ಸಿನಿಮಾದ ಜನ್ಮದಿನ ಯಾವಾಗ ಗೊತ್ತ?

– ವಿ ಎನ್ ಲಕ್ಷ್ಮೀನಾರಾಯಣ

೨೮/೧೨ ಸಿನಿಮಾ ಜನ್ಮದಿನ. ಇಂದಿಗೆ ಸರಿಯಾಗಿ 119 ವರ್ಷಗಳಹಿಂದೆ ಅಂದರೆ ಡಿಸೆಂಬರ್ 28, 1895 ರಂದು ಜನರು ಹಣಕೊಟ್ಟು ಒಟ್ಟಾಗಿ ನೋಡಿದ ಸಿನಿಮಾ ಹುಟ್ಟಿತು. ಲೂಮಿಯೇರ್ ಸಹೋದರರು ಮಾರ್ಚ್ 1894 ರಲ್ಲಿ ತಯಾರಿಸಿ 1895 ರ ಡಿಸೆಂಬರ್ 28 ರಂದು ಪ್ಯಾರಿಸ್ಸಿನ Salon Indien du Grand Café ಎಂಬ ನೆಲಮಾಳಿಗೆಯ ಕೋಣೆಯಲ್ಲಿ 46 ಸೆಕೆಂಡುಗಳ ಅವಧಿಯ ಈ ಸಿನಿಮಾವನ್ನು ‘ಸಿನಿಮಟೋಗ್ರಫಿ’ ಎಂಬ ಕೈಯಲ್ಲಿ ತಿರುಗಿಸುವ ಯಂತ್ರದ ಮೂಲಕ ಪ್ರದರ್ಶಿಸಿದರು.
ಲೂಮಿಯೇರ್ ಕಾರ್ಖಾನೆಯಿಂದ ಹೊರಬರುತ್ತಿರುವ ಕಾರ್ಮಿಕರು ಈ ಚಿತ್ರದ ಹೀರೋಗಳು.

ಅಂದಿನಿಂದ ಇಂದಿನವರೆಗೂ ಸಿನಿಮಾದ ವಸ್ತು ಜನರು. ಅಭಿನಯಿಸುವವರು ಜನರು. ಅದನ್ನು ತಯಾರಿಸಲು ಒಟ್ಟಾಗಿ ಸೇರುವವರು ಜನರೇ. ಹಣ ಕೊಟ್ಟು ನೋಡುವವರು ಜನರು. ಆದರೆ ತಯಾರಿಕೆ ಮತ್ತು ಪ್ರದರ್ಶನದ ನಿಯಂತ್ರಣ ಮಾತ್ರ ಬಹುತೇಕವಾಗಿ ಹಣವಂತರ ಕೈಲೇ ಇದೆ.
ರೂಕ್ಷ ಮನಸ್ಸಿನ ಚಾಣಾಕ್ಷ ಬಂಡವಳಿಗರ ಬಹುದೊಡ್ಡ ಉದ್ಯಮ ಸಿನೆಮಾ.
ಒರಟು ಸಂವೇದನೆಯ ಜನರ ಮನರಂಜನಾ ಮಾಧ್ಯಮವಾಗಿ ಯಾವ ಪೂರ್ವತಯಾರಿಯೂ ಇಲ್ಲದೆ ಎಂಥ ಮೌಢ್ಯವನ್ನು ಬೇಕಾದರೂ ಆರಾಧಿಸುವ ಹುಂಬರಿಗೆ, ಮಾತೇ ಸಿನಿಮಾ ಎಂದು ನಂಬಿದ ಹರಿಕತೆದಾಸರಿಗೆ ಬೇಕಾದರೂ ಸಿಗಬಲ್ಲ ಅಗ್ಗದ ದೃಶ್ಯಮಾಧ್ಯಮವೂ ಸಿನಿಮಾ.
ಸೂಕ್ಷ್ಮಗ್ರಾಹಿ, ಸಂವೇದನಾಶೀಲ ಮನುಷ್ಯರು ತಮ್ಮ ಚಿಂತನೆ, ಕಲಾಸೃಷ್ಟಿ ಮತ್ತು ತಾತ್ವಿಕತೆಯನ್ನು ಸಮಗ್ರ ಭಾಷೆಯಲ್ಲಿ, ಸಮಗ್ರ ಅಭಿವ್ಯಕ್ತಿಯಾಗಿಸಬಯಸುವ ಅಚ್ಚುಮೆಚ್ಚಿನ ಕಲಾ ಮಾಧ್ಯಮವೂ ಸಿನಮಾವೇ ಆಗಿದೆ.
ಮೊತ್ತ ಮೊದಲು ಸಿನಿಮಾ ಶುರುವಾದ ದೇಶವಾದ ಫ್ರಾನ್ಸ್ ಇಂದಿಗೂ ಸಿನಿಮಾ ತಯಾರಿಕೆಯಲ್ಲಿ ಅಗ್ರಗಣ್ಯ. ಜಾಗತೀಕರಣದ ಇಂದಿನ ಸಾಮ್ರಾಜ್ಯವಾದೀ ಮಾರುಕಟ್ಟೆಯಲ್ಲಿ ನಾಲ್ಕಾರು ದೇಶಗಳು, ಹತ್ತಾರು ವ್ಯಾಪಾರೀ ಸಂಸ್ಥೆಗಳು ಒಟ್ಟಾಗಿ ಹಣತೊಡಗಿಸಲು ಬಯಸುವ ಸಿನಿಮಾ ಒಂದು ಬಲಿಷ್ಠ ಕಾರ್ಪೊರೇಟ್ ಉದ್ಯಮ.
ಭೌತಿಕವಾದ ಸೆಲ್ಯುಲಾಯಿಡ್ ನಿಂದ ಪ್ಲಾಸ್ಟಿಕ್ ಪಟ್ಟಿಗೆ, ಅಭೌತಿಕವಾದ ಡಿಜಿಟಲ್ ರೂಪಗಳಿಗೆ ಸತತವಾಗಿ ಮಾರ್ಪಾಡಾಗುತ್ತಾ, ಐದೂ ಇಂದ್ರಿಯಗಳನ್ನು ತೊಡಗಿಸಿ ಸೃಷ್ಟಿಸಬಲ್ಲ, ಆಸ್ವಾದಿಸಬಲ್ಲ ಏಕೈಕ ಅಭಿವ್ಯಕ್ತಿ ಮಾಧ್ಯಮವೆಂಬ ಹೆಗ್ಗಳಿಕೆಯ, 119 ವರ್ಷ ತುಂಬಿದರೂ ನಿತ್ಯ ಜವ್ವನೆಯಾದ ಸಿನಿಮಾ ಎಂಬ ಈ ಮಾಯಾಂಗನೆಗೆ ಹುಟ್ಟಿದ ಹಬ್ಬದ ಶುಭಾಶಯಗಳು.

‍ಲೇಖಕರು G

January 9, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: