ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

’ಇವರು ನಿಮಗೂ ಸಿಕ್ಕಿದ್ರಾ?’ – ರಾಘವೇಂದ್ರ ಜೋಶಿ ಕೇಳ್ತಾರೆ

ರಾಘವೇಂದ್ರ ಜೋಶಿ ಸುಮ್ಮನೇ ಇದು ನೆನಪಾಯಿತು. ಬಾಲ್ಯದಲ್ಲಿ ಒಂದು ವಿಚಿತ್ರ ಜನಾಂಗವನ್ನು ನೋಡುತ್ತಿದ್ದೆ. ಎರಡು ಅಥವಾ ಮೂರ್ನಾಲ್ಕು ಜನರ ಗುಂಪದು. ಕಾವಿ ಬಟ್ಟೆ ಧರಿಸಿ, ವಿಭೂತಿ ಹಚ್ಚಿಕೊಂಡು, ಕೈಯಲ್ಲಿ ಕಂದೀಲು ಹಿಡಿದುಕೊಂಡಿರುತ್ತಿದ್ದ ಈ ಅಲೆಮಾರಿ ಗುಂಪು ರಾತ್ರಿ ಹೊತ್ತು ಗದುಗಿನ ಮನೆಮನೆಗೆ ಭೇಟಿ ನೀಡಿ ತಮ್ಮಲ್ಲಿನ ಕಲೆ...

read more
ಸಂಧ್ಯಾರಾಣಿ ಕಾಲಂ : ಕಥಾ ಕಮ್ಮಟದಲ್ಲಿ ಸಿಕ್ಕ ಕಥೆಗಳು

ಕುಪ್ಪಳಿಯಿಂದ ಬಂದು ಇನ್ನೂ ವಾರ ಆಗಿಲ್ಲ, ಅಲ್ಲಿನ ಬೆಳಗು ಮರೆತಿಲ್ಲ, ಅದಕ್ಕಿಂತ ಹೆಚ್ಚಾಗಿ ಕವಿಶೈಲದ ಇರುಳು ಮರೆತಿಲ್ಲ, ಹುಣ್ಣಿಮೆ ಹೊದಿಸಿದ್ದ ಬೆಳದಿಂಗಳ ಬಿಸುಪು ಮರೆತಿಲ್ಲ, ನಿದ್ದೆಯೂ ಕೂತು ಕಣ್ರೆಪ್ಪೆ ಬಡಿಯದೆ ಕೇಳಿದ ಹಾಡು ಮರೆತಿಲ್ಲ. ಎದೆ ಬಡಿತದ ಲಯದ ಆ ತಮ್ಮಟೆಯ ಲಯ ಮರೆತಿಲ್ಲ. ಹೇಮಾಂಗಣದಲ್ಲಿ ಕೂತು ಮಾಡಿದ ಚರ್ಚೆ,...

read more
’ಹರಿವು’, ಇದು ಪ್ರೇಮದ, ಆತ್ಮದ ಅರಿವು – ರೂಪ ಲಕ್ಷ್ಮಿ

ಪ್ರೇಮವು ಆತ್ಮದಾ ‘ಹರಿವು’, ಇರುವಿಗೆ ಅರಿವಿನ ಮರೆವು - ಹರಿವು ಕನ್ನಡ ಚಲನಚಿತ್ರ ರೂಪ ಲಕ್ಷ್ಮಿ ತಾಯಿಯ ಮಡಿಲಲ್ಲಿ, ತಾಯಿಯೇ ನನ್ನ ದೇವರು, ಹೀಗೆ ಅಮ್ಮ ಮಕ್ಕಳ ಸೆಂಟಿಮೆಂಟ್ಸ್ ನಲ್ಲಿ ಬಂದಷ್ಟು ಚಿತ್ರಗಳು, ಅಪ್ಪ ಮಗನದು ಬಂದಿರುವುದು ಬಹಳ ಕಡಿಮೆ. ನಮ್ಮ ಚಿತ್ರಗಳಲ್ಲಿಯೂ, ಮನೆಗಳಲ್ಲಿಯೂ ‘ಅಪ್ಪ’ ‘ಯಜಮಾನ’ನಾಗಿರುವುದೇ ಹೆಚ್ಚು....

read more
’ಜಾಡಮಾಲಿ ಜಗತ್ತು : ಜಗತ್ತಿನೊಳಗೊಂದು ಜಗತ್ತು’ – ಸುವರ್ಣ

ಸುವರ್ಣ ಸಿ ಲೇಖಕ , ದಲಿತ ಪರಚಿಂತಕ ನಾಗರಾಜ್ ಹೆತ್ತೂರ್ ಅವರ ಜಾಡಮಾಲಿ ಜಗತ್ತು ಕೃತಿಯೂ ಭಾನುವಾರವಷ್ಟೇ ಹಾಸನದ ದಲಿತ ಸಾಹಿತ್ಯ ಪರಿಷತ್ , ಕನ್ನಡ ಸಾಹಿತ್ಯ ಪರಿಷತ್ ಹಾಗೂ ಹಾಡ್ಲಹಳ್ಳಿ ಪಬ್ಲಿಕೇಷ್ ವತಿಯಿಂದ ಹಾಸನದ ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಸರಳವಾಗಿ ಅರ್ಥಪೂರ್ಣವಾಗಿ ಪೌರಕಾಮರ್ಿಕರಿಂದಲೇ ಬಿಡುಗಡೆಯಾಗಿದ್ದು ಇದು...

read more
ಚಿತ್ರ ಬರೆಯುವ ಸ್ಪರ್ಧೆ ಹಾಗು ರಂಗೋಲಿ ಸ್ಪರ್ಧೆ

ಗ್ರಂಥಾಲಯ ಸಪ್ತಾಹ ಸ್ಪರ್ಧೆಗಳು ನಗರ ಕೇಂದ್ರ ಗ್ರಂಥಾಲಯ, ಮಾಗಡಿರಸ್ತೆ 2ನೇ ಕ್ರಾಸ್ ಗ್ರಂಥಾಲಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ನಿಮಿತ್ತ ಮಕ್ಕಳಿಗಾಗಿ ದಿನಾಂಕ 15-11-2014 ರ ಶನಿವಾರ ಸಾಯಂಕಾಲ 4ಗಂಟೆಗೆ  ’ನಮ್ಮ ಬೆಂಗಳೂರು’ ವಿಷಯವಾಗಿ ಚಿತ್ರಕಲಾಸ್ಪರ್ಧೆ ಹಾಗೂ ಮಹಿಳೆಯರಿಗಾಗಿ ದಿನಾಂಕ...

read more
ಡಾ ಶಿವಾನಂದ ಕುಬಸದ ’ನೆನಪಿನ ಪೆಟ್ಟಿಗೆಯಿಂದ’ : ಶರೀರದ ‘ಸರ್ವಿಸಿಂಗ್’ ದಿನಾಂಕ ಅಮುಖ್ಯವಾಗುತ್ತದೆ

ಸಾಧಕನೊಬ್ಬನ ಕಥೆ... ಆತ ವಯಸ್ಸಿನಲ್ಲಿ ನನಗಿಂತ ಒಂದು ವರ್ಷ ಸಣ್ಣವನು.....ಎತ್ತರಕ್ಕೆ ನನಗಿಂತ ಆರಿಂಚು ಎತ್ತರ ..ಸಾಧನೆಯಲ್ಲಿ ನನಗೆ ನಿಲುಕಲಾರದಷ್ಟು ಎತ್ತರ...ಸ್ಪುರದ್ರೂಪಿ...ಅಜಾನು ಬಾಹು.. ಟೈ ಹಾಕಿಕೊಂಡು ಎದುರಿಗೆ ಬಂದು ನಿಂತನೆಂದರೆ ಸಿನಿಮಾ ನಟನಂತೆ ಕಂಗೊಳಿಸುತ್ತಿದ್ದ. ಇದೆಲ್ಲದರ ಮೇಲೆ ಅವನೊಬ್ಬ ಅದ್ಭುತ ಸರ್ಜನ್.....

read more
೨೦೧೪ರ ’ಅಮ್ಮ ಪ್ರಶಸ್ತಿ’ ಪ್ರಕಟ

ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರು ಪ್ರತಿಷ್ಠಾನ(ರಿ) ಸೇಡಮ್ - ಕಲಬುರಗಿ - ಕರ್ನಾಟಕ (`ಅಮ್ಮ ಪ್ರಶಸ್ತಿ'ಗೆ ಹದಿನಾಲ್ಕನೇ ವರ್ಷದ ಸಂಭ್ರಮ) ಸೇಡಂನಲ್ಲಿ ನ.26ಕ್ಕೆ `ಅಮ್ಮ ಪ್ರಶಸ್ತಿ' ಪ್ರದಾನ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ...

read more
ಜಯಶ್ರೀ ಬರೆದ ಮೂರು ಚುಟುಕಗಳು

ಜಯಶ್ರೀ ಬಿ ಕದ್ರಿ ಮೌನಕ್ಕೆ ಮಾತುಗಳಿದ್ದರೆ ಎದೆಯಲ್ಲಿ ಸಿಕ್ಕಿ ಹಾಕಿಕೊಂಡ ಭಾವಗಳು ಮುತ್ತಾಗುತ್ತಿದವು .   ಮೌನವೆಂದರೆ ಚಿಟ್ಟೆಗಳು ಫಡಪಡಿಸಿ ಮಿಡುಕುವಾಗಿನ ಸದ್ದು. ನಿಶ್ಶಬ್ದಕ್ಕೆ ತೆರೆ.   ಆಗಸದ ನೀಲಿಯಲಿ ನಿಶೆಯು ನಶೆಯೊಳಗಿರಲು ಕಣ್ಣೊಳಗೆ ಇಳಿಯುವುದು ಮೌನ...

read more
ಆನಂದ ಭೋವಿ ಬರೆದ ಸಣ್ಣಕಥೆ ’ಹೋರಿ’

- ಆನಂದ ಭೋವಿ "ಹುತ್ತತ, ಹುತ್ತತ, ಹುರ್ಯೋ, ಹುರ್ಯೋ, ಹಾಕಲೇ, ಹಾಕಲೇ, ಹುರ್ಯೋ ಬಪ್ಪರೇ ಮಗನೇ" ಹನಮಂತನ ಕೂಗೂ ಗುಡ್ಡದ ವಾರಿಗೆ ಬಡಿದು ಪ್ರತಿಧ್ವನಿ ಆಗುತ್ತಿತ್ತು. ಗಸಕ್ಕ, ಗಸಕ್ಕ ಆಕಳ ಮ್ಯಾಲ ಎರೇರಿ ಹೊಕ್ಕಿದ್ದ ಅವನ ಕರಿ ಹೋರಿ "ಬಸ್ಯಾ" ಹೂಂಕ್ ಹೂಂಕ್ ಢರಕಿ ಹೊಡೆದು ಮೂಗೂ ಹಿಗ್ಗಿಸಿ ಆಕಳ ಮುಕಳಿ ಮೂಸಿ ನೋಡಿ ಹೂಂಕರಿಸಿ ಅದರ...

read more
ಗಾಂಧಿ ಮಹಾತ್ಮನಾದದ್ದು..

ಸತ್ಯ ಕು ಸ ಮಧುಸೂದನ್ ರಾಜಾ ಹರಿಶ್ಚಂದ್ರ ಸತ್ಯ ಹರಿಶ್ಚಂದ್ರನಾದದ್ದು ಯೂನಿವರ್ಸಿಟಿಗಳು ಕೊಟ್ಟ ಗೌರವ ಡಾಕ್ಟರೇಟುಗಳಿಂದಲ್ಲ! ರಾಜ್ಯವನ್ನು ಮಗನನ್ನು ಕೊನೆಗೆ ಹೆಂಡತಿಯನ್ನೂ ಕಳೆದುಕೊಂಡ ಮೇಲೇನೆ!! ಹಾಗೇನೇ ಗಾಂದಿ ಸಾಮಾನ್ಯನಿಂದ ಮಹಾತ್ಮನಾದದ್ದು ತನ್ನ ಮೈಮೇಲಿನ ಅನಗತ್ಯ ಬಟ್ಟೆಯನ್ನು ಕಿತ್ತು ಹಾಕಿದ ಮೇಲೇನೆ!...

read more
ಡಾ ಬೆಸಗರಹಳ್ಳಿ ರಾಮಣ್ಣ ಕಥಾ ಕಮ್ಮಟ ಫೋಟೋ ಆಲ್ಬಂ

ನವೆಂಬರ್ ೭,೮,೯ ರಂದು ಕುಪ್ಪಳಿಯಲ್ಲಿ ನಡೆದ ’ಡಾ ಬೆಸಗರಹಳ್ಳಿ ರಾಮಣ್ಣ ಕಥಾ ಕಮ್ಮಟ’ದ ಕೆಲವು ಚಿತ್ರಗಳು ’ಅವಧಿ’ಯ ಓದುಗರಿಗಾಗಿ ಚಿತ್ರಕೃಪೆ : ಕಿರಣ್ ಮತ್ತು ವಿಶ್ವ ಕೀರ್ತಿ ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : [gallery link="file" columns="4"...

read more
’ಪ್ರಾಮಾಣಿಕತೆಯೆಂದರೆ…’ ರೂಪ ಹಾಸನ ಹೇಳ್ತಾರೆ

ರೂಪ ಹಾಸನ ಸಾಹಿತ್ಯ ಕಾರ್ಯಕ್ರಮವೊಂದಕ್ಕೆ ಹಿರಿ ಕಿರಿಯ ಗೆಳೆಯ ಗೆಳತಿಯರೊಡಗೂಡಿ ಮುಂಬಯಿಗೆ ಹೋಗಿದ್ದ ಸಂದರ್ಭ. ಸಮುದ್ರದ ಬೀಚ್ವೊಂದಕ್ಕೆ ಭೇಟಿ ನೀಡಿದ್ದೆವು. ಅದರ ಮುಂಭಾಗದಲ್ಲೇ ಬೈರಾಗಿಯಂತ ವ್ಯಕ್ತಿಯೊಬ್ಬ ಚಿಕ್ಕ ಪ್ರಮಾಣದಲ್ಲಿ ಒಂದಿಷ್ಟು ತಿಂಡಿ ಸಾಮಗ್ರಿಗಳನ್ನು ಮಾರಾಟಕ್ಕೆ ಹರವಿಕೊಂಡು ಕುಳಿತಿದ್ದ. ಆ ಪುಡಿ ತಿಂಡಿಗಳು...

read more
ಕಮಲ್ ಹಾಸನ್‌ಗೆ ಅರವತ್ತಾಯ್ತಂತೆ

ಅಭಿಜಾತ ಕಲಾವಿದನಿಗೆ ಅರವತ್ತರ ಸಂಭ್ರಮ ಗೊರೂರು ಶಿವೇಶ್ 'ಕಳತ್ತೂರು ಕಣ್ಣಮ್ಮ' ಚಿತ್ರದ ಮೂಲಕ 6ನೇ ವಯಸ್ಸಿಗೆ ಚಲನಚಿತ್ರರಂಗವನ್ನು ಪ್ರವೇಶಿಸಿ ಸುಮಾರು 55 ವರ್ಷಗಳ ಕಾಲ ವಿಭಿನ್ನ ಪಾತ್ರಗಳಿಂದ ಭಾರತದ ಸಿನಿರಸಿಕರ ಮನಗೆದ್ದ ಪದ್ಮಭೂಷಣ ಕಮಲಹಾಸನ್ಗೆ ಈಗ ಅರವತ್ತರ ಸಂಭ್ರಮ. (ಜನನ ನವೆಂಬರ್ 7, 1954) ತೆಲುಗು, ಕನ್ನಡ, ಹಿಂದಿ,...

