್ಲ ಫೋಟೊಗಳಲ್ಲಿಯ ವ್ಯಕ್ತಿಗಳ ಕಿರು ಪರಿಚಯ ದೊರೆಯುವಂತೆ ಐದು ಗ್ರಂಥಗಳಲ್ಲಿ ಪ್ರಕಟಿಸುವ ಯೋಜನೆ ಹಮ್ಮಿಕೊಂಡು, ಮೊದಲು ಸಂಗೀತ, ಜಾನಪದ, ನೃತ್ಯ, ಚಿತ್ರಕಲೆಯಲ್ಲಿಯ ಸಾಧಕರ ಪರಿಚಯಿಸುವ ‘ಸಾಂಸ್ಕೃತಿಕ ಧ್ರುವ ತಾರೆಗಳು’ ಕೃತಿಯನ್ನು ಪ್ರಕಟಿಸಿದೆ. ಉಳಿದಂತೆ ಉಳಿದವರನ್ನು ಪರಿಚಯಿಸುವ ಕೃತಿಗಳನ್ನು ಹೊರತರುವ ಪ್ರಯತ್ನ ನಡೆದಿದೆ.
ಮತ್ತೊಮ್ಮೆ ಸಂಘದ ಅಚಾತುರ್ಯವಾಗಿ ಆದ ತಪ್ಪನ್ನು ಸರಿಪಡಿಸಲು ಅವಕಾಶ ಕಲ್ಪಿಸಿದ ‘ಅವಧಿ’ ಗೆ ಪ್ರೀತಿಯ ವಂದನೆಗಳು.
 
ಶಂಕರ ಹಲಗತ್ತಿ
ಪ್ರಧಾನ ಕಾರ್ಯದರ್ಶಿ
ಕರ್ನಾಟಕ ವಿದ್ಯಾವರ್ಧಕ ಸಂಘ
 
 
 

‍ಲೇಖಕರು G

August 7, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ನಾಗರಾಜ್ ಹೆತ್ತೂರು

    ಪೂರ್ಣ ವಿರಾಮ ಹಾಕಿ ಒಳ್ಳೆಯ ಕೆಲಸ ಮಾಡಿದಿರಿ. ಆದರೆ ಫೋಟೋ ಇಡಬೇಕೆ ಬೇಡವೇ ಎಂಬ ಬಗ್ಗೆ ತನಿಖೆ ನಡೆಸಸುವಮ ಚರ್ಚೆ ಏರ್ಪಡಿಸುವ ಅಗತ್ಯ ಇರಲಿಲ್ಲ ಎನಿಸುತ್ತದೆ….

    ಪ್ರತಿಕ್ರಿಯೆ
  2. D.Ravivarma

    ಸರ್ ನಮಸ್ಕಾರ.. ನನಗೆ ಅವಧಿಯಲ್ಲಿ ಈ ಕ್ವಿಜ್ ಪ್ರಾರಮ್ಬವಾದಗಿನಿಂದ ಒಂದು ಟೆನ್ಶನ್ ಸುರುವಾಗಿತ್ತು… ಅದೆಲ್ಲೋ ಏನೋ ತಪ್ಪಾಗಿದೆ ,ಅಂತಾ ನನ್ನ ಮನಸಿನಲ್ಲಿ ಕಾಡುತ್ತಲೇ ಇತ್ತು..sirge ಫೋನ್ ಮಾದಿದ್ದೆ. ಫೋನ್ ಸ್ವಿಚ್ ಆಫ್ ಇತ್ತು.. ಪ್ರಯಿಕ್ರಿಯೆಗಳನ್ನು ನೋಡಿ ದಂಗಾಗಿ ಹೊದೆ..
    ನನ್ನ ಫೋಟೋ ಅದೇಗೆ ವಿದ್ಯಾವರ್ಧಕ ಸಂಘದಲ್ಲಿ ಬಂತು ,ವಿದ್ಯಾವರ್ಧಕ ಸಂಘದ ಬಗ್ಗೆ ನನಗೆ ತುಂಬಾ ಗೌರವವು ಇದೆ ಅವರ ಚಟುವಟಿಕೆಗಳನ್ನು ಗಮನಿಸುತ್ತ ಬನ್ದಿರುವೆ.. ಪಲಿತಾಂಶ ಹೊರಬಿದ್ದಾಗ ನಾನು ತಕ್ಷಣ ಜಿ,ಏನ್,ಮೋಹನ್ ಸರ್ ಗೆ ಫೋನ್ ಮಾಡಿ ಅದೆಲ್ಲೋ ಪ್ರಾಬ್ಲಮ್ ಆಗಿದೆ ಅದು ನನ್ನ ಫೋಟೋ ,ನೀವು ದೇವನೂರು ಅವರಿಗೆ ಫೋನ್ ಮಾಡಿ ,ವಿಚಾರಿಸಿ,, ಎಂದು ಕೇಳಿದೆ .ಽಅಗ ನನಗೆ ಈ ಹಿಂದೆ ಹೆಗ್ಗೋಡಿನಲ್ಲಿ ಸಾಲಿ ಅವರು ಫೋಟೋ ತೆಗೆದದ್ದು ನೆನಪಾಯ್ತು .ಽವರ ಸ್ಟುಡಿಯೋ ಹುಡುಗರ ತಪ್ಪಿನಿಂದ ಆಗಿರಬಹುದೇ ಅನ್ನುವ ಆಲೋಚನೆ ಬಂತು .ಽಅದ್ರೆ ಇಲ್ಲಿ ಯಾರು ಉದ್ದೇಶದಿಂದ ಮಾಡಿದ ತಪ್ಪಲ್ಲ ಅನ್ನೋದು ಕಾತ್ರಿಯಾಯ್ತು.ಽದಾದ ನಂತರ ಎಲ್ಲ ಸರಿಯಾಯ್ತು… ಅವಧಿ ಈಗಲು ಅದನ್ನು ಗುರುತಿಸದಿದ್ದರೆ ಇನ್ನು ಅದೆಸ್ತು ಕಾಲ ಆ ಫೋಟೋ ಅಲ್ಲಿರುತಿತ್ತು ..ಽಅ ಕ್ಷಣಕ್ಕೆ ತಕ್ಷಣ ಸ್ಪಂದಿಸಿ ಅದನ್ನು ಸರಿಪಡಿಸಿದ್ದಕ್ಕೆ ತಮಗೂ ಽಅವಧಿ ಗು ನಾನು ಋಣಿ ..
    ನನ್ನ ಫೋಟೋ ನೋಡಿ ಕೆಲವರು ಅಬ್ದುಲ್ ರಶೀದ್,ದೇವನುರ್ ಮಹಾದೇವ,ಶ್ರೀರಾಮುಲು ್‌ಇಗೆ ಹೀಗೆ ಉತ್ತರ ನೋಡಿ ,ಮನುಸ್ಯನ ಮುಕದಲ್ಲಿ ಇಸ್ಟೆಲ್ಲಾ ಸಾಮ್ಯತೆಗಲಿರುತ್ತವೆಯೆ.. ,,ಹಾಗೆ ನನ್ನ ವ್ಯಕ್ತಿತ್ವದ ಬಗ್ಗೆ ಏನೆಲ್ಲಾ ಕಲ್ಪನೆಗಳನ್ನು ,ಭಾವನೆಗಳನ್ನು ಕೂಡ ಮುಡಿಸಿಕೊನ್ದಿರಬಹುದು ..ಎನ್ನುವ ಆಲೋಚನೆ ಈಗಲು ನನ್ನನ್ನು ಕಾಡುತ್ತಿದೆ …
    ಏತನ್ಮದ್ಯೆ ಅವಧಿಯಲ್ಲಿ ಎರಡು ದಿನ ಮಿನ್ಚಿದಿಯಲ್ಲ ಅದಕ್ಕೆ ಪಾರ್ಟಿ ಕೊಡು ಎನ್ನುವ ಗೆಳೆಯರ ಮಾತು ಕೇಳಿ ನಗೆ ಬರುತ್ತಿದೆ ,,,,
    ಮತ್ತೊಮ್ಮೆ ನಿಮಗೂ ಅವಧಿಗೂ ಹೃದಯಪೂರ್ವಕ ನಮಸ್ಕಾರ ….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: