ಇಂದು ಅವಧಿಯಲ್ಲಿ...
‘ಪ್ರೇಮ ಕಾವ್ಯದ’ ನೋವುಂಡ ಗೆಳೆಯ..
ಮಮತಾ ಅರಸೀಕೆರೆ ** ಆನಂದ್ ನನಗೆ ಪರಿಚಯವಾಗಿ, ಸ್ನೇಹವಾಗಿ 16 ವರ್ಷಗಳಿಗೂ ಹೆಚ್ಚು ಸಮಯವಾಗಿದೆ. ಅವನ ಯಶಸ್ಸು, ವೈಫಲ್ಯ ಎಲ್ಲವನ್ನೂ ಹತ್ತಿರದಿಂದ ಕಂಡಿದ್ದೇನೆ. ಕೆಲವು ಮಾತುಗಳನ್ನು ಹೇಳಬಯಸುತ್ತೇನೆ. ಅವನ ನಿಧನಾನಂತರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ವಿವಿಧ ಅಭಿಪ್ರಾಯಗಳನ್ನೂ ನೋಡಿದೆ. ಅವನ ಕುಡಿತ ಮತ್ತು ಬೇಜವಾಬ್ದಾರಿ...
‘ನುಡಿ ಕೆಫೆ’ಗೆ ಭೇಟಿ ನೀಡಿ..
ಕೇಶವ ಮಳಗಿ ** ಬಳ್ಳಾರಿಗೆ ಹೋದವರು ತಾಳೂರು ರಸ್ತೆಯಲ್ಲಿರುವ 'ನುಡಿ ಕೆಫೆ'ಗೆ ಭೇಟಿ ನೀಡಿ. ಕಾಫಿ ಜತೆ ಪುಸ್ತಕಗಳ ಮೇಲೆ ಕಣ್ಣು ಹಾಯಿಸಿ. ಸುಡು ಬಿಸಿಲಿನಲ್ಲಿ ಕಾಫಿ ಅಥವ ಚಹಾ ಕುಡಿಯುವುದೇ ಈ ಸೀಮೆಯ ಕಡ್ಡಾಯ ಸಂಪ್ರದಾಯ. 'ನುಡಿ ಕೆಫೆ'ಯ ರೂವಾರಿ: ಹಿಂದೆ ಕಥೆಗಾರರಾಗಿದ್ದ, ಸದ್ಯ ಮಕ್ಕಳ ಸಾಹಿತ್ಯದಲ್ಲಿ ತಲ್ಲೀನರಾಗಿರುವ ಮತ್ತು ಅದೇ...
ಲೀಲಾವತಾರಮ್ ನಲ್ಲಿ ತುಳಸಿ ಹೆಜ್ಜೆ
ಕಿರಣ ಭಟ್ , ಹೊನ್ನಾವರ ** ರಚನೆ: ಎಂ.ಎ. ಹೆಗಡೆ ನಿರ್ದೇಶನ: ಉಮಾಕಾಂತ ಭಟ್ಟ ಕೆರೆಕೈ ಮೂಲ ಕಲ್ಪನೆ : ರಮೇಶ ಹೆಗಡೆ ಹಳೆಕಾನಗೋಡ ನರ್ತನ ಸಲಹೆ :ವಿನಾಯಕ ಹೆಗಡೆ ಕಲಗದ್ದೆ ಹಿನ್ನಲೆ ಧ್ವನಿ : ಡಾ. ಶ್ರೀಪಾದ. ಭಟ್ಟ ** ಈ ಹುಡುಗಿಯನ್ನು ನಾನು ಮೊದಲು ನೋಡಿದ್ದು ಯಡಳ್ಳಿಯಲ್ಲಿ. ನಾಟಕ ಅಕಾಡಮಿಯ ಮಕ್ಕಳ ನಾಟಕೋತ್ಸವದಲ್ಲಿ. ಅಲ್ಲಿ ಆಕೆ...
ಶ್ರೀನಿವಾಸ ಪ್ರಭು ಅಂಕಣ: ನನ್ನ ಮಟ್ಟಿಗಂತೂ ಅಡುಗೆ ಒಂದು ತಪಸ್ಸು..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ವಿಧಿ ಇವನ ಮುಂದೆ ಮಂಡಿಯೂರಿತು!
ವೀರಕಪುತ್ರ ಎಂ ಶ್ರೀನಿವಾಸ ** "ನಾನು ಎಲ್ಲೂ ಓಡಲಾರೆ ಏಕೆಂದರೆ ನಾನು ಏನನ್ನೂ ನೋಡಲಾರೆ! ಎಲ್ಲೇ ಹೋದರೂ ಇದೇ ಸ್ಥಿತಿ ಆದ್ದರಿಂದ ಇದ್ದ ಜಾಗದಿಂದಲೇ ಹೋರಾಡ್ತೀನಿ" ಅಂತಾನೇ ಆ ಹುಡುಗ. ಆ ಮಾತಿನಂತೆಯೇ ಶ್ರೀಕಾಂತ ಸಿನಿಮಾ ಸಾಗುತ್ತಾ ಹೋಗುತ್ತದೆ! ಆತನ ಬಗ್ಗೆ ತಿಳಿಯದ ಕಾರಣಕ್ಕೋ ಏನೋ ನನಗೆ ಇಡೀ ಸಿನಿಮಾ ಕುತೂಹಲದಿಂದ...
ಚಿತ್ತ ಚಿತ್ ಮಾಡಿದ ಆಂಡ್ರ್ಯೂ ಪಾಲ್!
ಮ ಶ್ರೀ ಮುರಳಿ ಕೃಷ್ಣ ** ಕಳೆದ ಸೋಮವಾರ ಪ್ರಸಿದ್ಧ ಕಲಾವಿದ ನಂದಲಾಲ್ ಬೋಸ್ ಅವರ ʼರಾಮಪುರ ಪ್ಯಾನೆಲ್ʼನ್ನು ವೀಕ್ಷಿಸಲು ನಮ್ಮ ಕುಟುಂಬ ಬೆಂಗಳೂರಿನ ನ್ಯಾಷನಲ್ ಗ್ಯಾಲರಿ ಆಫ್ ಮಾರ್ಡ್ರನ್ ಆರ್ಟ್(NGMA)ಗೆ ಹೋಯಿತು. ಗೇಟಿನ ಬಳಿ ಹೋದಾಗ ಸೆಕ್ಯುರಿಟಿ ಗಾರ್ಡ್ ರಜೆಯ ದಿನ ಎಂದು ತಿಳಿಸಿದಾಗ ನಮಗೆ ಜ್ಞಾನೋದಯವಾಯಿತು! ಉತ್ಸಾಹ...
Latest
ಬಾ ಕವಿತಾ
ನೆರಳೊಂದು ಮೇಲೇಳುವುದು..
ಮೂಲ - ಅಸದ್ ಜೈದಿ ಹಿಂದಿ ಭಾಷೆಯ ಕವಿ ಅಸದ್ ಜೈದಿ ಮೊದಲು ಒಲಿದದ್ದು ಸಣ್ಣ ಕತೆ ಹಾಗೂ ಕಾದಂಬರಿ ಪ್ರಕಾರಕ್ಕೆ. ಕಾವ್ಯದ ಒಂದು ರೀತಿಯ ಸ್ವಚ್ಛಂದ ಭಾವ ಹೆಚ್ಚು ಆಪ್ತವೆನಿಸಿ ಕವನ...
ಅದೇ ಸುಂದರ ನೀಲಿ ಚಿಟ್ಟೆ..
-ಕೆ ಎಸ್ ಎಸ್ ಕೆ ಕೊಪ್ಪ ನಾನು ಹಾಗೂ ನೀಲಿ ಚಿಟ್ಟೆ…. ಅಂದು ಅಂಗಾತ ಮಲಗಿ ಉರಿದುರಿದುಬೀಳುತ್ತಿದ್ದ ಉಲ್ಕೆಗಳ ನೋಡುತ್ತಿದ್ದೆ….ಬಹುದಿನಗಳ ಕಾಲ ಮರೆಯಾಗಿದ್ದಅದೇ ಸುಂದರ ನೀಲಿ...
ಪುಸ್ತಕದ ಪರಿಚಯ
Book Shelf
ಮುಖಾಮುಖಿ ಆಗಲು ತೆರೆದ ಸಂಕಲನ..
ಚಂಸು ಪಾಟೀಲ ಅವರ 'ಕುಳದ ಸಂಗಾತ' 'ಕವಿತಾ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಬಗೆಗಿನ ದೇವರಾಜ್ ಹುಣಸಿಕಟ್ಟಿ ಅವರ ಅನಿಸಿಕೆ ಇಲ್ಲಿದೆ. -ದೇವರಾಜ್ ಹುಣಸಿಕಟ್ಟಿ ತೀವ್ರ ವಿಷಾದ, ವ್ಯಂಗ್ಯದಿಂದ ಬಿಡುಗಡೆಯ ಹಾದಿ ಅರಸುವ ಕುಳದ ಸಂಗಾತ…. ಪ್ರಸಕ್ತ ಕಾಲಘಟ್ಟದ ಇಡೀ ಒಂದು ಜನಸಮೂಹದ ವ್ಯಥೆ ಕಟ್ಟಿ ಕೊಡುವ ಶೀರ್ಷಿಕೆ ರಹಿತ...
‘ಇವ ಲೆಬನಾನಿನವ’-ಜೀವಂತ ಪುಸ್ತಕದ ಜೀವಂತಿಕೆಯ ಪುಟಗಳು
ವೀರಣ್ಣ ಮಡಿವಾಳರ **‘ಹುಚ್ಚ ಒಬ್ಬ ನಿಜವಾದ ಸಂಗೀತಗಾರನೇ, ಆದರೆ ಆತ ನುಡಿಸುವ ವಾದ್ಯದ ಶೃತಿ ತಪ್ಪಿದೆಯಷ್ಟೇ’ ಇಂಥದೊಂದು ಅನನ್ಯ ಸಾಲನ್ನು ಸೃಜಿಸಿದ ಆತ್ಮದ ಸೌಂದರ್ಯ ಎಂಥದಿರಬಹುದು ಎಂದು ನಾನು ಕಳೆದ ಹದಿನೈದು ವರ್ಷಗಳಿಂದ ಹುಡುಕುತ್ತಲೇ ಇದ್ದೇನೆ. ಸಿಕ್ಕಷ್ಟೂ ಸಮೃದ್ಧಗೊಳ್ಳುತ್ತಿರುವ, ಓದಿದಷ್ಟೂ ಬಾಕಿ ಉಳಿಯುವ, ಹುಡುಕಿದಷ್ಟೂ...
ಡಾ ಕೆ ಎಸ್ ಚೈತ್ರಾ ಹೊಸ ಕೃತಿ – ‘ಪ್ರಪಂಚಕ್ಕೊಬ್ಳೇ ಪದ್ಮಾವತಿ’
ಡಾ ಕೆ ಎಸ್ ಚೈತ್ರಾ ** ಡಾ ಕೆ ಎಸ್ ಚೈತ್ರಾ ಅವರ ಹೊಸ ಕೃತಿ ಬಿಡುಗಡೆಯಾಗಿದೆ. ಈ ಕೃತಿಗೆ ಲೇಖಕಿ ಬರೆದ ಮಾತುಗಳು ಇಲ್ಲಿವೆ. ** ಮಾತು- ಮೌನ, ಮನೆ- ಹೊಟೆಲ್, ಗೆಳೆಯರು- ಅಪರಿಚಿತರು ಹೀಗೆ ಎಲ್ಲವನ್ನೂ ಇಷ್ಟ ಪಡುವ ಚೈತ್ರಾರಿಗೆ ಪ್ರವಾಸ ಮಾತ್ರವಲ್ಲ ಅದರ ಯೋಜನೆ, ನಿರೀಕ್ಷೆಯೂ ಬಹಳ ಖುಷಿಯ ವಿಷಯ! ದೇಶ ವಿದೇಶಗಳಲ್ಲಿ...
ದೇವು ಪತ್ತಾರ ಹೊಸ ಕೃತಿ ‘ಈಶಾನ್ಯೆ ಒಡಲು’
ಹಿರಿಯ ಪತ್ರಕರ್ತ, 'ಬುಕ್ ಬ್ರಹ್ಮ'ದ ಸಂಪಾದಕರಾದ ದೇವು ಪತ್ತಾರ ಅವರ ಹೊಸ ಕೃತಿ ಬಿಡುಗಡೆಯಾಗಿದೆ. 'ಈಶಾನ್ಯೆ ಒಡಲು'ಗೆ ದೇವು ಬರೆದ ಮಾತುಗಳು ನಿಮ್ಮ ಓದಿಗಾಗಿ ಇಲ್ಲಿದೆ- ** ಒಡಲು ಬಗೆಯುವ ಮುನ್ನ ದೇವು ಪತ್ತಾರ **’ಬರೆಯುವುದು ಎಂದರೆ ಬೆತ್ತಲಾಗುವುದು’ ಎಂದು ಎಲ್ಲೋ ಓದಿದ ನೆನಪು. ಹೌದು. ಆದರೆ, ಇದು ಕೇವಲ ಬರೆಹಕ್ಕೆಸಂಬಂಧಿಸಿದ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