read more
ಒಡೆದ ಕೈಗಳ ಬಿರುಕು ಬೆರಳುಗಳ ಸ್ಪರ್ಶ…

ಅವಳ ಕೈಗಳ ಸಿಹಿ ವಿನತೆ ಶರ್ಮ ಮಗು ಹೇಳಿತು 'ಅಮ್ಮ, ನಿನ್ನ ಕೈ ಬಾಳಾ ಬಿರುಸು'   ಕೈಗಳ ದಿಟ್ಟಿಸಿದ ಮನ ಹೇಳಿತು, ಆಹ್, ಚಳಿಗಾಲವೇ! ನಿನ್ನಮಹಿಮೆಯೇ ಎಲ್ಲಿ ಆ ಮೃದು ಮಾಂತ್ರಿಕತೆಯ ಕ್ರೀಮು?   ಮಗುವಿನ ಹಣೆಯನ್ನು ನೇವರಿಸುತ್ತಾ ಈ ಕೈಗಳಿಗೆ ಯಾಕೋ ನನ್ನಮ್ಮನ ನೆನಪು. ಕಾಡುತ್ತಿವೆ ಆ ಕೈಗಳ ಗೆರೆಗಳು, ಬಿರುಕುಗಳು....

read more
’ಅಪ್ಪಅವ್ವ ನೆನಪಾದರೆ ಈಗಲೂ ಅದೆ ಬಾವಿಯನ್ನು ಇಣುಕಿ ನೋಡುತ್ತೇನೆ'

- ತಿರುಪತಿ ಭಂಗಿ ಅಪ್ಪನಗೋರಿಯ ಮೇಲೆ ನಾಯಿಯೊಂದುಉಚ್ಚಿ ಹೊಯ್ಯುತ್ತಿತ್ತು.ಅದನ್ನು ನೋಡುವುದೆತಡ ನೆಲದ ಮ್ಯಾಲ ಬಿದ್ದದಂಟತಗೊಂಡು ನಾಕು ವರ್ಷದಚಿಕ್ಕಣ್ಣ ನಾಯಿಗೆ ಹುಷಾ.. ಹುಷಾ..ಅಂತ ಹೊಡ್ಯಾಕಓಡಿದ.ಮಗುವನ್ನು ನೋಡಿದ ನಾಯಿ ಎದೆ ಉಬ್ಬಿಸಿ ನಡಿಯುವಯವ್ವನದ ಹುಡುಗಿಯಂತೆಗಂಬೀರವಾಗಿ ಹೆಜ್ಜೆಹಾಕುತ್ತ ಮುಂದೆ ಸಾಗಿತು.ನಾಯಿ ಉಚ್ಚಿ...

read more
'ರೋಟರಿ ಕಸಾಪ ಕಾವ್ಯ ಪ್ರಶಸ್ತಿ'ಗೆ ಕವನ ಸಂಕಲನ ಆಹ್ವಾನ

ಕುಮಟಾ : ಕನ್ನಡ ಸಾಹಿತ್ಯ ಪರಿಷತ್ತು ನೂರರ ಸಂಭ್ರಮವನ್ನು ಆಚರಿಸುವ ಸಂದರ್ಭದಲ್ಲಿ ಇಲ್ಲಿಯ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ರೋಟರಿ ಕ್ಲಬ್ ವಿಶೇಷವಾಗಿ ಪ್ರಥಮ ಬಾರಿಗೆ ಉದಯೋನ್ಮುಖ ಕವಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲಿ ರಾಷ್ಟ್ರ ಮಟ್ಟದ 'ರೋಟರಿ-ಕಸಾಪ ಕಾವ್ಯ ಪ್ರಶಸ್ತಿ' ಸ್ಥಾಪಿಸಿದ್ದು ಪ್ರಶಸ್ತಿಗಾಗಿ ಕವನ...

read more

Pin It on Pinterest

Share This