ಸಂಕ್ರ ಒಟೆಲ್ಗೆ ಒಗಲ್ಲ ಅಂತಾನ, ಒಸಿ ಏಳಿ…

ಸಂಕ್ರನ್ನ ಕದ್ದರು

ವಿನತೆ ಶರ್ಮ

“ಬೇಡ ಕಣವ್ವೋ…”
ನಿದ್ದೆ ಸುಂದರಿಯೆದೆ
ಸೀಳಿದಾ ದನಿ.
 
ಎಲ್ಲಿಯದು? ಯಾರಿಗೇನಾಯಿತು?
ಮೃದು ನಿದ್ದೆಗೆ ಅಸಮಾಧಾನ.
ಕನಸಿನ ಪಯಣಕ್ಕೆ ಕೊಕ್ಕೆ.

ಗಾಯಗಳ ಮೈ.
ಕೈಗಳ ಬೊಬ್ಬೆ, ಕೀವು.
ಒಡೆದ ರಕ್ತ ಹೆಪ್ಪುಗಟ್ಟಿದ ಹಿಮ್ಮಡಿ.
ಆಗಾಗ ಬಿಕ್ಕಿದ ಮುಖ.
ಶಂಕ್ರನಿಗೇನಾಯಿತು?
ಬೇಡಕಣವ್ವೋ…
“ತುಂಬಾ ಒಡೀತಾರೆ.”
ಆತ್ಮವನ್ನು ತಿವಿದಾ ದನಿ
ದೇಹದ ಪದರಗಳ
ಸುತ್ತಿದ ವಿಷ. ಸುಳಿಗಾಳಿ.
 
“ಮಲಿಕ್ಕಳಕ್ಕೆ ಬಿಡಲ್ಲಾ ಕಣವ್ವೋ
ಏನೇನೋ ಮಾಡ್ತಾರೆ, ನೋವಾಗ್ತೈತೆ.”
ಎಂದನಾ ಶಂಕ್ರ.
 
ಬೇಡ ಕಣವ್ವೋ…
ರಾತ್ರಿ ಕೇಳಿದ ಪಿಸುಗುಟ್ಟಿನ
ಆಕ್ರಂದನ. ಬೇರಿನ ಜೀವವ
ಹೊಸಕಿದಂತೆ.
 
“ಪಾತ್ರೆ ಉಜ್ಜಾಕ್ಕಾಗಲ್ಲ, ಕೈಯಲ್ರಕ್ತ ಬರ್ತೈತೆ.
ಆಗಲ್ಲಕನವ್ವೋ. ಬ್ಯಾಡ ಕಳಿಸ್ಬೇಡ.”
ಆ ಮಾತು.
 
ಏನಾಯಿತು?
ಜೀವ ಸುಟ್ಟಿದ ಬೆಂಕಿ.
ಬೆರಳ ಉಗುರ ಕಿತ್ತಂತೆ.
ರಕ್ತನೋವು ಬೊಬ್ಬೆ
ಮುಚ್ಚಿದ ತುಟಿಗಳ ಚೀರು.
 
ಮಾತೇ ಆ ದನಿ?
ಕಿವಿಕಿಚ್ಚಿಡುವ ಡಮರುಗ.
ಶಿವ ತಾಂಡವ.
ಬರೀ ಪದಗಳು ಹೇಗಾದವು ಅವು?
 
“ಸಂಕ್ರ ಒಟೆಲ್ಗೆ ಒಗಲ್ಲ ಅಂತಾನ, ಒಸಿ ಏಳಿ.
ಅಳ್ಳೀಕಡೆ ನಮ್ಕೇನ್ಕೆಲ್ಸ ಕಾಸು ಗಿಟ್ತೈತೆ.”
ವಾಸ್ತವ್ಯ ಕುಣಿಯಿತು.
ಕಳ್ಳು ಕುಡಿದಂತೆ.
ಅದರ ಮುಖ ಗಹಗಹಿಕೆ.
ಏನದರ ದನಿ?
 
ಆವ್ಯವಸ್ಥೆ. ಈ ಜಾತಿ. ಆ ಹಣ. ಆ ತಂದೆ.
ಈ ತಾಯಿ, ತಂಗಿ, ತಮ್ಮ, ಶಾಲೆ.
ಆ ಹೋಟೆಲ್, ದುಷ್ಟರು …
ನಾನು.
 
ಎಲ್ಲಾರೂ ಪೋರ ಸಂಕ್ರನ ಕದ್ದರೇ.
 
ಅಮ್ಮನೀ ಯಶೋದೆ
ನಮ್ಮೊಳಗಿನ ಗುಮ್ಮನ್ನ
ಬಡಿದೋಡಿಸೆ ತಾಯಿ.
 

‍ಲೇಖಕರು G

December 18, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಲಕ್ಷ್ಮೀಕಾಂತ ಇಟ್ನಾಳ

    ವಿನತೆ ಶರ್ಮಾ ಜಿ, ತುಂಬ ಸಶಕ್ತ ಕವನ. ಮೆಚ್ಚುಗೆಯಾಯಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: