Breaking News: ಕೆ ವಿ ತಿರುಮಲೇಶ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

k v tirumalesh2

ಹಿರಿಯ ಸಾಹಿತಿ ಕೆ ವಿ ತಿರುಮಲೇಶ್ ಅವರಿಗೆ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಕಾವ್ಯ ಲೋಕದಲ್ಲಿ ಹೊಸ ಸೆಲೆಯನ್ನು ಹುಟ್ಟು ಹಾಕಿರುವ ಅವರ ಕೃತಿ ಅಕ್ಷಯ ಕಾವ್ಯ ಕ್ಕೆ ಈ ಪ್ರಶಸ್ತಿ ಸಂದಿದೆ. ಅಕ್ಷಯ ಕಾವ್ಯ ಸಹಾ ೪೭೮ ಪುಟಗಳಲ್ಲಿ ಹರಡಿಕೊಂಡಿರುವ ಒಂದೇ ಕವಿತೆ. ಹೊಸ ಪ್ರಯೋಗ.

ಪ್ರಶಸ್ತಿ ಸ್ಮರಣಿಕೆ ಹಾಗೂ ೧ ಲಕ್ಷ ರೂ ಒಳಗೊಂಡಿದೆ. ಅವಧಿಯ ಓದುಗರೂ ಸತತವಾಗಿ ತಮ್ಮ ಪ್ರತಿಕ್ರಿಯೆ ಹಾಗೂ ಬರಹಗಳ ಮೂಲಕ ಅದನ್ನು ಜೀವಂತವಾಗಿಟ್ಟಿರುವ ಕೆ ವಿ ತಿರುಮಲೇಶ್ ಅವರಿಗೆ ಅವಧಿಯ ಅಭಿನಂದನೆಗಳು

ಅಭಿನವ ಈ ಕೃತಿಯನ್ನು ಪ್ರಕಟಿಸಿದೆ . ಪ್ರಕಾಶನದ ಎನ್ ರವಿಕುಮಾರ್ ಅವರು ಸಂತಸವನ್ನು ಹಂಚಿಕೊಂಡಿದ್ದಾರೆ. ಅಭಿನವಕ್ಕೆ ಇದು ನಾಲ್ಕನೆಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ .

back cover of akshaya kaavya

‍ಲೇಖಕರು admin

December 17, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

19 ಪ್ರತಿಕ್ರಿಯೆಗಳು

    • ಜಿ.ಪಿ.ಬಸವರಾಜು

      ತಿರುಮಲೇಶ್‍ ಅವರಿಗೆ,

      ಅಭಿನಂದನೆಗಳು. ಬಹಳ ವರ್ಷಗಳಿಂದ ಕಾವ್ಯ ಕ್ಷೇತ್ರದಲ್ಲಿ ಅನೇಕ ಪ್ರಯೋಗಗಳನ್ನು ಮಾಡಿದವರು ನೀವು. ಈ ಪ್ರಶಸ್ತಿ ನಿಮಗೆ ದೊರಕಿರುವುದು ನ್ಯಾಯಬದ್ಧವಾಗಿಯೇ ಇದೆ. ನಿಮ್ಮ ಕಾವ್ಯವನ್ನು ಮೆಚ್ಚಿಕೊಂಡವರಲ್ಲಿ ನಾನೂ ಒಬ್ಬ. ಪ್ರಶಸ್ತಿ ಪಡೆದಿರುವ ಕೃತಿ ‘ಅಕ್ಷಯ ಕಾವ್ಯ’ ವನ್ನು ನೀವು ಒಂದು ಪ್ರಯೋಗ ಎಂದೇ ಕರೆದಿರುವಿರಿ. ಅನೇಕ ವರ್ಷಗಳ ಕಾಲ ಈ ಪ್ರಯೋಗದಲ್ಲಿ ತೊಡಗಿಕೊಂಡಿದ್ದಾಗಿಯೂ ಹೇಳಿರುವಿರಿ. ಕಾವ್ಯದ ಬಗ್ಗೆ ನಿಮಗಿರುವ ಪ್ರೀತಿ ಮತ್ತು ಶ್ರದ್ಧೆಗಳನ್ನು ಈ ಮಾತುಗಳು ತಿಳಿಸುತ್ತವೆ. ಆದರೆ ನನಗೆ ‘ಅಕ್ಷಯ ಕಾವ್ಯ’ ಇಷ್ಟವಾಗಲಿಲ್ಲ. ಅದಕ್ಕೆ ಕಾರಣಗಳನ್ನು ವಿವರಿಸಲು ಇದು ಸೂಕ್ತ ವೇದಿಕೆಯಲ್ಲ.
      ಇದೇನೇ ಇರಲಿ, ನಿಮಗೆ ಈ ಮನ್ನಣೆ ದೊರಕಿರುವುದು ಸಂತೋಷದ ಸಂಗತಿ. ಅದಕ್ಕಾಗಿ ಮತ್ತೊಮ್ಮೆ ಅಭಿನಂದನೆ.

      -ಜಿ.ಪಿ.ಬಸವರಾಜು

      ಪ್ರತಿಕ್ರಿಯೆ
  1. ಗೋನವಾರ ಕಿಶನ್ ರಾವ

    ಸರ್ ಅಭಿನಂದನೆಗಳು,ಖುಷಿ ಅಭಿವ್ಯಕ್ತಗೊಳಿಸಲು ಶಬ್ದಗಳು ಸಾಲುತ್ತಿಲ್ಲ.

    ಪ್ರತಿಕ್ರಿಯೆ
  2. ಜಯಲಕ್ಷ್ಮೀ ಪಾಟೀಲ್

    ಅಭಿನಂದನೆಗಳು ಸರ್.

    ಪ್ರತಿಕ್ರಿಯೆ
  3. Vithal Katti

    ನನ್ನ ಹೃತ್ಪೂರ್ವಕ ಅಭಿನಂದನೆಗಳು.

    ಪ್ರತಿಕ್ರಿಯೆ
  4. ಅಶೋಕ ಶೆಟ್ಟರ್

    ಕೆ.ವಿ. ತಿರುಮಲೇಶ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅಕ್ಷಯ ಕಾವ್ಯ ಆಮೇಲೆ ಓದೋಣ, ಸದ್ಯ “ಪೆಂಟಯ್ಯನ ಅಂಗಿ”, “ಪಾರ್ಟಿ ಕಳೆದ ಮೇಲೆ” ಮತ್ತು “ಕೇರಳ” ಎಂಬ ಪದ್ಯಗಳನ್ನು ಓದಿ ಸೆಲೆಬ್ರೇಟ್ ಮಾಡೋಣ…

    ಪ್ರತಿಕ್ರಿಯೆ
  5. ranganatha n

    sir tamma yella baravanigeyannu gamanisi, odi charchisuthale iddeve. e sandharbadalli tamage kendra sahitya acamy award bandiddu kushiya vichara. tamage shubashayagalu

    ಪ್ರತಿಕ್ರಿಯೆ
  6. Manjula gh

    ತುಂಬಾ ಸಂತೋಷದ ಸಂಗತಿ ಗುರುಗಳೆ, ಅಭಿನಂದನೆಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: