ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಕುಸುಮಬಾಲೆ ಕಾಲಂ : ಟಿವಿ ಲಿ ಬರುವ ಸುದ್ದಿಗಳಲ್ಲಿ ಎಲ್ಲಾ ನಿಜವಲ್ಲ

ಸುದ್ದಿ 1- “ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ. ಗ್ರಾಮಸ್ಥನಿಂದಲೇ ಮಹಿಳೆಯ ಮೇಲೆ ಅತ್ಯಾಚಾರ. ಎಲ್ಲೆಡಿ ವ್ಯಾಪಕ ಖಂಡನೆ” – ಹೆಡ್ಲೈನು. ….ಟಿವಿ ಪರದೆಯ ಮೇಲೆ ವಿಷುವಲ್ಸ್ ಬರುತ್ತದೆ. ಅದರ ಮೇಲೆ ಆಂಕರ್ ಸುದ್ದಿಯ ವಿವರ ಓದುತ್ತಾಳೆ. ಗಂಡನ ಬೈಟ್ ಬರುತ್ತದೆ, ನಂತರ ಗ್ರಾಮಸ್ಥರ ಅಥವಾ ಪಂಚಾಯಿತಿದಾರರ ಫೊನೋ...

read more
ಎಲ್ಲರಿಗೂ ಮೊಹರಂ (ಅಲಾವಿ) ಹಬ್ಬದ ಶುಭಾಶಯಗಳು..

ಗುರು ರಾಜ್ ನನ್ನಮ್ಮ ಮೊಹರಂನ ದಿನಗಳನ್ನು ನೆನೆಪಿಸಿಕೊಳ್ಳುವುದರೊಂದಿಗೆ, ನನಗೆ ನನ್ನ ನೆನಪಿನಾಳದ ಯಾವ ಯಾವ ತುದಿಗೆ ಕರೆದುಕೊಂಡು ಸಾಗಿತು. ೧೫- ೧೬ ವರ್ಷದ ಹಿಂದೆ ಮೊಹರಂನ ಕತಲ್ ರಾತ್ರಿಯಂದು ಬೆಂಕಿ ತುಳಿಯೋದನ್ನು ನೋಡಲಿಕ್ಕೆ ಅಂತನೇ ಸಾಗಿದರು ಅದು ಸಾಕಾಗಿ ಮರಳಿ ಬಂದು ಮಲಗಿದ್ದು ಇದೆ. ಇಂದು ನೋಡಲೇ ಬೇಕು ಎಂದು ಸಾಗಿದ್ದ ದಿನವೇ...

read more
ಒಬ್ಬ ಛಾಯಾಗ್ರಾಹಕನ ಕರ್ನಾಟಕ ರಾಜ್ಯೋತ್ಸವ ನಡೆದದ್ದು ಹೀಗೆ

ದಿನೇಶ್ ಹೆಗ್ಡೆ ೫೮ನೆ ಕನ್ನಡ ರಾಜ್ಯೋತ್ಸವವನ್ನು ಹೇಗಾದರೂ ಮಾಡಿ ಹೊಸ ರೀತಿಯಲ್ಲಿ ಆಚರಿಸಬೇಕೆಂದು ಅನ್ನಿಸುತ್ತಿತ್ತು . ಸಪ್ನಾ ಬುಕ್ಸ್ ಕಡೆಯಿಂದ ನಾಡು ಕಂಡ ೫೮ ಸಾಹಿತಿಗಳಿಗೆ ಸನ್ಮಾನವಿರುವುದು ಗೊತ್ತಿತ್ತು . ಯಾಕೆ ಇವರನ್ನೆಲ್ಲ ನನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ಪ್ರಯತ್ನ ಮಾಡಬಾರದು ಎಂಬ ಯೋಚನೆ ಬಂದಿದ್ದೇ ತಕ್ಷಣ...

