’ಸಹನೆಯ ಕಲಿಸೋ ಹೇ ಗುರುವೇ…’ – ರೂಪಾ ಹಾಸನ್

ರೂಪ ಹಾಸನ

ವಿನಾಕಾರಣದ ಅಪವಾದಗಳು ಮನಸ್ಸನ್ನು ಹಿಂಡಿ ನೋಯಿಸುವಾಗ, ಸಿಟ್ಟು ಆಕ್ರೋಶಗಳನ್ನು ಹದ್ದುಬಸ್ತಿನಲ್ಲಿಟ್ಟು ಸಹನೆ ತಂದುಕೊಳ್ಳಬೇಕೆಂದು ಎಷ್ಟೇ ಪ್ರಯತ್ನಿಸಿದರೂ ಸೋಲುವಂತಾದಾಗ ತಕ್ಷಣ ಈ ಕಥೆ ನೆನೆಪಿಸಿಕೊಳ್ಳೆಂದು ಗುರುಗಳು ಹೇಳಿದ್ದು ನೆನಪಾಗುತ್ತದೆ. ಅದರೊಂದಿಗೇ ಕಥೆ ಬಿಚ್ಚಿಕೊಳ್ಳುತ್ತದೆ……..
ಒಂದೂರಿನಲ್ಲಿ ಬೌದ್ಧ ಸನ್ಯಾಸಿಯೊಬ್ಬ ವಾಸವಿದ್ದ. ಅವನು ತನ್ನ ಶಾಂತ, ಮೆದು ಸ್ವಭಾವ, ನಿಲರ್ಿಪ್ತ ಮತ್ತು ಉಪಕಾರದ ಗುಣದಿಂದ ಸುತ್ತಮುತ್ತಲೆಲ್ಲಾ ಪ್ರಸಿದ್ಧಿ ಪಡೆದಿದ್ದ. ಒಮ್ಮೆ ಅವನ ಪಕ್ಕದ ಮನೆಯ ಹದಿಹರೆಯದ ಅವಿವಾಹಿತ ಹುಡುಗಿಯೊಬ್ಬಳು ಹೆತ್ತ ಸುದ್ದಿ ಊರೆಲ್ಲಾ ಹಬ್ಬಿತು. ಪಂಚಾಯಿತಿ ಸೇರಿತು. ಅಲ್ಲಿ ಆ ಹುಡುಗಿಯನ್ನು ಈ ಬಸಿರಿಗೆ ಕಾರಣರ್ಯಾರೆಂದು ಕೇಳಲಾಗಿ ಅವಳು ಈ ಬೌದ್ಧ ಸನ್ಯಾಸಿಯ ಹೆಸರು ಹೇಳಿದಳು. ಸರಿ ಪಂಚಾಯ್ತಿ ತೀರ್ಮಾನದಂತೆ ಅವಳ ಆ ಮಗುವನ್ನು ಈ ಸನ್ಯಾಸಿ ನೋಡಿಕೊಳ್ಳಬೇಕೆಂದಾಗಿತ್ತು. ಆ ಮಗುವನ್ನು ಕರೆದು ಕೊಂಡು ಅವನ ಮನೆಗೆ ಬಂದ ಊರ ಹಿರಿಯರು ‘ನೀನು ತಪ್ಪು ಮಾಡಿದ್ದೀಯೆ. ಈ ಮಗುವಿಗೆ ನೀನು ತಂದೆ. ಹೀಗಾಗಿ ಈ ಮಗುವನ್ನು ನೀನೇ ಸಾಕಬೇಕು.’ ಎಂದರು. ಸನ್ಯಾಸಿ ಮರು ಪ್ರಶ್ನಿಸದೇ ‘ಹೌದೇ?ಸರಿ’ ಎಂದು ಮುಗುಳ್ನಗುತ್ತಾ ಮಗುವನ್ನು ಪಡೆದ.

ಖ್ಯಾತಿಯ ಶಿಖರದಲ್ಲಿದ್ದ ಸನ್ಯಾಸಿಯ ವರ್ಚಸ್ಸು ಕ್ರಮೇಣ ಕುಸಿದು ಜನರೆಲ್ಲಾ ಅವನನ್ನು ತುಚ್ಛವಾಗಿ ನೋಡಲಾರಂಭಿಸಿದರು. ಆದರೆ ಇದಾವುದೂ ತನಗೆ ಸಂಬಂಧಿಸಿಯೇ ಇಲ್ಲವೆಂಬಂತೆ ಅವನು ಈ ಮಗುವನ್ನು ಪ್ರೀತಿಯಿಂದ ಸಾಕಲಾರಂಭಿಸಿ ಹಲವು ತಿಂಗಳೇ ಕಳೆದಿತ್ತು. ಪಕ್ಕದ ಮನೆಯಲ್ಲಿದ್ದ ಈ ಮಗುವಿನ ತಾಯಿಗೆ ಪಶ್ಚಾತ್ತಾಪ ಕಾಡ ತೊಡಗಿತು. ‘ವಿನಾ ಕಾರಣ ಸುಳ್ಳು ಹೇಳಿ ಸನ್ಯಾಸಿಗೆ ಕೆಟ್ಟ ಹೆಸರು ಬರುವಂತೆ ಮಾಡಿದೆ.’ ಎಂದು ಕೊರಗುತ್ತಾ ಊರ ಹಿರಿಯರನ್ನು ಮತ್ತೆ ಸೇರಿಸಿ ‘ತನ್ನ ಮಗುವಿನ ಹುಟ್ಟಿಗೆ ಈ ಸನ್ಯಾಸಿ ಕಾರಣನಲ್ಲ ಬೇಕರಿಯೊಂದರ ಮಾಲಿಕ ಕಾರಣ’ ಎಂದು ನಿಜ ಹೇಳಿದಳು.
ಜನರೆಲ್ಲಾ ವ್ಯಥೆಯಿಂದ ಕುಸಿದು ಹೋದರು. ‘ಅಯ್ಯೋ ಎಂಥಾ ಕೆಲಸವಾಯಿತು’ ಎಂದು ಸನ್ಯಾಸಿಯಲ್ಲಿಗೆ ಓಡಿ ಬಂದು ಪರಿ ಪರಿಯಾಗಿ ಅವನ ಕ್ಷಮೆ ಕೇಳಿದರು. ‘ಈ ಮಗು ನಿನ್ನದಲ್ಲ. ನೀನಿದನ್ನು ಸಾಕಬೇಕಿಲ್ಲ ಕೊಡು’ ಎಂದು ಕೇಳಿದರು. ಅದಕ್ಕವನು ನಗುತ್ತಾ ‘ಓ ನನ್ನದಲ್ಲವೇ? ತೆಗೆದುಕೊಳ್ಳಿ’ ಎಂದು ನಿರುದ್ವಿಗ್ನನಾಗಿ ಮಗುವನ್ನು ವಾಪಸ್ಸು ಮಾಡಿದ. ತನ್ನ ತಪ್ಪೇ ಇಲ್ಲದಿದ್ದರೂ ಅವನಿಗೆ ಮಗು ನಿನ್ನದು ಸಾಕು, ಎಂದು ಕೊಟ್ಟಾಗ ತೆಗೆದು ಕೊಂಡ. ನಿನ್ನದಲ್ಲ ಎಂದಾಗ ಕೊಟ್ಟುಬಿಟ್ಟ! ಇಷ್ಟು ನಿರ್ಲಿಪ್ತತೆ, ಸಹನೆ ನಿಜಕ್ಕೂ ಸಾಧ್ಯವೇ? ಎಂದು ಯೋಚಿಸುತ್ತಿರುತ್ತೇನೆ. ನನ್ನ ಗುರುವನ್ನು ಕೇಳುತ್ತಿರುತ್ತೇನೆ. ಅವರು ಕಣ್ಮುಚ್ಚಿ ಒಮ್ಮೆ ಧ್ಯಾನಸ್ಥರಾಗಿ….. ಸಾಧ್ಯವೆಂದು ಉತ್ತರಿಸುತ್ತಾರೆ. ನಾನೂ ಪ್ರಯತ್ನಿಸಬೇಕು……
ನಿತ್ಯ ಪ್ರಾರ್ಥಿಸುತ್ತೇನೆ….. ಇಂತಹ ಸಹನೆ, ನಿರ್ಲಿಪ್ತತೆಯ ಕಲಿಸೋ ಗುರುವೇ……
 

‍ಲೇಖಕರು G

January 8, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

11 ಪ್ರತಿಕ್ರಿಯೆಗಳು

  1. ಅಕ್ಕಿಮಂಗಲ ಮಂಜುನಾಥ

    ಇಂಥ ನಿರ್ಲಿಪ್ತತೆ ಮತ್ತು ಸಹನೆ ಪಡೆಯಲು ನನ್ನಿಂದ ಸಾದ್ಯವಾಗಿಲ್ಲ.ಸ್ವಲ್ಪ ವಾದರೂ ಪಡೆದುಕೊಳ್ಳಲು ಪ್ರಯತ್ನ ಪಡುವುದು ನಮ್ಮ ಕರ್ತವ್ಯವೂ ಔದು.ಲೇಖನ ತುಂಬಾ ಚೆನ್ನಾಗಿದೆ. ಆದರೆ ಆಗಿನ ಕಾಲಕ್ಕೇ ಬೇಕರಿ ಎಂಬುದು ಬಳಕೆಯಲ್ಲಿತ್ತೇ?

    ಪ್ರತಿಕ್ರಿಯೆ
  2. Ahani

    Abba…! Nijakku kathe odi mai nadugitu madam. Intha nirliptate sadhyavaaguvudaadare…..!

    ಪ್ರತಿಕ್ರಿಯೆ
  3. ಲಕ್ಷ್ಮೀಕಾಂತ ಇಟ್ನಾಳ

    ಸಹನೆಯಿಂದ ಬದುಕು ಹಸನ. ಸುಂದರ ರೂಪಕ.

    ಪ್ರತಿಕ್ರಿಯೆ
  4. t.n. vasudevamurthy

    ನಿಮ್ಮ ನಿರೂಪಣೆ ತುಂಬ ಚೆನ್ನಾಗಿದೆ ಮೇಡಂ. ಕೆಲ ವರ್ಷಗಳ ಹಿಂದೆ ಈ ಕತೆಯನ್ನು ಶ್ರೀ ಜಿ.ಪಿ. ರಾಜರತ್ನಂರ ನಿರ್ಭಯಾಗ್ರಫಿಯಲ್ಲಿ ಓದಿದ್ದ ನೆನಪು.

    ಪ್ರತಿಕ್ರಿಯೆ
  5. anand rugvedi

    ನಿತ್ಯ ಪ್ರಾರ್ಥಿಸುತ್ತೇನೆ….. ಇಂತಹ ಸಹನೆ, ನಿರ್ಲಿಪ್ತತೆಯ ನನಗೂ ಕಲಿಸು. . . ಬದುಕೆಂಬ ಗುರುವೇ……

    ಪ್ರತಿಕ್ರಿಯೆ
  6. Rupa Hasana

    ಸ್ಪಂದಿಸಿದವರೆಲ್ಲರಿಗೂ ವಂದನೆಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: