ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನೆಲದ ಕರುಣೆಯ ದನಿ ಫೋಟೋ ಆಲ್ಬಂ
ನಡೆ ನುಡಿ, ನೆಲದ ಕರುಣೆಯ ದನಿ ತಳ ಸಮುದಾಯಗಳ ಸಾಂಸ್ಕ್ರತಿಕ ಕಥನ ಚಿಕ್ಕನಾಯಕನಹಳ್ಳಿಯ ಸ್ರ್ತಿಶಕ್ತಿಭವನದಲ್ಲಿ ನಡೆಯಿತು. ಕೊಟಗಾನಹಳ್ಳಿ ರಾಮಣ್ಣ, ಎಸ್ ಜಿ ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ವಡ್ಡಗೆರೆ ನಾಗರಾಜಯ್ಯ,ದೊರೆರಾಜ್, ಲಕ್ಷ್ಮಿಪತಿ, ಶ್ರೀಪಾಧಭಟ್, ಜಯಲಕ್ಷ್ಮಿ ಎಸ್ ಗಂಗಾಧರಯ್ಯ ಇನ್ನು ಮುಂತಾದವರು ಸೇರಿದ್ದ ಈ...
ಮೊದಲ ಸಲ 'ನಾನು ಅವನನ್ನು ಪ್ರೀತಿಸುತ್ತೇನೆ' ಅಂದಾಗ – ವೈಶಾಲಿ
ನನ್ನೊಳಗೊಂದು ಕೊಲಾಜ್ ವೈಶಾಲಿ ಸಾವು ಎದೆ ಏರಿ ಕೂತಿರುವಾಗಲೂ ಆ ಮನುಷ್ಯ ಬದುಕಿನ ಜೊತೆ ಜೂಜಾಡುತ್ತಾ ಗೆಲ್ಲುವ ಪ್ರಯತ್ನ ಪಡುತ್ತಿದ್ದ, ಒಂದೈದು ನಿಮಿಷ ಎಲ್ಲರಿಗೂ ಹೇಳಬೇಕಾದ್ದೆಲ್ಲ ಹೇಳಿ ಮುಗಿಸುವ ಆತುರದಲ್ಲಿ ಕಷ್ಟದಿಂದ ಮಾತಿಗೆ ಶುರುವಿಟ್ಟರೆ ಮತ್ತಷ್ಟೇ ಬೇಗ ಅಸಹನೀಯ ಮರೆವು ಆವರಿಸಿ ಮತ್ತೆ ಆಗಷ್ಟೇ ಹುಟ್ಟಿದ ಮಗುವಿನಂತೆ...
ಪ್ರೇಮಿಗಳ ಸಾರ್ವಕಾಲೀಕ ಗೀತೆ!
ಎಲ್ಲ ಕಾಲಕ್ಕೂ ಸಲ್ಲುವ ಹಾಡು! ಹಾಡಿಗಾಗಿ ಇಲ್ಲಿ ಕ್ಲಿಕ್ಕಿಸಿ
’ಹೊಟ್ಟೆ ತುಂಬಿಸಿತು ಮತ್ಸ್ಯಗಂಧ ಬೇನೆ ಮರೆಸುವಂತೆ’ – ಪ್ರಜ್ಞಾ ಮತ್ತಿಹಳ್ಳಿ
ಊಟ ಪ್ರಜ್ಞಾ ಮತ್ತಿಹಳ್ಳಿ ತಿನ್ನುತ್ತಾ ಇದ್ದೆ ನಾನು ತಟ್ಟೆ ತುಂಬಾ ಮೀನು ಕಸಿದುಕೊಂಡರು ತಿರುಗಿ ಕೇಳಲು ಭಯವಾಗುವಂತೆ ಪೇಟೆ ತಿರುಗಿ ದರ ಇಳಿಸಿ ಚೀಲ ತುಂಬಿಕೊಂಡೆ ಮಡಿಕೆ ಒಡೆದರು ಒಲೆಯೇ ಆರಿಹೋಗುವಂತೆ ಗಾಳ ಇಳಿಬಿಟ್ಟು ಹಿಡಿಯಲು ಕಲಿತೆ ಬುಟ್ಟಿ ತುಂಬುವಂತೆ ಮುರಿದು ಎಸೆದರು ದಡಕ್ಕೆ ಮುಳ್ಳುಬೇಲಿ ಕಾಲಿಡದಂತೆ...
ಚಿಂತನ ಚಿತ್ತಾರದಲ್ಲಿ ಚಿನುಅ ಅಚಿಬೆ
’ಇಷ್ಟ ಲಿಂಗವೆಂದರೆ ಜಾತಿಯ ಗುರುತಿನ ಚೀಟಿ ಮಾತ್ರವೇ?’ – ಜಿ ಎನ್ ನಾಗರಾಜ್
(ಲೇಖನದ ಮೊದಲ ಭಾಗ) ಇಷ್ಟ ಲಿಂಗವೆಂದರೆ ಜಾತಿಯ ಗುರುತಿನ ಚೀಟಿ ಮಾತ್ರವೇ ? ಇಷ್ಠ ಲಿಂಗದ ಪರಿಕಲ್ಪನೆ ಒಂದು ಅತ್ಯಂತ ಮಹತ್ವದ ಪರಿಕಲ್ಪನೆ. ಅದರ ಎಲ್ಲಾ ಆಯಾಮಗಳನ್ನು ಲೇಖನದಲ್ಲಿ ವಿವರಿಸಲಾಗಿಲ್ಲ. ಆದರೆ ಕಾಯಕವೇ ಕೈಲಾಸ, ಕಾಯವೇ ಕೈಲಾಸ ಅಥವಾ ದೇಹವೇ ದೇಗುಲ,36 ತತ್ವಗಳು, ಅದರಲ್ಲಿನ ಅಂಗ ತತ್ವಗಳು, ಲಿಂಗ ತತ್ವಗಳು, ಲಿಂಗಾಂಗ...
ಸಂಪು ಕಾಲಂ : ಇಷ್ಟಕ್ಕೂ ಶೋಷಣೆ ಎಂದರೇನು?!
"ಇಕ್ರಲಾ, ವದೀರ್ಲಾ, ಆ ನನ್ ಮಕ್ಳ ಚರ್ಮ ಎಬ್ರಲಾ....", "ನೆನ್ನೆ ದಿನ, ನನ್ನ ಜನಾ..." ಇತ್ಯಾದಿ ಹಾಡುಗಳಿರುವ ಸಿದ್ಧಲಿಂಗಯ್ಯನವರ ಪುಸ್ತಕಗಳು ಅಚಾನಕ್ ಕಣ್ಣಿಗೆ ಬಿದ್ದು ಪುಸ್ತಕದ ಬಿಸಿ ಹಾಗೆ ಹರವಿ ಮೈ ತುಂಬಾ ಹರಡಿತು. ಎಂತಹ ಉದ್ವೇಗ, ಸಿಟ್ಟಿನ ಮಾತುಗಳು! ನಾವು ಮಡಿ ಮೈಲಿಗೆಗಳ ವಾತಾವರಣದ ನಡುವೆ ಕೂತು, ಹೆಚ್ಚು ಎಂದರೆ, "ಛೆ,...
ಬಿಲ್ಲು ಕೇಳಿ ಸ್ವಾಮಿ
ತೆರಿಗೆ ನಿಮಗೆ ಅರಿವಿಲ್ಲದಂತೆ ಪಾವತಿಸಿರುವಿರಿ ಅರಿವುಂಟೇ ಎನ್ ನಾರಾಯಣಸ್ವಾಮಿ ಹೀಗೆ ತೆರಿಗೆ ಎಂದರೆ ಬೆಚ್ಚಿ ಬೀಳುತ್ತೀರಲ್ಲವೇ?ಏಕೆಂದರೆ ನೀವು ಖರೀದಿಸುವಾಗ ನೀಡುವ ಬೆಲೆಗಿಂತ ಹಚ್ಚಿಗೆ ಹಣ ತೆರಿಗೆಗೆ ನೀಡಬೇಕೆಂಬುದು ನಿಮ್ಮ ಅನಿಸಿಕೆಯಲ್ಲವೇ? ಆದರೆ ನೀವು ನಿಮ್ಮ ಅರಿವಿಗೆ ಬಾರದಂತೆ ತೆರಿಗೆ ಪಾವತಿಸಿರುತ್ತೀರಿ ಅದನ್ನು...
’ಒಮ್ಮೆ ಓದಬಾರದೆ ಗೆಳೆಯ…’ – ನಿಶಾ ಗೋಪಿನಾಥ್
ನಿಶಾ ಗೋಪಿನಾಥ್ ಮಂಜಿನ ಹನಿ ನಿನ್ನ ಮುಖದ ಮಂದಾರ ಮೋಡ ಕವಿದರೂ ಮಾಸದ ಆ ನಿನ್ನ ನೆನಪುಗಳನು ಸುಂದರ ಕವನಗಳ ರೀತಿಯಲ್ಲಿ ಬರೆದಿಹೆನು ಒಮ್ಮೆಯಾದರೂ ಓದಬಾರದೆ ಗೆಳೆಯಾ... ** ನನ್ನ ಪ್ರೀತಿಯನು ನಿನ್ನ ಹೃದಯದ ಕಾಗದ ಮೇಲೆ ಬರೆಯುತಿರುವೆ, ಮರೆಯದೆ ಒಮ್ಮೆ ಓದಿಬಿಡು. ಮಾತಿನಲ್ಲಿ ಮನೆ ಕಟ್ಟಬೇಡ, ಮೌನಕ್ಕೆ ಶರಣಾಗಬೇಡ, ಕನಸಿನ ಲೋಕಕ್ಕೆ...
ಅವಧಿ Recommends : ಮತ್ತೆ ’ವ್ಯಾನಿಟಿ ಬ್ಯಾಗ್’
ಮೈಸೂರಿನಲ್ಲಿ ’ಅಗ್ನಿ ಮತ್ತು ಮಳೆ’
ಜುಗಾರಿ ಕ್ರಾಸ್ : ಜಿ ಎನ್ ನಾಗರಾಜ್ ಉತ್ತರಿಸುತ್ತಾರೆ
(ವಚನ ಚಳುವಳಿಯ ಬಗ್ಗೆ, ಜಾತಿ ಪದ್ಧತಿಯನ್ನು ಅವು ವಿರೋಧಿಸಿದ್ದರ ಬಗ್ಗೆ ಜಿ ಎನ್ ನಾಗರಾಜ್‌ರವರ ಲೇಖನ ಸರಣಿ ಅವಧಿಯಲ್ಲಿ ಪ್ರಕಟವಾಗಿತ್ತು. ಅದರ ಒಂದು ಕೊಂಡಿ ಇಲ್ಲಿದೆ. ಆ ಲೇಖನದ ಬಗ್ಗೆ ಕಿರಣ್ ತಮ್ಮ ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದರು ಹಾಗು ಕೆಲವು ಪ್ರಶ್ನೆಗಳನ್ನು ಎತ್ತಿದ್ದರು. ಚರ್ಚೆಯ ಮುಂದಿನ ಭಾಗವಾಗಿ ಜಿ ಎನ್...
ನಾದದ ನದಿಯೊಂದು ಹರಿದಾಂಗ…
ಪಂ ರಾಜಶೇಖರ ಮನ್ಸೂರ್ ಸಂದರ್ಶನ ಡಾ ರಾಜಶೇಖರ ಹಳೇಮನೆ ಭಾರತೀಯ ಹಿಂದುಸ್ಥಾನಿ ಸಂಗೀತದಲ್ಲಿ ಬಹು ದೊಡ್ಡ ಪರಂಪರೆಯನ್ನು ಸೃಷ್ಟಿಸಿದವರು ಪಂ. ಮಲ್ಲಿಕಾರ್ಜುನ ಮನ್ಸೂರರು. ಆ ಪರಂಪರೆಯನ್ನು ಅವರಷ್ಟೇ ಸಮರ್ಥವಾಗಿ ಮುಂದುವರಿಸುತ್ತಿರುವವರು ಅವರ ಮಗ ಪಂ. ರಾಜಶೇಖರ ಮನ್ಸೂರ್ ಇವರು. ಘರಾನದ ಮೂಲಕ್ಕೆ ಚ್ಯುತಿ ಬಾರದಂತೆ ಕಾಪಾಡಿಕೊಂಡು ಅದರ...
