ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
’ಅಡಿಯಿಟ್ಟ ಯೌವನ ಮತ್ತು ಕೈ ಬಿಡಿಸಿಕೊಂಡ ಬಾಲ್ಯ’ – ಆಶಾ ದೀಪ
ಆಶಾ ದೀಪ ನಮೂರಿನ ಜಾತ್ರೆಗೆ ಇನ್ನೆರಡು ದಿನ ಬಾಕಿ ಇತ್ತು,ಹಬ್ಬದ ಸಡಗರದಲ್ಲಿ ಇಡೀ ಊರೆಂಬ ಊರೇ ವಿಜೃಂಭಿಸುತ್ತಿತ್ತು.ನನ್ನ.9ನೆ ತರಗತಿಯ ಪರಿಕ್ಷೆಗಳು ಕೂಡ ನಮ್ಮೂರಿನ ಹಬ್ಬದಷ್ಟೆ ಹತ್ತಿರಕ್ಕೆ ಬಂದಿದ್ದವು. ಪರೀಕ್ಷೆಯ ಭಯ ಜಾತ್ರೆಯ ಖುಷಿ ಎರಡು ಒಟ್ಟೊಟ್ಟಿಗೆ ಮನಸ್ಸಿನಲ್ಲಿ ಕದನವನ್ನೆನಡೆಸಿದವು.ಶುಕ್ರವಾರದ ಬೆಳ್ಳಗೆ ಅಮ್ಮ...
’ಮೆರವಣಿಗೆ ಹೊರಟು ಸೀದಾ ನನ್ನೂರ ಮುಟ್ಟಿವೆ…’ – ಸ್ಮಿತಾ
ಹಣತೆ ಹಾಡುತ್ತಿದೆ ಸ್ಮಿತಾ ಅಮೃತರಾಜ್ ಮಗಳೆಂದಳು, ಅಮ್ಮಾ... ಈ ಸಲದ ದೀಪಾವಳಿಗೆ ಮನೆ ಜಗಲಿಯ ಸುತ್ತಾ ಮಣ್ಣ ಹಣತೆ ಹಚ್ಚಿಡುವಾ... ಬರೇ ದುಂದು ವೆಚ್ಚ ಹೇಗೂ ದಿನ ನಿತ್ಯ ಉರಿಯುತ್ತಲೇ ಇರುತ್ತದಲ್ಲ ವಿದ್ಯುತ್ ದೀಪ ಪುಟ್ಟ ಮಗನ ಉವಾಚ. ** ಚೆಂಡು ಹೂವು ಸೇವಂತಿಗೆಯ ರಂಗೋಲಿ ಇಟ್ಟು ನಡುವಲ್ಲೆಲ್ಲಾ ಪುಟ್ಟ ಪುಟ್ಟ ಹಣತೆ ಹಚ್ಚಿಟ್ಟು...
ಹ್ಯಾಪ್ಪಿ ಬರ್ತ್ ಡೇ ಗುರು ಕಿರಣ್ – ಹೃದಯ ಶಿವ
ಹೃದಯ ಶಿವ ಇವತ್ತು ಗುರುಕಿರಣ್ ಅವರ ಬರ್ತ ಡೇ... ಆ ನೆಪದಲ್ಲಿ ಹಿಂದೊಮ್ಮೆ ಬರೆದಿದ್ದ ಒಂದು ಬರಹ ಮತ್ತೆ ನಿಮ್ಮೆದುರು... ಪ್ರತಿಭೆ, ರೂಪದ ಒಂದು ಅಚ್ಚರಿಯ ಎರಕ ಗುರುಕಿರಣ್ ಗುರುಕಿರಣ್ ಯಾವ ಯಾವ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ ಎಂದು ನೆನಪಿಸಿಕೊಂಡರೆ ಎ, ಉಪೇಂದ್ರ, ಅಪ್ಪು, ಕರಿಯ, ಆಪ್ತಮಿತ್ರ, ಕುಟುಂಬ, ಜೋಗಿ, ರಾಮ ಶಾಮ ಭಾಮ,...
ಸ್ವಚ್ಚ ಭಾರತ ಅಭಿಯಾನದ ಮುಂದಿರುವ ಬೃಹತ್ ಸಮಸ್ಯೆ
ಸ್ವಚ್ಚ ಭಾರತ ಅಭಿಯಾನ - ಎತ್ತ ಸಾಗಲಿದೆ ಮಹಾಯಾನ ಸಂಗ್ರಹಾನುವಾದ : ನಾ ದಿವಾಕರ ಮೂಲ : ನಿತ್ಯಾನಂದ ಜಯರಾಮನ್ ಭಾರತವನ್ನು ಸ್ವಚ್ಚಗೊಳಿಸಿ ಸ್ವಚ್ಚವಾಗಿರಿಸುವ ಪ್ರಧಾನಿ ನರೇಂದ್ರ ಮೋದಿಯ ಆಂದೋಲನ ಮೇಲ್ನೋಟಕ್ಕೆ ಸರಳತೆಯ ಸಾಕಾರವಾಗಿ ಕಂಡರೂ ಆಂದೋಲನ ಅಷ್ಟೇ ಸಮಸ್ಯಾತ್ಮಕವೂ ಆಗಿದೆ. ನರೇಂದ್ರ ಮೋದಿಯ ಅಭಿವೃದ್ಧಿಯ ಕಾರ್ಯಸೂಚಿಗೂ ಮತ್ತು...
ಪೌರ ಕಾರ್ಮಿಕರ ಹಾಡು
ತ್ರಿಪದಿಗಳು: ಕಾಯಕಕೆ ಕರ ಮುಗಿದು ರಮೇಶ ಗಬ್ಬೂರ್ ಮುಸುಕು ಜಾರಿಸೆ ಮೋಡ ತುಸು ಇಣುಕಿ ನೋಡುತಾ ಕಸ ಹೊಡೆಯೇ ಬರುವಾನು ಅಂಗಾಳಕೆ, ರವಿಯಂತೆ ಹಸಿದೊಡಲು ಅಂಬರದಿ ಪುರಕಾಮರ್ಿಕ ಪೊರಕೆ ಕೈಯಲ್ಲಿ ಹಿಡಿದು ಹರಕೆ ಅಂಗಳಕ್ಕೊತ್ತು ನೆರವಾಗಿ ನೀ ಬರುವೇ ಗುಡಿಸೋದಕ, ನನ್ನಣ್ಣ ತರವಲ್ಲ ನಿನ ಬಾಳು ಮರಿಯೋದಕ ಕಲೆ : ಪುಂಡಲೀಕ...
ಕುಂದಾಪುರದಲ್ಲಿ ಕನ್ನಡ ಡಿಂಡಿಮ
ಕುಸುಮಬಾಲೆ ಕಾಲಂ : Wherever we go ಭೂತಗಳು follows…
ನಮ್ಮೂರ ಹುಡುಗ! ಅವನ ಮನೆ ಇಲ್ಲೇ ಬೆಂಗಳೂರಿನ ಜಯನಗರದಲ್ಲಿ. ಬಾಡಿಗೇದಲ್ಲ, ಸ್ವಂತದ್ದು. ಆಗಲೇ ಎರಡು ಮೂರು ಸಲ ಫಾರಿನ್ ಟ್ರಿಪ್ ಮುಗಿಸಿದಾನೆ. ಅವನ ಹೆಂಡತಿ ಕೂಡ ಸಾಪ್ಟ್ವೇರ್ ಎಂಜಿನಿಯರು. ಮನೆಯ ಇಂಟೀರಿಯರ್ ನೋಡಬೇಕು ನೀವು. ಅಬ್ಬಾ!! ಹಳ್ಳಿಯ ಸರಕಾರೀ ಸ್ಕೂಲಲ್ಲಿ ಓದಿ ಹಿಂಗೆ ದೊಡ್ಡ ಹುದ್ದೇಲಿರೋರ ಬಗ್ಗೆ, ದೊಡ್ಡ ಸಂಬಳ ತಗೊಳೋರ...
