’ಮೊದಲಿನಂತೆ ನಾನಿಲ್ಲ, ಮೊದಲಿನಂತೆ ನಾವಿಲ್ಲ…’ – ವಿದ್ಯಾ ಕವನ

ವಿದ್ಯಾ

ಮೊದಲಿನಂತೆ ನಾನಿಲ್ಲ
ನಿಜ ಹುಡುಗ!
ನಾನೀಗ ಹೆಚ್ಚು ಸಮಾಧಾನಿ
ದೂರುಗಳೆದ್ದು, ಮನ ಕೆಂಪಾದಾಗಲೆಲ್ಲ
ನೀನು ಕೆರಳಿಕೆಯೋ, ಕಾರಣವೋ
ಯೋಚಿಸುತ್ತೇನೆ..
 
ಹೊತ್ತು ಬಂದ ದುಮ್ಮಾನದ ಗಂಟು
ಚಿಲ್ಲರೆಯ ಕೋಪಕ್ಕಿಂತ ಭಾರ
ಬಿಳಿಯ ಕಾಗದದ ಮೇಲೆ
ಮಾಡಿದ ರುಜು ನಿನ್ನೊಬ್ಬನದೇ ಅಲ್ಲ
ಆತ್ಮಕ್ಕಂಟಿದವರೆಲ್ಲ ಕೊಂಚ ಕೊಂಚವೇ
ಬಡಿದು ಮಾಡಿದ ನೆಗ್ಗು, ತಗ್ಗುಗಳಿಗೆ
ಗೊತ್ತಿಲ್ಲದ ನಾಳೆಯ ನೆನಪಾಗಿ
ಮತ್ತೆ ಬಗ್ಗುತ್ತೇನೆ,

ಮಾತು ನುಂಗಿದ ನಿನ್ನ ಮೌನ,
ನನ್ನ ನಿರ್ವಾತಗಳ ಮಧ್ಯೆ
ಸ್ವಗತಗಳ ಶಾಂತಿ ಸಂಧಾನ ನಡೆಯುತ್ತದೆ ಈಗೀಗ..
 
ದಿನಾ ಹೊಸತೊಂದು ವಾಕ್ಯರಚನೆಗೆ
ವ್ಯಾಕರಣ ಹುಡುಕುವಲ್ಲಿ ತಲ್ಲೀನ ಮನ
ನನಗೆ ಗೊತ್ತು! ನಮ್ಮಿಬ್ಬರ ಭಾಷೆ ಒಂದೇ ಅಲ್ಲ
ಬಂಧಿಸಿರುವುದು
ಎಲ್ಲೋ ಒಳಗೆ ಮಿಡಿಯುವ ಅನುರಾಗದ ತಂತು..
ಭರವಸೆಯ ಬೆಳಕು ಚೆಲ್ಲುವ ನಗು
ನನ್ನ ಮಡಿಲಿಗೆ ನೀನು ಸದ್ದಿಲ್ಲದೆ ಸುರಿವ ಹೂವು,
ಬೆಚ್ಚಗಿನ ನೇವರಿಕೆಗೆ ಹೊತ್ತಿಕೊಳ್ಳುವ ಕಾವು
ದಾರಿಗುಂಟ ನಡೆಯುತ್ತ ಬೆಳೆದಿದ್ದೇವೆ ನಾವು
ನೆತ್ತರ ಬೆವರು ಹರಿಸಿ ಎತ್ತರೆತ್ತರ..
 
ಗುರುತಾಯಿತೇ ನಮ್ಮ ಗುರಿಗಳು ಮತ್ತೊಮ್ಮೆ?
ಬೇಕು ಒಪ್ಪಿಗೆ ಇನ್ನೊಮ್ಮೆ..
 
ಏಕೆಂದರೆ ಹುಡುಗ,
ನಂಟುಗಳು ಚಿರವಲ್ಲ
ಮೊದಲಿನಂತೆ ನಾವಿಲ್ಲ..
 

‍ಲೇಖಕರು G

December 27, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. Anonymous

    ಗುರುತಾಯಿತೇ ನಮ್ಮ ಗುರಿಗಳು ಮತ್ತೊಮ್ಮೆ? ಬದುಕಿನಭರದಲ್ಲಿ….ಭಾವನೆಗಳು ನಿರ್ಭಾವವಾಗಿ….ವಾಸ್ತವಿಕತೆಯ ಅರಿವು….
    ಆಗಬೇಕು…ಜೀವನ…. ಕೇವಲ ಪ್ರೇಮಗೀತೆ ಅಲ್ಲ……
    ಮೊದಲಿನಂತೆ ನಾವಿಲ್ಲ..

    ಪ್ರತಿಕ್ರಿಯೆ
  2. sheshagirijodidar

    ಗುರುತಾಯಿತೇ ನಮ್ಮ ಗುರಿಗಳು ಮತ್ತೊಮ್ಮೆ? ಬದುಕಿನಭರದಲ್ಲಿ….ಭಾವನೆಗಳು ನಿರ್ಭಾವವಾಗಿ….ವಾಸ್ತವಿಕತೆಯ ಅರಿವು….
    ಆಗಬೇಕು…ಜೀವನ…. ಕೇವಲ ಪ್ರೇಮಗೀತೆ ಅಲ್ಲ……
    ಮೊದಲಿನಂತೆ ನಾವಿಲ್ಲ..

    ಪ್ರತಿಕ್ರಿಯೆ
  3. ವಿದ್ಯಾಶಂಕರ ಹರಪನಹಳ್ಳಿ

    Delicate, delicious and fine poetry

    ಪ್ರತಿಕ್ರಿಯೆ
  4. ಅಕ್ಕಿಮಂಗಲ ಮಂಜುನಾಥ

    ತುಂಬಾ ಇಷ್ಟವಾಯಿತು.

    ಪ್ರತಿಕ್ರಿಯೆ
  5. vasudeva nadig

    hudugaa nantugalu chirvallla modalinante naavilla…ella hudugaruu artha madikollhabekada saalugalu..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: