ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಅಹವಿ ಹಾಡು : ನಾನು ಕಲೆಕ್ಷನ್ ಏಜೆಂಟ್ ಆದ ಕಥೆ!
ನಮ್ಮ ಕೊರವಂಜಿ ರಾಶಿಯವರ ಮಗ ಅಪರಂಜಿ ಶಿವಕುಮಾರ್ ಅವರು ಒಂದು ಕಡೆ ಬರೆದಿದ್ದರು - ಅವರ ಬಿಸಿನೆಸ್‌ಗೆ ಆರ್ಡರ್ ಕೇಳಿ ಪಡೆದ ಮೇಲೆ, order execute ಮಾಡಿದ ನಂತರ, ಹಣ ಕೇಳಲು ಹೋದರೆ ‘ಏನ್ರೀ ಪಾಪ ಅಂತ ಆರ್ಡರ್ ಕೊಟ್ರೆ ದುಡ್ಡು ಬೇರೆ ಕೇಳ್ತೀರಲ್ಲ’ ಅನ್ನುತ್ತಿದ್ದರಂತೆ ಆ ಮಹಾನುಭಾವರು! ನಮ್ಮದೂ ಅದೇ ಕತೆ. ಸಪ್ಲೈ ಮಾಡಿಸಿಕೊಳ್ಳುವ...
ಸುಗತ ಬರೆಯುತ್ತಾರೆ: ಆರ್ಥಿಕ ನೀತಿಗೆ ಸಮನ್ವಯದ ಸಿದ್ದು ಬೆಸುಗೆ
ಸುಗತ ಶ್ರೀನಿವಾಸರಾಜು ಸಿದ್ದರಾಮಯ್ಯನವರು ತಮ್ಮ ಮುಂಗಡ ಪತ್ರವನ್ನು ಈಗಷ್ಟೇ ಮಂಡಿಸಿದ್ದಾರೆ. ಅವರು ಅದನ್ನು ಮಂಡಿಸಿದ ಹೊತ್ತಿನಲ್ಲಿ ಸ್ನೇಹಿತರ ನಡುವೆ ಒಂದು ಕುತೂಹಲಕಾರಿ ಚರ್ಚೆ ಅಥವ ಜಿಜ್ಞಾಸೆ ಏರ್ಪಟ್ಟಿತ್ತು. ಆ ಚರ್ಚೆಯ ಆಳದಲ್ಲಿ ಇದ್ದದ್ದು ಒಂದು ಮೂಲಭೂತ ಪ್ರಶ್ನೆ: ಸಿದ್ದರಾಮಯ್ಯನವರು ತಮ್ಮ ರಾಜಕೀಯ ಧೋರಣೆಯಲ್ಲಿ...
ಜಿ ಎನ್ ನಾಗರಾಜ್ ಬರೀತಾರೆ: ವಚನ ಶಿಖರ…
ಜಿ ಎನ್ ನಾಗರಾಜ್ (ಲೇಖನದ ಮೊದಲ ಭಾಗ ಓದಲು ಇಲ್ಲಿ ಕ್ಲಿಕ್ಕಿಸಿ) ವಚನ ಸಿದ್ಧಾಂತದ ಹುಡುಕಾಟ ಅದರಿಂದಾಗಿ ವಚನಗಳ ಸಾರವನ್ನು ಅರಿತುಕೊಳ್ಳಲು ಅವುಗಳ ಹಿಂದಿನ ಸಿದ್ಧಾಂತದ ಬೆನ್ನಟ್ಟುವುದು ಅನಿವಾರ್ಯವಾಯಿತು. ಈ ಸಿದ್ಧಾಂತದ ಹುಡುಕಾಟ ನನ್ನನ್ನು ವಚನಗಳ ತತ್ವಗಳು ರೂಪುಗೊಂಡ ಬಗೆಯ ಅಧ್ಯಯನಕ್ಕೆ -ಅದೇ ಒಂದು ಪ್ರತ್ಯೇಕ ಅಧ್ಯಯನ...
ಅಶೋಕ ಶೆಟ್ಟರ್ ಕಾಲಂ: ಜಾತಿ ಮತ ಮೀರಿದ ಪ್ರೇಮಿಗಳ ಮೆಚ್ಚುತ್ತ..
ಸದ್ದು ಗದ್ದಲವಿಲ್ಲದೇ ಫೋನ್ ನಲ್ಲಿ ಮಾತಾಡುತ್ತ ಮಗ ಟೆರೆಸ್ ಮೇಲೆ ಹೋದದ್ದೇನೋ ಶ್ರೇಷ್ಠಿಗಳ ಗಮನಕ್ಕೆ ಬಂದಿತ್ತು. ಆದರೆ ಆ ಸಂಭಾಷಣೆ ತೀವ್ರವಾಗುತ್ತ, ಗಡುಸಾಗುತ್ತ, ಕಲಹದಂತೆ ತೋರುತ್ತ, ದೊಡ್ಡ ಧ್ವನಿಯಾಗಿ ಕಿವಿಗೆ ತಟ್ಟಿದಾಗ ಶ್ರೇಷ್ಠಿಗಳು ಮೇಲೆ ಹೋದರು. ಶ್ರೇಷ್ಠಿಪುತ್ರ ದುಮುದುಮು ಉರಿಯುತ್ತಿದ್ದ. "ಏನಲೇ?" ಎಂದರು. ಇವನ...
ಅವಧಿ recommends: ಭಾಗ್ ಮಿಲ್ಕಾ ಭಾಗ್!
ಕುಮುದವಲ್ಲಿ ಅರುಣ್ ಮೂರ್ತಿ ....ಅವನು ಓಡೋಕೆ ಶುರು ಮಾಡಿದ್ದು ಶಾಲೆಗೆ ತಡವಾಗಬಾರದೆಂದು...ಶಾಲೆಯಿಂದ ಹಿಂತಿರುಗಿ ಬರುವಾಗ ಬಿಸಿಲೇರಿ ಮರಳು ಕಾದು ಸುಡುತ್ತಿದ್ದರೂ, ಲೆಕ್ಕಿಸದೇ ಮರಳ ಚಿಮ್ಮಿಸಿ ಓಡುತ್ತಾನೆ...ಅಮ್ಮ ಕೊಡುವ ಹಾಲಿನ ನೆನಪಾಗಿ. ಮತ್ತೆ ಓಡಿದ್ದು...ಜೀವ ಉಳಿಸಿಕೊಳ್ಳುವ ಸಲುವಾಗಿ. ಭಾರತ-ಪಾಕಿಸ್ತಾನದ ವಿಭಜನೆಯ...
ಹುಸೇನ್ ಪಾಷಾ ಕವಿತೆ: ದಕ್ಕದೆ ಹೋದವಳಿಗೆ
ಹುಸೇನ್ ಪಾಷಾ ಹುಡುಗಿ, ಯಾಕೋ ವಿಷಾದ,ಎಂಥದೋ ವ್ಯಾಕುಲತೆ ಎದೆಯೊಳಗೆ ತಲ್ಲಣ,ನೆನಪಿನ ಮಳೆ ತಡೆಯದೆ ಬಿಕ್ಕುತ್ತ ಹೋದೆ. ನದಿ ದಂಡೆಯ ನೆಲದಲ್ಲಿ ನಮ್ಮ ಪ್ರೇಮವನ್ನು ಹೂತು, ಸಮಾಧಿ ಕಟ್ಟಿದ ಜಾಗ ಅಲ್ಲೀಗ ಎಂಥದೋ ಮೌನ; ಅದು ಏನೋ ಹೇಳಲು ಹವಣಿಸುತ್ತಿತ್ತು. ಕ್ಷಿತಿಜ ಯಾವುದೋ ಆಳಕ್ಕೆ ಒಯ್ದು ನನ್ನ ಮುರಿದ ಕನಸುಗಳಿಗೆ ತಾಕಿ ಅಳತೊಡಗಿತು:...
ಬರ್ತಿದೆ ಕಾಮರೂಪಿ ಬರಹಗಳ ಸಮಗ್ರ ಸಂಪುಟ
ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ಚಿಟ್ಟಿ ಮಸೀದಿಗೆ ಹೋಗಿದ್ದು
ಭಾಗ -3 (ಭಾಗ - ೨ ಓದಲು ಇಲ್ಲಿ ಕ್ಲಿಕ್ಕಿಸಿ) ದಿನೇ ದಿನೆ ಚಿಟ್ಟಿಯ ಜಗತ್ತು ವಿಸ್ತಾರವಾಗುತ್ತಾ ಹೋಗುತ್ತಿತ್ತು. `ಅಮ್ಮ ಹಾಗಂದ್ರೇನೇ?' ಎನ್ನುವ ಅವಳ ಪ್ರಶ್ನೆಗೆ ಉತ್ತರ ಹೇಳಲಾಗದಾದಾಗ ಅಮ್ಮಾ `ಅಬ್ಬಾ ಅಬ್ಬಾ ಅದೇನ್ ಬಾಯೇ ನಿಂದು? ಯಾವ್ ಗಳಿಗೇಳಿ ನಿನ್ನ ಹೆತ್ತ್ಬಿಟ್ನೋ' ಎಂದು ರೇಗುತ್ತಿದ್ದರೆ, ಅಪ್ಪ ಕೋಪ...
ಜಿ ಎನ್ ನಾಗರಾಜ್ ಬರೀತಾರೆ: ವಚನಗಳೆಂಬ ಶಿಖರಗಳೂ ಮತ್ತು ನನ್ನ ಪ್ರಯಾಣವೂ..
ವಚನ ಗೌರಿಶಂಕರ ಶಿಖರವನ್ನೇರುವ ಸಾಹಸ ಮತ್ತು ಸಂತೋಷಗಳು ಜಿ ಎನ್ ನಾಗರಾಜ್ 1979ರ ಡಿಸೆಂಬರ್ ತಿಂಗಳಲ್ಲಿ ಒಂದು ದಿನ.ನನಗೆ ಧಾರವಾಡ ಜಿಲ್ಲೆಗೆ ಆಗತಾನೆ ವರ್ಗಾವಣೆಯಾಗಿತ್ತು. ಒಂದು ಸರ್ಕಾರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಾಗಿತ್ತು. ತಾಲ್ಲೂಕಿನ ಮುಖ್ಯ ಅಧಿಕಾರಿಗಳೊಡನೆ ಸಮಾರಂಭದ ಜಾಗಕ್ಕೆ ಹೋಗಿ ವೇದಿಕೆಯ...
ನನ್ನಲ್ಲೊಂದು, ನನ್ನ ಮಗ್ಗುಲಲ್ಲೊಂದು ಹಾಡು..
ಸುಪ್ರಿಯಾ ರಘುನಂದನ್ "ಅಮ್ಮಾ ನೀ ಹಾಡು, ಅದ್ರೆ ನನ್ ಬಿಟ್ಟ್ ಹೊಗ್ಬೇಡ" ಎಂದು ಹೇಳ್ತಿದ್ದವಳು, ವೇದಿಕೆ ಏರುವ ಹೊತ್ತಿಗಾಗ್ಲೆ, " ಅಮ್ಮಾ ನೀ ಹಾಡ್ಬೇಡ ಪ್ಲೀ...ಸ್" ಎಂದು ಬಾಡಿದ ಮುಖದೊಂದಿಗೆ ಸೆರಗ ಹಿಡಿದು ಕೂತಳು.ಅಮ್ಮನ ನೆರಳಾಗೇ ಸದಾ ಹಿಂಬಾಲಿಸೊ ಅವಳು, ಅಂದು ಏನು ಹೇಳಿದ್ರೂ ಕೇಳಲೊಲ್ಲಳು. ಅದ್ ಹೇಗೋ ಅವಳ ಮನವೊಲಿಸಿ ವೇದಿಕೆ...
ಅಂಕಿತಾದಲ್ಲಿ ಮತ್ತೆ ಪುಸ್ತಕ ಸಂಭ್ರಮ- ಫೋಟೋ ಆಲ್ಬಂ
ಪತ್ರಕರ್ತ ಮಹಾಬಲ ಸೀತಾಳಭಾವಿ ಹಾಗೂ ಹಾಸ್ಯ ಬರಹಗಾರ ಬಿ ಎಸ್ ಕೇಶವರಾವ್ ಅವರ ಕೃತಿಗಳು ಬೆಂಗಳೂರಿನಲ್ಲಿ ಬಿಡುಗಡೆಗೊಂಡಿತು. ಜೋಗಿ, ಮಲ್ಲೇಪುರಂ ವೆಂಕಟೇಶ್, ಎಂ ಎಸ್ ನರಸಿಂಹ ಮೂರ್ತಿ ಅತಿಥಿಗಳಾಗಿದ್ದರು. ಅಂಕಿತಾ ಪುಸ್ತಕ ಈ ಕೃತಿಗಳನ್ನು ಪ್ರಕಟಿಸಿದೆ. ಪುಸ್ತಕ ಬಿಡುಗಡೆಯ ಸಂಭ್ರಮದ ಕ್ಷಣಗಳು ನಿಮಗಾಗಿ... ಚಿತ್ರಗಳನ್ನು ದೊಡ್ಡದಾಗಿ...
ಹೋಗಿ ಬಾ ಟಕ ಟಕ..
ಇದು ಅಕ್ಷರ ಸೋನಾರ ಬರೆದ 'ಉದಯವಾಣಿ' ವರದಿ
ಚುನಾವಣೆಗೆ ಮಾಡಿದ ಖರ್ಚೂ, ಅಯೋಗಕ್ಕೆ ಕೊಟ್ಟ ಲೆಕ್ಕವೂ..