ಅಹವಿ ಹಾಡು : ಜಯಾ ಬಾಧುರಿ ’ಪತಿಯರೆಲ್ಲಾ ಪ್ರಿಯಕರರಲ್ಲ’ ಅಂದುಬಿಟ್ಟಿದ್ದಿದ್ದರೆ!
ಈ ಬರಹ ಶುರು ಮಾಡುವುದಕ್ಕೆ ಮುನ್ನವೇ ನಾನೊಂದು ಮಾತು ಸ್ಪಷ್ಟ ಪಡಿಸುತ್ತೇನೆ - ನಾನು ಗಂಡಸರೆಲ್ಲ ಕೆಟ್ಟವರು ಮತ್ತು ಹೆಂಗಸರೆಲ್ಲ ಶೋಷಣೆಗೊಳಗಾದವರು ಅಂತ ಮೂಗು ಮುರಿಯುವಂಥ ಸ್ತ್ರೀವಾದಿಯಲ್ಲ ಎಂದು. ಇಡೀ ಜಗತ್ತಿನ ಗಂಡು-ಹೆಣ್ಣುಗಳನ್ನೆಲ್ಲ ಕಾಣುವಾಗ ನನಗೆ ಬರುವಂತ ಮಾಮೂಲು ಪ್ರಶ್ನೆಗಳು, ಸಂಶಯಗಳು ಮತ್ತು ವಿಚಿತ್ರ...
ಇಷ್ಟ ಬಂದಂತೆ ಬದುಕುವುದು ಅಷ್ಟು ಸುಲಭವಲ್ಲ – ಮಾನಸ
ಆದರೂ ಫೇಸ್ಬುಕ್ ಮುಂದೆ ನನ್ಗನಿಸಿದ್ದನ್ನೆಲ್ಲ ಒದರುತ್ತಲೇ ಇರುತ್ತೇನೆ... ಮಾನಸ ಇಷ್ಟ ಬಂದಂತೆ ಬದುಕುವುದು ಅಷ್ಟು ಸುಲಭವಲ್ಲ. ಬದುಕಿನ ಬೇಕು-ಬೇಡಗಳನ್ನೆಲ್ಲಾ ಪರಿಗಣಿಸಿ ಸಮತೋಲಿತ ಸರ್ವೇ ಸಾಮಾನ್ಯ ಜೀವನ ನಡೆಸುವುದು ಒಂದು ಕಲೆ. ಹೊಸ ಲ್ಯಾಬ್ ನಲ್ಲಿ ಸಮಯ ದಾಟಿದರೂ ಮುಗಿಯದ experiment ಗಳು, ಮುಗಿದರೂ ಮುಗ್ಗರಿಸುವ results...
ರನ್ನ ಅಂದ್ರೆ ನಂಗಿಷ್ಟ
ಬಿ ಆರ್ ಸತ್ಯನಾರಾಯಣ ೧. ನಮಗೆ ಸ್ವಾತಂತ್ರ್ಯ ಬಂದಿದ್ದು ೧೯೪೭ರಲ್ಲಿ. ಅಲ್ಲಿಗೆ ಸರಿಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಮದುವೊಳಲು ಎಂಬ ಊರಿನಲ್ಲಿ ರನ್ನನ ಜನನ. ಈಗ ಮುಧೋಳ್ ಎಂಬ ಹೆಸರಿನಿಂದ ಗುರುತಿಸುವ ಅಂದಿನ ಮುದುವೊಳಲು ಘಟಪ್ರಭ ಮತ್ತು ಕೃಷ್ಣಾ ನದಿಗಳು ಹರಿಯುವಲ್ಲಿ ತದ್ದವಾಡಿಗೆ ದಕ್ಷಿಣಕ್ಕೂ, ತೊರೆಗೆರೆಗೆ ಉತ್ತರಕ್ಕೂ...
ಪಲ್ಲವ ಪ್ರಕಾಶನದಿಂದ ’ಜಂಗಮ ಫಕೀರನ ಜೋಳಿಗೆ’
ವಿಜಯನಗರ ಬಿಂಬದಲ್ಲಿ ’ನಂದ ಭೂಪತಿ’
ಅಶೋಕ್ ಶೆಟ್ಟರ್ : ನಾನು ಗಂಡಸರ ಕಾವ್ಯ ಓದುವದನ್ನೂ ಬಿಡಬೇಕೆಂದಿದ್ದೇನೆ!
ಅಶೋಕ್ ಶೆಟ್ಟರ್ ಈ ನೀಲು, ಕಾವ್ಯಕ್ಷೇತ್ರದ ಈ ಬ್ಲ್ಯೂ, ಫಿಲ್ಮೀ ಹುಡುಗಿಯರಿಗೆ ಮಿಗಿಲಾದ ನಿಗೂಢೆ ಹಲವರ ಕಾಡುವ ಕನ್ಯಾಮಣಿ ಆಹಾ ಏನಾಕೆಯ ಕಾವ್ಯಸರಣಿ! ಬೇರಾರೂ ಕಾಣದ್ದನ್ನು ಕಾಣುತ್ತಾಳೆ ಕಂಡದ್ದು ಕಂಡ ಹಾಗೆ ಹೇಳುತ್ತಾಳೆ ಎಲ್ಲೆಡೆಯಿಂದ ಬರುವ ಸುದ್ದಿ ಶಬ್ದ ಲಯ ಆಟ ಹೂಟಗಳಿಗೆ ಕಿವಿ ತೆರೆದು ಕೂತಿರುತ್ತಾಳೆ ಮೂಡ್ ಬಂದರೆ ಒಮ್ಮೊಮ್ಮೆ...
’ಸ್ತ್ರೀವಾದ ಒಡೆದಿಡಲಿಕ್ಕಲ್ಲ…’ – ವಿನಯಾ ಒಕ್ಕುಂದ ಬರೀತಾರೆ
ಸ್ತ್ರೀವಾದ ಒಡೆದಿಡಲಿಕ್ಕಲ್ಲ- ಹೊಸ ಬೆಸುಗೆಗೆ ವಿನಯಾ ಒಕ್ಕುಂದ ಕನ್ನಡದಲ್ಲಿ ಮಹಿಳಾ ಕವಿಗಳು ಮುಖ್ಯನೆಲೆಗೆ ಬಂದಿದ್ದಾರೆ ಮತ್ತು ಅವರು ತಮಗಾಗಿ ಬರೆಯುತ್ತಿದ್ದಾರೆ ಎನ್ನುವ ಮೂಲಕ ಪ್ರತಿಭಾ ನಂದಕುಮಾರ್ ಸದ್ಯದ ಕನ್ನಡ ಬರಹಲೋಕಕ್ಕೆ ಅಗತ್ಯವಾಗಿದ್ದ ವಾಗ್ವಾದವನ್ನು ಆರಂಭಿಸಿದ್ದಾರೆ. ಇದು ಕನ್ನಡ ಸಾಹಿತ್ಯ ಪರಂಪರೆ ಹೊಸ ಪಲ್ಲಟಕ್ಕೆ...
ಫೇಸ್‌ಬುಕ್ ಪಿಕ್ : ಮತ್ತೀಕೆರೆಯಲ್ಲಿ ಕಂಡ ಮುಖ
ಪ್ರವರ ಕೊಟ್ಟೂರ್ ಮತ್ತಿಕೆರೆಯಲ್ಲಿ ತಿರುಗುವಾಗ, ಮೂಲೆಯ ಅಂಗಡಿಯಲ್ಲಿ ಹೂವು ಕಟ್ಟುತ್ತಾ ಕೂರುತಿದ್ದ ಅಜ್ಜಿಯನ್ನು ನೋಡಿದಾಗಲೆಲ್ಲಾ ಏನೋ ಕಾಡಿದಂಥ ಅನುಭವ.... ವಯಸ್ಸು ನೂರು ದಾಟಿರಬಹುದೇನೋ, ಮುಖದಲ್ಲಿ ಸಾವಿರ ಸುಕ್ಕುಗಳಿರಬಹುದು, ಹೂವು ಕೊಳ್ಳಲು ಬಂದವರನ್ನು ಕತ್ತೆತ್ತು ನೋಡಲೂ ಆಗದಷ್ಟು ಬೆನ್ನು ಬಾಗಿದೆ......