read more
ಯಾವ ’ಹುಣಸೆ ಹೂ’ ಸಿಹಿ ಅಂತಾರೆ ಹರವು ಸ್ಪೂರ್ತಿ ಗೌಡ

ಹರವು ಸ್ಪೂರ್ತಿ ಗೌಡ ಬರೆದ ಹೊಸ ಪುಸ್ತಕ ಬರ್ತಾ ಇದೆ. ಅದಕ್ಕಾಗಿ ಸಿದ್ಧವಾದ ಮೂರು ಮುಖಪುಟಗಳು ಇಲ್ಲಿವೆ. ಇವುಗಳಾಲ್ಲಿ ಯಾವುದು ಚಂದ ಅಂತಾರೆ ಹರವು ಸ್ಪೂರ್ತಿ ಗೌಡ.  ...

read more
’ಅಪಮಾನ ಬದುಕು ಕಲಿಸಿತು’ – ನಿಶಾ ಗೋಪಿನಾಥ್

ನಿಶಾ ಗೋಪಿನಾಥ್ ಬದುಕು ಬದಲಾಗಿದೆ. ಇಡೀ ಸಮಾಜ ಹೊಸ ದಿಕ್ಕಿನೆಡೆಗೆ ಸಾಗುತ್ತಿದೆ. ಹೆಣ್ಣಿಗೆ ಎಲ್ಲ ಸ್ಥಾನಮಾನಗಳು ಸಿಕ್ಕಿವೆ. ಮೀಸಲಿನಿಂದಾಗಿ ಎಲ್ಲ ಕ್ಷೇತ್ರಗಳಲ್ಲೂ ಅವಳು ಸಾಧನೆ ಮಾಡುತ್ತಿದ್ದಾಳೆ ಎಂದೆಲ್ಲ ಹೇಳುತ್ತಿದ್ದರೂ ನಮ್ಮ ನಡುವಿನ ಸಾಕಷ್ಟು ಜನ ಇನ್ನೂ ಬದಲಾಗಿಲ್ಲ! ಗೊಡ್ಡು ಸಂಪ್ರದಾಯಗಳು, ಕಂದಾಚಾರಗಳು ನಮ್ಮನ್ನ...

read more
’ವಿಶ್ವವಿದ್ಯಾನಿಲಯಗಳಿಗೆ ಲೇಖಕರ ಬಗ್ಗೆ ಅನಾದರ ಏಕೆ’ – ಜಿ ಪಿ ಬಸವರಾಜು

ಲೇಖಕರನ್ನು ಕಡೆಗಣಿಸುತ್ತಿರುವ ಪರಿಪಾಠ ಜಿ ಪಿ ಬಸವರಾಜು ಮೊನ್ನೆ ನನ್ನ ಮಿತ್ರರೊಬ್ಬರು ಫೋನ್ ಮಾಡಿ ವಿಶ್ವವಿದ್ಯಾನಿಲಯವೊಂದು ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಂಡಿರುವ ವಿಚಾರವನ್ನು ಹೇಳಿ, ಇದನ್ನು ಪರಿಹರಿಸುವಲ್ಲಿ ನೆರವಾಗಲು ಸಾಧ್ಯವೇ ಎಂದು ಕೇಳಿದರು. ಖ್ಯಾತ ಲೇಖಕರೊಬ್ಬರ ಆರು ಪ್ರಬಂಧಗಳನ್ನು ಸೇರಿಸಿ ಆ ವಿಶ್ವವಿದ್ಯಾನಿಲಯ...

read more
ಮಾಯವೋ, ಮಾಯದ ಗಾಯವೋ..ನವೆಯೋದು ನಿಂತಿಲ್ಲ ಎದೆಯಲ್ಲಿ

ಖಂಜೂಸು ಬದುಕಿನ ಜೊತೆಗೆ... - ಮಂಜುನಾಯಕ್ ಚೆಲ್ಲೂರ್ ಸಣ್ಣಗೆ ಹನಿಯುತಿದೆ ಮಳೆಯಿನ್ನೂ ಮನದ ಬೀದಿಯ ಮೇಲೆ.. ಮಾಯವೋ? ಮಾಯದ ಗಾಯವೋ? ನವೆಯೋದು ನಿಂತಿಲ್ಲ ಎದೆಯಲ್ಲಿ.   ಸುತ್ತೆಲ್ಲ ಕವಿದಿರೋ ಸಂತೆ ಗದ್ದಲದಲ್ಲೂ ಕೇಳುತಿದೆ ಹಾಡೊಂದು ನಂಗಷ್ಟೆ.. ಕತೆಯೊಂದು ಪಟ್ಟಾಗಿ ಕುಳಿತು ಆಕಳಿಸುತಿದೆ ಎದೆಯ ಜಗುಲಿಯ ಮೇಲೆ:  ...

read more
ಹಕ್ಕಿ ಜಾಡು ಹಿಡಿದು ಪರಮೇಶ್ವರ್ ಗುರುಸ್ವಾಮಿ

ಪರಮೇಶ್ವರ್ ಗುರುಸ್ವಾಮಿ ಸಿರ್ಸಿ ಸರಣಿ ಇತ್ತೀಚಿನ ನನ್ನ ಹಕ್ಕಿ ಛಾಯಾಗ್ರಹಣ ಆಸಕ್ತಿಯನ್ನು ಮೆಚ್ಚಿಕೊಂಡಿರುವ ಲೋಕೇಶ್ ಎಂ., ತಾವು ಡಿಸೆಂಬರ್ ವರೆಗೆ ಸಿರ್ಸಿಯಲ್ಲಿ ಇರವುದಾಗಿ, ಅಲ್ಲಿಗೆ ಬನ್ನಿ, ಇನ್ನಷ್ಟು ಗೆಳೆಯರು(ಪಕ್ಷಿಗಳು) ಸಿಗುತ್ತಾರೆ ಎಂದು ಕರೆದಿದ್ದರು. ಇವರು ಮೈಸೂರಿನಲ್ಲಿರುವ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣ...

read more
ಮನುಷ್ಯ ಬದುಕುವುದು ಅನ್ನದ ಜೊತೆ ಅಹಂಕಾರಕ್ಕೆ

ಬದುಕುವದು ಯಾಕೆ ಕು ಸ ಮಧುಸೂದನ್ ಮನುಷ್ಯ ಬದುಕುವುದು ಗೇಣು ಹೊಟ್ಟೆಗಾಗಿ ತುಂಡು ಬಟ್ಟೆಗಾಗಿ ಮಾತ್ರವಲ್ಲ! ಹಾಗಾಗಿದ್ದರೆ- ಕೋಟೆಗಳ ಕಟ್ಟುತ್ತಿರಲಿಲ್ಲ ರಾಜ್ಯಗಳು ಹುಟ್ಟುತ್ತಿರಲಿಲ್ಲ ಗಡಿಗಳಿಗೆ ಸೈನ್ಯಗಳ ಅಟ್ಟುತ್ತಿರಲಿಲ್ಲ ಅನ್ಯರ ಹೊನ್ನು ಹೆಣ್ಣು ಮಣ್ಣುಗಳ ಮೇಲೆ ಅಧಿಕಾರ ಮುದ್ರೆಯನೊತ್ತಲು ನಿದ್ದೆಗೆಟ್ಟು ತಂತ್ರ ಪ್ರತಿತಂತ್ರ...

read more
ಸಂಧ್ಯಾ ಸಾಹಿತ್ಯ ವೇದಿಕೆಯ ಪುರಸ್ಕಾರ

ಮೇವುಂಡಿ, ವಿದ್ಯಾಸಾಗರ ಬಾಲ ಪುರಸ್ಕಾರ ಸಂಧ್ಯಾ ಸಾಹಿತ್ಯ ವೇದಿಕೆ ಪ್ರತಿವರ್ಷ ನೀಡುವ "ಮೇವುಂಡಿ ಮಲ್ಲಾರಿ ಕಥಾ ಪುರಸ್ಕಾರ" ಕ್ಕೆ ಬೆಂಗಳೂರಿನ ಶ್ರೀಮತಿ ಶೈಲಜಾ ಕಂಜರ್ಪಣೆ, "ವಿದ್ಯಾಸಾಗರ ಬಾಲ ಪುರಸ್ಕಾರ"ಕ್ಕೆ ಶಿವಮೊಗ್ಗಾದ ಕುಮಾರ ಅಂತಃಕರಣ ಆಯ್ಕೆಯಾಗಿದ್ದಾರೆ ಎಂದು ಸಂಧ್ಯಾ ಸಾಹಿತ್ಯ ವೇದಿಕೆಯ ಅಧ್ಯಕ್ಷ ರವಿ ಹಿರೇಮಠ...

read more
ಬೇಲೂರು ರಘುನಂದನ್ ಕಾಲಂ ’ಉಮಾಸಿರಿ’ : ಸಾಕವ್ವನ ಮೊದಲ ಭೇಟಿ

ನಾನು ಜೀವನಕ್ಕಾಗಿ ಬೇಲೂರಿನ ಚನ್ನೇಗೌಡರ ಬೀದಿಯ ಹೇಳೇ ಬಿಲ್ಡಿಂಗಿನಲ್ಲಿ ನಡೀತಿದ್ದ ನೇತಾಜಿ ಶಾಲೆಯಲ್ಲಿ ಪಾಠ ಮಾಡುತ್ತಿದ್ದೆ, 350 ರೂಪಾಯಿ ಸಂಬಳಕ್ಕೆ. ನನಗೆ ಶಾಲೆಯಲ್ಲಿ ಮಕ್ಕಳಿಗೆ ಡ್ಯಾನ್ಸ್ ಕಲಿಸೋದು, ನಾಟ್ಕ ಆಡಿಸೋದು ಅಂದ್ರೆ ಬಲು ಪ್ರೀತಿ. ಹಾಗಾಗೇ ಆ ಶಾಲೆಯವರು ನನ್ನನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದರು. ನಾನು 10 ನೇ...

read more
ಟೈಮ್ ಪಾಸ್ ಕಡ್ಲೆ ಕಾಯ್ : ಬ್ರಹ್ಮನ ಅಸಿಸ್ಟೆಂಟ್ ಒಮ್ಮೆ ಯಾಮಾರಿದಾಗ

ಶ್ರೀನಾಥ್ ಭಲ್ಲೆ ಬ್ರಹ್ಮದೇವನ ಅಸಿಸ್ಟಂಟ್ ದೇವನೊಬ್ಬ ತನ್ನ ಕೆಲಸದಲ್ಲಿ ಯಥಾಪ್ರಕಾರ ಸಿಕ್ಕಾಪಟ್ಟೆ ಬ್ಯುಸಿ ಇರುವ ಸಮಯದಲ್ಲಿ, ಮನತಪ್ಪಿ (ಕೈತಪ್ಪಿ ಅನ್ನೋ ಹಾಗೆ) ಒಂದು ಜೀವಾತ್ಮಕ್ಕೆ ಮಾತು ಕೊಟ್ಟುಬಿಟ್ಟ. ಆಗ ನಡೆದ ಸಂಭಾಷಣೆ ಇದು:- ಜೀವಾತ್ಮ: ಅಡ್ಡಬಿದ್ದೆ ತಂದೆ. ತಾವು ಇಷ್ಟು ಬೇಗ ನನಗೆ ಮಾತು ಕೊಟ್ಟುಬಿಟ್ರೇ, ಒಂಬತ್ತು...

read more
'ಕನ್ನಡದ ಶಬ್ದಪ್ರೀತಿಗೆ ಶರಣಾಗದೇ ಇರಲು ಸಾಧ್ಯವೇ?' – ರಾಘವೇಂದ್ರ ಜೋಶಿ

ರಾಘವೇಂದ್ರ ಜೋಶಿ ಸತ್ಯದ ಸರಳ ರೂಪಕವೆಂದರೆ ಕನ್ನಡಿ. ಎದುರಿಗಿರುವದನ್ನು ಇದ್ದಂತೆ ತೋರಿಸುವ ದಿಟ್ಟತನದ ಗುಣ ಹೊಂದಿರುವ ಕನ್ನಡಿಗೆ ಮುಲಾಜಿನ ಹಂಗಿಲ್ಲ. ಅಂತೆಯೇ ಇಲ್ಲಿ ಫೋಟೋಶಾಪಿನ ಚಮತ್ಕಾರವಿಲ್ಲ. ಹಿಂಬದಿಯಲ್ಲಿ ಏನೇ ಗಿಲೀಟು ಮಾಡಿಕೊಂಡಿದ್ದರೂ ಕೂಡ ಅದು ಸತ್ಯವನ್ನೇ ಎತ್ತಿ ಹಿಡಿಯಬಲ್ಲದು. ಕನ್ನಡವೆಂಬುದೂ ಕನ್ನಡಿಯಂತೆ. ಇಲ್ಲಿ...

read more
'ಯಾಕೆ ಗೊತ್ತೆ ಪ್ರಿಯೆ, ನಾನು ನಿನ್ನನ್ನು ದ್ವೇಷಿಸುತ್ತೇನೆ' -ಎಚ್ ಎಲ್ ಪುಷ್ಪ ಕವನ

ಪ್ರೇಮ ಸಿದ್ಧಾಂತಗಳು ಎಚ್ ಎಲ್ ಪುಷ್ಪ -1 "ಸದಾ ಕುಡಿದ ಸ್ಥಿತಿಯಲ್ಲಿರು" "ಏನನ್ನು?" "ಏನನ್ನಾದರೂ - ವೈನ್, ಕಾವ್ಯ, ಸಜ್ಜನಿಕೆ, ಋಜತ್ವ ಯಾವುದಾದರೂ ಸರಿ" - ಎಂದ ಬಾದಿಲೇರ್ ಅದನ್ನು ಓದಿದ ಲೆನಿನ್ ಮಿಂಚು ಗಡ್ಡದ ಗೆಳೆಯ ಕುಡಿದ, ಕುಡಿದೇ  ಕುಡಿದ ಕುಡಿಯುತ್ತಲೇ ರಾಶಿಗಳುದ್ದಕ್ಕೆ ಬೆಳೆಯುತ್ತಲೇ ಹೋದ ಕನಸುಗಣ್ಣಲ್ಲಿ ಬಣ್ಣ...

read more
’ರಿಹಾನೆಯದು ಧೈರ್ಯವೇ, ಜೀವನದ ಬಗ್ಗೆ ಜಿಗುಪ್ಸೆಯೇ?’ ಜಯಶ್ರೀ ಕೇಳ್ತಾರೆ

ರಿಹಾನೆ ಮತ್ತು ಸ್ತ್ರೀತ್ವ.... ಜಯಶ್ರೀ ದೇಶಪಾ೦ಡೆ ಆ ಧ್ವನಿ ಶಾ೦ತವಾಗಿತ್ತು ಅಥವಾ ಕೇಳುವಾಗ ಹಾಗೆ ಭಾಸವಾಗುತ್ತಿತ್ತು . ಅದರ ಹಿ೦ದಿದ್ದ ಜ್ವಾಲಾಮುಖಿಯ೦ಥ ಬೆ೦ಕಿಯ ಧಗೆ ಪ್ರಜ್ವಲಿಸುತ್ತಿದ್ದದ್ದು ಯಾರಿಗೂ ಸುಲಭದಲ್ಲಿ ತಿಳಿದಿರಲಿಲ್ಲ, ಅರ್ಥಾತ್ ಅರ್ಥವಾಗಬೇಕಿದ್ದವರಿಗೆ ಅರ್ಥವಾಗಿರಲಿಲ್ಲ , ಅರ್ಥವಾದವರು ನಿಸ್ಸಹಾಯಕರಾಗಿದ್ದರು!...

read more

Pin It on Pinterest

Share This