ಶಾಸಕರ ಚುನಾವಣಾ ಲೆಕ್ಕ ಪಕ್ಕನಾ? ಶರಣಪ್ಪ ಬಾಚಲಾಪುರ ಇತ್ತೀಚಿಗೆ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಶಾಸಕರಾಗುವವರು ಚುನಾವಣೆಯಲ್ಲಿ ಇಂತಿಷ್ಟೆ ಖರ್ಚು ಮಾಡಬೇಕು. ಈ ಖರ್ಚಿನ ವಿವರವನ್ನು ಆಗಾಗ ನೀಡಬೇಕು. ಅದು ನೀವು ಹೇಳಿದಷ್ಟು ಅಲ್ಲ. ನಮ್ಮ ವಿಕ್ಷಕರು ಒಪ್ಪಿಕೊಂಡಷ್ಟು, ಹೆಚ್ಚಿಗೆ ಖರ್ಚು ಮಾಡಿದರೆ ನಿಮ್ಮ ಮೇಲೆ ಕ್ರಮ ಎಂದು...
ಕೊರಳಸೆರೆಯ ಉಮ್ಮಳಿಕೆ ಸ್ಪೋಟಗೊಳ್ಳುವ ಮುನ್ನ..
ಉಮ್ಮಳಿಕೆ ಸ್ಪೋಟಗೊಳ್ಳುವ ಮುನ್ನ... - ಎನ್ವೀ. ವೈದ್ಯ ಹೆಗ್ಗಾರ್ ಯುದ್ಧಗಳು ಸಂಭವಿಸುವುದಿದ್ದರೆ ನನಗಾಗಿ ಕಾಯದೇ ಮೊಳಗಲಿ ಕಹಳೆ. ಮದ್ದು, ಗುಂಡು, ಗುದ್ದು ತಪರಾಕಿ ಎಲ್ಲಾ ಅಪರಾ ತಪರಾಗಳನ್ನು ಸರಿ ಮಾಡುವುದಿದ್ದರೆ ನಿನ್ನೆಗಳ ಬಾಕಿ ಮೋಸಗಳನ್ನು ಚುಕ್ತಾ ಮಾಡುವುದಿದ್ದರೆ ಕಹಳೆ ಈಗಿಂದೀಗಲೇ ಮೊಳಗಲಿ. ತುರುಬಿನ...
ನಾಳೆ ನೀನಾಸಂನಲ್ಲಿ ಎಂ ಎಸ್ ಶ್ರೀರಾಮ್
'ಅಮೃತ ಸಿಗದವರು' – ಒ ಎನ್ ವಿ ಕುರುಪ್ ಕವಿತೆ
ನಾ.ದಾಮೋದರ ಶೆಟ್ಟಿ (ಮಲಯಾಳಮೂಲ: ಒ.ಎನ್.ವಿ.ಕುರುಪ್ ) ಮಳೆ ಬರುತ್ತಲಿದೆ ಮಗೂ, ಹಿತ್ತಿಲಲಿ ಕಾಲುವೆಯೆದ್ದಿದೆ, ಮತ್ತು- ನಿನ್ನ ಖುಷಿಗೆ ಕಾಗದದ ದೋಣಿಗಳು.. ಒಂದೊಂದಾಗಿ ನೀನವನ್ನು ನೀರಿಗಿಳಿಸು, ನೋಡುತ್ತ ನೋಡುತ್ತ ಆಹ್ಲಾದಿಸು. ನೀನೋರ್ವ ದಂತಕತೆಯ ದೇವರಂತೆ ಕುಳಿತು, ಹಡಗುಗಳನ್ನು ದೂರದೂರುಗಳಿಗೆ ಕಳುಹಿಸು. ನಿನ್ನ...
ಮಂಡ್ಯ ರಮೇಶ್ ಕಾಲಂ : ನಾಟಕ, ನಾಟಕ ಮತ್ತು ನಾಟಕ
ನಾಟಕ ಓದಿಸಿದ್ದು ಅಂದಕೂಡ್ಲೆ ನೆನಪಾಯ್ತು! ಪ್ರತೀ ವಾರಕ್ಕೊಮ್ಮೆ ಒಬ್ಬೊಬ್ಬರು ನಾಟಕ ಓದುವುದು. ಒಂದು ನಾಟಕ ಓದುವುದು, ಆಮೇಲೆ ಅದರ ಬಗ್ಗೆ ಚರ್ಚೆ ಮಾಡುವುದು. ಈ ಕ್ಲಾಸ್ನಲ್ಲಿ ತುಂಬಾ ಒಳ್ಳೊಳ್ಳೆ ನಾಟಕಗಳ ರೀಡಿಂಗ್ ಆಯ್ತು. ಬೆಕೆಟ್ನ ಗಾಡೋ, ಚಂಪಾರ ಅಪ್ಪ, ಗಿಳಿಯು ಪಂಜರದೊಳಿಲ್ಲ (ಲಂಕೇಶ್)... ಹೀಗೆ ಕೆಲವನ್ನು ನಾವು ಓದಿದರೇ.,...
’ವಿಶ್ವ ಚಲನಚಿತ್ರ ಇತಿಹಾಸ’ ಮತ್ತು ಅದಕ್ಕೆ ಎಚ್ ಎಸ್ ವಿ ಬರೆದ ಮುನ್ನುಡಿ
ಶನಿವಾರ ಪಿ ಆರ್ ರಾಮದಾಸ ನಾಯ್ಡು ಅವರ ವಿಶ್ವ ಚಲನಚಿತ್ರ ಇತಿಹಾಸ ಪುಸ್ತಕ ಬಿಡುಗಡೆ ಆಯಿತು ಪುಸ್ತಕದ ಮುಖಪುಟ ಮತ್ತು ಅದಕ್ಕೆ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ಬರೆದ ಮುನ್ನುಡಿ ಇಲ್ಲಿದೆ. ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಮುನ್ನುಡಿ ಶ್ರೀ ರಾಮದಾಸನಾಯ್ಡು ಅವರು ನನ್ನ ಸಂಪರ್ಕಕ್ಕೆ ಬಂದದ್ದು ಅವರು ಕೇವಲ ೧೪-೧೫ ವರ್ಷದ...
ಮೈಸೂರಿನಲ್ಲಿ ದಿನವಿಡೀ ಸಂಗೀತ ಸಂಭ್ರಮ ’ಇಂಪು’
ಜುಲೈ 21 ರಂದು ಮೈಸೂರಿನಲ್ಲಿ ದಿನವಿಡೀ ಸಂಗೀತ ಹಬ್ಬ 'ಇಂಪು' ಉಜ್ವಲ ವ್ಯಕ್ತಿತ್ವದ ಬಹುಮುಖ ಪ್ರತಿಭೆಯ ಪಂಡಿತ ತಾರಾನಾಥರು ತೀರಿಹೋಗಿ ಏಳು ದಶಕಗಳು ಕಳೆದಿವೆ. ಆದರೆ ಅವರ ವ್ಯಕ್ತಿತ್ವದ ಪ್ರಭೆ ಇನ್ನೂ ಬೆಳಗುತ್ತಲೇ ಇದೆ. ಆಯುರ್ವೇದ, ಸಂಗೀತಶಾಸ್ತ್ರ, ಯೋಗವಿದ್ಯೆಗಳನ್ನು ತಲಸ್ಪರ್ಶಿಯಾಗಿ ತಿಳಿದಿದ್ದ, ಅನೇಕ ಭಾಷೆಗಳಲ್ಲಿ...
ರಂಗಶಂಕರಕ್ಕೆ ಸಂಸ ಬರ್ತಿದಾರೆ
ತೇಜಸ್ವಿಯನ್ನು ಹುಡುಕುತ್ತಾ : ಮೂಡ್ಗೆರೆ ಮೇಲ್ ಮಂಜು!
ಭಾಗ ೪ (ಇಲ್ಲಿಯವರೆಗೆ) ಬೆಳಿಗ್ಗೆ ಎದ್ದಾಗ ೮ ಗಂಟೆ. ಚಳಿ ಮೈಕೊರೆಯುತ್ತಿತ್ತು. ನಾವಿದ್ದ ರೂಮಿನ ಕಿಟಕಿ ತೆಗೆದು ತೇಜಸ್ವಿಯವರ ಮೂಡಿಗೆರೆಯ ಮೊದಲ ದರ್ಶನ ಪಡೆದುಕೊಂಡೆ. ಪಶ್ಚಿಮ ಘಟ್ಟಗಳ ಹಿನ್ನೆಲೆಯಲ್ಲಿ, ಮೈತುಂಬಾ ಮಂಜು ಹೊದ್ದು ಮಲಗಿದ್ದ ಮೂಡಿಗೆರೆ ಯಾವುದೋ ಭ್ರಮಾಲೋಕದ ಊರೊಂದರಂತೆ ನನಗೆ ಭಾಸವಾಯಿತು. ಅಷ್ಟಕ್ಕೆ ತೃಪ್ತಿಯಾಗದೇ...