ಸಂಚಯ ಸಾಹಿತ್ಯ ಸ್ಪರ್ಧೆ
’ಧೈರ್ಯಬೇಕು ನಿರ್ದಾರಕ್ಕೆ, ನಿಶ್ಚಯಕೆ, ನಿರ್ಲಜ್ಜೆಗೆ..’ – ಹೇಮಲತಾ
ಹೇಮಲತಾ ಕದಂಬ ಬಾಹುಗಳ ಭಯದ ಬಿಳಲುಗಳು ಕಪ್ಪಗೆ ನೆರಳುಗಳ ಹಾಸುತ್ತವೆ ಹಾದಿ ಉದ್ದ ಬದುಕು ಬಂದು ನಿಲ್ಲುತ್ತದೆ ತಿರುವಿಗೆ ಮಿಕಮಿಕ ಬೇಲಿಯಿಂದೀಚೆ ಕಿತ್ತೊಗೆದ ನೆನಪುಗಳೂ ವಿಧಿಮಳೆಗೆ ಚಿಗುರಿ ಇಣುಕುತ್ತವೆ ತೆವಳಿ ಸೋತ ಕಣ್ಣಿಗೆ ನಿದ್ದೆಯದೂ ಸಾಂತ್ವಾನವಿರುವುದಿಲ್ಲ ಕಣ್ಣೀರಿಗಂತೂ ಮೊದಲೇ ಕರುಣೆಯಿಲ್ಲ.. ಅನೂಹ್ಯ ಭಾವ ಕಣ್ಣುತೆರೆವಾಗ...
ವೆಂಕಪ್ಪಜ್ಜನ ಕಥೆ
- ಪಿ ಎಸ್ ಕೃಷ್ಣಮೂರ್ತಿ ಇದ. ಕಾಪಿ ಇಲ್ಲಿ ಮಡಗಿದ್ದೆ. ಮತ್ತೆ. ಆ ಮರ ಕಡಿವ ಅಬ್ದುಲ್ಲ ಮತ್ತೆ ಫೋನ್ ಮಾಡಿದ್ದಾನೆ. ರಂಜನ ಹೇಳ್ತಾ ಇದ್ದ ಬೆಳಗ್ಗೆ. ಬೆಳಗ್ಗಿನ ತೋಟದ ಸುತ್ತಾಟ ಮುಗಿಸಿ ಚಾವಡಿಗೆ ಬಂದು ಕುಳಿತ ವೆಂಕಪ್ಪಜ್ಜನ ಮುಂದೆ ಕಾಫಿ ಇರಿಸುತ್ತಾ ಹೇಳಿದರು ಸಾವಿತ್ರ್ಗಿ. ವೆಂಕಪ್ಪಜ್ಜ ಏನೂ ಮಾತಾಡದೆ ಮೌನವಾಗಿ ಕಾಫಿ ಗ್ಲಾಸು...
ಬೇಸರದ ಬಾವಿಗೆ ಪಾತಾಳ ಗರಡಿ
- ಹಾರೀತ ಮೆಟ್ಟಿಲಾಚೆ, ತಗ್ಗಿನ ಕೊನೆಗೆ ಕಾಣುವ ನೀರು ಆಕಾಶದ ಚೂರು ಮೋಡಗಳು ಪ್ರತಿಫಲಿಸಿ ಕದಡುತ್ತಾ ನಿಂತ ನೋಟ ಚೈತನ್ಯವೆಲ್ಲ ಆಳದ ಹುದುಗಿನಲ್ಲಿ ಕಳೆದುಹೋಗಿದೆ ನೋಡಿ ಪಾತಾಳಗರಡಿಗೆ ಸಿಕ್ಕಿದ್ದೆಲ್ಲ ಹಳೆಯ ಪ್ಲಾಸ್ಟಿಕ್ ಬಿಂದಿಗೆ, ಚೊಂಬು , ತಾತನ ಕಂಚಿನ ಕಾಫಿ ಲೋಟ ವರ್ತಮಾನಕ್ಕೊದಗದ ನೆನಪುಗಳ ಕಂತೆ ಬೇಸಿಗೆಯ...
ಕ್ರೀಡೆ ಅಂದ್ರೆ ಕ್ರಿಕೆಟ್ ಮಾತ್ರಾನಾ?
ದೇಸಿ ಕ್ರೀಡೆಯಲ್ಲೂ ಅಪರೂಪದ ಸಾಧನೆ ವಿನಾಯಕ ಜಿ ಕ್ರೀಡೆ ಎಂದಾಕ್ಷಣ ಇತ್ತೀಚೆಗಂತೂ ಕೇವಲ ಕ್ರಿಕೆಟ್ ಮಾತ್ರ ಎನ್ನುವಂತಾಗಿದೆ. ಅದಕ್ಕಿರುವಷ್ಟು ರಾಜ ಮರ್ಯಾದೆ ಬೇರಾವ ಕ್ರೀಡೆಗೆ ಇಲ್ಲವೆಂದರೂ ತಪ್ಪಿಲ್ಲ. ಆದರೆ ಪ್ರಸ್ತುತ ಕ್ರೀಡಾಲೋಕದತ್ತ ದೃಷ್ಟಿ ನೆಟ್ಟರೆ ಕ್ರಿಕೆಟ್ ಆಚೆಯೂ ಒಂದು ಸಾಧನೆಯ ಪಥವಿದೆ ಎಂಬುದು ಅರಿವಿಗೆ ಬರುತ್ತದೆ....
ಮಾಸ್ತಿ ವೆಂಕಟೇಶ ಅಯ್ಯಂಗಾರರ ಸಣ್ಣಕಥೆಯ ರಂಗ ಪ್ರಯೋಗ
’ಶಂಕರ ಮತ್ತು ರಂಗಶಂಕರ’ – ಸೂರಿ ಬರೀತಾರೆ
ಶಂಕರ್ ನಾಗ್ ಮತ್ತು ರಂಗ ಶಂಕರಗಳೆಂಬ ದಣಿವರಿಯದ ಚೈತನ್ಯಗಳು ಸೂರಿ ಶಂಕರ್ ಬಗ್ಗೆ ಬರೆಯಲು ಕೂತರೆ ಹಲವಾರು ನೆನಪುಗಳು ಮೆರವಣಿಗೆ ಹಚ್ಚುತ್ತವೆ. ಬೆಂಗಳೂರಿನ ನನ್ನ ಜೀವನದ ಬಹುಪಾಲು ಸಮಯವನ್ನು ಆತನ ಜೊತಗೆ ಕಳೆದದ್ದು ಕಾರಣವಿರಬೇಕು. ಅಥವಾ ದಿನನಿತ್ಯದ ಸುದ್ದಿಗಳ ವಿನಿಮಯ ಮಾಡಿಕೊಳ್ಳುತ್ತಿದ್ದೆವಲ್ಲಾ ಅದೂ ಕಾರಣವಿರಬಹುದು. ಇಬ್ಬರಿಗೂ...
ಟಿ ಎನ್ ಸೀತಾರಾಮ್ ಲಂಕೇಶ್ ಮೇಷ್ಟ್ರ ಜೊತೆ ಪ್ರತಿಭಟನೆ ಮಾಡಿದ ಕಥೆ
ಟಿ ಎನ್ ಸೀತಾರಾಮ್ ದೀಪಾವಳಿ ನನಗೆ ಮುಂಚಿನಿಂದ ಸಂಭ್ರಮ, ಗೆಲುವುಗಳನ್ನು ತರುತ್ತಿದ್ದ ಕಾಲ...... ಆಗ ೧೮ ತುಂಬಿತ್ತು... ಕಾಲೇಜ್ ನಲ್ಲಿದ್ದೆ... ಲಂಕೇಶ್ ಮೇಷ್ಟ್ರ ಪ್ರಿಯ ಶಿಷ್ಯ... ಪ್ರಜಾವಾಣಿಯವರು ದೀಪಾವಳಿ ನಾಟಕಸ್ಪರ್ಧೆ ಮತ್ತು ಕಥಾ ಸ್ಪರ್ಧೆ ಮಾಡುತ್ತಿದ್ದರು. ನಾನು ನಾಟಕವೊಂದನ್ನು ಬರೆದು ' ಯಾರಾದರೇನಂತೆ ' ಎಂದು...
’ಫೇಸ್‌ಬುಕ್ಕಿನ ಎಲ್ಲಾ ಲೈಕುಗಳ ನಡುವೆ…’ – ಮಿಂಚುಳ್ಳಿ ಕವನ
ಹೀಗೊ0ದು ಲೈಕು... ಮಿಂಚುಳ್ಳಿ ನಿನಗಿಷ್ಟವಾಗುವುದಾದರೆ, ನನಗೆ ಲೈಕಾಗದಿದ್ದರೂ ಲೈಕು ಮಾಡುವೆ ಫೇಸ್ಬುಕ್ಕಿನಲ್ಲಿ ನಿನ್ನಮ್ಮ ವೈಷ್ನೋದೇವಿ ಹೋಗಿ ಬ೦ದಿದ್ದನ್ನು, ನಿಮ್ಮಜ್ಜಿ ಮನೆಯಲ್ಲಿ ಕೆ೦ಪುದಾಸವಾಳ ಅರಳಿದ್ದನ್ನು, ನೀ ಪಾರ್ಕಿನ ಹಸಿರು ನೆಲದಮೇಲೆ ಬೋರಲುಬಿದ್ದು ಕ್ಯಾಮರಾ ಕಣ್ಣಲ್ಲಿ ನಿರುಕಿಸಿದ ಕಪ್ಪುಕೊಕ್ಕಿನ ಬಾತಿನಮರಿಯನ್ನು,...
'ಹೆಣ್ತನದ ಆಚೆ-ಈಚೆ' – ಚಲಿಸುವ ಸಮಾಜದತ್ತ ಒಂದು ಕ್ಷ-ಕಿರಣ
ನಾಗರಾಜ್ ಹರಪನಹಳ್ಳಿ. ಹೆಣ್ತನದ ಆಚೆ-ಈಚೆ ಶ್ರೀದೇವಿ ಕೆರೆಮನೆ ಅವರ ಅಂಕಣ ಬರಹಗಳ ಪುಸ್ತಕ. ಕಳೆದ ಎರಡು ವರ್ಷಗಳಿಂದ ಅವರು ನಿರಂತರವಾಗಿ ಪ್ರತಿವಾರ ಬರೆಯುತ್ತಿರುವ ಅಂಕಣಗಳಲ್ಲಿ ಕೆಲವನ್ನು ಎತ್ತಿಕೊಂಡು ಕುಕ್ಕೇಶ್ರೀ ಪ್ರಕಾಶನ ಪ್ರಕಟಿಸಿದೆ. ಶ್ರೀದೇವಿ ಕವಯತ್ರಿ. ಹೆಣ್ಣಿನ ತುಡಿತವನ್ನು ಕವಿತೆಗಳಲ್ಲಿ ಅಧ್ಬುತವಾಗಿ...
ಈ ಹಕ್ಕಿ ಗೊತ್ತಾ?
ಪರಮೇಶ್ವರ ಗುರುಸ್ವಾಮಿ Oriental Magpie Robin ಈ ಹಕ್ಕಿಯನ್ನು ಕನ್ನಡದಲ್ಲಿ 'ಮಡಿವಾಳ' ಹಕ್ಕಿ ಎಂದು ಕರೆಯುತ್ತಾರೆ. ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ತಮ್ಮ 'ಹಕ್ಕಿ ಪುಕ್ಕ' ದಲ್ಲಿ ಹೀಗೆ ಬರೆದಿದ್ದಾರೆ, "....ಕಪ್ಪು ಬಿಳುಪು ಬಣ್ಣದ ಹಕ್ಕಿ. ಹೆಣ್ಣು ಹಕ್ಕಿಗೆ ಕಪ್ಪು ಬಣ್ಣದ ಬದಲು ಚುಕ್ಕೆಗಳಿರುವ ಬೂದು ಬಣ್ಣ ಇರುತ್ತದೆ....
ಒಂದು ಕಾಡುವ ಹಾಡು
http://youtu.be/Jw3suYqMfbI?list=PLEAB90B2AFFCC6499
ದಶಕದ ಸಾಹಿತ್ಯ : ವಿಮರ್ಶೆ – ಅವಲೋಕನ
ಭಾನುವಾರದ ಸಣ್ಣಕಥೆ ’ಜೋಡಿ ಕೋಣಗಳು’
- ಮಂಜು ಹಿಚ್ಕಡ್ ದನಗಳಿಗೆ ಒಂದಿಷ್ಟು ಹಸಿ ಹುಲ್ಲು ಕೊಯ್ದುತಂದು ಮೇವಿನ ವ್ಯವಸ್ಥೆ ಮಾಡಿ, ಹಾಸಲು ಒಂದಿಷ್ಟು ಸೊಪ್ಪು ತರಲು ಬಂದ ವಿಠ್ಠಲಿನಿಗೆ ಸ್ವಲ್ಪ ಸುಸ್ತಾದಂತೆ ಅನಿಸಿ ಮರದ ಕೆಳಗೆ ಕುಳಿತೆ. ಸ್ವಲ್ಪ ಸುಸ್ತಾದಂತೆ ಅನಿಸಿ ಅಲ್ಲಿಯೇ ಮರದ ಕೆಳಗೆ ಕುಳಿತ. ಕಳೆದ ಒಂದು ವಾರದಿಂದ ಬೆಂಬಿಡದೇ ಸುರಿಯುತ್ತಿದ್ದ ಮಳೆ ಕಳೆದೆರಡು...
